AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s Day 2022: ದೀರ್ಘಾವಧಿಯಲ್ಲಿ ಆರ್ಥಿಕ ಸುಸ್ಥಿರತೆಗೆ ಇಲ್ಲಿವೆ 5 ಟಿಪ್ಸ್

ಮಹಿಳೆಯರ ಉಳಿತಾಯ ಯೋಜನೆ ಬಗ್ಗೆ ಬೆಳಕು ಚೆಲ್ಲುವಂಥ ಲೇಖನ ಇದು. ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಬಹಳ ಪ್ರಮುಖ ಎನಿಸುವಂಥದ್ದು.

Women's Day 2022: ದೀರ್ಘಾವಧಿಯಲ್ಲಿ ಆರ್ಥಿಕ ಸುಸ್ಥಿರತೆಗೆ ಇಲ್ಲಿವೆ 5 ಟಿಪ್ಸ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 08, 2022 | 6:28 PM

ಈಗಂತೂ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಪಾರಮ್ಯ ಇದೆ. ಇವತ್ತಿಗೆ ಜಾಗತಿಕ ಮಟ್ಟದಲ್ಲಿಯೇ ಉದ್ಯೋಗಿಗಳ ವರ್ಗದಲ್ಲಿ ಮಹಿಳೆಯರು ಕಾಣಿಸಿಕೊಂಡಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುತ್ತಿದ್ದು, ಸಂಪತ್ತು ಸಂಗ್ರಹ ಮಾಡುತ್ತಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಉಳಿತಾಯದ (Savings) ವಿಚಾರಕ್ಕೆ ಅವರದೇ ಆದ ಹೆಚ್ಚುಗಾರಿಕೆ ಇದೆ. ಅವರು ಮೌಲ್ಯ ಹಾಗೂ ಬೆಲೆಯ ಮಧ್ಯೆ ವ್ಯತ್ಯಾಸ ಗುರುತಿಸಬಲ್ಲರು. ಕೊವಿಡ್​-19 ಬಿಕ್ಕಟ್ಟಿನ ಕಾರಣವನ್ನು ತೆಗೆದುಕೊಳ್ಳುವುದಾದರೆ, ಹಲವು ಕುಟುಂಬಗಳಿಗೆ ವೇತನ ಕಡಿತ ಅಥವಾ ಆದಾಯ ನಷ್ಟವಾಗಿದೆ (ಲಾಕ್​ಡೌನ್​ ಅಥವಾ ನಿರ್ಬಂಧ ಹೇರಿದ್ದ ಕಾರಣಕ್ಕೆ). ಸವಾಲಿನ ಸಮಯದಲ್ಲಿ ಹಲವು ಮಹಿಳೆಯರು ಅಳವಡಿಸಿಕೊಂಡಿರುವ ಬಜೆಟ್​ನಿಂದ ಈ ಸಂಕಷ್ಟ ದಾಟಲು ಸಾಧ್ಯವಾಗಿದೆ. ಆದರೆ ವೃತ್ತಿಪರ ಕಾರ್ಯನಿರತ ಮಹಿಳೆಯರು ಅಥವಾ ಗೃಹಿಣಿಯರು, ಮಹಿಳೆಯರು ತಮ್ಮದೇ ಹಣಕಾಸು ನಿರ್ಧಾರವನ್ನು ಮಾಡುತ್ತಾರೆ ಹಾಗೂ ಭವಿಷ್ಯಕ್ಕೆ ಯೋಜನೆ ರೂಪಿಸುತ್ತಾರೆ. ನಿಮ್ಮ ಆರ್ಥಿಕ ಒಳಿತಿಗೆ ಯಾವಾಗಲೂ ಇನ್ನೊಬ್ಬರ ಮೇಲೆ ಅವಲಂಬಿತರಾಗುವ ಅಗತ್ಯ ಇಲ್ಲ.

ಅತ್ಯುತ್ತಮ ಆಸ್ತಿಯನ್ನು ನಿರ್ಧರಿಸುವುದು ಹೇಗೆ? ವೈಯಕ್ತಿಕ ಉದ್ದೇಶ ಮತ್ತು ಅಪಾಯದ ಸಹಿಷ್ಣುತೆ ಆಧಾರದಲ್ಲಿ ಯಾವುದು ಅತ್ಯುತ್ತಮ ಆಸ್ತಿ ಎಂಬುದನ್ನು ನಿರ್ಧರಿಸಬಹುದು. ಆದರೆ ದೀರ್ಘಾವಧಿಯಲ್ಲಿ ಈಕ್ವಿಟಿಯು ಹೆಚ್ಚಿನ ಸಂಪತ್ತು ಸೃಷ್ಟಿಗೆ ಸಹಾಯ ಮಾಡುತ್ತದೆ. ಮಾರುಕಟ್ಟೆಯು ಐತಿಹಾಸಿಕವಾಗಿ ಏಳರಿಂದ ಹತ್ತು ವರ್ಷಕ್ಕೂ ಹೆಚ್ಚು ಅವಧಿಗೆ ಶೇ 12ಕ್ಕೂ ಹೆಚ್ಚಿನ ರಿಟರ್ನ್ಸ್ ನೀಡುತ್ತದೆ. ಆದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲ್ಯಾನ್ ಶೈಲಿಯಲ್ಲಿ ಹೂಡಿಕೆ ಮಾಡುವುದು ಗಂಭೀರವಾದದ್ದು.

ಎಮರ್ಜೆನ್ಸಿ ಫಂಡ್ಸ್ (ತುರ್ತು ನಿಧಿ) ಸವಾಲಿನ ಹಾಗೂ ಅನಿಶ್ಚಿತತೆಯ ಸಂದರ್ಭವನ್ನು ಎದುರಿಸುವ ಸಲುವಾಗಿಯೇ ಅಗತ್ಯ ಪ್ರಮಾಣದ ತುರ್ತು ನಿಧಿ ಇರಿಸಿಕೊಳ್ಳುವುದು ಮುಖ್ಯ. ಇದನ್ನೇ ಈ ಹಿಂದೆ ಕೂಡ ಇದನ್ನು ಓದುತ್ತಿರುವ ನಿಮ್ಮ ಪೈಕಿ ಕೆಲವರು ಮಾಡಿರಬಹುದು. ಈ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವುದಾದರೆ, ವಿಶ್ಲೇಷಕರು ಹೇಳುವಂತೆ ಶೇ 10ರಿಂದ 20ರಷ್ಟನ್ನು ಎಫ್​ಡಿಯಲ್ಲಿ, ಸಾಲದ ನಿಧಿ ಮತ್ತು ಲಿಕ್ವಿಡ್​ ಫಂಡ್​ಗಳಲ್ಲಿ ಇಡಬಹುದು, ಆ ಮೂಲಕ ತುರ್ತು ಸಂದರ್ಭದಲ್ಲಿ ಇದನ್ನು ಬಳಸಬಹುದು.

ಚಿನ್ನ ಮಹಿಳೆಯರಿಗೆ ಚಿನ್ನ ಅಚ್ಚುಮೆಚ್ಚು. ಮಾರುಕಟ್ಟೆ ಏರಿಳಿತ ಸಂದರ್ಭದಲ್ಲಿ ಚಿನ್ನ ಉತ್ತಮ ಆಯ್ಕೆಯಾಗಿದೆ. ಭಾರತದಲ್ಲಿ ಚಿನ್ನವು ಕೇವಲ ಬೆಲೆಬಾಳುವ ಲೋಹವಾಗಿ ಮಾತ್ರ ನೋಡಬಾರದು. ಭಾರತೀಯರ ಮನಸ್ಸಿನಲ್ಲಿ ಚಿನ್ನಕ್ಕೆ ಸ್ಥಾನ ಇದೆ. ಸವರನ್ ಗೋಲ್ಡ್ ಬಾಂಡ್, ಗೋಲ್ಡ್ ಇಟಿಎಫ್​​ಗಳು ಅಥವವಾ/ಮತ್ತು ಚಿನ್ನದ ಸೇವಿಂಗ್​ ಫಂಡ್ ಖಂಡಿತಾ ಕೆಲವು ಉದ್ದೇಶಗಳನ್ನು ಪೂರ್ಣಗೊಳಿಸುತ್ತದೆ. ಇದರಲ್ಲಿ ಶೇ 10ರಿಂದ 20ರಷ್ಟನ್ನು ಹೂಡಿಕೆ ಮಾಡಬಹುದು.

ಮ್ಯೂಚುವಲ್ ಫಂಡ್ಸ್ ಮಧ್ಯಮಾವಧಿ ಯೋಜನೆ ಗುರಿಗೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್​ ಪ್ಲಾನ್ ಅತ್ಯುತ್ತಮ ಆಯ್ಕೆ. ಈ ಪೈಕಿ ಅತ್ಯುತ್ತಮ ಮ್ಯೂಚುವಲ್ ಫಂಡ್ ಯಾವುವು ಎಂಬುದನ್ನು ಆಯ್ಕೆ ಮಾಡುವುದು ಅತಿ ಮುಖ್ಯ ಆಗುತ್ತದೆ. ಇದರಿಂದಾಗಿ ಉಳಿತಾಯದಲ್ಲಿ ಶಿಸ್ತು ಬರುತ್ತದೆ ಮತ್ತು ಜೇಬಿಗೂ ಭಾರವಲ್ಲ. ಎಸ್​ಐಪಿಯಲ್ಲಿ ಮ್ಯೂಚುವಲ್ ಫಂಡ್ಸ್​ನಲ್ಲಿ ಹೂಡಿಕೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಸಮಯ ಹುಡುಕುವುದಕ್ಕೆ ಗಮನ ಇರುತ್ತದೆ. ಏರಿಳಿತಗಳನ್ನು ಮೀರಿ, ಶ್ರಮ ವಹಿಸಿ ಗಳಿಸಿದ ಹಣವನ್ನು ಬೆಳೆಸುವುದಕ್ಕೆ ಸಹಾಯ ಆಗುತ್ತದೆ.

ಇನ್ಷೂರೆನ್ಸ್ ಆರೋಗ್ಯ ವಿಮೆ, ಜೀವ ವಿಮೆ, ಟರ್ಮ್ ಇನ್ಷೂರೆನ್ಸ್ ಹೀಗೆ ಯಾವುದನ್ನಾದರೂ ಆರಿಸಿಕೊಳ್ಳಬಹುದು. ಒಂದು ವೇಳೆ ದುರದೃಷ್ಟಕರವಾದ ಆರೋಗ್ಯ ಬಿಕ್ಕಟ್ಟಿನಂಥ ಘಟನೆ ಮತ್ತು ಹೆಚ್ಚಿದ ಬಿಲ್ ಮಧ್ಯೆ ಸಂಗಾತಿಗೆ ಅಗತ್ಯ ಹಣಕಾಸು ಬೇಕಾದಲ್ಲಿ ಇದರಿಂದ ನೆರವಾಗುತ್ತದೆ.

ಈಕ್ವಿಟಿ ಹೂಡಿಕೆ ಷೇರು ಮಾರುಕಟ್ಟೆಗೆ ಬರುವವರ ಪೈಕಿ ಶೇ 5ಕ್ಕಿಂತ ಕಡಿಮೆ ಜನರು ಸ್ಥಿರವಾಗಿ ಲಾಭ ಗಳಿಸುತ್ತಾರೆ ಎಂದು ಹೇಳಲಾಗುತ್ತದೆ. ಹೀಗೆ ಕೆಲವೇ ಜನರು ಮಾತ್ರ ಈಕ್ವಿಟಿ ಮಾರುಕಟ್ಟೆಯಲ್ಲಿ ಸಂಪಾದನೆ ಮಾಡುವುದಕ್ಕೆ ಕಾರಣ ಏನೆಂದರೆ, ಅವರು ಶಿಸ್ತು ಮತ್ತು ಕ್ರಮಬದ್ಧ ಧೋರಣೆ. ಈ ಸ್ವಭಾವ ಸಹಜವಾಗಿಯೇ ಮಹಿಳಾ ಹೂಡಿಕೆದಾರರಿಗೆ ಬರುತ್ತದೆ. ಈಕ್ವಿಟಿ ಎಂಬುದು ಬಹಳ ಮುಖ್ಯವಾದ ಆಸ್ತಿ ಹಂಚಿಕೆ. ತಮ್ಮ ರಿಟರ್ನ್ ಹೆಚ್ಚು ಮಾಡಿಕೊಳ್ಳಲು ಇರುವಂಥ ದಾರಿ ಇದು ಎನ್ನುತ್ತಾರೆ ವಿಶ್ಲೇಷಕರು.

ಇದನ್ನೂ ಓದಿ: Savings Accounts Interest Rate: ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್​ ಇತರ ಬ್ಯಾಂಕ್​ಗಳ ಉಳಿತಾಯ ಖಾತೆ ಬಡ್ಡಿ ದರ ಇಲ್ಲಿದೆ

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್