Motor Insurance: ಮೊದಲ ಬೈಕ್ ಅಥವಾ ಕಾರು ಖರೀದಿಗೆ ಮುಂದಾಗಿದ್ದೀರಾ? ಮೋಟಾರು ವಿಮೆಗೆ ಸಂಬಂಧಿಸಿದ ಈ ಐದು ಅಂಶ ಗಮನದಲ್ಲಿರಲಿ

ಮೊದಲ ವಾಹನ ಖರೀದಿ ಮಾಡುವಾಗ ಮೋಟಾರು ವಿಮೆ ಮಾಡಿಸುವುದಕ್ಕೆ ಸಂಬಂಧಿಸಿ ಕೆಲವು ಅಂಶಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಅವುಗಳೇನೆಂಬುದನ್ನು ಇಲ್ಲಿ ತಿಳಿಸಲಾಗಿದೆ.

Motor Insurance: ಮೊದಲ ಬೈಕ್ ಅಥವಾ ಕಾರು ಖರೀದಿಗೆ ಮುಂದಾಗಿದ್ದೀರಾ? ಮೋಟಾರು ವಿಮೆಗೆ ಸಂಬಂಧಿಸಿದ ಈ ಐದು ಅಂಶ ಗಮನದಲ್ಲಿರಲಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Oct 25, 2022 | 2:14 PM

ಮೊದಲ ಬಾರಿಗೆ ಬೈಕ್ (Bike) ಅಥವಾ ಕಾರು (Car) ಖರೀದಿಸುವುದು ಸಾಮಾನ್ಯವಾಗಿ ಮಧ್ಯಮ ವರ್ಗದ ಜನರಿಗೆ ಜೀವನದ ಸ್ಮರಣೀಯ ಕ್ಷಣವಾಗಿರುತ್ತದೆ. ಖರೀದಿಯ ನಂತರ ವಾಹನವನ್ನು ಮೊದಲು ರಸ್ತೆಗಿಳಿಸುವುದಕ್ಕೂ ಮುನ್ನ ಥರ್ಡ್ ಪಾರ್ಟಿ ಮೋಟಾರು ವಿಮೆ (Motor Insurance) ಮಾಡಿಸಲೇಬೇಕು. ಮೊದಲ ವಾಹನ ಖರೀದಿ ಮಾಡುವಾಗ ಮೋಟಾರು ವಿಮೆ ಮಾಡಿಸುವುದಕ್ಕೆ ಸಂಬಂಧಿಸಿ ಕೆಲವು ಅಂಶಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು.

ಮೋಟಾರು ವಿಮೆ ಇಲ್ಲದೆ ವಾಹನ ಚಲಾಯಿಸುವುದರಿಂದ ಭಾರಿ ಮೊತ್ತದ ದಂಡ ತೆರಬೇಕಾಗಲಿದೆ. ಥರ್ಡ್ ಪಾರ್ಟಿ ಬೇಸಿಕ್ ವಿಮೆ ಮಾಡಿಸುವುದರಿಂದ ಇದು ಅಪಘಾತದ ಸಂದರ್ಭದಲ್ಲಿ ಮೂರನೇ ವ್ಯಕ್ತಿಯ ಆಸ್ತಿಗೆ ಆಗುವ ಹಾನಿಯಿಂದ ಪಾಲಿಸಿದಾರರನ್ನು ರಕ್ಷಿಸುತ್ತದೆ ಎಂದು ‘ಗೋಡಿಜಿಟ್ ಜನರಲ್ ಇನ್ಶೂರೆನ್ಸ್’ನ ನೇರ ಮಾರಾಟ ವಿಭಾಗದ ಮುಖ್ಯಸ್ಥ ವಿವೇಕ್ ಚತುರ್ವೇದಿ ಹೇಳಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ನೂತನ ಕಾರು ಖರೀದಿಸುವ ಸಂದರ್ಭದಲ್ಲಿ ಮೂರು ವರ್ಷದ ಅವಧಿಗೆ ಮತ್ತು ಬೈಕ್ ಖರೀದಿ ಸಂದರ್ಭದಲ್ಲಿ 5 ವರ್ಷದ ಅವಧಿಗೆ ಥರ್ಡ್ ಪಾರ್ಟಿ ವಿಮೆ ಮಾಡಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ
Image
Rishi Sunak: ರಿಷಿ ಸುನಕ್​ರ​ ಸಿರಿವಂತ ಪತ್ನಿ ಮತ್ತು ಅತ್ತೆ-ಮಾವ ಬಗ್ಗೆ ಇಲ್ಲಿದೆ ವಿವರ
Image
Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ; ಪ್ರಮುಖ ನಗರಗಳಲ್ಲಿನ ದರ ವಿವರ ಇಲ್ಲಿದೆ
Image
Muhurat Trading: ಉತ್ತಮ ಗಳಿಕೆಯೊಂದಿಗೆ ಮುಹೂರ್ತ ಟ್ರೇಡಿಂಗ್ ಮುಗಿಸಿದ ನಿಫ್ಟಿ, ಸೆನ್ಸೆಕ್ಸ್, ಇಲ್ಲಿದೆ ಗಳಿಕೆ ವಿವರ
Image
Festive Season: ಹಬ್ಬದ ಅವಧಿಯಲ್ಲಿ ಮಿತಿಮೀರಿದ ಖರ್ಚಾಗುತ್ತಿದೆಯೇ? ತಡೆಯಲು ಇಲ್ಲಿದೆ 5 ಟಿಪ್ಸ್

ಇದನ್ನೂ ಓದಿ: Health Insurance: ಆರೋಗ್ಯ ವಿಮೆ ಮಾಡಿಸುತ್ತಿದ್ದೀರಾ? ಅಸ್ತಿತ್ವದಲ್ಲಿರುವ ಕಾಯಿಲೆಗಳ ವಿವರ ನೀಡಲು ಮರೆಯಬೇಡಿ

ವಾಹನವನ್ನು ಹೊಂದಿರುವ ಯಾರೇ ಆಗಲಿ ಅದಕ್ಕೆ ಹಾನಿಯಾಗುವುದನ್ನು ಇಷ್ಟಪಡುವುದಿಲ್ಲ. ಹೊಸ ವಾಹನವಾಗಿದ್ದರಂತೂ ಬಹಳ ಜಾಗರೂಕರಾಗಿತ್ತಾರೆ. ಇಷ್ಟೆಲ್ಲ ಕಾಳಜಿಯ ಹೊರತಾಗಿಯೂ ವಾಹನಕ್ಕೆ ಹಾನಿಯಾದರೆ ಮೋಟಾರು ವಿಮೆ ಉತ್ತಮ ಸ್ನೇಹಿತನಾಗಬಲ್ಲದು. ದುರಸ್ತಿಯ ವೆಚ್ಚವನ್ನು ವಿಮೆಯಿಂದ ಭರಿಸುವ ಮೂಲಕ ವಾಹನವನ್ನು ಸುಸ್ಥಿತಿಯಲ್ಲಿರುವಂತೆ ಮಾಡಬಹುದು. ಇಲ್ಲವಾದರೆ ನಾವೇ ಖರ್ಚು ಮಾಡಿ ದುರಸ್ತಿ ಮಾಡಿಸಬೇಕಾಗಬಹುದು ಎನ್ನುತ್ತಾರೆ ಎಡೆಲ್ವೀಸ್ ಜನರಲ್ ಇನ್ಶೂರೆನ್ಸ್​ನ ಮುಖ್ಯ ತಾಂತ್ರಿಕ ಅಧಿಕಾರಿ ನಿತಿನ್ ದಿಯೊ.

ಮೋಟಾರು ವಿಮೆ ಮಾಡಿಸುವಾಗ ಈ ಅಂಶಗಳು ಗಮನದಲ್ಲಿರಲಿ;

ಡೀಲರ್​ ಹೇಳಿದ್ದನ್ನಷ್ಟೇ ಅನುಸರಿಸಬೇಡಿ

ಖರೀದಿ ಸಂದರ್ಭದಲ್ಲಿ ಕಾರು ಅಥವಾ ಬೈಕ್ ಡೀಲರ್​ಗಳು ವಿಮೆ ಆಯ್ಕೆಯನ್ನು ನಿಮ್ಮ ಮುಂದಿಡಬಹುದು. ಆದಾಗ್ಯೂ, ಪ್ರೀಮಿಯಂಗಳನ್ನು ತುಲನೆ ಮಾಡಿ ನೋಡಲು ಮತ್ತು ನಿಮಗೆ ಸೂಕ್ತವಾದ ಬೇರೆ ವಿಮಾ ಯೋಜನೆಯನ್ನು ಆಯ್ಕೆ ಮಾಡಲು ನೀವು ವಿಮಾದಾರರ ವೆಬ್‌ಸೈಟ್‌ಗಳನ್ನು ಸಹ ಪರಿಶೀಲಿಸಬಹುದು. ಅಂತಿಮವಾಗಿ ನಿಮಗೆ ಯಾವುದು ಉತ್ತಮ ಎಂದು ಅನಿಸುತ್ತದೆಯೋ ಅದನ್ನೇ ಆಯ್ದುಕೊಳ್ಳುವುದು ಒಳಿತು ಎನ್ನುತ್ತಾರೆ ತಜ್ಞರು.

ಸಮಗ್ರ ಮೋಟಾರು ವಿಮೆಯನ್ನೇ ಖರೀದಿಸಿ

ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿರುವುದರಿಂದ ಅದನ್ನು ಹೇಗೂ ಮಾಡಿಸಬೇಕಾಗುತ್ತದೆ. ಜತೆಗೆ ನಮ್ಮ ವಾಹನಕ್ಕೆ ಸಂಪೂರ್ಣ ಸುರಕ್ಷತೆ ನೀಡುವಂಥ ಸಮಗ್ರ ಮೋಟಾರು ವಿಮೆಯನ್ನೇ ಆಯ್ಕೆ ಮಾಡಿಕೊಳ್ಳಬೇಕು. ಸಮಗ್ರ ಮೋಟಾರು ವಿಮೆ ಪ್ರಾಕೃತಿಕ ಅವಘಡಗಳಂಥ ಸಂದರ್ಭದಲ್ಲಿ ನಮ್ಮ ವಾಹನಕ್ಕೂ ಸುರಕ್ಷತೆ ನೀಡುತ್ತದೆ. ಚಂಡಮಾರುತ, ಪ್ರವಾಹ, ಭೂಕಂಪ ಮತ್ತಿತರ ಸಂದರ್ಭಗಳಲ್ಲಿ ನಮ್ಮ ವಾಹನಕ್ಕೆ ಹಾನಿಯಾದರೆ ವಿಮೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ವಿವೇಕ್ ಚತುರ್ವೇದಿ ಹೇಳಿದ್ದಾರೆ.

ವಿಮೆ ಘೋಷಿತ ಮೌಲ್ಯ ಅಥವಾ ಐಡಿವಿಯನ್ನು ಪರಿಶೀಲಿಸಿ

ಮೋಟಾರು ವಿಮೆ ಮಾಡಿಸಿಕೊಳ್ಳುವಾಗ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೇ ವಿಮೆ ಘೋಷಿತ ಮೌಲ್ಯ ಅಥವಾ ಐಡಿವಿ. ಕಾರು ಕಳವಾದಲ್ಲಿ ಅಥವಾ ಸರಿಪಡಿಸಲಾಗದ ಮಟ್ಟದ ಹಾನಿಯಾದಲ್ಲಿ ವಿಮಾ ಕಂಪನಿಯು ನಿಮ್ಮ ವಾಹನಕ್ಕೆ ನೀಡುವ ಮೌಲ್ಯವೇ ಐಡಿವಿ.

ವಿವಿಧ ಕಂಪನಿಗಳು ಭಿನ್ನವಾದ ಐಡಿವಿ ನಿಗದಿಪಡಿಸುತ್ತವೆ. ಆದರೆ, ಸದ್ಯದ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಉತ್ತಮ ಐಡಿವಿ ನೀಡುವ ವಿಮೆಯನ್ನೇ ನೀವು ಆಯ್ದುಕೊಳ್ಳಬೇಕು. ಹೊಸ ಕಾರು ಖರೀದಿ ಸಂದರ್ಭದಲ್ಲಿ ಮಾತ್ರವಲ್ಲ, ಹಳೆ ಕಾರಿನ ವಿಮೆಯನ್ನು ಪರಿಷ್ಕರಿಸುವಾಗ ಕೂಡ ಈ ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎನ್ನುತ್ತಾರೆ ಚತುರ್ವೇದಿ.

ಆ್ಯಡ್ ಆನ್​ ಅಥವಾ ಹೆಚ್ಚುವರಿ ಪ್ರಯೋಜನಗಳನ್ನು ಗಮನಿಸಿ

ವಿಮೆ ಆಫರ್​ನಲ್ಲಿರುವ ಇತರ ಸೌಲಭ್ಯಗಳ ಬಗ್ಗೆಯೂ ಗಮನ ಹರಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ನಿಮ್ಮ ವಾಹನ ಮತ್ತು ನಿಮ್ಮ ಚಾಲನಾ ಅಭ್ಯಾಸಗಳಿಗೆ ಅನುಗುಣವಾಗಿ ನೀವು ಹೆಚ್ಚುವರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಎಂಜಿನ್​ ಪ್ರೊಟೆಕ್ಷನ್, ರೋಡ್ ಸೈಡ್ ಅಸಿಸ್ಟೆನ್ಸ್, ಎಂಜಿನ್/ಟೈರ್ ಪ್ರೊಟೆಕ್ಸ್ ಕವರ್ ಇತ್ಯಾದಿ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಪ್ರೀಮಿಯ ಮೇಲೆ ಮಾತ್ರ ಗಮನಹರಿಸಬೇಡಿ

ಪ್ರೀಮಿಯಂ ಮೊತ್ತವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮೋಟಾರು ವಿಮೆ ಮಾಡಿಸಿಕೊಳ್ಳುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ವಿಮಾ ಕಂಪನಿಗಳು ನೀಡುವ ಸೇವೆ, ಅವುಗಳ ಅನುಭವ ಕೂಡ ಮುಖ್ಯವಾಗುತ್ತವೆ. ನಿಮಗೆ ಯಾವುದು ಅತ್ಯುತ್ತಮ ಎಂದು ಅನಿಸುತ್ತದೆಯೋ ಅಂಥ ವಿಮೆಯನ್ನು ಮಾತ್ರ ಮಾಡಿಸಿಕೊಳ್ಳಿ. ಕಡಿಮೆ ಪ್ರೀಮಿಯ ಇದೆ ಎಂದು ಮಾಡಿಸಿಕೊಂಡ ವಿಮೆಯಿಂದ ಭವಿಷ್ಯದಲ್ಲಿ ಸರಿಯಾದ ಪ್ರಯೋಜನ ಸಿಗದೇ ಹೋದರೆ ಕಷ್ಟವಾಗಬಹುದು. ಹೀಗಾಗಿ ಎಲ್ಲ ಆಯಾಮಗಳಿಂದಲೂ ಸರಿಯಾಗಿ ಯೋಚಿಸಿ, ಅಳೆದು-ತೂಗಿ ಮೋಟಾರು ವಿಮೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ