AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BYJU’S Turmoil: ಕೇರಳದಲ್ಲಿ ಕಚೇರಿ ಮುಚ್ಚಿದ ಬೈಜೂಸ್, ಉದ್ಯೋಗಿಗಳ ವಜಾ; ವರದಿ

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಎಜುಟೆಕ್ ಕಂಪನಿ ಬೈಜೂಸ್ ತನ್ನ ಅಂಗಸಂಸ್ಥೆ ಆಕಾಶ್ ಎಜುಕೇಶನಲ್ ಸರ್ವೀಸಸ್​ನಿಂದಲೇ 300 ಕೋಟಿ ರೂ. ಸಾಲ ಪಡೆದಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಎಜುಟೆಕ್ ಕಂಪನಿ ಬೈಜೂಸ್ ತನ್ನ ಅಂಗಸಂಸ್ಥೆ ಆಕಾಶ್ ಎಜುಕೇಶನಲ್ ಸರ್ವೀಸಸ್​ನಿಂದಲೇ 300 ಕೋಟಿ ರೂ. ಸಾಲ ಪಡೆದಿದೆ.

BYJU’S Turmoil: ಕೇರಳದಲ್ಲಿ ಕಚೇರಿ ಮುಚ್ಚಿದ ಬೈಜೂಸ್, ಉದ್ಯೋಗಿಗಳ ವಜಾ; ವರದಿ
ಬೈಜೂಸ್Image Credit source: Shutterstock
TV9 Web
| Edited By: |

Updated on:Jul 03, 2026 | 12:37 PM

Share

ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಎಜುಟೆಕ್ ಕಂಪನಿ ಬೈಜೂಸ್ (BYJU’s) ತನ್ನ ಅಂಗಸಂಸ್ಥೆ ಆಕಾಶ್ ಎಜುಕೇಶನಲ್ ಸರ್ವೀಸಸ್​ನಿಂದಲೇ (Aakash Educational Services) 300 ಕೋಟಿ ರೂ. ಸಾಲ ಪಡೆದಿದೆ ಎಂದು ವರದಿಯಾಗಿದೆ. ಪ್ರಧಾನ ವ್ಯಾಪಾರ ಚಟುವಟಿಕೆಗಳಿಗೆ ಅಗತ್ಯವಿರುವ ಹಣವನ್ನು ಸಾಲದ ರೂಪದಲ್ಲಿ ಪಡೆಯಲಾಗಿದೆ ಎಂದು ಕಂಪನಿಯ ನಿಯಂತ್ರಕರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಕಂಪನಿಯು ಕೇರಳದಲ್ಲಿ ಕಚೇರಿಗಳನ್ನು ಮುಚ್ಚಿದೆ, ಉದ್ಯೋಗಿಗಳಿಂದ ಬಲವಂತವಾಗಿ ರಾಜೀನಾಮೆ ಪಡೆಯುತ್ತಿದೆ ಎಂಬ ದೂರುಗಳೂ ಕೇಳಿಬಂದಿವೆ.

ಬೈಜೂಸ್ ತಿರುವನಂತಪುರದ ಟೆಕ್ನೊಪಾರ್ಕ್​ನಲ್ಲಿರುವ ಕಚೇರಿಯನ್ನು ಮುಚ್ಚಿದೆ. ರಾಜೀನಾಮೆ ನೀಡುವಂತೆ ಉದ್ಯೋಗಿಗಳನ್ನು ಒತ್ತಾಯಿಸುತ್ತಿದೆ ಎಂದು ಕೇರಳದ ಸಚಿವ ವಿ. ಶಿವನ್​ಕುಟ್ಟಿ ಆರೋಪಿಸಿದ್ದಾರೆ. ಬೈಜೂಸ್ ಉದ್ಯೋಗಿಗಳು ಐಟಿ ಉದ್ಯೋಗಿಗಳ ಕಲ್ಯಾಣ ಸಂಘದ ಪದಾಧಿಕಾರಿಗಳ ಜತೆ ಬಂದು ತಮ್ಮನ್ನು ಭೇಟಿಯಾಗಿ ಕಷ್ಟಗಳನ್ನು ಹೇಳಿಕೊಂಡಿದ್ದಾಗಿಯೂ ಸಚಿವರು ತಿಳಿಸಿದ್ದಾರೆ. ಈ ಕುರಿತು ಕಾರ್ಮಿಕ ಇಲಾಖೆ ಗಂಭೀರವಾಗಿ ತಪಾಸಣೆ ನಡೆಸಲಿದೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ನೀವು ಬೆಳವಣಿಗೆಯನ್ನು ಕಾಣುತ್ತಿಲ್ಲ ಎಂದಾದರೆ ಉಳಿದುಕೊಳ್ಳುವ ಮನಸ್ಥಿತಿ ರೂಢಿಸಿಕೊಳ್ಳಿ: ಬೈಜೂಸ್​​ ಬಗ್ಗೆ ಸುನೀಲ್​​​ ಶೆಟ್ಟಿ

ಕೇರಳದಲ್ಲಿ ಕೊಚ್ಚಿ ಹೊರತುಪಡಿಸಿ ಮತ್ತೆಲ್ಲ ಕಡೆಗಳಲ್ಲಿಯೂ ಬೈಜೂಸ್ ಕಚೇರಿಗಳನ್ನು ಮುಚ್ಚಲಾಗಿದೆ. ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳ ವಜಾ ನಡೆಯುತ್ತಿದೆ ಎಂದು ಕಂಪನಿಯ ಆಂತರಿಕ ಮೂಲಗಳು ತಿಳಿಸಿವೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.

ಬೈಜೂಸ್ ಬಿಕ್ಕಟ್ಟು; ಇತ್ತೀಚಿನ ಬೆಳವಣಿಗೆಗಳು

ಸೇಲ್ಸ್ ತಂಡದ ಟಾರ್ಗೆಟ್ ಅವಧಿಯನ್ನು 12 ವಾರಗಳಿಂದ 8 ವಾರಗಳಿಗೆ ಇಳಿಕೆ ಮಾಡಲಾಗಿದೆ. ವಾರದ ಕೆಲಸದ ದಿನಗಳನ್ನು 5ರಿಂದ 6ಕ್ಕೆ ಹೆಚ್ಚಿಸಲಾಗಿದೆ. ಉದ್ಯೋಗಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಿಂಬಿಸಿ ಉದ್ಯೋಗದಿಂದ ವಜಾಗೊಳಿಸಲು ಕಂಪನಿ ಈ ತಂತ್ರ ಅನುಸರಿಸುತ್ತಿದೆ ಎಂದು ಮೂಲಗಳ ಹೇಳಿಕೆ ಉಲ್ಲೇಖಿಸಿ ‘ಇಂಡಿಯಾ ಡಾಟ್ ಕಾಂ’ ವರದಿ ಮಾಡಿದೆ.

ಉದ್ಯೋಗಿಗಳು ಅಕ್ಟೋಬರ್​ ತಿಂಗಳ ವೇತನದ ಒಂದು ಬಾರಿಯ ಸೆಟಲ್​ಮೆಂಟ್​ಗೆ ಬೇಡಿಕೆ ಇಟ್ಟಿದ್ದಾರೆ. ನವೆಂಬರ್​ನಿಂದ 2023ರ ಜನವರಿ ವರೆಗಿನ ವೇತನದ ಒಂದು ಬಾರಿಯ ಪಾವತಿಗೂ ಬೇಡಿಕೆ ಇಟ್ಟಿದ್ದಾರೆ. ಜತೆಗೆ ಗಳಿಕೆ ರಜೆಯ ನಗದೀಕರಣ ಹಾಗೂ ವೇರಿಯೇಬಲ್ ಪೇ ಪಾವತಿಗೂ ಪಟ್ಟು ಹಿಡಿದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ನಷ್ಟದ ಸುಳಿಯಲ್ಲಿ ಬೈಜೂಸ್

21ನೇ ಹಣಕಾಸು ವರ್ಷದಲ್ಲಿ ಬೈಜೂಸ್ 4,588 ಕೋಟಿ ನಷ್ಟ ದಾಖಲಿಸಿತ್ತು. 18 ತಿಂಗಳು ವಿಳಂಬವಾಗಿ ಈ ವರದಿ ಪ್ರಕಟಿಸಿತ್ತು. ಬಹು ನಿರೀಕ್ಷಿತ ಐಪಿಒ (ಇನಿಷಿಯಲ್ ಪಬ್ಲಿಕ್ ಆಫರಿಂಗ್) ಅನ್ನೂ ಬೈಜೂಸ್ ವಿಳಂಬ ಮಾಡುತ್ತಿದೆ. ಜನರಿಂದ ಉತ್ತಮ ಸ್ಪಂದನೆ ದೊರೆಯದಿರಬಹುದೆಂಬ ಆತಂಕದಲ್ಲಿ ಹೀಗೆ ಮಾಡಲಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Fri, 28 October 22

Follow Us
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು