ಏಪ್ರಿಲ್ 1ರಿಂದ ಪೆಟ್ರೋಲ್ ರಫ್ತು ನಿಷೇಧಿಸಿದ ರಷ್ಯಾ; ಭಾರತಕ್ಕೇನು ಪರಿಣಾಮ?

Russia thinks of stopping petrol exports from April 1st: ರಷ್ಯಾ ದೇಶವು ಪೆಟ್ರೋಲ್ ರಫ್ತನ್ನು ನಿಷೇಧಿಸಲು ಯೋಜಿಸಿದೆ. ಏಪ್ರಿಲ್ 1ರಿಂದ ಅದು ಹೊರ ದೇಶಗಳಿಗೆ ಪೆಟ್ರೋಲ್ ಪೂರೈಕೆ ನಿಲ್ಲಿಸಬಹುದು. ಆಂತರಿಕವಾಗಿ ಪೆಟ್ರೋಲ್ ಲಭ್ಯತೆ ಖಚಿತಪಡಿಸಿಕೊಳ್ಳಲು ರಷ್ಯಾ ಈ ಕ್ರಮ ತೆಗೆದುಕೊಳ್ಳುತ್ತಿರಬಹುದು. ಆದರೆ, ಪೆಟ್ರೋಲ್ ರಫ್ತು ನಿಷೇಧವಾದರೂ ಕಚ್ಛಾ ತೈಲ ಪೂರೈಕೆ ನಿಲ್ಲದೇ ಹೋಗಬಹುದು.

ಏಪ್ರಿಲ್ 1ರಿಂದ ಪೆಟ್ರೋಲ್ ರಫ್ತು ನಿಷೇಧಿಸಿದ ರಷ್ಯಾ; ಭಾರತಕ್ಕೇನು ಪರಿಣಾಮ?
ಪೆಟ್ರೋಲ್
Image Credit source: Getty Images

Updated on: Mar 29, 2026 | 4:28 PM

ನವದೆಹಲಿ, ಮಾರ್ಚ್ 29: ಗ್ಯಾಸೊಲಿನ್ ರಫ್ತನ್ನು ಏಪ್ರಿಲ್ 1ರಿಂದ ನಿಷೇಧಿಸುತ್ತಿರುವುದಾಗಿ ರಷ್ಯಾ (Russia) ತಿಳಿಸಿದೆ. ದೇಶೀಯವಾಗಿ ಪೆಟ್ರೋಲಿಯಂ ಉತ್ಪನ್ನಗಳ (Petroleum products) ಸರಬರಾಜು ಸಾವಶ್ಯ ಇರುವುದನ್ನು ಖಚಿತಪಡಿಸಿಕೊಳ್ಳಲು ರಷ್ಯಾ ತನ್ನ ಪೆಟ್ರೋಲ್ ರಫ್ತನ್ನು ನಿಲ್ಲಿಸಲು ಪ್ಲಾನ್ ಮಾಡಿದೆ. ಅಂದರೆ, ಯಾವುದೇ ರಷ್ಯನ್ ತೈಲ ಸಂಸ್ಕರಣೆ ಸಂಸ್ಥೆಗಳು (oil refineries) ಪೆಟ್ರೋಲ್ ಮತ್ತು ಡೀಸಲ್ ಅನ್ನು ಹೊರ ದೇಶಗಳಿಗೆ ರಫ್ತು ಮಾಡುವಂತಿಲ್ಲ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ರಷ್ಯಾ ದೇಶವು ಪೆಟ್ರೋಲ್, ಡೀಸಲ್ ರಫ್ತನ್ನು ಮಾತ್ರ ನಿಲ್ಲಿಸಲು ಯೋಜಿಸಿದೆ. ಸಾಕಷ್ಟು ಬಾರಿ ರಷ್ಯಾ ಈ ನಿರ್ಧಾರ ತೆಗೆದುಕೊಂಡಿರುವುದಿದೆ. ಆದರೆ, ಕಚ್ಛಾ ತೈಲದ ಸರಬರಾಜುವನ್ನು ನಿಲ್ಲಿಸುತ್ತಿಲ್ಲ. ತೈಲ ಪೂರೈಕೆ ಎಂದಿನಂತೆ ನಡೆಯಲಿದೆ.

ಇದನ್ನೂ ಓದಿ: ಅಬಕಾರಿ ಸುಂಕ ಕಡಿತದಿಂದ ಸರ್ಕಾರಕ್ಕೆ ಎರಡೇ ವಾರದಲ್ಲಿ 7,000 ಕೋಟಿ ರೂ ಆದಾಯನಷ್ಟದ ಅಂದಾಜು

ಕಚ್ಛಾ ತೈಲವನ್ನು ಸಂಸ್ಕರಿಸಿ ಪೆಟ್ರೋಲ್, ಡೀಸಲ್, ಪೆಟ್ರೋಲಿಯಂ ಗ್ಯಾಸ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಭಾರತದ ಕೆಲ ದೊಡ್ಡ ಕಂಪನಿಗಳು ಕಚ್ಛಾ ತೈಲ ಆಮದು ಮಾಡಿಕೊಂಡು ಅದರಿಂದ ಪೆಟ್ರೋಲ್, ಡೀಸಲ್ ಇತ್ಯಾದಿ ವಿವಿಧ ರೀಫೈನ್ಡ್ ಉತ್ಪನ್ನಗಳನ್ನು ತಯಾರಿಸುತ್ತವೆ. ಬೇರೆ ದೇಶಗಳಿಂದ ನೇರವಾಗಿ ಪೆಟ್ರೋಲ್ ಆಮದು ಮಾಡಿಕೊಳ್ಳುವುದು ಕಡಿಮೆ.

ಭಾರತೀಯ ರಿಫೈನರಿ ಸಂಸ್ಥೆಗಳು ದಿನಕ್ಕೆ 56 ಲಕ್ಷ ಬ್ಯಾರಲ್​ಗಳ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿವೆ. ಇವುಗಳಿಂದ ತಯಾರಿಸಲಾಗುವ ಪೆಟ್ರೋಲ್ ಮತ್ತು ಡೀಸಲ್​ಗಳು ಭಾರತೀಯ ಮಾರುಕಟ್ಟೆಗೆ ಸಾಕಾಗುವುದಷ್ಟೇ ಅಲ್ಲ, ಹೊರ ದೇಶಗಳಿಗೂ ರಫ್ತು ಮಾಡುವಷ್ಟಿರುತ್ತದೆ. ಅತಿಹೆಚ್ಚು ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಮಾಡುವ ದೇಶಗಳಲ್ಲಿ ಭಾರತ ಐದನೇ ಸ್ಥಾನ ಪಡೆಯುತ್ತದೆ.

ಇದನ್ನೂ ಓದಿ: ರಷ್ಯನ್ ಎಲ್​ಎನ್​ಜಿಯನ್ನು ಖರೀದಿಸಲಿರುವ ಭಾರತ; ಎಲ್​ಪಿಜಿ, ಪಿಎನ್​ಜಿ, ಎಲ್​ಎನ್​ಜಿಗಿರುವ ವ್ಯತ್ಯಾಸಗಳೇನು?

ಆದರೆ, ಇರಾನ್ ಯುದ್ಧ ಶುರುವಾಗಿ ತೈಲ ಬಿಕ್ಕಟ್ಟು ಉದ್ಭವವಾದ ಬಳಿಕ ಭಾರತವು ಪೆಟ್ರೋಲಿಯಂ ಉತ್ಪನ್ನಗಳ ರಫ್ತನ್ನು ಬಹುತೇಕ ನಿಲ್ಲಿಸಿದ್ದು, ದೇಶೀಯ ಮಾರುಕಟ್ಟೆಗೆ ಪೂರೈಕೆಗೆ ಅದನ್ನು ಬಳಸಿಕೊಳ್ಳುತ್ತಿದೆ. ರಷ್ಯಾ ದೇಶವು ಪೆಟ್​ರೋಲ್ ರಫ್ತು ನಿಷೇಧಿಸುವುದರಿಂದ ಭಾರತದ ಮೇಲೆ ನೇರ ಪರಿಣಾಮ ಬೀರುವುದಿಲ್ಲವಾದರೂ, ಕಚ್ಛಾ ತೈಲ ಬೆಲೆ ಏರಿಕೆಗೆ ಕಾರಣವಾಗಬಹುದು. ಇದರಿಂದ ಪೆಟ್ರೋಲ್, ಡೀಸಲ್ ಬೆಲೆಗಳ ಮೇಲೆ ಇನ್ನಷ್ಟು ಒತ್ತಡ ಬೀಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us