RCB brand: ಗಗನಕ್ಕೇರಿತಾ ಆರ್​​ಸಿಬಿ ಬ್ರ್ಯಾಂಡ್ ಮೌಲ್ಯ? ಜಾಗತಿಕ ಬ್ರ್ಯಾಂಡ್​ಗಳಿಗೆ ಹೋಲಿಸಿದರೆ ಹೇಗಿದೆ ರಾಯಲ್ ಚಾಲೆಂಜರ್ಸ್?

RCB is the highest valued IPL team: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ ಅದು ಐಪಿಎಲ್ ಟ್ರೋಫಿ ಗೆದ್ದ ಬಳಿಕ ಹೆಚ್ಚಾಗಬಹುದು. ತಜ್ಞರ ಪ್ರಕಾರ ಬ್ರ್ಯಾಂಡ್ ವ್ಯಾಲ್ಯೂ ಶೇ. 20ರಷ್ಟು ಹೆಚ್ಚಬಹುದು. 227 ಮಿಲಿಯನ್ ಡಾಲರ್ ಇರುವ ಅದರ ಬ್ರ್ಯಾಂಡ್ ಶಕ್ತಿ ಈಗ 250 ಮಿಲಿಯನ್ ಡಾಲರ್ ದಾಟಿ 300 ಮಿಲಿಯನ್ ಡಾಲರ್ ಗಡಿ ಮುಟ್ಟಿದರೂ ಅಚ್ಚರಿ ಇಲ್ಲ.

RCB brand: ಗಗನಕ್ಕೇರಿತಾ ಆರ್​​ಸಿಬಿ ಬ್ರ್ಯಾಂಡ್ ಮೌಲ್ಯ? ಜಾಗತಿಕ ಬ್ರ್ಯಾಂಡ್​ಗಳಿಗೆ ಹೋಲಿಸಿದರೆ ಹೇಗಿದೆ ರಾಯಲ್ ಚಾಲೆಂಜರ್ಸ್?
ರಾಯಲ್ ಚಾಲೆಂಜರ್ಸ್ ಬೆಂಗಳೂರು

Updated on: Jun 04, 2025 | 5:16 PM

ಬೆಂಗಳೂರು, ಜೂನ್ 4: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಾಳಿ ತಂಡಗಳು ಬಹಳ ಕರುಬುವ ಫ್ರಾಂಚೈಸಿ. ಅಮೆರಿಕದ ಬ್ಯಾಸ್ಕೆಟ್​​ಬಾಲ್, ಬೇಸ್​ಬಾಲ್ ತಂಡಗಳು, ಯೂರೋಪ್​​ನ ಫುಟ್ಬಾಲ್ ತಂಡಗಳು ಹೊಂದಿರುವಂತಹ ಅದ್ಬುತ ಫ್ಯಾನ್ಸ್ ಬಳಗ ಆರ್​​ಸಿಬಿಗೆ ಇದೆ. ಒಮ್ಮೆಯೂ ಐಪಿಎಲ್ ಟ್ರೋಫಿ ಎತ್ತಿ ಹಿಡಿಯದಿದ್ದಾಗಲೂ ಆರ್​ಸಿಬಿ ಅಭಿಮಾನಗಳ ಸಂಖ್ಯೆ ಏರುವುದು ಮಾತ್ರ ನಿಂತಿರಲಿಲ್ಲ. ಈಗ ಐಪಿಎಲ್ ಗೆದ್ದ ಬಳಿಕ ಆರ್​​ಸಿಬಿ ಮತ್ತು ಅಭಿಮಾನಿಗಳಿಗೆ ಹೊಸ ಕಳೆಗಟ್ಟಿದೆ. ಇದೇ ವೇಳೆ, ಆರ್​​ಸಿಬಿ ಬ್ರ್ಯಾಂಡ್ ವ್ಯಾಲ್ಯೂ ಮತ್ತಷ್ಟು ಹೆಚ್ಚಾಗಿದೆ. ಐಪಿಎಲ್ ಟೀಮ್​​ಗಳಲ್ಲೇ ಅತಿಹೆಚ್ಚು ಬ್ರ್ಯಾಂಡ್ ವ್ಯಾಲ್ಯೂ ಇರುವ ಟೀಮ್ ಆರ್​​ಸಿಬಿ.

ಹೌಲಿಹನ್ ಲೋಕೀ ಎನ್ನುವ ಗ್ಲೋಬಲ್ ಇನ್ವೆಸ್ಟ್​​ಮೆಂಟ್ ಬ್ಯಾಂಕ್ 2024ರ ಐಪಿಎಲ್​ ತಂಡಗಳ ಬ್ರ್ಯಾಂಡ್ ಮೌಲ್ಯ ಪ್ರಕಟಿಸಿತ್ತು. ಅದರಲ್ಲಿ ಸಿಎಸ್​​ಕೆ 231 ಮಿಲಿಯನ್ ಡಾಲರ್​​ನೊಂದಿಗೆ ಅಗ್ರಸ್ಥಾನ ಪಡೆದಿದೆ. ಆರ್​​ಸಿಬಿ 227 ಮಿಲಿಯನ್ ಡಾಲರ್​ನೊಂದಿಗೆ ಎರಡನೇ ಅತಿಹೆಚ್ಚು ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ ತಂಡವೆನಿಸಿದೆ. ಇದು 2024ರ ಚಿತ್ರ. 2023ರಲ್ಲಿ 195 ಮಿಲಿಯನ್ ಡಾಲರ್ ಇದ್ದ ಆರ್​​ಸಿಬಿ ಬ್ರ್ಯಾಂಡ್ ಮೌಲ್ಯ 2024ರಲ್ಲಿ ಒಮ್ಮೆಲೇ 227 ಮಿಲಿಯನ್ ಡಾಲರ್​​ಗೆ ಏರಿತ್ತು. ಶೇ. 16ರಷ್ಟು ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿದೆ.

ಇದನ್ನೂ ಓದಿ: ಆರ್​​ಸಿಬಿ ಗೆಲುವಿನಿಂದ ಹಿಗ್ಗಿದ್ದು ಅಭಿಮಾನಿಗಳು ಮಾತ್ರವಲ್ಲ, ಈ ವಿದೇಶೀ ಕಂಪನಿಯ ಷೇರುಸಂಪತ್ತೂ ಏರಿಕೆ

ಬ್ರ್ಯಾಂಡ್ ಎಕ್ಸ್​ಪರ್ಟ್ಸ್ ಪ್ರಕಾರ, ಈಗ ಆರ್​​ಸಿಬಿ ಐಪಿಎಲ್ ಗೆದ್ದ ಬಳಿಕ ಅದರ ಬ್ರ್ಯಾಂಡ್ ವ್ಯಾಲ್ಯೂ ಶೇ. 15ರಿಂದ 20ರಷ್ಟಾದರೂ ಹೆಚ್ಚಬಹುದು. ಅಂದರೆ ಬೆಂಗಳೂರು ತಂಡದ ಬ್ರ್ಯಾಂಡ್ ಮೌಲ್ಯ 250 ಮಿಲಿಯನ್ ಡಾಲರ್​​ಗಿಂತ ಹೆಚ್ಚಾಗಬಹುದು. ಇನ್ನೊಂದೆಡೆ, ಟೇಬಲ್ ಬಾಟಮ್​​ನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್​ನ ಬ್ರ್ಯಾಂಡ್ ವ್ಯಾಲ್ಯೂ ಬಹಳ ಏರಿಕೆ ಆಗುವ ಸಾಧ್ಯತೆ ಇಲ್ಲ. ಹೀಗಾಗಿ, ಐಪಿಎಲ್ ಟೀಮ್​​ಗಳ ಪೈಕಿ ಆರ್​ಸಿಬಿ ಅತಿಮೌಲ್ಯಯುತ ತಂಡ ಎನಿಸಲಿದೆ.

ಬೇರೆ ಕ್ರೀಡೆಗಳಲ್ಲಿರುವ ತಂಡಗಳ ಬ್ರ್ಯಾಂಡ್ ವ್ಯಾಲ್ಯೂ ಎಷ್ಟಿದೆ?

ಜಾಗತಿಕವಾಗಿ ಬಹಳ ಜನಪ್ರಿಯವಾಗಿರುವ ಮತ್ತು ಫ್ಯಾನ್ ಫಾಲೋಯಿಂಗ್ ಇರುವ ಕ್ರೀಡೆಗಳಲ್ಲಿ ಬ್ಯಾಸ್ಕೆಟ್​​ಬಾಲ್, ಬೇಸ್​​ಬಾಲ್, ರಗ್​​ಬಿ, ಫುಟ್ಬಾಲ್​ಗಳಿವೆ. ಬ್ಯಾಸ್ಕೆಟ್​ಬಾಲ್, ಫುಟ್ಬಾಲ್ ಕ್ಲಬ್​​ಗಳಂತೂ ಬಹಳ ದೊಡ್ಡ ಬ್ರ್ಯಾಂಡ್ ಮೌಲ್ಯ ಹೊಂದಿವೆ.

ಅಮೆರಿಕದ ನ್ಯಾಷನಲ್ ಫುಟ್ಬಾಲ್ ಲೀಗ್​​ನಲ್ಲಿ ಆಡುವ ಡಲ್ಲಾಸ್ ಕೌಬಾಯ್ಸ್ ಎನ್ನುವ ಕ್ಲಬ್​​ನ ಬ್ರ್ಯಾಂಡ್ ವ್ಯಾಲ್ಯೂ ಬರೋಬ್ಬರಿ 10.1 ಬಿಲಿಯನ್ ಡಾಲರ್. ಅಂದರೆ, ಆರ್​​ಸಿಬಿ ತಂಡಕ್ಕಿಂತ 40 ಪಟ್ಟು ಹೆಚ್ಚು ಮೌಲ್ಯಯುತ ಕ್ಲಬ್ ಎನಿಸಿದೆ.

ಇದನ್ನೂ ಓದಿ: ಅಡವಿಟ್ಟ ಚಿನ್ನ, ಲಾಕರ್​​ನಲ್ಲಿಟ್ಟ ಚಿನ್ನ ಕಳುವಾದರೆ ಏನಾಗುತ್ತದೆ? ಗ್ರಾಹಕರಿಗೆ ಏನು ಪರಿಹಾರ? ಇಲ್ಲಿದೆ ಡೀಟೇಲ್ಸ್

ಭಾರತೀಯರಿಗೆ ಬಹಳ ಚಿರಪರಿಚಿತವಾಗಿರುವ ರಿಯಲ್ ಮ್ಯಾಡ್ರಿಡ್, ಮ್ಯಾಂಚೆಸ್ಟರ್ ಯುನೈಟೆಡ್, ಬಾರ್ಸಿಲೋನಾ ಇತ್ಯಾದಿ ಫುಟ್ಬಾಲ್ ಕ್ಲಬ್​​ಗಳ ಬ್ರ್ಯಾಂಡ್ ವ್ಯಾಲ್ಯೂ 4ರಿಂದ 7 ಬಿಲಿಯನ್ ಡಾಲರ್​​ನಷ್ಟಿದೆ. ಗೋಲ್ಡನ್ ಸ್ಟೇಟ್ ವಾರಿಯರ್ಸ್, ಲಾಸ್ ಏಂಜಲಿಸ್ ಲೇಕರ್ಸ್ ಇತ್ಯಾದಿ ಬ್ಯಾಸ್ಕೆಟ್​ಬಾಲ್ ಕ್ಲಬ್​​ಗಳ ಮೌಲ್ಯ ಕೂಡ ಬಿಲಿಯನ್ ಡಾಲರ್ ಲೆಕ್ಕದಲ್ಲಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ