Indian Rupee: ಡಾಲರ್ ಎದುರು 12 ಪೈಸೆ ಕುಸಿತ ಕಂಡ ರೂಪಾಯಿ
ಭಾರತೀಯ ಷೇರುಮಾರುಕಟ್ಟೆ ಕೊಂಚ ಚೇತರಿಸಿಕೊಂಡಿದ್ದರೂ ಭಾರತೀಯ ರೂಪಾಯಿ ಮೌಲ್ಯ ಕುಸಿತ ಕಂಡಿದ್ದು, ಪ್ರತೀ ಡಾಲರ್ ಎದುರು 79.06 ರೂಗಳಿಗಿಂತ ಕೆಳಗೆ ಕುಸಿದಿದೆ.
ಮುಂಬೈ: ಭಾರತೀಯ ಷೇರುಮಾರುಕಟ್ಟೆ ಕೊಂಚ ಚೇತರಿಸಿಕೊಂಡಿದ್ದರೂ ಭಾರತೀಯ ರೂಪಾಯಿ ಮೌಲ್ಯ ಕುಸಿತ ಕಂಡಿದ್ದು, ಪ್ರತೀ ಡಾಲರ್ ಎದುರು 79.06 ರೂಗಳಿಗಿಂತ ಕೆಳಗೆ ಕುಸಿದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೂಪಾಯಿ ಮೌಲ್ಯವನ್ನು ಹೆಚ್ಚಿಸಲು ಮಾರುಕಟ್ಟೆ ಮಧ್ಯಪ್ರವೇಶಿಸಿದೆಯಾದರೂ ರೂಪಾಯಿ ಮೌಲ್ಯ ಕುಸಿತ ಮಾತ್ರ ನಿರಂತರವಾಗಿದೆ.
ಪ್ರಸ್ತುತ ಆರ್ ಬಿಐ ಹಸ್ತಕ್ಷೇಪ ವಿಧಾನದಿಂದ ಕರೆನ್ಸಿ ಮೌಲ್ಯ ಕುಸಿತವು ವೇಗವಾಗುತ್ತಿರುವುದರಿಂದ ರೂಪಾಯಿ ಮೇಲಿನ ಒತ್ತಡವನ್ನು ತಗ್ಗಿಸಲು RBI ತನ್ನ ಕಾರ್ಯತಂತ್ರವನ್ನು ಬದಲಾಯಿಸಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಇಸಿಬಿ ಮಾರ್ಗದ ಅಡಿಯಲ್ಲಿ ಬಾಹ್ಯ ಸಾಲದ ಮಿತಿಯನ್ನು ದ್ವಿಗುಣಗೊಳಿಸಿದೆ ಮತ್ತು ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತವನ್ನು ತಡೆಯಲು ವಿದೇಶಿ ವಿನಿಮಯ ಒಳಹರಿವುಗೆ ಸಂಬಂಧಿಸಿದ ಉದಾರೀಕರಣದ ಮಾನದಂಡಗಳ ಬಗ್ಗೆ ಚರ್ಚಿಸಲಾಗಿದೆ.
ರೂಪಾಯಿಯು US ಡಾಲರ್‌ಗೆ 79.05 ನಲ್ಲಿ ಪ್ರಾರಂಭವಾಯಿತು ಮತ್ತು ನಂತರ 79.06 ಗೆ ಕುಸಿಯಿತು, ಹಿಂದಿನ ಮುಕ್ತಾಯದ ಬೆಲೆ ಹೋಲಿಸಿದರೆ 12 ಪೈಸೆಯ ಕುಸಿತವನ್ನು ಕಂಡಿದೆ.
ಬುಧವಾರದಂದು ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 78.94ಕ್ಕೆ ತಲುಪಿತ್ತು. ಷೇರು ಮಾರುಕಟ್ಟೆಯ ತಾತ್ಕಾಲಿಕ ಮಾಹಿತಿಯ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ ನಿವ್ವಳ 330.13 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.