Multibagger: ಈ ಷೇರಿನ ಮೇಲೆ ಹಾಕಿದ 1 ಲಕ್ಷ ರೂಪಾಯಿ 20 ವರ್ಷದಲ್ಲಿ ಎಷ್ಟು ಕೋಟಿ ಆಗಿದೆ ಗೊತ್ತೆ?

| Updated By: Srinivas Mata

Updated on: Sep 11, 2021 | 12:07 PM

ಈ ಮಲ್ಟಿಬ್ಯಾಗರ್ ಷೇರಿನ ಮೇಲೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದು 20 ವರ್ಷದಲ್ಲಿ 8.18 ಕೋಟಿ ರೂಪಾಯಿ ಆಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Multibagger: ಈ ಷೇರಿನ ಮೇಲೆ ಹಾಕಿದ 1 ಲಕ್ಷ ರೂಪಾಯಿ 20 ವರ್ಷದಲ್ಲಿ ಎಷ್ಟು ಕೋಟಿ ಆಗಿದೆ ಗೊತ್ತೆ?
ಸಾಂದರ್ಭಿಕ ಚಿತ್ರ
Follow us on

ತಾಳ್ಮೆಗೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಈ ಮಾತಿಗೆ ಷೇರು ಮಾರ್ಕೆಟ್​ ಅತ್ಯುತ್ತಮ ನಿದರ್ಶನ. ಹೂಡಿಕೆದಾರರು ಮಾರಾಟ ಹಾಗೂ ಕೊಳ್ಳುವುದರಲ್ಲೇ ಇದ್ದುಬಿಟ್ಟರೆ ತುಂಬ ದೊಡ್ಡ ಮಟ್ಟದ ಹಣ ಮಾಡುವುದಕ್ಕೆ ಆಗಲ್ಲ. ಆದ್ದರಿಂದ ಯಾರು “ಖರೀದಿ, ಇರಿಸಿಕೋ ಮತ್ತು ಮರೆತು ಹೋಗು” ಎಂದು ಕಾರ್ಯತಂತ್ರವನ್ನು ಅಳವಡಿಸಿಕೊಂಡಿರುತ್ತಾರೋ ಅಂಥವರಿಗೆ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಹಣ ಮಾಡುವಂಥ ಅವಕಾಶ ಇರುತ್ತದೆ. ಅದಕ್ಕೆ ಉದಾಹರಣೆಯಾಗಿ ಇಂದಿನ ಲೇಖನದಲ್ಲಿ ಅತುಲ್ ಲಿಮಿಟೆಡ್ ಷೇರಿದೆ. ಇದು ಇಂಟಿಗ್ರೇಟೆಡ್ ಕೆಮಿಕಲ್ ಕಂಪೆನಿ. ಈ ಕಂಪೆನಿಯ ಷೇರು ಎನ್​ಎಸ್​ಇಯಲ್ಲಿ ಸೆಪ್ಟೆಂಬರ್ 13, 2001ರಲ್ಲಿ ತಲಾ ರೂ. 11.30 ಇತ್ತು. ಅದೇ ಕಂಪೆನಿಯ ಷೇರು ಸೆಪ್ಟೆಂಬರ್ 9, 2021ಕ್ಕೆ ಎನ್​ಎಸ್​ಇಯಲ್ಲಿ ತಲಾ 9,250 ರೂಪಾಯಿ ಆಗಿದೆ. ಅಂದರೆ ಕಳೆದ 20 ವರ್ಷದಲ್ಲಿ 818 ಪಟ್ಟು ಹೆಚ್ಚಾಗಿದೆ.

ಅತುಲ್ ಷೇರು ದರದ ಇತಿಹಾಸ
ಒಂದು ತಿಂಗಳ ಹಿಂದೆ ಅತುಲ್ ಷೇರಿನ ಬೆಲೆ 8864.05 ರೂಪಾಯಿ ಇದ್ದದ್ದು ಶೇ 4.35ರಷ್ಟು ಏರಿಕೆ ಆಗಿ, 9250 ರೂಪಾಯಿ ಮಟ್ಟವನ್ನು ಮುಟ್ಟಿದೆ. ಇನ್ನು ಕಳೆದ 6 ತಿಂಗಳ ಹಿಂದಿನ ಬೆಲೆಯನ್ನು ನೋಡುವುದಾದರೆ 6784.05 ರೂಪಾಯಿಯಿಂದ 9250 ರೂಪಾಯಿಗೆ ಅಂದರೆ, ಶೇ 36.35ರಷ್ಟು ಹೆಚ್ಚಳವಾಗಿದೆ. ಅದೇ ರೀತಿ ಕಳೆದ ಒಂದು ವರ್ಷದಲ್ಲಿ ಶೇ 47ರಷ್ಟು ಮೇಲೇರಿದೆ. ಇನ್ನು 5 ವರ್ಷದಲ್ಲಿ ಶೇ 325ರಷ್ಟು ರಿಟರ್ನ್ಸ್ ನೀಡಿದೆ. ಆದರೆ ಕಳೆದ 20 ವರ್ಷದಲ್ಲಿ ಷೇರಿನ ಬೆಲೆಯು 818 ಪಟ್ಟು ಏರಿಕೆಯಾಗಿ, 11.30 ರೂಪಾಯಿಯಿಂದ 9250 ರೂಪಾಯಿಯನ್ನು ತಲುಪಿದೆ.

ಹೂಡಿಕೆದಾರರ ಮೇಲೆ ಪರಿಣಾಮ
ಅತುಲ್ ಷೇರಿನ ಬೆಲೆಯ ಇತಿಹಾಸವನ್ನು ನೋಡುವುದಾದರೆ, ಒಂದು ವೇಳೆ ಹೂಡಿಕೆದಾರರು 1 ಲಕ್ಷ ರೂಪಾಯಿಯನ್ನು ತಿಂಗಳ ಹಿಂದೆ ಹೂಡಿಕೆ ಮಾಡಿದ್ದರೆ ಅದು ಇವತ್ತಿಗೆ 1.04 ಲಕ್ಷ ಆಗಿದೆ. ಆರು ತಿಂಗಳ ಹಿಂದೆ ಈ ಷೇರಿನ ಮೇಲೆ 1 ಲಕ್ಷ ರೂಪಾಯಿ ಹೂಡಿದ್ದರೆ ಆ ಮೊತ್ತವು ಇವತ್ತಿಗೆ 1.36 ಲಕ್ಷ ಆಗಿರುತ್ತದೆ. ವರ್ಷದ ಹಿಂದೆ 1 ಲಕ್ಷ ರೂಪಾಯಿ ಹಣ ಹಾಕಿದ್ದಲ್ಲಿ 1.47 ಲಕ್ಷ ರೂಪಾಯಿ ಆಗಿರುತ್ತದೆ. ಆದರೆ ಹೂಡಿಕೆದಾರರು ಅತುಲ್ ಸ್ಟಾಕ್​ ಮೇಲೆ 20 ವರ್ಷದ ಹಿಂದೆ 1 ಲಕ್ಷ ರೂಪಾಯಿ ಹಾಕಿದ್ದಲ್ಲಿ, ಆಗಿನಿಂದ ಈ ಷೇರುಗಳನ್ನು ಹಾಗೇ ಉಳಿಸಿಕೊಂಡಿದ್ದಲ್ಲಿ ಆ ಮೊತ್ತವು (1,00,000X818) 8.18 ಕೋಟಿ ಆಗಿರುತ್ತದೆ.

ಇದನ್ನೂ ಓದಿ: Multibagger 2021: 1.20 ಲಕ್ಷ ರೂಪಾಯಿ ಮೊತ್ತವು 5 ವರ್ಷದಲ್ಲಿ 62 ಲಕ್ಷ ರೂಪಾಯಿ ಆದ ಮಲ್ಟಿಬ್ಯಾಗರ್ ಇದು

IRCTC: ಎರಡು ವರ್ಷದಲ್ಲಿ ಹತ್ತು ಪಟ್ಟಿಗೂ ಹೆಚ್ಚಿನ ರಿಟರ್ನ್ಸ್ ನೀಡಿದ ಸರ್ಕಾರಿ ಸ್ವಾಮ್ಯದ ಈ ಷೇರು

(Rs 1 Lakh Investment In This Multibagger Stock Become Rs 8 Crore)