AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

USD Vs Rupee: ಡಾಲರ್​ ವಿರುದ್ಧ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ; 77ರ ಸಮೀಪ ಭಾರತದ ಕರೆನ್ಸಿ

ಅಮೆರಿಕ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ 77ರ ಸಮೀಪ ಬಂದಿದೆ. ಇಂಥದ್ದೊಂದು ಬೆಳವಣಿಗೆಗೆ ಕಾರಣ ಏನು ಎಂಬುದರ ವಿವರ ಇಲ್ಲಿದೆ.

USD Vs Rupee: ಡಾಲರ್​ ವಿರುದ್ಧ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ; 77ರ ಸಮೀಪ ಭಾರತದ ಕರೆನ್ಸಿ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Mar 07, 2022 | 3:10 PM

Share

ಅಮೆರಿಕ ಹಾಗೂ ಅದರ ಯುರೋಪಿಯನ್ ಮಿತ್ರ ರಾಷ್ಟ್ರಗಳು ರಷ್ಯಾದ ತೈಲದ ಮೇಲೆ ನಿಷೇಧ ಹೇರುವ ಬಗ್ಗೆ ಆಲೋಚನೆ ಮಾಡುತ್ತಿವೆ ಎಂಬ ಸುದ್ದಿಯ ವರದಿಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲ (Oil Price) ದರವು ಹೊಸದಾಗಿ ಮತ್ತೆ ಏರಿಕೆ ದಾಖಲಿಸಿದ ಮೇಲೆ ಸೋಮವಾರದಂದು (ಮಾರ್ಚ್ 7, 2022) ಭಾರತದ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್​ ವಿರುದ್ಧ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 77ಕ್ಕೆ ತಲುಪಿತು. ಕರೆನ್ಸಿ ದುರ್ಬಲಗೊಳ್ಳುತ್ತಿರುವ ಸತತ ನಾಲ್ಕನೇ ಸೆಷನ್ ಇದು. ಮಾರ್ಚ್ 7ನೇ ತಾರೀಕಿನ ಮಧ್ಯಾಹ್ನ 12.11ರ ಹೊತ್ತಿಗೆ ಭಾರತದ ರೂಪಾಯಿಯು ಡಾಲರ್‌ ವಿರುದ್ಧ 76.96ರಲ್ಲಿ ವಹಿವಾಟು ನಡೆಸುತ್ತಿತ್ತು. ಅದರ ಹಿಂದಿನ ಮುಕ್ತಾಯಕ್ಕಿಂತ ಶೇ 1.03ರಷ್ಟು ಕಡಿಮೆ ಆಯಿತು. ಇದು ಒಂದು ಡಾಲರ್‌ಗೆ 76.96ಕ್ಕೆ ಪ್ರಾರಂಭವಾಯಿತು ಮತ್ತು ದಿನದಲ್ಲಿ ದಾಖಲೆಯ 76.97 ಮುಟ್ಟಿತು.

ಹೆಚ್ಚಿನ ಕಚ್ಚಾ ತೈಲ ದರವು ಭಾರತದ ಚಾಲ್ತಿ ಖಾತೆ ಕೊರತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಹೆಚ್ಚಿನ ಚಾಲ್ತಿ ಖಾತೆ ಕೊರತೆಯು ದೇಶೀಯ ಕರೆನ್ಸಿಯ ಮೇಲೆ ಮತ್ತಷ್ಟು ಒತ್ತಡವನ್ನು ಉಂಟು ಮಾಡುವ ಸಾಧ್ಯತೆಯಿದೆ. ಉಕ್ರೇನ್‌ನ ಮೇಲೆ ರಷ್ಯಾದ ದಾಳಿ ಮತ್ತು ರಷ್ಯಾದಿಂದ ಕಚ್ಚಾ ತೈಲದ ಕಡಿಮೆ ರಫ್ತು ಸೇರಿ ತೈಲ ಬೆಲೆಗಳನ್ನು ದೀರ್ಘಾವಧಿಯವರೆಗೆ ಹೆಚ್ಚಿಸುತ್ತವೆ. “ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಗಳಲ್ಲಿನ ದೊಡ್ಡ ಅಸಮತೋಲನದಿಂದಾಗಿ ಮುಂದಿನ 6ರಿಂದ 9 ತಿಂಗಳಲ್ಲಿ ಜಾಗತಿಕ ಕಚ್ಚಾ ಬೆಲೆಗಳು ಹೆಚ್ಚಾಗುವ ಅಪಾಯಗಳನ್ನು ನಾವು ಗಮನಿಸುತ್ತಿದ್ದೇವೆ,” ಎಂದು ವಿಶ್ಲೇಷಕರು ಹೇಳಿದ್ದಾರೆ.

ಬ್ರೆಂಟ್ ಸುಮಾರು 14 ವರ್ಷಗಳ ಗರಿಷ್ಠ ಮಟ್ಟವಾದ 140 ಯುಎಸ್​ಡಿಗೆ ಏರಿತು. ಯುಎಸ್​ ವಹಿವಾಟಿನಲ್ಲಿ ತೈಲವು 2008ರಿಂದ ಈಚೆಗೆ ಗರಿಷ್ಠ ಮಟ್ಟವನ್ನು ತಲುಪಿತು ಮತ್ತು ಅದು ತಣ್ಣಗಾಗುವ ಯಾವುದೇ ಲಕ್ಷಣಗಳು ಸಹ ಇಲ್ಲ. ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಸುದ್ದಿ ವಾಹಿನಿಗಳಿಗೆ ಮಾತನಾಡಿ, “ಈಗ ನಮ್ಮ ಯುರೋಪಿಯನ್ ಪಾಲುದಾರರು ಮತ್ತು ಮಿತ್ರರಾಷ್ಟ್ರಗಳೊಂದಿಗೆ ರಷ್ಯಾದ ತೈಲ ಆಮದನ್ನು ನಿಷೇಧಿಸುವ ನಿರೀಕ್ಷೆಯನ್ನು ಸಂಘಟಿತ ರೀತಿಯಲ್ಲಿ ನೋಡಲು ಮಾತನಾಡುತ್ತಿದ್ದೇವೆ. ವಿಶ್ವ ಮಾರುಕಟ್ಟೆಯಲ್ಲಿ ಸೂಕ್ತವಾದ ತೈಲ ಪೂರೈಕೆ ಇನ್ನೂ ಇದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ,” ಎಂದು ಹೇಳಿದ ನಂತರ ಇತ್ತೀಚಿನ ಹಿನ್ನಡೆಯು ಸಂಭವಿಸಿದೆ.

ಕೊಟಕ್ ಸಾಂಸ್ಥಿಕ ಈಕ್ವಿಟೀಸ್ ವರದಿ ಪ್ರಕಾರ, ಪ್ರತಿ ಬ್ಯಾರೆಲ್​ಗೆ 120 ಡಾಲರ್​ನ ಸರಾಸರಿ ಕಚ್ಚಾ ತೈಲ ಬೆಲೆಯು ಭಾರತೀಯ ಆರ್ಥಿಕತೆಗೆ ಹೆಚ್ಚುತ್ತಿರುವ 70 ಶತಕೋಟಿ ಅಮೆರಿಕನ್ ಡಾಲರ್ ವೆಚ್ಚವನ್ನು ಹೊರೆಸುತ್ತದೆ. ಇದು ಹಣಕಾಸು ವರ್ಷ 2023 ವರ್ಸಸ್ ಹಣಕಾಸು 2022 ನೋಡಿದರೆ ಜಿಡಿಪಿಯ ಶೇ 1.9 ಆಗುತ್ತದೆ. ಕಚ್ಚಾ ತೈಲ ಬೆಲೆಗಳ ತೀಕ್ಷ್ಣ ಹೆಚ್ಚಳವು CAD/ಜಿಡಿಪಿ, ಹೆಚ್ಚಿನ ಹಣದುಬ್ಬರ ಮತ್ತು ಕಡಿಮೆ ಬೆಳವಣಿಗೆಯ ರೂಪದಲ್ಲಿ ಕಠಿಣ ಸವಾಲುಗಳನ್ನು ಒಡ್ಡುತ್ತವೆ.

ಕಡಿಮೆ ಅಬಕಾರಿ ಆದಾಯ ಮತ್ತು ಹೆಚ್ಚಿನ ಎಂಎಸ್​ಪಿಗಳ ರೂಪದಲ್ಲಿ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಕಂಪೆನಿಗಳ ಹೆಚ್ಚಿನ ರೀಟೇಲ್ ಬೆಲೆಗಳ ರೂಪದಲ್ಲಿ ಕುಟುಂಬಗಳ ಹೆಚ್ಚುವರಿ ವೆಚ್ಚವನ್ನು ಸರ್ಕಾರವು ತೆಗೆದುಕೊಂಡಿದೆ. ಆದರೂ ಕಂಪೆನಿಗಳು ಹೆಚ್ಚಿನ ಇಂಧನ ವೆಚ್ಚವನ್ನು ಅಂತಿಮವಾಗಿ ಕುಟುಂಬಗಳ ಮೇಲೆ ವರ್ಗಾಯಿಸುತ್ತವೆ. ಜಾಗತಿಕ ಮಾರುಕಟ್ಟೆಗೆ ಇರಾನಿನ ಕಚ್ಚಾ ತೈಲದ ಸಂಭಾವ್ಯ ವಾಪಸಾತಿಯಲ್ಲಿನ ವಿಳಂಬ, ಲಿಬಿಯಾದಲ್ಲಿ ತಾಜಾ ಪೂರೈಕೆಯ ಅಡಚಣೆಗಳು ಮತ್ತು ಭಾರತೀಯ ಷೇರುಗಳಲ್ಲಿ ವಿದೇಶಿ ಹೂಡಿಕೆದಾರರ ನಿರಂತರ ಮಾರಾಟವು ವ್ಯಾಪಾರಿಗಳಲ್ಲಿನ ಭಾವನೆಗಳನ್ನು ಆತಂಕಕ್ಕೆ ದೂಡಿ, ದೇಶೀಯ ಕರೆನ್ಸಿಯನ್ನು ಒತ್ತಡದಲ್ಲಿ ಇರಿಸಿತು. ಅಕ್ಟೋಬರ್‌ನಿಂದ ವಿದೇಶೀ ಹೂಡಿಕೆದಾರರು ಸುಮಾರು 2 ಲಕ್ಷ ಕೋಟಿ ರೂಪಾಯಿಗಳಷ್ಟು ಮಾರಾಟ ಮಾಡಿದ್ದಾರೆ.

ದೇಶೀಯವಾಗಿ ಮಾರುಕಟ್ಟೆಯಲ್ಲಿ ಭಾಗವಹಿಸುವವರು ಮಾರ್ಚ್ 10ರಂದು ಬರಲಿರುವ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರದ ಐದು ರಾಜ್ಯಗಳ ರಾಜ್ಯ ಚುನಾವಣಾ ಫಲಿತಾಂಶಗಳನ್ನು ಗಮನಿಸುತ್ತಿದ್ದಾರೆ. ಐಐಪಿ ಡೇಟಾ ಬಿಡುಗಡೆ ದಿನಾಂಕವನ್ನು ಮಾರ್ಚ್ 11ಕ್ಕೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Russia- Ukraine Crisis: ರಷ್ಯಾ- ಉಕ್ರೇನ್​ ಬಿಕ್ಕಟ್ಟಿನ ಮಧ್ಯೆ ಕಚ್ಚಾ ತೈಲ ಬ್ಯಾರಲ್​ಗೆ 10 ಯುಎಸ್​ಡಿಗೂ ಜಾಸ್ತಿ ಹೆಚ್ಚಳ

ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ