ಸನ್​ಸೇರ ಎಂಜಿನಿಯರಿಂಗ್​ನ ರಾಮನಗರ ಫ್ಯಾಕ್ಟರಿ ವಿಸ್ತರಣೆಗೆ 2,100 ರೂ ಹೂಡಿಕೆ; 3,500 ಉದ್ಯೋಗಸೃಷ್ಟಿ ಸಾಧ್ಯತೆ

|

Updated on: Aug 02, 2024 | 11:18 AM

Sansera Engeering signs MoU with Karnataka government: ರಾಮನಗರದ ಹಾರೋಹಳ್ಳಿಯಲ್ಲಿರುವ ತನ್ನ ಫ್ಯಾಕ್ಟರಿಯ ಸಾಮರ್ಥ್ಯ ಹೆಚ್ಚಿಸಲು ಸನ್​ಸೇರ ಎಂಜಿನಿಯರಿಂಗ್ ಸಂಸ್ಥೆ 2,100 ಕೋಟಿ ರೂ ವ್ಯಯಿಸಲಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ ಜೊತೆ ಸನ್ಸೇರ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ. ದ್ವಿಚಕ್ರ ವಾಹನ, ಕಮರ್ಷಿಯಲ್ ವಾಹನಗಳ ಎಂಜಿನ್ ಮೊದಲಾದ ಪ್ರಮುಖ ಭಾಗಗಳ ತಯಾರಿಕೆಗೆ ಬೇಕಾದ ಪ್ರಿಸಿಶನ್ ಮೆಟೀರಿಯಲ್​ಗಳನ್ನು ಸನ್​ಸೇರ ಫ್ಯಾಕ್ಟರಿ ತಯಾರಿಸಿಕೊಡುತ್ತದೆ.

ಸನ್​ಸೇರ ಎಂಜಿನಿಯರಿಂಗ್​ನ ರಾಮನಗರ ಫ್ಯಾಕ್ಟರಿ ವಿಸ್ತರಣೆಗೆ 2,100 ರೂ ಹೂಡಿಕೆ; 3,500 ಉದ್ಯೋಗಸೃಷ್ಟಿ ಸಾಧ್ಯತೆ
ಸನ್​ಸೇರ ಎಂಜಿನಿಯರಿಂಗ್
Follow us on

ರಾಮನಗರ, ಆಗಸ್ಟ್ 1: ಬೆಂಗಳೂರು ಮೂಲದ ಆಟೊಮೊಬೈಲ್ ಸಾಧನಗಳ ತಯಾರಕ ಸಂಸ್ಥೆಯಾದ ಸನ್​ಸೇರ ಎಂಜಿನಿಯರಿಂಗ್ ರಾಮನಗರದಲ್ಲಿರುವ ತನ್ನ ಫ್ಯಾಕ್ಟರಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ 2,100 ಕೋಟಿ ರೂ ಹೂಡಿಕೆ ಮಾಡಲಿದೆ. ಕರ್ನಾಟಕ ಸರ್ಕಾರದೊಂದಿಗೆ ಅದು ಜುಲೈ 31ರಂದು ತಿಳಿವಳಿಕೆ ಒಪ್ಪಂದ (ಎಂಒಯು) ಮಾಡಿಕೊಂಡಿದೆ. ರಾಮನಗರದ ಹಾರೋಹಳ್ಳಿಯಲ್ಲಿ 55 ಎಕರೆ ಜಾಗದಲ್ಲಿ ಅದರ ಫ್ಯಾಕ್ಟರಿ ಇದ್ದು, ಅದರಲ್ಲಿ ವಿವಿಧ ಯಂತ್ರೋಪಕರಣಗಳನ್ನು ತಯಾರಿಸುತ್ತದೆ.

ಸನ್​ಸೇರ ಎಂಜಿನಿಯರಿಂಗ್​ನ ಫ್ಯಾಕ್ಟರಿ ವಿಸ್ತರಣೆಯಾದರೆ ಅಲ್ಲಿ ಉತ್ಪಾದನಾ ಸಾಮರ್ಥ್ಯ 3,000 ಕೋಟಿ ರೂ ಮೌಲ್ಯದಷ್ಟು ಹೆಚ್ಚಾಗಲಿದೆ. ವಿದೇಶಗಳಿಗೆ ರಫ್ತು ಹೆಚ್ಚಾಗಲಿದೆ. 3,500 ನೇರ ಮತ್ತು ಪರೋಕ್ಷ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಲಿದೆ. ರಾಮನಗರದ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಲಿದೆ.

ಸನ್​ಸೇರ ತನ್ನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರಿಗಾಗಿ ಟ್ರೈನಿಂಗ್ ಸೆಂಟರ್ ಸ್ಥಾಪಿಸಲು ಯೋಜಿಸಿದೆ. ಸುಧಾರಿತ ತಂತ್ರಜ್ಞಾನ ಮತ್ತು ಅತ್ಯುತ್ತಮ ಕ್ರಮಾವಳಿಗಳನ್ನು ಈ ಫ್ಯಾಕ್ಟರಿಯಲ್ಲಿ ಅಳವಡಿಸಲಾಗುವುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಬರೋಬ್ಬರಿ 15,000 ಉದ್ಯೋಗಿಗಳನ್ನು ಲೇ ಆಫ್ ಮಾಡಲಿದೆ ಇಂಟೆಲ್ ಸಂಸ್ಥೆ

ಸನ್​ಸೇರ ಯಾವ ಉತ್ಪನ್ನಗಳನ್ನು ತಯಾರಿಸುತ್ತದೆ?

1981ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಸನ್​ಸೇರ ಎಂಜಿನಿಯರಿಂಗ್ ಸಂಸ್ಥೆ ಪ್ರಿಸಿಶನ್ ಮೆಷಿನರಿ ಉತ್ಪನ್ನಗಳನ್ನು ತಯಾರಿಸುತ್ತದೆ. ವಾಹನ ಮತ್ತು ವಾಹನೇತರ ಕ್ಷೇತ್ರಗಳಲ್ಲಿ ಇದರ ಎಂಜಿನಿಯರಿಂಗ್ ವಸ್ತುಗಳು ಬಳಕೆ ಆಗುತ್ತವೆ.

ವಾಹನಗಳ ಎಂಜಿನ್, ಟ್ರಾನ್ಸ್​ಮಿಶನ್, ಸಸ್ಪೆನ್ಷನ್, ಬ್ರೇಕಿಂಗ್, ಚಾಸಿಸ್ ಮತ್ತಿತರ ಭಾಗಗಳಿಗೆ ಬೇಕಾದ ಕನೆಕ್ಟಿಂಗ್ ರಾಡ್, ರಾಕರ್ ಆರ್ಮ್, ಕ್ರಾಂಕ್​ಶಾಫ್ಟ್, ಗೇರ್ ಶಿಫ್ಟರ್ ಫೋರ್ಕ್ ಇತ್ಯಾದಿ ವಸ್ತುಗಳನ್ನು ಸನ್​ಸೇರ ತಯಾರಿಸುತ್ತದೆ. ಏರೋಸ್ಪೇಸ್, ಕೃಷಿ, ಆಫ್​ರೋಡ್ ವಾಹನ ಮೊದಲಾದ ಕ್ಷೇತ್ರಗಳಲ್ಲೂ ಇದರ ಪ್ರಿಸಿಶನ್ ವಸ್ತುಗಳು ಬಳಕೆ ಆಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ