AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 15,000 ಉದ್ಯೋಗಿಗಳನ್ನು ಲೇ ಆಫ್ ಮಾಡಲಿದೆ ಇಂಟೆಲ್ ಸಂಸ್ಥೆ

Intel to lay off 15,000 employees: 1968ರಲ್ಲಿ ಸ್ಥಾಪಿತವಾದ ಇಂಟೆಲ್ ಈಗ ಚಿಪ್ ಮಾರುಕಟ್ಟೆಯಲ್ಲಿ ತುರುಸಿನ ಪೈಪೋಟಿ ಎದುರಿಸುತ್ತಿದೆ. ಎರಡನೇ ಕ್ವಾರ್ಟರ್​ನಲ್ಲಿ ನಷ್ಟ ಅನುಭವಿಸಿರುವ ಇಂಟೆಲ್​ಗೆ ಈಗ ಸ್ಪರ್ಧೆಯಲ್ಲಿ ಉಳಿಯುವ ಸವಾಲಿದೆ. ವೆಚ್ಚ ಕಡಿತದ ಭಾಗವಾಗಿ 15,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಅದು ನಿರ್ಧರಿಸಿದೆ. ಈ ವರ್ಷಾಂತ್ಯದೊಳಗೆ ಹೆಚ್ಚಿನ ಲೇ ಆಫ್ ನಡೆಯಬಹುದು.

ಬರೋಬ್ಬರಿ 15,000 ಉದ್ಯೋಗಿಗಳನ್ನು ಲೇ ಆಫ್ ಮಾಡಲಿದೆ ಇಂಟೆಲ್ ಸಂಸ್ಥೆ
ಇಂಟೆಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 02, 2024 | 10:35 AM

Share

ನವದೆಹಲಿ, ಆಗಸ್ಟ್ 2: ವಿಶ್ವದ ಪ್ರಮುಖ ಚಿಪ್ ತಯಾರಕ ಸಂಸ್ಥೆಯಾದ ಇಂಟೆಲ್ ತನ್ನ ಶೇ. 15ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿದೆ. ಎನ್​ವಿಡಿಯಾ, ಎಎಂಡಿ ಸಂಸ್ಥೆಗಳಿಂದ ಪ್ರಬಲ ಪೈಪೋಟಿ ಎದುರಿಸುತ್ತಿರುವ ಇಂಟೆಲ್ ತನ್ನ ಸ್ಪರ್ಧಾತ್ಮಕತೆ ಉಳಿಸಿಕೊಳ್ಳಲು ಲೇ ಆಫ್ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ. ಒಟ್ಟು ತನ್ನಲ್ಲಿರುವ 1.2 ಲಕ್ಷ ಉದ್ಯೋಗಿಗಳ ಪೈಕಿ 15,000 ರಿಂದ 18,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಲು ಇಂಟೆಲ್ ನಿರ್ಧರಿಸಿದೆ. 2025ರಲ್ಲಿ 10 ಬಿಲಿಯನ್ ಡಾಲರ್ ಹಣವನ್ನು ಉಳಿಸುವ ಗುರಿ ಈ ಸಂಸ್ಥೆಯದ್ದು. ಈ ವಿಚಾರವನ್ನು ಇಂಟೆಲ್ ಕಾರ್ಪೊರೇಶನ್​ನ ಸಿಇಒ ಪ್ಯಾಟ್ ಜೆಲ್​ಸಿಂಗರ್ ನಿನ್ನೆ ಗುರುವಾರ ತಮ್ಮ ಸಿಬ್ಬಂದಿ ವರ್ಗಕ್ಕೆ ಕಳುಹಿಸಿದ ಮೆಮೋದಲ್ಲಿ ತಿಳಿಸಿದ್ದಾರೆ.

ಆಪರೇಟಿಂಗ್ ಅಥವಾ ಕಾರ್ಯಾಚರಣೆ ವೆಚ್ಚ ತೀರಾ ಅಧಿಕವಾಗಿದೆ. ಲಾಭದ ಮಾರ್ಜಿನ್ ಬಹಳ ಕಡಿಮೆ ಆಗಿದೆ. ನಿರೀಕ್ಷಿತ ಮಟ್ಟದಲ್ಲಿ ಆದಾಯ ಹೆಚ್ಚಳವಾಗುತ್ತಿಲ್ಲ ಎಂದು ಸಿಇಒ ಹೇಳಿದ್ದಾರೆ. ವರ್ಷದ ಎರಡನೇ ಕ್ವಾರ್ಟರ್​ನಲ್ಲಿ (ಏಪ್ರಿಲ್​ನಿಂದ ಜೂನ್) ಇಂಟೆಲ್ ನಷ್ಟ ಅನುಭವಿಸಿದೆ. 1.6 ಬಿಲಿಯನ್ ಡಾಲರ್​ನಷ್ಟು ನಷ್ಟ ಕಂಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇಂಟೆಲ್ 1.5 ಬಿಲಿಯನ್ ಡಾಲರ್ ಲಾಭ ಗಳಿಸಿತ್ತು. ಈ ಎರಡನೇ ಕ್ವಾರ್ಟರ್​ನಲ್ಲಿ ಅದರ ಆದಾಯವೂ ಕಡಿಮೆ ಆಗಿದೆ. ಮೂರನೇ ಕ್ವಾರ್ಟರ್​ನಲ್ಲೂ ಆದಾಯ ಕಡಿಮೆ ಇರಬಹುದು ಎಂದು ಸ್ವತಃ ಇಂಟೆಲ್ ಸಂಸ್ಥೆಯೇ ಅಂದಾಜು ಮಾಡಿದೆ.

ಇದರ ಬೆನ್ನಲ್ಲೇ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಇಂಟೆಲ್ ಷೇರುಬೆಲೆ ಕುಸಿತ ಕಂಡಿದೆ. ಅದರ ಮಾರುಕಟ್ಟೆ ಬಂಡವಾಳ 24 ಬಿಲಿಯನ್ ಡಾಲರ್​ನಷ್ಟು ಕಡಿಮೆ ಆಗಬಹುದು. ಇದೀಗ ವೆಚ್ಚ ಉಳಿತಾಯದ ಭಾಗವಾಗಿ ಲೇ ಆಫ್ ಕ್ರಮ ಕೈಗೊಂಡಿರುವುದರಿಂದ ಷೇರು ಕುಸಿತಕ್ಕೆ ಒಂದಷ್ಟು ವಿರಾಮ ಸಿಗಬಹುದು.

ಇದನ್ನೂ ಓದಿ: ಫಸ್ಟ್ ಕ್ರೈ ಐಪಿಒ; ನಷ್ಟದ ಭೀತಿಯಲ್ಲಿ ಸಚಿನ್ ತೆಂಡೂಲ್ಕರ್; ಐಪಿಒಗೆ ಮುಂಚೆಯೇ 2 ಲಕ್ಷ ಷೇರು ಖರೀದಿಸಿದ್ದ ಮಾಸ್ಟರ್ ಬ್ಲಾಸ್ಟರ್

2025ರೊಳಗೆ 18,000 ಉದ್ಯೋಗಿಗಳನ್ನು ಲೇ ಆಫ್ ಮಾಡುವುದು ಇಂಟೆಲ್ ಮ್ಯಾನೇಜ್ಮೆಂಟ್ ಗುರಿಯಾಗಿದೆ. ವರದಿ ಪ್ರಕಾರ ಈ ವರ್ಷಾಂತ್ಯದಲ್ಲೇ ಹೆಚ್ಚಿನ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಸಾಧ್ಯತೆ ಇದೆ. ಸ್ವ ಇಚ್ಛೆಯಿಂದ ಕೆಲಸ ಬಿಡಲು ಉದ್ಯೋಗಿಗಳಿಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ. ಕೆಲ ಆಯ್ದ ಉದ್ಯೋಗಿಗಳಿಗೆ ಈ ಅವಕಾಶ ನೀಡಬಹುದು. ಅವರಿಗೆ ಹೆಚ್ಚಿನ ಪ್ರೋತ್ಸಾಹಕ ಪ್ಯಾಕೇಜ್ ಕೊಡುವ ಸಾಧ್ಯತೆ ಇದೆ.

2023ರಲ್ಲಿ ಇಂಟೆಲ್ ಸಂಸ್ಥೆ ಶೇ. 5ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿತ್ತು. ಇದರ ಬೆನ್ನಲ್ಲೇ ಇನ್ನೂ ದೊಡ್ಡ ಮಟ್ಟದ ಲೇ ಆಫ್ ಕ್ರಮಕ್ಕೆ ಅದು ಕೈ ಹಾಕುತ್ತಿರುವುದು ಉದ್ಯೋಗಿಗಳಿಗೆ ಆತಂಕಕ್ಕೀಡು ಮಾಡಿದೆ. ಭಾರತದಲ್ಲೂ ಇಂಟೆಲ್​ನ ಸಾವಿರಾರು ಉದ್ಯೋಗಿಗಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ