Kannada News Photo gallery Star Struck: Sunny Leone says her cosmetics brand starstruck has crossed 10 crore turnover
Starstruck: ವ್ಯವಹಾರದಲ್ಲಿ ಚತುರೆ ಸನ್ನಿ ಲಿಯೋನೆ; 10 ಲಕ್ಷದಿಂದ ಆರಂಭವಾದ ಬಿಸಿನೆಸ್ ಇವತ್ತು ವರ್ಷಕ್ಕೆ 10 ಕೋಟಿ ಆದಾಯ
2018ರಲ್ಲಿ ಸನ್ನಿ ಲಿಯೋನ್ 'ಸ್ಟಾರ್‌ಸ್ಟ್ರಕ್' ಅನ್ನು ಕೇವಲ 10 ಲಕ್ಷ ರೂ. ಹೂಡಿಕೆ ಮಾಡಿ ಪ್ರಾರಂಭಿಸಿದ್ದರು. ಕೇವಲ 5ವರ್ಷಗಳಲ್ಲಿ 10 ಕೋಟಿ ರೂಗಳ ವರೆಗೆ ಈ ಕಂಪೆನಿ ಲಾಭ ಗಳಿಸಿದೆ ಎಂದು ಸ್ವತಹ ನಟಿ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸನ್ನಿ ಲಿಯೋನ್ ತನ್ನ ಒಡೆತನದ ಕಾಸ್ಮೆಟಿಕ್ಸ್ ಕಂಪೆನಿಯಾದ 'ಸ್ಟಾರ್‌ಸ್ಟ್ರಕ್' ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ಮೂಲಕ ಮಾಡೆಲಿಂಗ್ ಮಾತ್ರವಲ್ಲದೇ ಬಿಸಿನೆಸ್ನಲ್ಲೂ ಕೋಟಿ ಕೋಟಿ ಲಾಭಗಳಿಸಿ ಸೈ ಎಸಿಕೊಂಡಿರುವ ಯಶಸ್ಸಿನ ಕಥೆ ಹಂಚಿಕೊಂಡಿದ್ದಾರೆ.
1 / 6
2018ರಲ್ಲಿ ಸನ್ನಿ ಲಿಯೋನ್ 'ಸ್ಟಾರ್‌ಸ್ಟ್ರಕ್' ಅನ್ನು ಕೇವಲ 10 ಲಕ್ಷ ರೂ. ಹೂಡಿಕೆ ಮಾಡಿ ಪ್ರಾರಂಭಿಸಿದ್ದರು. ಕೇವಲ 5ವರ್ಷಗಳಲ್ಲಿ 10 ಕೋಟಿ ರೂಗಳ ವರೆಗೆ ಈ ಕಂಪೆನಿ ಲಾಭ ಗಳಿಸಿದೆ ಎಂದು ಸ್ವತಹ ನಟಿ ಇತ್ತೀಚೆಗಷ್ಟೇ ಹೇಳಿಕೊಂಡಿದ್ದಾರೆ.
2 / 6
ಕಾಸ್ಮೆಟಿಕ್ ಬ್ರ್ಯಾಂಡ್ಗಳಿಂದ ಪ್ರಾರಂಭವಾದ ಈ ಕಂಪೆನಿ 2019 ರಿಂದ, ಅವರು ತಮ್ಮ ಪತಿ ಡೇನಿಯಲ್ ಅವರೊಂದಿಗೆ 'ಇನ್‌ಫೇಮಸ್ ಬೈ ಸ್ಟಾರ್‌ಸ್ಟ್ರಕ್'ನೊಂದಿಗೆ ಒಳಉಡುಪುಗಳನ್ನು ಪ್ರಾರಂಭಿಸಿದ್ದಾರೆ. ಇಂದು, ಸ್ಟಾರ್‌ಸ್ಟ್ರಕ್ ಚಿಲ್ಲರೆ ವ್ಯಾಪಾರದಲ್ಲಿ ಸ್ಟಾಕ್ ಕೀಪಿಂಗ್ ಘಟಕಗಳು (SKUs) ಎಂದು ಕರೆಯಲ್ಪಡುವ 260 ವಿಭಿನ್ನ ಉತ್ಪನ್ನಗಳನ್ನು ಹೊಂದಿದೆ.
3 / 6
"ತಮ್ಮದೇ ಸ್ವಂತ ಕಂಪೆನಿಯನ್ನು ಪ್ರಾರಂಭಿಸಿ ಲಾಭದಿಂದ ಮುಂದುವರಿಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಸಾಕಷ್ಟು ಏರಿಳಿತಗಳ ಜೊತೆಗೆ ಕಂಪನಿಯನ್ನು ಮುಂದುವರಿಸಿಕೊಂಡು ಹೋದರೆ ಯಶಸ್ಸು ಸಾಧ್ಯ. ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್‌ಗಳಿಲ್ಲ," ಎಂದು ಸನ್ನಿ ಹೇಳಿದ್ದಾರೆ.
4 / 6
'ಸ್ಟಾರ್‌ಸ್ಟ್ರಕ್' ಕಾಸ್ಮೆಟಿಕ್ ಬ್ರ್ಯಾಂಡ್ನ ಉತ್ಪನ್ನಗಳನ್ನು ಆನ್ಲೈನ್ ಮೂಲಕ ಖರೋದಿಸಬಹುದಾಗಿದೆ. www.starstruckbysl.com ಮೂಲಕ ಸಾಕಷ್ಟು ಆಫರ್ಗಳೊಂದಿಗೆ ಉತ್ಪನ್ನಗಳನ್ನು ಖರೀದಿಸಬಹುದು.
5 / 6
ಸದ್ಯ ನಟನೆ ಮಾಡೆಲಿಂಗ್ ಜೊತೆಗೆ ಸಾಕಷ್ಟು ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಸನ್ನಿಲಿಯೋನ್ ಇತ್ತೀಚೆಗಷ್ಟೇ ಪ್ರಾರಂಭಗೊಂಡ ಉತ್ತರ ಪ್ರದೇಶದ ನೋಯ್ಡಾದಲ್ಲಿನ 'ಚಿಕಾ ಲೋಕ' ರೆಸ್ಟೋರೆಂಟ್ ಉದ್ಯಮದಲ್ಲೂ ಪಾಲುದಾರಿಕೆಯನ್ನು ಹೊಂದಿದ್ದಾರೆ.