ಈ ವರ್ಷ ಜಿಡಿಪಿ ಹೆಚ್ಚಳ ಶೇ. 6.8; ಮುಂದಿನ ಸಭೆಯಲ್ಲೇ ಆರ್​ಬಿಐನಿಂದ ಬಡ್ಡಿ ಇಳಿಕೆ: ಎಸ್ ಅಂಡ್ ಪಿ ನಿರೀಕ್ಷೆ

S&P Global Ratings projection on GDP, Inflation rate of India: 2024-25ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.8ರಷ್ಟು ಬೆಳೆಯಬಹುದು ಎಂದು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಅಂದಾಜು ಮಾಡಿದೆ. ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.9ರಷ್ಟು ಹೆಚ್ಚಬಹುದು ಎಂದೂ ಹೇಳಿದೆ. ಈ ಹಿಂದೆ ಈ ಎರಡೂ ವರ್ಷಕ್ಕೆ ಅದು ಮಾಡಿದ್ದ ಅಂದಾಜಿನಲ್ಲಿ ವ್ಯತ್ಯಾಸ ಇಲ್ಲ. ಇದೇ ವೇಳೆ, ಅಕ್ಟೋಬರ್ ತಿಂಗಳಿಂದಲೇ ಆರ್​ಬಿಐ ಬಡ್ಡಿದರ ಕಡಿತದ ಹಂತ ಆರಂಭಿಸಬಹುದು ಎಂದೂ ಅದು ಪ್ರೆಡಿಕ್ಟ್ ಮಾಡಿದೆ.

ಈ ವರ್ಷ ಜಿಡಿಪಿ ಹೆಚ್ಚಳ ಶೇ. 6.8; ಮುಂದಿನ ಸಭೆಯಲ್ಲೇ ಆರ್​ಬಿಐನಿಂದ ಬಡ್ಡಿ ಇಳಿಕೆ: ಎಸ್ ಅಂಡ್ ಪಿ ನಿರೀಕ್ಷೆ
ಭಾರತದ ಆರ್ಥಿಕತೆ
Follow us
|

Updated on: Sep 24, 2024 | 2:55 PM

ನವದೆಹಲಿ, ಸೆಪ್ಟೆಂಬರ್ 24: ಪ್ರಸಕ್ತ ಹಣಕಾಸು ವರ್ಷದಲ್ಲಿ (2024-25) ಭಾರತದ ಜಿಡಿಪಿ ಶೇ. 6.8ರಷ್ಟು ಬೆಳೆಯಬಹುದು ಎಂದು ಈ ಹಿಂದೆ ಮಾಡಿದ್ದ ಅಂದಾಜನ್ನು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಈಗಲೂ ಪುನರುಚ್ಚರಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ (2025-26) ಜಿಡಿಪಿ ಶೇ. 6.9ರಷ್ಟು ಹೆಚ್ಚಬಹುದು ಎಂದು ಅಂದಾಜು ಮಾಡಿದೆ. ಇದೇ ವೇಳೆ, ಅಕ್ಟೋಬರ್​ನಲ್ಲಿ ನಡೆಯಲಿರುವ ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಎಸ್ ಅಂಡ್ ಪಿ ನಿರೀಕ್ಷಿಸಿದೆ.

‘ಭಾರತದಲ್ಲಿ ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ ಜಿಡಿಪಿ ಬೆಳವಣಿಗೆ ಸ್ವಲ್ಪ ಮಂದಗೊಂಡಿದೆ. ಅಧಿಕ ಬಡ್ಡಿದರಗಳಿಂದಾಗಿ ನಗರ ಪ್ರದೇಶಗಳಲ್ಲಿ ಬಳಕೆ ಕಡಿಮೆ ಆಗಿರುವುದು ಇದಕ್ಕೆ ಕಾರಣ. ಇಡೀ ವರ್ಷದಲ್ಲಿ ಶೇ. 6.8ರಷ್ಟು ಜಿಡಿಪಿ ಬೆಳೆಯಬಹುದು ಎನ್ನುವ ನಮ್ಮ ನಿರೀಕ್ಷೆಯ ದಿಕ್ಕಿನಲ್ಲೇ ಜೂನ್ ಕ್ವಾರ್ಟರ್​ನಲ್ಲಿ ಆರ್ಥಿಕ ಬೆಳವಣಿಗೆ ಆಗಿದೆ,’ ಎಂದು ಎಸ್ ಅಂಡ್ ಪಿ ವಿವರಣೆ ನೀಡಿದೆ.

ಇದನ್ನೂ ಓದಿ: ಭಾರತದ ಶಕ್ತಿ..! ಅಮೆರಿಕದ ಸಹಭಾಗಿತ್ವದಲ್ಲಿ ಮೊದಲ ರಾಷ್ಟ್ರೀಯ ಭದ್ರತಾ ಸೆಮಿಕಂಡಕ್ಟರ್ ಫ್ಯಾಬ್ ಘಟಕ

ಆಹಾರ ಬೆಲೆ ಏರಿಕೆ ಸಮಸ್ಯೆ

ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಪ್ರಕಾರ ಆರ್​ಬಿಐ ಬಡ್ಡಿದರ ಕಡಿತಗೊಳಿಸಬಯಸಿದರೂ ಆಹಾರ ಬೆಲೆ ಏರಿಕೆಯು ಅದನ್ನು ತಡೆಯುತ್ತಿದೆ. ಈ ಆಹಾರ ವಸ್ತುಗಳ ಬೆಲೆ ಏರಿಕೆ ಕಡಿಮೆ ಆಗದೇ ಹೋದರೆ ಹಣದುಬ್ಬರವನ್ನು ಶೇ. 4ಕ್ಕೆ ತಂದು ನಿಲ್ಲಿಸುವುದು ಕಷ್ಟವಾಗುತ್ತದೆ. ಆದಾಗ್ಯೂ ಅಕ್ಟೋಬರ್​ನಿಂದಲೇ ಆರ್​ಬಿಐ ಬಡ್ಡಿದರ ಕಡಿತ ಶುರುವಿಟ್ಟುಕೊಳ್ಳಬಹುದು. ಈ ಹಣಕಾಸು ವರ್ಷ ಮುಗಿಯುವುದರೊಳಗೆ ಎರಡು ಬಾರಿ ಬಡ್ಡಿದರ ಕಡಿತಗೊಳಿಸಬಹುದು ಎಂದಿದೆ.

ಈ ಹಣಕಾಸು ವರ್ಷದಲ್ಲಿ ಹಣದುಬ್ಬರ ಸರಾಸರಿಯಾಗಿ ಶೇ. 4.5ರಷ್ಟಿರಬಹುದು ಎಂಬುದು ಎಸ್ ಅಂಡ್ ಪಿ ಅಂದಾಜು. ಆರ್​ಬಿಐ ಬಡ್ಡಿದರ ಬದಲಾಯಿಸಿ ವರ್ಷದ ಮೇಲಾಗಿದೆ. ಹಣದುಬ್ಬರ ಶೇ. 4ರ ಆಸುಪಾಸಿನಲ್ಲಿ ಸ್ಥಿರ ಆಗುವವರೆಗೂ ಬಡ್ಡಿದರ ಪರಿಷ್ಕರಿಸುವ ಗೋಜಿಗೆ ಹೋಗೋದಿಲ್ಲ ಎನ್ನುವಂತಹ ಸುಳಿವನ್ನು ಆರ್​ಬಿಐ ನೀಡಿದೆ. ಕೆಲ ತಿಂಗಳಿಂದ ಹಣದುಬ್ಬರ ದರ ಶೇ. 5ರ ಮಟ್ಟಕ್ಕಿಂತ ಕೆಳಗೇ ಇದೆ. ಇಲ್ಲಿ ಆಹಾರವಸ್ತುಗಳ ಬೆಲೆ ಏರಿಕೆ ಆಗದೇ ಹೋಗಿದ್ದರೆ ಹಣದುಬ್ಬರ ಶೇ. 4ಕ್ಕೆ ಬಂದು ಇಳಿಯುವ ಸಾಧ್ಯತೆ ಇತ್ತು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಶಂಖ್ ಏರ್; ಭಾರತದಲ್ಲಿ ಪದಾರ್ಪಣೆ ಮಾಡಲಿದೆ ಹೊಸ ಏರ್​ಲೈನ್ಸ್ ಸಂಸ್ಥೆ

ಇನ್ನೊಂದೆಡೆ ಅಮೆರಿಕದಲ್ಲಿದ್ದ ಹಣದುಬ್ಬರ ದರ ತಹಬದಿಗೆ ಬಂದಿದೆ. ಅಲ್ಲಿನ ಫೆಡರಲ್ ರಿಸರ್ವ್ ನಿರೀಕ್ಷೆ ಮೀರಿ 50 ಮೂಲಾಂಕಗಳಷ್ಟು ಬಡ್ಡಿದರ ಕಡಿಮೆಗೊಳಿಸಿತ್ತು. ಆರ್​ಬಿಐ ಕೂಡ ದರ ಕಡಿತದ ನಿರ್ಧಾರ ಕೈಗೊಳ್ಳುತ್ತದಾ ಎನ್ನುವ ಕುತೂಹಲ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಸ್ಪರ್ಧಿಗಳ ಪಟ್ಟಿ ಸುದೀಪ್​ಗೆ ಸಿಗೋದು ಯಾವಾಗ? ಉತ್ತರಿಸಿದ ಕಿಚ್ಚ
ಸ್ಪರ್ಧಿಗಳ ಪಟ್ಟಿ ಸುದೀಪ್​ಗೆ ಸಿಗೋದು ಯಾವಾಗ? ಉತ್ತರಿಸಿದ ಕಿಚ್ಚ
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು
ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ
ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ
Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು
Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು
ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು
ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು
‘ಬಿಗ್ ಬಾಸ್ ಶೋನ ಈ ಹೀರೋ ನಡೆಸಿಕೊಡಲಿ ಎಂದು ನಾನೇಕೆ ಕೇಳಲಿ’; ಸುದೀಪ್
‘ಬಿಗ್ ಬಾಸ್ ಶೋನ ಈ ಹೀರೋ ನಡೆಸಿಕೊಡಲಿ ಎಂದು ನಾನೇಕೆ ಕೇಳಲಿ’; ಸುದೀಪ್