ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಇನ್ಫೋಸಿಸ್​ನಿಂದ ಈ ವರ್ಷ ಪಡೆದ ಲಾಭಾಂಶವೆಷ್ಟು?

| Updated By: ಗಣಪತಿ ಶರ್ಮ

Updated on: Oct 25, 2022 | 3:21 PM

ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಮಗಳಾಗಿರುವ ಅಕ್ಷತಾ, ಕಂಪನಿಯ ಶೇಕಡಾ 0.93ರಷ್ಟು, ಅಂದರೆ 3.89 ಕೋಟಿ ಷೇರುಗಳನ್ನು ಹೊಂದಿದ್ದಾರೆ.

ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಇನ್ಫೋಸಿಸ್​ನಿಂದ ಈ ವರ್ಷ ಪಡೆದ ಲಾಭಾಂಶವೆಷ್ಟು?
ರಿಷಿ ಸುನಕ್, ಅಕ್ಷತಾ ಮೂರ್ತಿ
Follow us on

ನವದೆಹಲಿ: ಬ್ರಿಟನ್​ನ (UK) ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್ (Rishi Sunak) ಪತ್ನಿ ಅಕ್ಷತಾ ಮೂರ್ತಿ (Akshata Murty) ಈ ವರ್ಷ ಇನ್ಫೋಸಿಸ್​ನಿಂದ (Infosys) 126.61 ಕೋಟಿ ರೂ. ಡಿವಿಡೆಂಡ್ ಅಥವಾ ಲಾಭಾಂಶ ಪಡೆದಿದ್ದಾರೆ. ತೆರಿಗೆ ವಿನಾಯಿತಿ ಪಡೆಯಲು ಅಕ್ಷತಾ ನಾನ್‌ ಡೊಮಿಸೈಲ್‌ ಸ್ಥಾನಮಾನ ಉಳಿಸಿಕೊಂಡಿದ್ದಾರೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಈ ವಿಚಾರ ಬಹಿರಂಗವಾಗಿದೆ.

ನಾನ್‌ ಡೊಮಿಸೈಲ್‌ ಸ್ಥಾನಮಾನ ಹೊಂದಿರುವವರು ವಿದೇಶಗಳಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆ ಪಾವತಿಸುವಂತಿಲ್ಲ ಎನ್ನುತ್ತದೆ ಬ್ರಿಟನ್​ ಕಾಯ್ದೆ. ಇದರ ಲಾಭ ಪಡೆದು ಅಕ್ಷತಾ ಮೂರ್ತಿ ತೆರಿಗೆ ಪಾವತಿ ಮಾಡುತ್ತಿಲ್ಲ ಎಂದು ಬ್ರಿಟನ್​ನ ಪ್ರತಿಪಕ್ಷಗಳ ನಾಯಕರು ಆರೋಪಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಸುನಕ್, ಭಾರತದಲ್ಲಿ ಗಳಿಸುವ ಆದಾಯಕ್ಕೂ ಅಕ್ಷತಾ ಪೂರ್ಣ ತೆರಿಗೆ ಪಾವತಿಸುತ್ತಿದ್ದಾರೆ ಎಂದು ಹೇಳಿದ್ದರು.

ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಮಗಳಾಗಿರುವ ಅಕ್ಷತಾ, ಕಂಪನಿಯ ಶೇಕಡಾ 0.93ರಷ್ಟು, ಅಂದರೆ 3.89 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಈ ಮಾಹಿತಿ ಕಂಪನಿಯು ಸೆಪ್ಟೆಂಬರ್​ನಲ್ಲಿ ಷೇರು ಮಾರುಕಟ್ಟೆಗೆ ಸಲ್ಲಿಸಿದ ದಾಖಲೆಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ
Rishi Sunak: ರಿಷಿ ಸುನಕ್​ರ​ ಸಿರಿವಂತ ಪತ್ನಿ ಮತ್ತು ಅತ್ತೆ-ಮಾವ ಬಗ್ಗೆ ಇಲ್ಲಿದೆ ವಿವರ
Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ; ಪ್ರಮುಖ ನಗರಗಳಲ್ಲಿನ ದರ ವಿವರ ಇಲ್ಲಿದೆ
Muhurat Trading: ಉತ್ತಮ ಗಳಿಕೆಯೊಂದಿಗೆ ಮುಹೂರ್ತ ಟ್ರೇಡಿಂಗ್ ಮುಗಿಸಿದ ನಿಫ್ಟಿ, ಸೆನ್ಸೆಕ್ಸ್, ಇಲ್ಲಿದೆ ಗಳಿಕೆ ವಿವರ
Festive Season: ಹಬ್ಬದ ಅವಧಿಯಲ್ಲಿ ಮಿತಿಮೀರಿದ ಖರ್ಚಾಗುತ್ತಿದೆಯೇ? ತಡೆಯಲು ಇಲ್ಲಿದೆ 5 ಟಿಪ್ಸ್

ಇದನ್ನೂ ಓದಿ: Rishi Sunak: ರಿಷಿ ಸುನಕ್​ರ​ ಸಿರಿವಂತ ಪತ್ನಿ ಮತ್ತು ಅತ್ತೆ-ಮಾವ ಬಗ್ಗೆ ಇಲ್ಲಿದೆ ವಿವರ

ಅಕ್ಷತಾ ಅವರು ಹೊಂದಿರುವ ಷೇರುಗಳ ಒಟ್ಟು ಮೌಲ್ಯ ಇಂದಿನ (ಅಕ್ಟೋಬರ್ 25) ಷೇರುಮಾರುಕಟ್ಟೆ ಲೆಕ್ಕಾಚಾರಗಳ ಪ್ರಕಾರ 5,956 ಕೋಟಿ ರೂ. ಆಗಿದೆ. ಸದ್ಯ ಒಂದು ಷೇರಿನ ಮುಖಬೆಲೆ ಬಿಎಸ್​ಇಯಲ್ಲಿ 1,527.40 ರೂ. ಆಗಿದೆ. 2021-22ನೇ ಹಣಕಾಸು ವರ್ಷದ ಲಾಭಾಂಶವನ್ನು ಪ್ರತಿ ಷೇರಿಗೆ 16 ರೂ.ಗಳಂತೆ ಇನ್ಫೋಸಿಸ್ ಮೇ ತಿಂಗಳಲ್ಲಿ ಪಾವತಿ ಮಾಡಿತ್ತು. ಪ್ರತಿ ಷೇರಿಗೆ 32.5 ರೂ.ನಂತೆ ಎರಡು ಲಾಭಾಂಶಗಳನ್ನು ಅಕ್ಷತಾ ಅವರಿಗೆ ನೀಡಲಾಗಿದ್ದು, ಇದು 126.61 ಕೋಟಿ ರೂ. ಆಗಿದೆ.

ಇನ್ಫೋಸಿಸ್ 2021ರಲ್ಲಿ ಉತ್ತಮ ಡಿವಿಡೆಂಡ್ ಅಥವಾ ಲಾಭಾಂಶ ಪಾವತಿ ಮಾಡಿದ ಭಾರತದ ಕಂಪನಿಗಳಲ್ಲಿ ಒಂದಾಗಿತ್ತು.

ಅಕ್ಷತಾ ಮೂರ್ತಿ ಸ್ಟ್ಯಾನ್​ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿದ್ದಾಗ ಸುನಕ್ ಅವರನ್ನು ಭೇಟಿಯಾಗಿದ್ದರು. ಸುನಕ್ ಆಗ ಆಕ್ಸಫರ್ಡ್​ನಿಂದ ಪದವಿ ಪಡೆದಿದ್ದರು. ಬಳಿಕ ಇಬ್ಬರೂ 2009ರಲ್ಲಿ ಮದುವೆಯಾದರು. ಅಕ್ಷತಾ-ಸುನಕ್ ದಂಪತಿಗೆ ಇಬ್ಬರು ಮಗಳಂದಿರಿದ್ದಾರೆ.

ಟನ್​ನ ನೂತನ ಪ್ರಧಾನಮಂತ್ರಿಯಾಗಿ ರಿಷಿ ಸುನಕ್ ಸೋಮವಾರ ಆಯ್ಕೆಯಾಗಿದ್ದಾರೆ. ಬ್ರಿಟನ್ ಅರ್ಥವ್ಯವಸ್ಥೆ ಸುಧಾರಿಸಲು ಸಾಧ್ಯವಾಗದ್ದರಿಂದ ಲಿಜ್ ಟ್ರಸ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಸುನಕ್ ಅವರನ್ನು ಆಯ್ಕೆ ಮಾಡಲಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ