AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tax Savings FDs: ತೆರಿಗೆ ಉಳಿತಾಯದ ಎಫ್​ಡಿಗೆ ಯಾವ ಬ್ಯಾಂಕ್​ನಿಂದ ಉತ್ತಮ ಬಡ್ಡಿ ದರ?​

ತೆರಿಗೆ ಉಳಿತಾಯ ಮಾಡುವ ಸಲುವಾಗಿ ಇರುವ ಫಿಕ್ಸೆಡ್ ಡೆಪಾಸಿಟ್​ಗೆ ಯಾವ ಬ್ಯಾಂಕ್​ನಿಂದ ಉತ್ತಮ ಬಡ್ಡಿ ದೊರೆಯುತ್ತದೆ ಎಂಬ ಮಾಹಿತಿ ಈ ಲೇಖನದಲ್ಲಿದೆ.

Tax Savings FDs: ತೆರಿಗೆ ಉಳಿತಾಯದ ಎಫ್​ಡಿಗೆ ಯಾವ ಬ್ಯಾಂಕ್​ನಿಂದ ಉತ್ತಮ ಬಡ್ಡಿ ದರ?​
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Mar 07, 2022 | 9:40 PM

Share

ತೆರಿಗೆ ಉಳಿಸುವ ಮತ್ತು ಖಾತ್ರಿ ರಿಟರ್ನ್ ನೀಡುವ ಉಳಿತಾಯ ಯೋಜನೆಗಾಗಿ ಹೂಡಿಕೆದಾರರಿಗೆ ಮಾರುಕಟ್ಟೆಯಲ್ಲಿ ಸೀಮಿತ ಆಯ್ಕೆಗಳು ಲಭ್ಯ ಇವೆ. ತೆರಿಗೆ ಉಳಿಸುವ ಫಿಕ್ಸೆಡ್​ ಡೆಪಾಸಿಟ್ಸ್ (Fixed Deposits) ಅವುಗಳಲ್ಲಿ ಒಂದು. ತೆರಿಗೆ ಉಳಿಸುವ ಎಫ್​ಡಿಗಳು ಹೂಡಿಕೆದಾರರಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಉಳಿಸಲು ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಈ ತೆರಿಗೆ ಉಳಿತಾಯ ಯೋಜನೆಯ ಅಡಿಯಲ್ಲಿ ಠೇವಣಿ ಮಾಡಲು ಕನಿಷ್ಠ ಅವಧಿ ಅಥವಾ ಲಾಕ್-ಇನ್ ಅವಧಿಯು 5 ವರ್ಷಗಳು. ಒಬ್ಬರು ಗರಿಷ್ಠ ರೂ. 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಇತರ ಮಾರುಕಟ್ಟೆ ಸಂಯೋಜಿತ ಇನ್​ಸ್ಟ್ರುಮೆಂಟ್​ಗಳಿಗೆ ವಿರುದ್ಧವಾಗಿ ತೆರಿಗೆ-ಉಳಿತಾಯ ಫಿಕ್ಸೆಡ್​ ಡೆಪಾಸಿಟ್ಸ್ ಖಾತ್ರಿ ಆದಾಯವನ್ನು ನೀಡುತ್ತದೆ ಮತ್ತು ಕನಿಷ್ಠ ಅಪಾಯದೊಂದಿಗೆ ಬರುತ್ತದೆ. ಈ ಆಯ್ಕೆಯು ತೆರಿಗೆದಾರರಲ್ಲಿ ಹೆಚ್ಚು ಜನಪ್ರಿಯವಾಗಲು ಇದೂ ಒಂದು ಕಾರಣವಾಗಿದೆ.

ಅಂತಹ ಎಫ್​ಡಿಗಳ ಮೇಲಿನ ಬಡ್ಡಿ ದರವು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತದೆ. ಹೆಚ್ಚಿನ ಬ್ಯಾಂಕ್‌ಗಳು ಸಾಮಾನ್ಯವಾಗಿ ನೀಡುವ ತೆರಿಗೆ ಉಳಿತಾಯ ಎಫ್​ಡಿಗಳ ಸಂಚಿತ ಬಡ್ಡಿ ಅಥವಾ ಸಂಚಿತವಲ್ಲದ ಆಯ್ಕೆಗಳಿಂದ ಆರಿಸಬಹುದು. ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ: ಇಂಡಸ್​ ಇಂಡ್​ ಬ್ಯಾಂಕ್ – ಶೇ 6.5

ಆರ್​ಬಿಎಲ್​ ಬ್ಯಾಂಕ್ – ಶೇ 6.3

ಐಡಿಎಫ್​ಸಿ ಫಸ್ಟ್ ಬ್ಯಾಂಕ್ – ಶೇ 6.25

ಡಿಸಿಬಿ ಬ್ಯಾಂಕ್ – ಶೇ 5.95

ಕರೂರ್ ವೈಶ್ಯ ಬ್ಯಾಂಕ್ – ಶೇ 5.9

ಪ್ರಸ್ತುತ ಆದಾಯ ತೆರಿಗೆ ಕಾನೂನುಗಳ ಪ್ರಕಾರ, ಕೇವಲ ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳು (HUFs) ತೆರಿಗೆ ಉಳಿಸುವ ಎಫ್​ಡಿಗಳಲ್ಲಿ ಹೂಡಿಕೆ ಮಾಡಬಹುದು. ನೀವು ಈಗಾಗಲೇ ಉಳಿತಾಯ ಖಾತೆಯನ್ನು ಹೊಂದಿರುವ ಬ್ಯಾಂಕ್‌ನಲ್ಲಿ ಅಥವಾ ಇನ್ನೊಂದು ಬ್ಯಾಂಕ್‌ನೊಂದಿಗೆ ತೆರಿಗೆ ಉಳಿತಾಯ ಎಫ್‌ಡಿ ಖಾತೆಯನ್ನು ತೆರೆಯಬಹುದು, ಅದು ಕೂಡ ಉಳಿತಾಯ ಖಾತೆಯನ್ನು ತೆರೆಯದೆ ಎಫ್​ಡಿ ಮಾಡಲು ಬ್ಯಾಂಕ್ ಅನುಮತಿಸಿದರೆ.

ತೆರಿಗೆ ಉಳಿಸುವ ಎಫ್​ಡಿಗೆ ಹೇಗೆ ತೆರಿಗೆ ವಿಧಿಸಲಾಗುತ್ತದೆ? ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಪ್ರತಿ ಹಣಕಾಸು ವರ್ಷದಲ್ಲಿ ರೂ 1.5 ಲಕ್ಷದವರೆಗೆ ಕಡಿತವನ್ನು ಅನುಮತಿಸುತ್ತದೆ. ಆದರೂ ಪಾವತಿಸಿದ ಅಥವಾ ಅಸಲಿನ ಮೇಲೆ ಸಂಚಿತವಾದ ಬಡ್ಡಿಯು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಬಡ್ಡಿಯನ್ನು ಗಳಿಕೆಗೆ ಅನ್ವಯಿಸಲಾಗುತ್ತದೆ ಮತ್ತು ತೆರಿಗೆ ಬ್ರಾಕೆಟ್ ಅವಲಂಬಿಸಿ ಆಯಾ ದರಗಳಲ್ಲಿ ತೆರಿಗೆ ವಿಧಿಸಲಾಗುತ್ತದೆ.

ಹಣಕಾಸು ವರ್ಷದಲ್ಲಿ ಫಿಕ್ಸೆಡ್ ಡೆಪಾಸಿಟ್​ಗಳ ಮೇಲಿನ ಬಡ್ಡಿ ಪಾವತಿಗಳು ರೂ. 40,000 ತಲುಪಿದರೆ ಮೂಲದಲ್ಲಿ ತೆರಿಗೆಯನ್ನು (ಟಿಡಿಎಸ್) ಬ್ಯಾಂಕ್​ನಿಂದ ಕಡಿತಗೊಳಿಸುತ್ತದೆ. ಫಾರ್ಮ್ 15G ಅಥವಾ 15H ಅನ್ವಯವಾಗುವಂತೆ, ತೆರಿಗೆಯನ್ನು ತಪ್ಪಿಸಲು ಬಳಸಬಹುದು. ಆದರೆ ಬ್ಯಾಂಕ್‌ನಲ್ಲಿರುವ ಎಲ್ಲ ಎಫ್‌ಡಿಗಳಿಂದ ಒಟ್ಟು ಬಡ್ಡಿ ಆದಾಯವು ವರ್ಷದಲ್ಲಿ 40,000 ರೂಪಾಯಿಗಿಂತ ಕಡಿಮೆಯಿದ್ದರೆ ಯಾವುದೇ ಟಿಡಿಎಸ್ ಕಡಿತ ಇರುವುದಿಲ್ಲ. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗಾಗಿ ಮಿತಿಯು 50,000 ರೂಪಾಯಿ ಇದೆ.

ಇದನ್ನೂ ಓದಿ: Income Tax Return Filing: ಆದಾಯ ತೆರಿಗೆ ರಿಟರ್ನ್​ನ ಈ ನಿಯಮ ಉಲ್ಲಂಘನೆಯಿಂದ ದಂಡ ಪಾವತಿ ಜತೆ ಜೈಲು ಶಿಕ್ಷೆ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?