Reliance Industries: ಅಬುಧಾಬಿ ಗ್ಲೋಬಲ್ ಮಾರ್ಕೆಟ್​ನಲ್ಲಿ RINL ಸೇರ್ಪಡೆ ಮಾಡಿದ ರಿಲಯನ್ಸ್ ಇಂಡಸ್ಟ್ರೀಸ್

| Updated By: Srinivas Mata

Updated on: Oct 02, 2021 | 5:24 PM

ರಿಲಯನ್ಸ್ ಇಂಡಸ್ಟ್ರೀಸ್​​ನಿಂದ ಯುಎಇಯಲ್ಲಿ ರಿಲಯನ್ಸ್ ಇಂಟರ್​ನ್ಯಾಷನಲ್ ಲಿಮಿಟೆಡ್​ ಅನ್ನು ಇನ್​ಕಾರ್ಪೊರೇಟ್​ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Reliance Industries: ಅಬುಧಾಬಿ ಗ್ಲೋಬಲ್ ಮಾರ್ಕೆಟ್​ನಲ್ಲಿ RINL ಸೇರ್ಪಡೆ ಮಾಡಿದ ರಿಲಯನ್ಸ್ ಇಂಡಸ್ಟ್ರೀಸ್
ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ (ಸಂಗ್ರಹ ಚಿತ್ರ)
Follow us on

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ (RIL)ನಿಂದ ಸಂಪೂರ್ಣ ಒಡೆತನದ ಅಂಗ ಸಂಸ್ಥೆಯಾದ ರಿಲಯನ್ಸ್ ಇಂಟರ್​ನ್ಯಾಷನಲ್ ಲಿಮಿಟೆಡ್ (RINL) ಎಂಬುದನ್ನು ಯುನೈಟೆಡ್ ಅರಬ್ ಎಮಿರೇಟ್ಸ್​ನ (UAE) ಅಬುಧಾಬಿ ಗ್ಲೋಬಲ್ ಮಾರ್ಕೆಟ್​ನಲ್ಲಿ ಸೇರ್ಪಡೆ (Incorporate) ಮಾಡಲಾಗಿದೆ. ಕಂಪೆನಿಯು 7.42 ಕೋಟಿ ರೂಪಾಯಿ ಅಥವಾ 10 ಲಕ್ಷ ಅಮೆರಿಕನ್ ಡಾಲರ್ ನಗದನ್ನು ರಿಲಯನ್ಸ್ ಇಂಟರ್​ನ್ಯಾಷನಲ್ ಲಿಮಿಟೆಡ್​ನ ತಲಾ 1 ಯುಎಸ್​ಡಿಯ 10 ಲಕ್ಷ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಿದೆ, ಎಂದು ಶನಿವಾರ ಫೈಲಿಂಗ್​ನಲ್ಲಿ ತಿಳಿಸಲಾಗಿದೆ. ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ಪೆಟ್ರೋಕೆಮಿಕಲ್ಸ್ ಮತ್ತು ಕೃಷಿ ಪದಾರ್ಥಗಳಲ್ಲಿ ವಹಿವಾಟು ನಡೆಸುವುದಕ್ಕೆ ಈ ಅಂಗಸಂಸ್ಥೆಯನ್ನು ಸ್ಥಾಪಿಸಲಾಗಿದೆ. ರಿಲಯನ್ಸ್ ಇಂಟರ್​ನ್ಯಾಷನಲ್ ಲಿಮಿಟೆಡ್ ವಾಣಿಜ್ಯ ಕಾರ್ಯ ಚಟುವಟಿಕೆ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಅಬುಧಾಬಿ ನ್ಯಾಷನಲ್ ಆಯಿಲ್ ಕಂಪೆನಿ ಯೋಜನೆಯಲ್ಲಿ ಹೂಡಿಕೆ ಮಾಡುವುದಾಗಿ ಕಳೆದ ಜೂನ್​ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಘೋಷಣೆ ಮಾಡಿತ್ತು. ಆಗಿನ ಯೋಜನೆಯ ಬೆನ್ನಿಗೆ ಈ ಬೆಳವಣಿಗೆ ಆಗಿದೆ.

ಕಂಪೆನಿಯು ಹೇಳಿರುವಂತೆ, ರಿಲಯನ್ಸ್ ಇಂಟರ್​ನ್ಯಾಷನಲ್ ಲಿಮಿಟೆಡ್ ಹೂಡಿಕೆಯು ಸಂಬಂಧಪಟ್ಟ ವ್ಯಕ್ತಿಗಳ ವಹಿವಾಟಿಗೆ ಬರುವುದಿಲ್ಲ ಎಂದು ಕಂಪೆನಿ ಹೇಳಿದೆ. ಜತೆಗೆ ಪ್ರವರ್ತಕರು ಅಥವಾ ಪ್ರವರ್ತಕರ ಸಮೂಹ ಅಥವಾ ಸಮೂಹದ ಕಂಪೆನಿಗಳು ರಿಲಯನ್ಸ್ ಇಂಟರ್​ನ್ಯಾಷನಲ್ ಲಿಮಿಟೆಡ್​ನಲ್ಲಿ ಯಾವುದೇ ಆಸಕ್ತಿ ಹೊಂದಿಲ್ಲ ಎಂದು ತಿಳಿಸಲಾಗಿದೆ.

ಈಗಿನ ಹೂಡಿಕೆಗೆ ಸರ್ಕಾರದ ಅಥವಾ ನಿಯಂತ್ರಕರ ಅನುಮತಿಯ ಅಗತ್ಯ ಇಲ್ಲ ಎನ್ನಲಾಗಿದೆ. ರಿಲಯನ್ಸ್ ಕಂಪೆನಿಯಿಂದ ವಿಶ್ವದ ಅತಿ ದೊಡ್ಡ ತೈಲ ರಿಫೈನಿಂಗ್ ಸಮುಚ್ಚಯವನ್ನು ಗುಜರಾತ್​ನಲ್ಲಿ ನಡೆಸುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಷೇರು ಶುಕ್ರವಾರದಂದು ಎನ್​ಎಸ್​ಇಯಲ್ಲಿ ವಾರದ ಕೊನೆಗೆ ರೂ. 2,525ಕ್ಕೆ ವಾರಾಂತ್ಯ ಕಂಡಿದೆ.

ಇದನ್ನೂ ಓದಿ: RRVL: ಜಸ್ಟ್​ ಡಯಲ್​ನಲ್ಲಿ ಶೇ 67ರಷ್ಟು ಷೇರು ಖರೀದಿಸಲಿದೆ ರಿಲಯನ್ಸ್ ರೀಟೇಲ್ ವೆಂಚರ್ಸ್