ನವದೆಹಲಿ, ಏಪ್ರಿಲ್ 24: ರಿಲಾಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ಟೆಲಿಕಾಂ ಆಪರೇಟರ್ ಸಂಸ್ಥೆ ರಿಲಾಯನ್ಸ್ ಜಿಯೋ (Reliance Jio) ಡಾಟಾ ಟ್ರಾಫಿಕ್ನಲ್ಲಿ ವಿಶ್ವದ ನಂಬರ್ ಒನ್ ಎನಿಸಿದೆ. ಚೀನಾದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆದ ಚೀನಾ ಮೊಬೈಲ್ (China Mobile) ಅನ್ನು ಮೀರಿಸಿ ಜಿಯೋ ಬೆಳೆದಿದೆ. ರಿಲಾಯನ್ಸ್ ಜಿಯೋ ಮೊನ್ನೆ ಸೋಮವಾರ ಪ್ರಕಟಿಸಿದ ತ್ರೈಮಾಸಿಕ ವರದಿಯಲ್ಲಿ (ಜನವರಿಯಿಂದ ಮಾರ್ಚ್ವರೆಗಿನ ಅವಧಿ) ಅದರ ಒಟ್ಟಾರೆ ಡಾಟಾ ಟ್ರಾಫಿಕ್ ಅಂಕಿ ಅಂಶಗಳನ್ನು ತಿಳಿಸಿದೆ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿರುವ ಮಾಹಿತಿ ಪ್ರಕಾರ ಜಿಯೋ ನೆಟ್ವರ್ಕ್ನಲ್ಲಿ ಒಟ್ಟಾರೆ ಡಾಟಾ ಟ್ರಾಫಿಕ್ 40.9 ಇಕ್ಸೋಬೈಟ್ ತಲುಪಿದೆ. ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ ಇದ್ದುದಕ್ಕಿಂತ ಶೇ. 35.2ರಷ್ಟು ಡಾಟಾ ಟ್ರಾಫಿಕ್ ಹೆಚ್ಚಾಗಿದೆ. ಜಿಯೋ 48.18 ಕೋಟಿ ಗ್ರಾಹಕ ಬಳಗ ಕೂಡ ಹೊಂದಿದೆ.
ಡಾಟಾ ಟ್ರಾಫಿಕ್ ಎಂದರೆ ಒಂದು ನೆಟ್ವರ್ಕ್ನಲ್ಲಿ ಬಳಕೆಯಾಗುವ ಡಾಟಾ ಪ್ರಮಾಣ. ಇಲ್ಲಿ ಡಾಟಾ ಏನು ಬೇಕಾದರೂ ಆಗಬಹುದು. ಟೆಕ್ಸ್ಟ್ ಮೆಸೇಜ್ ಆಗಿರಬಹುದು. ಸಂಗೀತ, ವಿಡಿಯೋ ಆಗಿರಬಹುದು. ಧ್ವನಿ ಕರೆಯೂ ಆಗಿರಬಹುದು. ಇನ್ನು, ಒಂದು ಇಕ್ಸೋಬೈಟ್ ಎಂದರೆ ಒಂದು ಲಕ್ಷ ಟಿಬಿ. ಜಿಬಿ ಲೆಕ್ಕದಲ್ಲಿ ಸುಮಾರು 100 ಕೋಟಿ ಜಿಬಿ ಡಾಟಾ ವರ್ಗಾವಣೆ ಮೂರು ತಿಂಗಳಲ್ಲಿ ಆಗಿದೆ. ಚೀನಾ ಒನ್ ಮೊಬೈಲ್ನ ಡಾಟಾ ಟ್ರಾಫಿಕ್ಗಿಂತಲೂ ಇದು ಹೆಚ್ಚು ಎನ್ನಲಾಗಿದೆ. ಜಿಯೋದ ಈ ಸಾಧನೆಯನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಮುಕೇಶ್ ಅಂಬಾನಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಮದ್ಯದೊರೆಯ ಮಗಳು; ಫ್ಯಾಷನ್ ಜಗತ್ತಿನಲ್ಲಿ ಲೈಲಾ ಓ ಲೈಲಾ..! ಯಶಸ್ಸು ಕಂಡ ಲೈಲಾ ಮಲ್ಯ
“10.8 ಕೋಟಿಗೂ ಹೆಚ್ಚು 5ಜಿ ಗ್ರಾಹಕರನ್ನು ಹೊಂದಿರುವ ಜಿಯೋ, ಭಾರತದಲ್ಲಿ ನಡೆಯುತ್ತಿರುವ 5ಜಿ ಪರಿವರ್ತನೆಯ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಸಾಂಪ್ರದಾಯಿಕ 2ಜಿ ಬಳಕೆದಾರರನ್ನು ಸ್ಮಾರ್ಟ್ಫೋನ್ಗೆ ಅಪ್ಗ್ರೇಡ್ ಮಾಡುವುದರಿಂದ ಹಿಡಿದು, ಎಐ ಚಾಲಿತ ಪರಿಹಾರ ಕಾಣುವ ಪ್ರಯತ್ನದವರೆಗೂ ಜಿಯೋ ಈ ದೇಶದ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಅನ್ನು ಬಲಪಡಿಸುವ ಸಾಮರ್ಥ್ಯವನ್ನು ಸಾಬೀತುಪಡಿಸಿದೆ” ಎಂದು ಮುಕೇಶ್ ಅಂಬಾನಿ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ 2ಜಿ ಬಳಕೆದಾರರನ್ನು 5ಜಿಗೆ ಕರೆತರಲು ಮತ್ತು ಇಂಟರ್ನೆಟ್ ಬಳಕೆದಾರರ ಪ್ರಮಾಣ ಹೆಚ್ಚಲು ಜಿಯೋ ಪಾತ್ರ ಮಹತ್ತರದಿದೆ. 2020ರ ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದ ಬಳಿಕ ಡಾಟಾ ಟ್ರಾಫಿಕ್ ಗಣನೀಯವಾಗಿ ಹೆಚ್ಚಾಗಿದೆ. ಮೂರ್ನಾಲ್ಕು ವರ್ಷದಲ್ಲಿ ಡಾಟಾ ಟ್ರಾಫಿಕ್ 2.4 ಪಟ್ಟು ಹೆಚ್ಚಾಗಿದೆ. ಸರಾಸರಿ ಮಾಸಿಕ ಡಾಟಾ ಬಳಕೆ ಮೂರು ವರ್ಷದಲ್ಲಿ 13.3 ಜಿಬಿಯಿಂದ 28.7 ಜಿಬಿಗೆ ಏರಿದೆ.
ಇದನ್ನೂ ಓದಿ: ವೈಯಕ್ತಿಕ ಆಸ್ತಿಯಲ್ಲಿ ಸರ್ಕಾರಕ್ಕೆ ಶೇ. 55 ಪಾಲು: ಅಮೆರಿಕದ ಟ್ಯಾಕ್ಸ್ ವ್ಯವಸ್ಥೆ ಪ್ರಸ್ತಾಪಿಸಿದ ಸ್ಯಾಮ್ ಪಿತ್ರೋಡಾ
ಇದೇ ವೇಳೆ, ಜಿಯೋದ ತೆರಿಗೆ ಮುಂಚಿನ ಲಾಭ 1 ಲಕ್ಷ ಕೋಟಿ ರೂ ಗಡಿ ದಾಟಿ ಹೋಗಿದೆ. ಈ ಮೂಲಕ ಇಷ್ಟು ದೊಡ್ಡ ಆದಾಯ ಕಂಡ ಮೊದಲ ಭಾರತೀಯ ಕಂಪನಿ ಎನಿಸಿದೆ. ರಿಲಾಯನ್ಸ್ ಜಿಯೋಗೆ 2015ರಿಂದಲೂ ಸಂಗೀತಾ ಅಗರ್ವಾಲ್ ಸಿಇಒ ಆಗಿದ್ದಾರೆ. ಮುಕೇಶ್ ಅಂಬಾನಿ ಹಿರಿಯ ಮಗ ಆಕಾಶ್ ಅಂಬಾನಿ ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ಸ್ನ ಛೇರ್ಮನ್ ಆಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ