Reliance: ಆರ್​ಐಎಲ್​ನಿಂದ ಡೀಮರ್ಜ್ ಆದ ಜಿಯೋ ಫೈನಾನ್ಷಿಯಲ್; 273 ರೂ ಷೇರುಬೆಲೆ ಪಡೆದ ಜೆಎಫ್​ಎಸ್​ಎಲ್

|

Updated on: Jul 20, 2023 | 11:56 AM

JFSL Listed For Rs 273: ಆರ್​ಐಎಲ್​ನಿಂದ ಪ್ರತ್ಯೇಕಗೊಳಿಸಲಾಗಿರುವ ಜೆಎಫ್​ಎಸ್​ಎಲ್ ಕಂಪನಿಯ ಷೇರು 273 ರುಪಾಯಿಗೆ ಎನ್​ಎಸ್​ಇನಲ್ಲಿ ಲಿಸ್ಟ್ ಆಗಿದೆ. ಜುಲೈ 20ರಂದು ಸ್ಪೆಷಲ್ ಪ್ರೀ ಓಪನಿಂಗ್ ಸೆಷನ್​ನಲ್ಲಿ ರಿಲಾಯನ್ಸ್ ಷೇರುಗಳ ಟ್ರೇಡಿಂಗ್ ಮೂಲಕ ಬೆಲೆ ನಿಗದಿ ಮಾಡಲಾಯಿತು.

Reliance: ಆರ್​ಐಎಲ್​ನಿಂದ ಡೀಮರ್ಜ್ ಆದ ಜಿಯೋ ಫೈನಾನ್ಷಿಯಲ್; 273 ರೂ ಷೇರುಬೆಲೆ ಪಡೆದ ಜೆಎಫ್​ಎಸ್​ಎಲ್
ರಿಲಾಯನ್ಸ್
Follow us on

ಮುಂಬೈ, ಜುಲೈ 20: ರಿಲಾಯನ್ಸ್ ಇಂಡಸ್ಟ್ರೀಸ್​ನಿಂದ ಡೀಮರ್ಜ್ ಆಗಿರುವ ಅಥವಾ ಬೇರ್ಪಟ್ಟಿರುವ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಲಿ (JFSL) ಸಂಸ್ಥೆಯ ಷೇರು ಎನ್​ಎಸ್​ಇ ಮಾರುಕಟ್ಟೆಯಲ್ಲಿ 273 ರೂಪಾಯಿಗೆ ಲಿಸ್ಟ್ ಆಗಿದೆ. ಎನ್​ಎಸ್​ಇನಲ್ಲಿ ಆರ್​ಐಎಲ್​ನ ಷೇರುಬೆಲೆ 2,853ರೂನಿಂದ 2,580 ರುಪಾಯಿಗೆ ಇಳಿದಿದೆ. ಬಿಎಸ್​ಇ ವಿನಿಮಯ ಕೇಂದ್ರದಲ್ಲಿ ಅದರ ಷೇರುಬೆಲೆ 2,589 ರುಪಾಯಿಗೆ ನಿಗದಿಯಾಗಿದೆ. ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಷೇರುಬೆಲೆ ನಿರೀಕ್ಷೆಮೀರಿದ ಬೆಲೆ ಕಂಡಿದೆ. ಜೆಎಫ್​ಎಸ್​ಎಲ್​ನ ಷೇರುಬೆಲೆ 133 ರಿಂದ 190 ರೂ ಒಳಗೆ ನಿಗದಿಯಾಗಬಹುದು ಎಂದು ಭಾವಿಸಲಾಗಿತ್ತು. ಅಂತಿಮವಾಗಿ ಉತ್ತಮ ಬೆಲೆ ಪಡೆದುಕೊಂಡಿದೆ.

ರಿಲಾಯನ್ಸ್ ಮತ್ತು ಜಿಯೋ ಫೈನಾನ್ಷಿಯಲ್ ಡೀಮರ್ಜರ್​ಗೆ ಜುಲೈ 20, ಇಂದು ಕಟ್ ಆಫ್ ಡೇಟ್. ಇಂದು ಷೇರುಮಾರುಕಟ್ಟೆಗಳಲ್ಲಿ ಜೆಎಫ್​ಎಸ್​ಎಲ್​ನ ಬೆಲೆ ನಿಗದಿ ಮಾಡಲೆಂದು ರಿಲಾಯನ್ಸ್ ಷೇರುಗಳಿಗೆ ಸ್ಪೆಷಲ್ ಪ್ರೀ ಓಪನಿಂಗ್ ಸೆಷನ್ ನೀಡಲಾಗಿತ್ತು ಗುರುವಾರ ಬೆಳಗ್ಗೆ 9ರಿಂದ 10ರವರೆಗೂ ಈ ವಿಶೇಷ ಟ್ರೇಡಿಂಗ್ ಸೆಷನ್ ನಡೆಯಿತು. ಈ ವೇಳೆ, ಎನ್​ಎಸ್​ಇನಲ್ಲಿ ಷೇರುದಾರರು ಆರ್​ಐಎಲ್ ಷೇರುಬೆಲೆಯನ್ನು 2580 ರೂಗೆ ಇಳಿಸಿದ್ದಾರೆ. ಹಿಂದಿನ ದಿನ ಇದರ ಬೆಲೆ 2,853 ರೂ ಇತ್ತು. ಹಳೆಯ ಬೆಲೆಯನ್ನು ಹೊಸ ಬೆಲೆಯಿಂದ ಕಳೆದು ಉಳಿದ ಹಣವನ್ನು ಜೆಎಫ್​ಎಸ್​ಎಲ್​ನ ಷೇರಿಗೆ ಬೆಲೆಯಾಗಿ ನಿಗದಿ ಮಾಡಲಾಗಿದೆ.

ಇದನ್ನೂ ಓದಿRIL: ರಿಲಾಯನ್ಸ್ ಇಂಡಸ್ಟ್ರೀಸ್​ನಿಂದ ಹಣಕಾಸು ಸೇವೆ ಪ್ರತ್ಯೇಕ; ಆರ್​ಐಎಲ್ ಷೇರುದಾರರಿಗೆ ಪ್ರತೀ ಷೇರಿಗೆ ಹೊಸ ಜಿಯೋ ಷೇರು ಉಚಿತ; ಇದು ನಿಜವಾ?

ರಿಲಾಯನ್ಸ್ ಷೇರುದಾರಿಗೆ ಜೆಎಫ್​ಎಸ್​ಎಲ್ ಷೇರು ಉಚಿತ

ರಿಲಾಯನ್ಸ್ ಮತ್ತು ಜೆಎಫ್​ಎಸ್​ಎಲ್ ಡೀಮರ್ಜ್ ಮಾಡುವಾಗ ನಿಗದಿ ಮಾಡಲಾದ ಸೂತ್ರದ ಪ್ರಕಾರ ಪ್ರತಿಯೊಂದು ರಿಲಾಯನ್ಸ್ ಷೇರಿಗೂ ಒಂದು ಜೆಎಫ್​ಎಸ್​ಎಲ್ ಷೇರು ಉಚಿತವಾಗಿ ಸಿಗುತ್ತದೆ. ಅಂದರೆ ನೀವು 1000 ಆರ್​ಐಎಲ್ ಷೇರು ಹೊಂದಿದ್ದರೆ ಜೆಎಫ್​ಎಸ್​ಎಲ್​ನ 1,000 ಷೇರುಗಳೂ ಹೆಚ್ಚುವರಿಯಾಗಿ ಸಿಗುತ್ತವೆ. ಆದರೆ ಒಟ್ಟಾರೆ ಅವರ ಷೇರುಸಂಪತ್ತಿನಲ್ಲಿ ಹೆಚ್ಚುಕಡಿಮೆ ಆಗದೆ ಅಷ್ಟೇ ಇರುತ್ತದೆ.

ನಿಫ್ಟಿ, ಸೆನ್ಸೆಕ್ಸ್ ಷೇರು ಸಂಖ್ಯೆ ಏರಿಕೆ

ಎನ್​ಎಸ್​ಇ ವಿನಿಮಯ ಕೇಂದ್ರದ ಪ್ರಮುಖ ಸೂಚ್ಯಂಕವಾದ ನಿಫ್ಟಿಯಲ್ಲಿ ಈವರೆಗೆ 50 ಸಂಸ್ಥೆಗಳ ಷೇರುಗಳು ಲಿಸ್ಟ್ ಆಗಿದ್ದವು. ಈಗ ಜೆಎಫ್​ಎಸ್​ಎಲ್ ಸೇರ್ಪಡೆಯೊಂದಿಗೆ 51 ಷೇರುಗಳಾಗುತ್ತವೆ.

ಇದನ್ನೂ ಓದಿAlia Bhatt, Reliance: ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಅವರ ಕಂಪನಿ ಸೇಲ್; ಅಂಬಾನಿ ಪಾಲಾಗಲಿದೆಯಾ ಎಡ್ಡೇ ಮಮ್ಮಾ?

ಹಾಗೆಯೇ ಸೆನ್ಸೆಕ್ಸ್ ಎಂಬುದು ಬಿಎಸ್​ಇಯ ಪ್ರಮುಖ ಸೂಚ್ಯಂಕವಾಗಿದೆ. ಅದರಲ್ಲಿ 30 ಷೇರುಗಳನ್ನು ಲಿಸ್ಟ್ ಮಾಡಲಾಗುತ್ತಿತ್ತು. ಈಗ ಅದು 31ಕ್ಕೆ ಹೆಚ್ಚಾಗುತ್ತದೆ.

ಜಿಯೋ ಫೈನಾನ್ಷಿಯಲ್ ಸರ್ವಿಸಸ್​ನ ಷೇರನ್ನು ನಿಫ್ಟಿ50 ಅಲ್ಲದೇ ಎನ್​ಎಸ್​ಇಯ ಇತರ ಕೆಲ ಪ್ರಮುಖ ಸೂಚ್ಯಂಕಗಳಲ್ಲಿ ಲಿಸ್ಟ್ ಮಾಡಲಾಗುತ್ತದೆ. ನಿಫ್ಟಿ100, ನಿಫ್ಟಿ200, ನಿಫ್ಟಿ500 ಸೂಚ್ಯಂಕಗಳು ಹಾಗೂ ಕ್ಷೇತ್ರವಾರು ಸೂಚ್ಯಂಕಗಳಲ್ಲಿ ಜೆಎಫ್​ಎಸ್​ಎಲ್ ಲಿಸ್ಟ್ ಆಗುತ್ತದೆ.

ಹಾಗೆಯೇ, ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ (ಬಿಎಸ್​ಇ) ಸೆನ್ಸೆಕ್ಸ್ ಸೇರಿ ಬೇರೆ ಬೇರೆ 18 ಸೂಚ್ಯಂಕಗಳಲ್ಲಿ ಲಿಸ್ಟ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:38 am, Thu, 20 July 23