ಮದ್ಯದೊರೆಯ ಮಗಳು; ಫ್ಯಾಷನ್ ಜಗತ್ತಿನಲ್ಲಿ ಲೈಲಾ ಓ ಲೈಲಾ..! ಯಶಸ್ಸು ಕಂಡ ಲೈಲಾ ಮಲ್ಯ
Story of Laila Mallaya, daughter of liquor baron: ಭಾರತದಲ್ಲಿ ಬ್ಯಾಂಕುಗಳಿಗೆ ವಂಚನೆ ಎಸಗಿ ವಿದೇಶಕ್ಕೆ ಹೋಗಿ ನೆಲಸಿರುವ ವಿಜಯ್ ಮಲ್ಯ ಸೋಷಿಯಲ್ ಮೀಡಿಯಾ ಮೂಲಕ ಭಾರತೀಯರಿಗೆ ಆಗಾಗ್ಗೆ ಒನ್ಲೈನರ್ ಮೆಸೇಜ್ ನೀಡುತ್ತಿರುತ್ತಾರೆ. ಅವರ ಎರಡನೇ ಪತ್ನಿಯ ಮಗಳಾದ ಲೈಲಾ ಇವತ್ತು ಫ್ಯಾಷನ್ ಜಗತ್ತಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಓದಿದ ಲೈಲಾ ತಮ್ಮದೇ ಫ್ಯಾಷನ್ ಕಂಪನಿ ಇಟ್ಟುಕೊಂಡಿದ್ದಾರೆ.
ಬ್ಯಾಂಕುಗಳಿಂದ ಸಾಲ ಪಡೆದು ಮರುಪಾವತಿಸದೆ ದೇಶ ಬಿಟ್ಟು ಹೋಗಿರುವ ಖ್ಯಾತ ಉದ್ಯಮಿ ಹಾಗೂ ಬೆಂಗಳೂರು ಐಪಿಎಲ್ ತಂಡದ ಮೂಲ ಸಂಸ್ಥಾಪಕ ವಿಜಯ್ ಮಲ್ಯ (Vijay Mallya) ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಒನ್ಲೈನರ್ಗಳನ್ನು ಹಾಕುತ್ತಾ ತಮ್ಮ ಇರುವಿಕೆಯನ್ನು ಖಚಿತಪಡಿಸುತ್ತಿರುತ್ತಾರೆ. ಅದು ಬಿಟ್ಟರೆ ವಿಜಯ್ ಮಲ್ಯ ಇಂಗ್ಲೆಂಡ್ನಲ್ಲಿ ಏನು ಮಾಡುತ್ತಿದ್ದಾರೆ ಇತ್ಯಾದಿ ಬಗ್ಗೆ ಹೆಚ್ಚಿನ ಮಾಹಿತಿ ಭಾರತೀಯರಿಗೆ ಇಲ್ಲ. ಐಪಿಎಲ್ ಪಂದ್ಯಗಳ ವೇಳೆ ಟಿವಿ ಕ್ಯಾಮರಾಗಳ ಕಣ್ಣಿಗೆ ಹೆಚ್ಚು ಬೀಳುತ್ತಿದ್ದ ಮಗ ಸಿದ್ಧಾರ್ಥ್ ಮಲ್ಯ ಈಗ ನಟರಾಗಿದ್ದು, ಅಮೆರಿಕದಲ್ಲಿ ಸಿದ್ ಮಲ್ಯ ಆಗಿ ಪರಿಚಿತರಾಗಿದ್ದಾರೆ. ಇದೇ ಹೊತ್ತಿನಲ್ಲಿ ವಿಜಯ್ ಮಲ್ಯ ಮಗಳೊಬ್ಬಳು ಬೆಂಗಳೂರಿನ ಫ್ಯಾಷನ್ ಜಗತ್ತಿನಲ್ಲಿ ಸದ್ದಿಲ್ಲದೇ ನೆಲೆ ಕಾಣುತ್ತಿದ್ದಾರೆ. ಅವರೇ ಲೈಲಾ ಮಲ್ಯ.
ವಿಜಯ್ ಮಲ್ಯಗೆ ನಾಲ್ವರು ಮಕ್ಕಳು
ಕಿಂಗ್ಫಿಶರ್ ಇತ್ಯಾದಿ ಮದ್ಯದ ಬ್ರ್ಯಾಂಡ್ಗಳನ್ನು ಸೃಷ್ಟಿಸಿದ ವಿಜಯ್ ಮಲ್ಯ ಎರಡು ಮದುವೆಯಾಗಿದ್ದಾರೆ. ಸಮೀರಾ ಅವರು ಮೊದಲ ಪತ್ನಿ. ಇವರಿಂದ ಹುಟ್ಟಿದ ಮಕ್ಕಳು ಸಿದ್ಧಾರ್ಥ್, ಲಿಯಾನಾ ಮತ್ತು ತಾನ್ಯಾ. ವಿಜಯ್ ಮಲ್ಯ ತಮ್ಮ ಮೊದಲ ಪತ್ನಿ ಸಮೀರಾಗೆ ಡಿವೋರ್ಸ್ ಕೊಟ್ಟು, ನೆರೆಮನೆಯ ರೇಖಾ ಅವರನ್ನು ಮದುವೆಯಾದರು. ರೇಖಾ ಅವರಿಗೂ ಅದು ಎರಡನೇ ಮದುವೆ. ಅವರ ಮೊದಲ ಪತಿ ಶಾಹಿದ್ ಮಹಮೂದ್. ಆ ಮದುವೆಯಿಂದ ಲೈಲಾ ಮತ್ತು ಕಬೀರ್ ಮಹಮೂದ್ ಮಕ್ಕಳನ್ನು ಪಡೆದಿದ್ದಾರೆ. ಈ ಪೈಕಿ ಲೈಲಾ ಅವರನ್ನು ವಿಜಯ್ ಮಲ್ಯ ಮಲಮಗಳಾಗಿ ಸಾಕಿಕೊಂಡಿದ್ದರು.
ಇದನ್ನೂ ಓದಿ: ವ್ಯವಹಾರದಲ್ಲಿ ಚತುರೆ ಸನ್ನಿ ಲಿಯೋನೆ; 10 ಲಕ್ಷದಿಂದ ಆರಂಭವಾದ ಬಿಸಿನೆಸ್ ಇವತ್ತು ವರ್ಷಕ್ಕೆ 10 ಕೋಟಿ ಆದಾಯ
ಬೆಂಗಳೂರಿನ ಓದಿ ಬೆಳೆದ ಲೈಲಾ
ವಿಜಯ್ ಮಲ್ಯ ಮಲಮಗಳು ಲೈಲಾ ಬೆಂಗಳೂರಿನ ಅದಿತಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಓದಿದ್ದು. ಅಮೆರಿಕದ ನ್ಯೂಯಾರ್ಕ್, ಮಸಾಚುಸೆಟ್ಸ್ನಲ್ಲಿ ಉನ್ನತ ವ್ಯಾಸಂಗ ಮಾಡಿ ಭಾರತಕ್ಕೆ ಬಂದು ಫ್ಯಾಷನ್ ಜಗತ್ತಿನಲ್ಲಿ ವೃತ್ತಿ ಆರಂಭಿಸಿದ್ದರು. ವೋಗ್ ಬ್ರ್ಯಾಂಡ್ಗೆ ಅವರು ಒಡವೆ ವಿನ್ಯಾಸಕಿ ಮತ್ತು ಸ್ಟೈಲಿಸ್ಟ್ ಆಗಿ ಮೊದಲು ಕೆಲಸ ಆರಂಭಿಸಿದರು.
ಬಳಿಕ ಸೋಷಿಯಲ್ ಬಟರ್ಫ್ಲೈ ಎಂಬ ತನ್ನದೇ ಬ್ರ್ಯಾಂಡ್ ಸ್ಥಾಪಿಸಿದರು. ಫ್ಯಾಷನ್ ಲೋಕದಲ್ಲಿ ಈಗ ಅವರು ಚಿರಪರಿಚಿತರಾಗಿದ್ದಾರೆ. ಅವರ ಬಿಸಿನೆಸ್ಗೆ ಒಂದು ನೆಲೆ ಸಿಕ್ಕಿದೆ.
ಇದನ್ನೂ ಓದಿ: ಕೊಡಿ ಕೊಡಿ ಹಳೆ ಸಾಮಾನ್… ಆರ್ಥಿಕ ಪತನ ತಪ್ಪಿಸಲು ಚೀನಾದ ಹೊಸ ಪ್ಲಾನ್
ಐಪಿಎಲ್ನಲ್ಲಿ ಲಲಿತ್ ಮೋದಿ ಜೊತೆ ಕೆಲಸ ಮಾಡಿದ್ದ ಲೈಲಾ
ಐಪಿಎಲ್ ರೂವಾರಿ ಎನಿಸಿದ್ದ ಲಲಿತ್ ಮೋದಿ ಜೊತೆ ಲೈಲಾ ಕೆಲಸ ಮಾಡಿದ್ದರು. ಅದು 2010ರಲ್ಲಿ. ಹಣಕಾಸು ಅವ್ಯವಹಾರ ಆರೋಪದ ಮೇಲೆ ಲಲಿತ್ ಮೋದಿ ಅವರನ್ನು ಐಪಿಎಲ್ ಕಮಿಷನರ್ ಸ್ಥಾನದಿಂದ ಅಮಾನತುಗೊಳೀಸಲಾಯಿತು. ಬಳಿಕ ಅವರನ್ನು ಆಜೀವ ಪರ್ಯಂತ ನಿಷೇಧಿಸಲಾಯಿತು. ಈ ವಿವಾದದಲ್ಲಿ ಅವರ ಹೆಸರೂ ತಳುಕು ಹಾಕಿಕೊಂಡಿತ್ತು. ಬಳಿಕ ಅವರು ಐಪಿಎಲ್ನಿಂದ ದೂರ ಉಳಿದು ಫ್ಯಾಷನ್ ಕ್ಷೇತ್ರದತ್ತ ಗಮನ ಕೊಡಲು ಆರಂಭಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ