Power Grid- Tata Case: ಲಂಚ ಪ್ರಕರಣದಲ್ಲಿ ಪವರ್ ಗ್ರಿಡ್ನ ಪ್ರಮುಖ ಅಧಿಕಾರಿ ಸೇರಿ ಇತರ ಐವರನ್ನು ಬಂಧಿಸಿದ ಸಿಬಿಐ
ಪವರ್ ಗ್ರಿಡ್- ಟಾಟಾ ಪ್ರಾಜೆಕ್ಟ್ ಹಗರಣದಲ್ಲಿ ಪವರ್ ಗ್ರಿಡ್ನ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಎಸ್. ಝಾ ಸೇರಿದಂತೆ ಇತರ ಐವರನ್ನು ಸಿಬಿಐ ಬಂಧಿಸಿದೆ.

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ.ಎಸ್.ಝಾ ಮತ್ತು ಟಾಟಾ ಪವರ್ ಪ್ರಾಜೆಕ್ಟ್ನ ಐವರು ಅಧಿಕಾರಿಗಳನ್ನು ಕೇಂದ್ರೀಯ ತನಿಖಾ ದಳದಿಂದ (CBI) ಗುರುವಾರದಂದು ಬಂದಿಸಲಾಗಿದೆ. ಲಂಚದ ಪ್ರಕರಣದಲ್ಲಿ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ದೇಶರಾಜ್ ಪಾಠಕ್ ಮತ್ತು ಸಹಾಯಕ ಉಪಾಧ್ಯಕ್ಷ ಆರ್.ಎನ್. ಸಿಂಗ್ ಅವರನ್ನು ಸಹ ಬಂಧನ ಮಾಡಲಾಗಿದೆ. ನಾರ್ಥ್ ಈಸ್ಟರ್ನ್ ರೀಜನಲ್ ಪವರ್ ಸಿಸ್ಟಮ್ ಇಂಪ್ರೂವ್ಮೆಂಟ್ ಪ್ರಾಜೆಕ್ಟ್ನಲ್ಲಿ ಪವರ್ಗ್ರಿಡ್ ಭ್ರಷ್ಟಾಚಾರದ ಆರೋಪದ ಮೇಲೆ ಅಧಿಕಾರಿಗಳನ್ನು ಬಂಧಿಸಲಾಗಿದೆ. ನವದೆಹಲಿ, ಗುರುಗ್ರಾಮ್, ನೋಯ್ಡಾ ಮತ್ತು ಘಾಜಿಯಾಬಾದ್ನಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ವರದಿಗಳ ಪ್ರಕಾರ, ಶೋಧ ಕಾರ್ಯಾಚರಣೆ ವೇಳೆಯಲ್ಲಿ ಬಿ.ಎಸ್. ಝಾ ಅವರಿಗೆ ಸೇರಿದ ಸ್ಥಳದಿಂದ 93 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ಸದ್ಯಕ್ಕೆ ಝಾ ಅವರು ಇಟಾನಗರ್ನಲ್ಲಿ ಪೋಸ್ಟಿಂಗ್ನಲ್ಲಿದ್ದಾರೆ. ಅಕ್ರಮ ಪಾವತಿ ಪಡೆದಿದ್ದರ ಬದಲಿಯಾಗಿ ಝಾ ಅವರು ಟಾಟಾ ಪ್ರಾಜೆಕ್ಟ್ಗಳಿಗೆ ವಿಶೇಷವಾಗಿ ಅನುಕೂಲ ಮಾಡಿಕೊಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಆರೋಪದ ಮೇಲೆ ಬಂಧಿಸಲಾದ ಆರು ಆರೋಪಿಗಳನ್ನು ಗುರುವಾರದಂದು ಪಂಚಕುಲ ಕೋರ್ಟ್ ಮುಂದೆ ಹಾಜರು ಮಾಡಲಾಗುವುದು.
ಪಿಟಿಐ ವರದಿ ಮಾಡಿರುವಂತೆ, ತನಿಖಾ ದಳವು ಝಾ ಅವರ ಮೇಲೆ ಕಣ್ಣಿರಿಸಿತ್ತು. ಅದಕ್ಕೂ ಮುನ್ನ ಸಿಕ್ಕ ವಿದ್ಯಮಾನದ ಪ್ರಕಾರ, ಟಾಟಾ ಪ್ರಾಜೆಕ್ಟ್ಸ್ ಮತ್ತು ಇತರ ಕಂಪೆನಿಗಳ ಅಧಿಕಾರಿಗಳಿಂದ ರುಷುವತ್ತು ಪಡೆದ ಝಾ, ವಿವಿಧ ಕೆಲಸಗಳಿಗೆ ಅನುಮತಿ ನೀಡುತ್ತಿದ್ದರು. ಎಲ್ಲೆಲ್ಲಿ ಅಕ್ರಮ ಪಾವತಿಯನ್ನು ಮಾಡಲಾಗಿತ್ತೋ ಅಲ್ಲೆಲ್ಲ ಕೇಂದ್ರೀಯ ತನಿಖಾ ದಳ ಬುಧವಾರದಂದು ಅಲ್ಲಿ ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಿತ್ತು.
ಇದನ್ನೂ ಓದಿ: 34,615 ಕೋಟಿ ರೂಪಾಯಿ ವಂಚನೆ: ಡಿಎಚ್ಎಫ್ಎಲ್, ಕಪಿಲ್- ಧೀರಜ್ ವಾಧ್ವಾನ್ ವಿರುದ್ಧ ಸಿಬಿಐ ಪ್ರಕರಣ
Published On - 4:53 pm, Thu, 7 July 22