Maruti Suzuki: ಮಾರುತಿ ಸುಜುಕಿ ನಿವ್ವಳ ಲಾಭ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಳ

| Updated By: Ganapathi Sharma

Updated on: Oct 28, 2022 | 4:20 PM

ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಮಾರುತಿ ಸುಜುಕಿ ಇಂಡಿಯಾದ ನಿವ್ವಳ ಲಾಭದಲ್ಲಿ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಳವಾಗಿದೆ.

Maruti Suzuki: ಮಾರುತಿ ಸುಜುಕಿ ನಿವ್ವಳ ಲಾಭ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಳ
ಮಾರುತಿ ಸುಜುಕಿ ಇಂಡಿಯಾ
Follow us on

ನವದೆಹಲಿ: ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ (Q2 results) ಮಾರುತಿ ಸುಜುಕಿ ಇಂಡಿಯಾದ (Maruti Suzuki India) ನಿವ್ವಳ ಲಾಭದಲ್ಲಿ (Net Profit) ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. ದಾಖಲೆ ಪ್ರಮಾಣದಲ್ಲಿ ಮಾರಾಟ ಹೆಚ್ಚಳವಾಗಿರುವುದು ಲಾಭದಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ. ಈ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯು 2,112.5 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ ಕಂಪನಿ ಗಳಿಸಿದ್ದ ಕ್ರೂಡೀಕೃತ ನಿವ್ವಳ ಲಾಭ 486.9 ಕೋಟಿ ರೂ. ಆಗಿತ್ತು.

ಎರಡನೇ ತ್ರೈಮಾಸಿಕ ಅವಧಿಯಲ್ಲಿ ಕಾರ್ಯಾಚರಣೆಗಳಿಂದ 29,942.5 ರೂ. ಆದಾಯ ಗಳಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ ಆದಾಯ 20,550.9 ರೂ. ಆಗಿತ್ತು ಎಂದು ಕಂಪನಿ ತಿಳಿಸಿದೆ.

ದಾಖಲೆಯ ವಾಹನ ಮಾರಾಟ

ಇದನ್ನೂ ಓದಿ
Petrol Price On October 28: ಕಚ್ಚಾ ತೈಲ ಬೆಲೆ ಕುಸಿತ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗಿದೆಯೇ? ತಿಳಿಯಿರಿ
Gold Price Today: ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ದರವೆಷ್ಟಿದೆ? ಇಲ್ಲಿದೆ ಮಾಹಿತಿ
RBI Meet: ನಿಯಂತ್ರಣಕ್ಕೆ ಬರುತ್ತಿಲ್ಲ ಹಣದುಬ್ಬರ; ನವೆಂಬರ್​ 3ಕ್ಕೆ ಎಂಪಿಸಿ ವಿಶೇಷ ಸಭೆ ಕರೆದ ಆರ್​ಬಿಐ
Banking Frauds: ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಮನ್ನಾ ಹೆಸರಲ್ಲಿ ವಂಚನೆ; ಎಚ್ಚರ ವಹಿಸಿ

ಎರಡನೇ ತ್ರೈಮಾಸಿಕ ಅವಧಿಯಲ್ಲಿ 5,17,395 ವಾಹನ ಮಾರಾಟ ಮಾಡಲಾಗಿದೆ. ತ್ರೈಮಾಸಿಕ ಅವಧಿಯೊಂದರಲ್ಲಿ ಇಷ್ಟೊಂದು ಸಂಖ್ಯೆಯ ವಾಹನಗಳನ್ನು ಮಾರಾಟ ಮಾಡಿರುವುದು ಇದೇ ಮೊದಲಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ.

‘ದೇಶೀಯ ಮಾರುಕಟ್ಟೆಯಲ್ಲಿ 4,54,200 ಯೂನಿಟ್ ಮಾರಾಟವಾಗಿವೆ. 63,195 ಯೂನಿಟ್ ರಫ್ತು ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಲಕರಣೆಗಳ ಕೊರತೆಯು ಸುಮಾರು 35,000 ವಾಹನಗಳ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ’ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: BYJU’S Turmoil: ಕೇರಳದಲ್ಲಿ ಕಚೇರಿ ಮುಚ್ಚಿದ ಬೈಜೂಸ್, ಉದ್ಯೋಗಿಗಳ ವಜಾ; ವರದಿ

ಕಳೆದ ವರ್ಷ ಇದೇ ಅವಧಿಯಲ್ಲಿ ಎಲೆಕ್ಟ್ರಾನಿಕ್ ಸಲಕರಣೆಗಳ ಕೊರತೆಯಿಂದಾಗಿ ಕಂಪನಿಗೆ 3,79,541 ವಾಹನಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಗಿತ್ತು. ಈ ಪೈಕಿ 320,133 ಯೂನಿಟ್​ಗಳು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದರೆ, 59,408 ಯೂನಿಟ್​ಗಳನ್ನು ರಫ್ತು ಮಾಡಲಾಗಿತ್ತು.

ಎಲೆಕ್ಟ್ರಾನಿಕ್ ಘಟಕಗಳ ಲಭ್ಯತೆಯನ್ನು ಖಾತರಿಪಡಿಸಲು ಮತ್ತು ವೆಚ್ಚ ಕಡಿತದ ದೃಷ್ಟಿಯಿಂದ ಕಂಪನಿಯು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮಾರುತಿ ಸುಜುಕಿ ತಿಳಿಸಿದೆ.

ಹೆಚ್ಚಿದ ಮಾರುತಿ ಸುಜುಕಿ ಷೇರು ಮೌಲ್ಯ

ತ್ರೈಮಾಸಿಕ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಾರುತಿ ಸುಜುಕಿ ಇಂಡಿಯಾದ ಷೇರು ಮೌಲ್ಯದಲ್ಲಿ ಭಾರಿ ಏರಿಕೆಯಾಗಿದೆ. ಕಂಪನಿಯ ಷೇರು ಮೌಲ್ಯದಲ್ಲಿ ಶೇಕಡಾ 4.98ರಷ್ಟು ಹೆಚ್ಚಳ ದಾಖಲಾಗಿದೆ. ಶುಕ್ರವಾರದ ವಹಿವಾಟಿನ ಕೊನೆಯಲ್ಲಿ ಮಾರುತಿ ಸುಜುಕಿ ಇಂಡಿಯಾದ ಷೇರಿನ ಮುಖ ಬೆಲೆ 450.60 ರೂ. ಹೆಚ್ಚಾಗಿ 9,492.55 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ