AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 26 July : ಇಂದು ಈ ರಾಶಿಯವರಿಗೆ ಅಪರಿಚಿತರಿಂದ ಧನ ಲಾಭ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಶ್ರಾವಣ ಮಾಸ ಶುಕ್ಲ ಪಕ್ಷದ ದ್ವಿತೀಯಾ ತಿಥಿ ಶನಿವಾರ ಪರರ ಸಂಸರ್ಗದಿಂದ ದೂರ, ಅಲ್ಪಾದಾಯದಿಂದ ಆಲಸ್ಯ, ವಾಹನ ಸಂಚಾರದಲ್ಲಿ ಭೀತಿ, ಆತುರಾತುರದಿಂದ ಕಾರ್ಯ ಇವೆಲ್ಲ ಇಂದಿನ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today 26 July : ಇಂದು ಈ ರಾಶಿಯವರಿಗೆ ಅಪರಿಚಿತರಿಂದ ಧನ ಲಾಭ
Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 26, 2025 | 4:29 AM

Share

Horoscope Today : ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಶ್ರಾವಣ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಶನಿ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ವಜ್ರ, ಕರಣ : ಬವ, ಸೂರ್ಯೋದಯ – 06 – 15 am, ಸೂರ್ಯಾಸ್ತ – 07 – 02 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:28 – 11:03 ಗುಳಿಕ ಕಾಲ 06:16 – 07:52 ಯಮಗಂಡ ಕಾಲ 14:15 – 15:51

ಮೇಷ ರಾಶಿ :

‌ನಿಮ್ಮ ಕಾರ್ಯದಲ್ಲಿ ಮಗ್ನರಾಗಿದ್ದು ಅನ್ಯರ ಗೊಡವೆಗೆ ಹೋಗಲಾರಿರಿ. ಇಂದು ಕಷ್ಟವಾದರೂ ಸಂತೋಷದಿಂದ ಕೆಲಸವನ್ನು ಮಾಡುವಿರಿ. ಅತ್ಯಂತ ಶ್ರಮವಹಿಸಿ ಕಾರ್ಯವನ್ನು ಮಾಡಲಿದ್ದೀರಿ. ಸಕಾರಾತ್ಮಕ ಚಿಂತನೆಗಳನ್ನು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕಿದೆ. ನಿಮ್ಮ ಅನುಭವಗಳನ್ನು ಒಂದೆಡೆ ದಾಖಲಿಸುವಿರಿ. ಸಂಗಾತಿಯನ್ನು ಬಿಟ್ಟಿರುವುದು ಬೇಸರ ತರಿಸಬಹುದು. ಇಂದು ತಿಳಿದು ಕೂಗಾಡಬಹುದು.‌ ನಿಮ್ಮ ಉದ್ಯೋಗವು ನಿಮಗೆ ಸಾಕೆನಿಸಿ ಹೊಸತನ್ನು ಹುಡುಕಲು ಇಚ್ಛಿಸಬಹುದು. ನಡವಳಿಕೆಯಿಂದ ಕೆಲವಷ್ಟು ಅಂಶಗಳನ್ನು ಕಲಿತಾರು. ಅಹಂಕಾರ ಸರಿಯಾಗಿದ್ದರೆ ಅಪಾಯವಿಲ್ಲ, ಇಲ್ಲವಾದರೆ ನಿಮಗೇ ಯಾರಿಂದಲಾದರು‌ ಇಂದು ಪೆಟ್ಟುಕೊಡಿಸುವುದು. ಸಾಮಾಜಿಕ ಕೆಲಸಗಳು ನಿಮಗೆ ಇಷ್ಟವಾಗುವ ಕೆಲಸವೇ ಆಗಿದ್ದು ಬಿಡುವಿನ ವೇಳೆಯಲ್ಲಿ ಮಾಡುವಿರಿ. ನೀವು ಇಂದು ಅಸಹಾಯಕರಂತೆ ತೋರುವಿರಿ. ಉಪದೇಶ ನೀಡುವ ಬದಲು ಆಚರಿಸಿದರೆ ಉತ್ತಮ. ಆರ್ಥಿಕವಾಗಿ ಸಬಲರಾಗಲು ವಿವಿಧ ಆರ್ಥಿಕ ಮೂಲವನ್ನು ಅನ್ವೇಷಿಸಬೇಕಾದೀತು. ಬೋಧಕವರ್ಗಕ್ಕೆ ಸಂತೋಷದ ವಾರ್ತೆ ಇರುವುದು.

ವೃಷಭ ರಾಶಿ :

ಕೆಟ್ಟವರಂತೆ ಕಾಣುವವರು ಕೆಟ್ಟರಲ್ಲ. ಬೇರೆಯವರು ಖುಷಿಪಡುವಂತೆ ಮಾತನಾಡುವಿರಿ. ಸಣ್ಣ ಅಚಾತುರ್ಯದಿಂದ ಅನಾಹುತ ಮಾಡಿಕೊಳ್ಳುವಿರಿ. ಆಲಸ್ಯದಿಂದ ಮೇಲೆಳಬೇಕಾದ ಸ್ಥಿತಿ ಇದೆ. ಮಕ್ಕಳ ಮೇಲಿನ ನಂಬಿಕೆ ದೂರಾಗುವುದು. ನಿಮ್ಮ ವಿಚಾರದಲ್ಲಿ ಬೇರೆಯವರು ಮಧ್ಯಪ್ರವೇಶ ಮಾಡುವರು. ಇದು ನಿಮಗೆ ಬಹಳ ಸಿಟ್ಟನ್ನು ತರಿಸೀತು. ಅದನ್ನು ವ್ಯಕ್ತಪಡಿಸಲು ನೀವು ಸೂಕ್ತ ಸಂದರ್ಭವನ್ನು ಹುಡುಕುವಿರಿ. ಜಗಳವಾಗುವ ಸ್ಥಿತಿ‌ದ್ದರೂ ಸುಮ್ನನಿರುವುದು ಇತರರಿಗೆ ಆಶ್ಚರ್ಯವನ್ನು ಕೊಟ್ಟೀತು. ಸ್ನೇಹಿತರು ನಿಮ್ಮನ್ನು ಬಿಟ್ಟುಹೋಗುವರು. ವೃತ್ತಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಹೇಳಿಕೆಗಳು ಬರಬಹುದು. ನಿಮ್ಮವರು ನಿಮ್ಮ ಪ್ರೀತಿಗೆ ಸೋಲಬಹುದು. ಕಳೆದುಕೊಂಡ ಸಂಬಂದವು ಮತ್ತೆ ಚಿಗುರಬಹುದು. ಆದ್ಯತೆಯ ಮೇರೆಗೆ ವ್ಯವಹರಿಸಿ. ವ್ಯಾಪಾರಸ್ಥರಿಗೆ ಸ್ವಲ್ಪ ಲಾಭವಾದ ಕಾರಣ ಇಂದು ಆಲಸ್ಯವು ಇರುವುದು. ಒಂದೇ ವಿಚಾರವನ್ನು ಮನನ‌ ಮಾಡುವಿರಿ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಲಿದೆ. ಕೆಲಸವನ್ನು ಆರಂಭಿಸುವಾಗ ಇರುವ ಉತ್ಸಾಹವು ಅನಂತರ ಇರದು.

ಮಿಥುನ ರಾಶಿ :

ಮನೆಯಲ್ಲಿರುವ ಸಂಪತ್ತಿನ ಅರಿವಾಗುವುದು. ಇಂದು ಆಪ್ತರು ನಿಮಗೆ ಬರುವ ಸಂಕಟದಲ್ಲಿ ಜೊತೆಯಾಗುವರು. ಧೈರ್ಯದಿಂದ ನೀವು ಇರಬಹುದು. ತಂತ್ರಜ್ಞರಿಗೆ ಉತ್ತಮ ಕೆಲಸ ಸಿಗಲಿದೆ. ಭೋಗವಸ್ತುವಿನ ಜೊತೆ ಹೆಚ್ಚು ಕಾಲಕಳೆಯಲು ಬಯಸುವಿರಿ. ಅಕಸ್ಮಾತ್ ಅತಿಥಿಗಳ ಆಗಮನದಿಂದ ಚಿಂತೆಯಾಗುವುದು. ಬಂಧುಗಳ ಒಡನಾಟ ಹೆಚ್ಚಾಗುವುದು. ನಿಮ್ಮ ಗುರಿಯ ಬಗ್ಗೆ ಬಲ್ಲವರು ತಿಳಿಸಬಹುದು. ಮನಸ್ಸು ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಹೇಳಿಬಿಡಬಹುದು. ವೈವಾಹಿಕ‌ ಜೀವನವು ಬಹಳ‌ ಕಷ್ಟ ಎನಿಸಬಹುದು. ಸಂತೋಷದಿಂದ ಇರುಲು ಕಷ್ಟಪಡಬೇಕಾದ ಸ್ಥಿತಿ ಇದೆ. ಹಳೆಯ ಮನೆಯನ್ನು ಭೋಗ್ಯಕ್ಕೆ ಕೊಡುವಿರಿ. ನೋವನ್ನು ಯಾರಲ್ಲಿ ಹೇಳಿಕೊಳ್ಳಬೇಕು ಎಂಬ ಅಳುಕು ಇರುವುದು. ಒಂದೇ ಕೆಲಸದಿಂದ ಎರಡು ಪ್ರಯೋಜನವನ್ನು ಪಡೆಯುವಿರಿ. ಭೂಮಿಯ ವ್ಯವಹಾರವು ಸುಲಭಕ್ಕೆ ಕೈ ಹಿಡಿಯದು. ಸಣ್ಣ ವ್ಯಾಪಾರದಲ್ಲಿ ಅಲ್ಪ ಲಾಭವಾಗಲಿದೆ. ವೇತನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುವ ಅವಶ್ಯಕತೆ ಬರಬಹುದು.

ಕರ್ಕಾಟಕ ರಾಶಿ :

ಸತ್ಯ ಗೊತ್ತಾದ ಮೇಲೆ ಹೇಳಲು ಏನೂ ಇರದು. ಇಂದು ಮೇಲಧಿಕಾರಿಗಳು ನಿಮ್ಮ ಕಾರ್ಯವನ್ನು ವೀಕ್ಷಿಸಬಹುದು. ಹಣವನ್ನು ಗಳಿಸುವ ಹಂಬಲವು ಅತಿಯಾಗಿದ್ದರೂ ದಾರಿಗಳು ಮಾತ್ರ ಕಾಣಿಸದೇ ಇದ್ದೀತು. ಮರಣಭೀತಿಯು ನಿಮ್ಮನ್ನು ಕಾಡಬಹುದು.‌ ನಿಮ್ಮೊಂದಿಗೆ ದೇವರು ಇದ್ದಾನೆ ಎಂಬ ನಂಬಿಕೆ ಬಲವಾಗಿರುವುದು. ಕೆಟ್ಟ ಆಲೋಚನೆಗಳನ್ನು ಬಿಟ್ಟು ಸರಿಯಾದುದರ ಬಗ್ಗೆ ಗಮನವಿರಲಿ. ಅಲ್ಪ ಆದಾಯವೂ ನಿಮ್ಮ ನಿಜವಾದ ಶ್ರಮದ್ದಾಗಿದೆ. ಸಂಗಾತಿಯ ಆಯ್ಕೆಯನ್ನು ಸರಿಯಾಗಿ ಮಾಡಿಕೊಳ್ಳಿ. ಮೇಲ್ನೋಟಕ್ಕೆ ಒಪ್ಪಿ ಅನಂತರ ಕಷ್ಟವಾದೀತು. ಒಂದರ ಮುಕ್ತಾಯ ಮತ್ತೊಂದರ ಆರಂಭ. ಇಂದಿನ ಮನೆಯ ಜವಾಬ್ದಾರಿಯು ನಿಮ್ಮ ಹೆಗಲ ಮೇಲೆ. ಅತ್ಯಾಪ್ತರ ಗುರುತು ಮರೆಯಾಗಬಹುದು. ನಿಮ್ಮರನ್ನು ನೀವು ಕಳೆದುಕೊಳ್ಳುವ ಭೀತಿಯು ಇರುವುದು. ಹಿರಿಯರ ಹಿತವಚನವನ್ನು ಕೇಳುವ ವ್ಯವಧಾನ ಇರದು. ಮಕ್ಕಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು.

ಸಿಂಹ ರಾಶಿ :

ನೆರೆಹೊರೆಯ ಸಂಕಟಕ್ಕೆ ಮರುಗುವಿರಿ. ಇಂದು ನಿಮ್ಮ ಕರ್ತವ್ಯಗಳನ್ನು ಮರೆಯು ಸಾಧ್ಯತೆ ಇದ್ದು, ಯಾರೋ ಅದನ್ನು ನೆನಪಿಸಬೇಕಸದೀತು. ಇದರಿಂದ ನಿಮಗೆ ಕೋಪಕ್ಕೆ ಬರಬಹುದು. ನಿಮ್ಮ ಭೂಮಿಯನ್ನು ಭೋಗ್ಯಕ್ಕೆ ಕೆಲವು ಕಾಲ ಕೊಡುವ ಯೋಚನೆ ಬರಲಿದೆ. ನೀವು ಚೆನ್ನಾಗಿ ಇರುವುದು, ಸಂತೋಷದಿಂದ ಮಾತನಾಡುವುದು, ಎಲ್ಲರ ಜೊತೆ ಬೆರೆಯುವುದು ನಿಮ್ಮ ಬಂಧುಗಳಿಗೆ ಸಹಿಸಲಾಗದು. ದೈವಾನೂಕೂಲದಿಂದ ಲಭಿಸಿದ್ದನ್ನು ಅದೇ ಮನಃಸ್ಥಿಯಿಂದ ಇಟ್ಟುಕೊಳ್ಳುವಿರಿ. ಮನೆಯವರ ಅಸೆ ಇದ್ದರೂ ಉನ್ನತ ವಿದ್ಯಾಭ್ಯಾಸವು ಕಷ್ಟವೆನಿಸಬಹುದು. ತುಂಬಾ ಕಷ್ಟದಿಂದ ಗಳಿಸಿದ ಹಣವನ್ನು ಖರ್ಚುಮಾಡಲು ಮನಸ್ಸುಬಾರದು. ಹೊರಗಡೆ ಸುತ್ತಾಡಲು ಹೋಗಬಹುದು. ಇನ್ನೊಬ್ಬರನ್ನು ಅನುಕರಿಸುವ ನಿಮ್ಮ ಸ್ವಭಾವವನ್ನು ಬಿಡುವುದು ಒಳ್ಳೆಯದು. ಕೆಲವು ವಿಚಾರದಲ್ಲಿ ಧೈರ್ಯದ ಕೊರೆತೆ ಕಾಣುವುದು. ಹಳೆಯ ಸ್ನೇಹಿತೆಯು ಬಹಳ ಕಾಡಬಹುದು. ತಾಳ್ಮೆಯಿಂದ ಕಾರ್ಯವನ್ನು ಮಾಡಿ. ನೂತನ‌ ಸ್ನೇಹವನ್ನು ಬೆಳೆಸಿಕೊಳ್ಳುವಿರಿ.

ಕನ್ಯಾ ರಾಶಿ :

ತಂದೆಯ ಇಂಗಿತವನ್ನು ಅರ್ಥಮಾಡಿಕೊಂಡು ವ್ಯವಹಾರದಲ್ಲಿ ಮುಂದುವರಿಯುವಿರಿ. ನಿಮಗೆ ವಿದೇಶಕ್ಕೆ ಸಂಬಂಧಪಟ್ಟ ವ್ಯವಹಾರದಲ್ಲಿ ಪಾಲುದಾರಿಕೆ ಸಿಗಬಹುದು. ಗೃಹೋಪಯೋಗಿ ವ್ಯಾಪಾರದಲ್ಲಿ ಮಂದಗತಿ ಇರಲಿದೆ. ಯಂತ್ರೋಪಕರಣದ ಮಾರಾಟಗಾರಿಗೆ ಲಾಭವು ಆಗುವುದು. ಸಣ್ಣ ಸಂಘದ ಮುಖ್ಯಸ್ಥರಾಗುವಿರಿ. ಕೆಲಸದ ಸ್ಥಳದಲ್ಲಿ ಎಲ್ಲರೂ ನಿಮ್ಮ ಹಿಡಿತದಲ್ಲಿ ಇರಬೇಕು ಎನ್ನುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳುವಿರಿ. ಸಂಗಾತಿಯ ಜೊತೆ ಮಾತನಾಡಿ ಭವಿಷ್ಯ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಅನಾರೋಗ್ಯವು ನಿಮ್ಮ ಕಾರ್ಯಗಳಿಗೆ ಹಿನ್ನಡೆ ಮಾಡುವುದು. ನಿಮಗೆ ಸಿಗುವ ಹಣವು ಮಧ್ಯವರ್ತಿಗಳ ಕಾರಣದಿಂದ ಕೈತಪ್ಪಬಹುದು. ದೇವತೋಪಾಸನೆಯಲ್ಲಿ ಶ್ರದ್ಧೆ ಬರುವುದು. ನಿಮ್ಮ ವಿದ್ಯಾಪ್ರಗತಿಯನ್ನು ಮನೆಯವರ ಜೊಯೆ ಹಂಚಿಕೊಳ್ಳುವಿರಿ. ನಿಮ್ಮಲ್ಲಿರುವ ಅಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಕೊಡುವಿರಿ.

ತುಲಾ ರಾಶಿ :

ಆಗದಿರುವ ಕಾರ್ಯಕ್ಕೆ ಕೋಪ ಸಹಜ. ಕಾರಣ ತಿಳಿದು ಸುಮ್ಮನಾಗುವವನು ಮನುಜ. ನಿಮ್ಮದಾದ ಸಂಪತ್ತನ್ನು ಇನ್ನೊಬ್ಬರಿಗೆ ಕೊಡಬೇಕಾಗುವುದು. ಸಹನೆಯನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ನಿಮಗೆ ಎಚ್ಚರಿಕೆ ಇರಲಿ. ಬಹಳ ಆಯಾಸವಾದಂತೆ ಎನಿಸಬಹುದು. ನಿನ್ನೆಯ ಸುಸ್ತಿನಿಂದ ಹೊರಬರಲು ವಿಶ್ರಾಂತಿ ಪಡೆಯುವಿರಿ. ಆಹಾರ ಸೇವೆಯನ್ನು ಮಾಡಲು ನಿಮ್ಮ ಕ್ರಮವನ್ನು ರೂಢಿಸಿಕೊಳ್ಳುವಿರಿ. ತಾಯಿಯ ಜೊತೆ ಇಂದು ನಿಮ್ಮ ಎಲ್ಲ ವಿಷಯವನ್ನು ಹೇಳಿಕೊಳ್ಳುವಿರಿ. ಮನೆಯನ್ನು ನಿರ್ಮಿಸಲು ಹೊಸ ಜಾಗವನ್ನು ಖರೀದಿಸಬಹುದು. ವಕೀಲ ವೃತ್ತಿಯಲ್ಲಿ ನ್ಯಾಯ ಕೊಡಿಸುವುದು ಕಷ್ಟವೆನಿಸಬಹುದು. ಮೋಜು ಮಾಡಲು ಹೋಗಿ ಹಣವನ್ನು ಕಳೆದುಕೊಳ್ಳುವಿರಿ. ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲವು ಕೆಲಸವನ್ನು ಮರೆಯುವಿರಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಬೇಕು ಎಂದು ಅನ್ನಿಸಬಹುದು. ಉತ್ತಮ ಹವ್ಯಾಸಗಳು ನಿಮಗೆ ಪ್ರಯೋಜನವನ್ನು ಕೊಡುತ್ತದೆ. ಇಂದು ಖರೀದಿಸಿದ ಹೊಸ ವಸ್ತುವಿನಿಂದ ನಿಮಗೆ ಖುಷಿಯಾಗುವುದು.

ವೃಶ್ಚಿಕ ರಾಶಿ :

ಯಾವುದೇ ಕಾರ್ಯವನ್ನೂ ಇದು ಹೀಗೇ ಎನ್ನುವಂತೆ ಮಾಡಿ. ನಿಮ್ಮ ಮಕ್ಕಳ ಬಗ್ಗೆ ನೀವು ಸರಿಯಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಈಗಿರುವ ಕೆಲಸವನ್ನು ಬಿಟ್ಟು ಸ್ವಂತ ಉದ್ಯೋಗಕ್ಕೆ ತೊಡಗಬಹುದು. ಅತಿಯಾಗಿ ದೇಹವನ್ನು ದಂಡಿಸಬೇಡಿ. ನಿಮ್ಮ ಸಾಮರ್ಥ್ಯವನ್ನು ನೋಡಿಕೊಳ್ಳಿ. ಹಣವಿದ್ದರೂ ವಾಹನವನ್ನು ಕೊಳ್ಳುವ ಯೋಗ ದೂರವಿದೆ. ಬೇಡದ ನಿಮ್ಮ ವಸ್ತುವಿನ ಕಳ್ಳತನವಾಗಬಹುದು. ಇದೇ ವಿಚಾರಕ್ಕೆ ಮನೆಯಲ್ಲಿ ಕಲಹವಾದೀತು. ನಿಮ್ಮ‌ ಭಾವನೆ ತೊಂದರೆಯಾಗಲಿದೆ. ರಾಜಕೀಯ ವ್ಯಕ್ತಿಗಳ ಸಹಾಯದಿಂದ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವಿರಿ. ನಿಮ್ಮ ಬಗ್ಗೆ ನಿಮಗೆ ಕೀಳರಿಮೆ ಬರಬಹುದು. ಪ್ರೀತಿಯ ಮಾತುಗಳಿಂದ ಇಂದಿನ ಕೆಲಸವನ್ನು ಮಾಡಿಸಿಕೊಳ್ಳುವಿರಿ. ವೈಯಕ್ತಿಕ ವಿಚಾರಕ್ಕೆ ಯಾರನ್ನೂ ಸೇರಿಸಿಕೊಳ್ಳಲು ಬಯಸುವುದಿಲ್ಲ. ಪ್ರೇಮವು ಬೇರೆ ರೂಪವನ್ನು ಪಡೆಯಬಹುದು. ಯಾರನ್ನಾದರೂ ಗೆಳೆಯರನ್ನಾಗಿ ಮಾಡಿಕೊಳ್ಳುವಿರಿ. ಆದಾಯಕ್ಕೆ ಯಾರಿಂದಲಾದರೂ ಅಡ್ಡಿಯಾಗಿ, ಸಿಟ್ಟುಗೊಳ್ಳುವಿರಿ. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆ ಸ್ಪಂದನ ಇರದು. ಅಮಂಗಲವಾದ ಕಾರ್ಯಕ್ಕೆ ಗೊತ್ತಿಲ್ಲದೇ ನೀವು ಹಣವನ್ನು ನೀಡುವಿರಿ.

ಧನು ರಾಶಿ :

ಸಿಕ್ಕ ಹಣದಲ್ಲಿ ನಿಮ್ಮ ಪಾಲನ್ನು ಮಾತ್ರ ಪಡೆದು ಹಿಂದಿರುಗಿಸಿ. ಧಾರ್ಮಿಕ ಕಾರ್ಯಗಳಿಗೆ ಮುಂದಾಳುತ್ವವವನ್ನು ವಹಿಸುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಅಕ್ಕಪಕ್ಕದವರ ಜೊತೆ ಅಸಮಾಧಾನ ವ್ಯಕ್ತವಾಗುವುದು. ಸಂಗಾತಿಯ ಜೊತೆ ಸಂತೋಷ ಕೂಟದಲ್ಲಿ ಭಾಗವಹಿಸುವಿರಿ. ಸ್ನೇಹಿತರಿಂದ ಹಣವನ್ನು ಸಾಲವಾಗಿಯೂ ಒಡೆಯಬಹುದು. ಸುವ್ಯವಸ್ಥಿತ ಭವಿಷ್ಯದ ಕನಸು ಕಾಣುವಿರಿ. ಹಣ‌ ಸಂಪಾದನೆಗಾಗಿ ವ್ಯವಹಾರ ಮಾಡಿದರೆ ನಿಮ್ಮ ದಾರಿ ತಪ್ಪಿಹೋಗುವುದು. ವ್ಯಾಪಾರದಲ್ಲಿ ಆದಾಯ ಬಂದರೆ ಚೆನ್ನ. ಅಸ್ಥಿರವಾದ ವ್ಯವಸ್ಥೆಯು ಕಿರಿಕಿರಿಯನ್ನು ಉಂಟುಮಾಡಬಹುದು. ಇಂದು ನೀವು ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ಸಹೋದ್ಯೋಗಿಗಳ ವರ್ತನೆಯಿಂದ ಸಿಟ್ಟಾಗುವ ಸಾಧ್ಯತೆ ಇದೆ. ಕೋಪಗೊಳ್ಳಬೇಕಾದ ಪರಿಸ್ಥಿತಿ ಇದ್ದರೂ ಅದನ್ನು ನಿಯಂತ್ರಿಸಿಕೊಳ್ಳಬೇಕಾಗಿದೆ. ಸಹೋದರನ ಬಗ್ಗೆ ಪ್ರೀತಿ ಅತಿಯಾದೀತು. ನೀವು ಭರವಸೆ ಕೊಡಲು ಪ್ರಸಿದ್ಧರು ಎಂಬ ಬಿರುದು ಬರದಂತೆ ನೋಡಿಕೊಳ್ಳಿ. ವಾಹನವನ್ನು ಚಾಲಾಯಿಸುವಾಗ ಅನೇಕ ಸಕಾರಾತ್ಮಕ ಯೋಚನೆಗಳು ಇರಲಿ. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ಗೊಂದಲಗಳು ಬರುವುದು.

ಮಕರ ರಾಶಿ :

ಆತ್ಮಾವಲೋಕನ ಸರಿಯಾಗಿ ಇರಲಿ. ನಿಮ್ಮ ತಪ್ಪುಗಳನ್ನು ನೀವೇ ಎತ್ತಿಹೇಳುವಂತೆ ಇದ್ದರೆ ನಿಮಗೆ ಸಮಾಧಾನ. ಕುಟುಂಬದವರ ಮಾತಿನ ಅಲಕ್ಷ್ಯದಿಂದ ನಿಮಗೆ ಸಮಸ್ಯೆಯಾದೀತು. ಹಿರಿಯರಿಗೆ ತೊಂದರೆಯನ್ನು ಕೊಡಲು ಹೋಗಬೇಡಿ. ಮಕ್ಕಳ ಜೊತೆ ಸಂತೋಷವನ್ನು ಅನುಭವಿಸುವಿರಿ. ಅರ್ಥವಿಲ್ಲದ ವ್ಯರ್ಥ ಮಾತುಗಳನ್ನು ನಿಲ್ಲಿಸುವುದು ಉತ್ತಮ‌. ನೀವು ಬಯಸಿದ ವಸ್ತುವು ಅನಾಯಾಸವಾಗಿ ದೊರೆಯುವುದು. ತುರ್ತು ಕಾರ್ಯದಿಂದ ಮಾಡಬೇಕಾದ ಕೆಲಸವನ್ನು ಬಿಡುವಿರಿ. ಸಂಗಾತಿ ಮಾಡಿದ ಖರೀದಿಯು ನಿಮಗೆ ಹೊರೆಯಾಗುವುದು. ಸಂಗಾತಿಯ ವಿಚಾರದಲ್ಲಿ ಪ್ರೀತಿಯು ಕಡಿಮೆ‌ ಆದೀತು. ವಿದ್ಯಾರ್ಥಿಗಳು ಆಗಿ ಹೋದರ ಬಗ್ಗೆ ಹೆಮ್ಮೆಯಿಂದ‌ ಬೀಗುವ ಅವಶ್ಯಕತೆಯಿಲ್ಲ. ಮುಂದಿನ ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ತ್ವವನ್ನು ಕೊಡಿ. ಒಬ್ಬರೇ ಎಲ್ಲಿಯಾದರೂ ಸುತ್ತಾಟ ಮಾಡಬಹುದು. ಅಪಮಾನದಂತೆ ಅನ್ನಿಸೀತು ನಿಮಗೆ. ಅನವಶ್ಯಕವಾಗಿ ಚಿಂತನೆಯಿಂದ ನಿಮ್ಮ ಆತ್ಮವಿಶ್ವಾಸವನ್ನು ನೀವೇ ಹಾಳುಮಾಡಿಕೊಳ್ಳುವಿರಿ.

ಕುಂಭ ರಾಶಿ :

ನೌಕರರಿಗೆ ಮಾನಸಿಕೆ ಹಿಂಸೆ ಕೊಡುವುದು ಹೆಚ್ಚಾಗುವುದು. ನಿಮ್ಮ ಮಾತು ಇಂದು ಕೇಳುಗರಿಗೆ ಹಿಂಸೆ ಕೊಡಬಹುದು. ಆಪ್ತರ ಜೊತೆ ಮಾತುಕತೆಗಳು ಆಗಬಹುದು. ಬಯಕೆಯನ್ನು ಬಹಳ ಬಲವಾಗಿ ಹಿಡಿದಿಟ್ಟುಕೊಳ್ಳುವಿರಿ. ತೊಂದರೆಯನ್ನು ತೆಗೆದುಕೊಳ್ಳದೇ ಕೆಲಸವನ್ನು ಮುಗಿಸುವ ಮಾನಸಿಕ ಸ್ಥಿತಿಯನ್ನು ಹೊಂದಿದ್ದೀರಿ. ಆದಾಯದ ಮಾರ್ಗವನ್ನು ತಪ್ಪಾಗಿ ತೋರಿಸುವಿರಿ. ಇಂದು ನಿಮ್ಮ ಪರೀಕ್ಷೆಯ ಕಾಲವಾಗಿದ್ದು ಸ್ಥೈರ್ಯವು ಕಡಿಮೆ ಆಗುವುದು. ಮನೆಯ ಬಗ್ಗೆ ಚಿಂತೆಯೂ ಕಾಡಬಹುದು. ನಿಮ್ಮ ಜೀವನದ ಬಗ್ಗೆ ನಿಮಗೆ ವಿಧವಾದ ಕನಸುಗಳು ಇರಬಹುದು. ಒಂಟಿಯಾಗಿದ್ದಷ್ಟೂ ಬೇರೆ ಬೇರೆ ಯೋಚನೆಗಳು ಬರಬಹುದು. ಯಾರನ್ನಾದರೂ ಸಹಪಾಠಿಗಳನ್ನಾಗಿ ಮಾಡಿಕೊಳ್ಳುವುದು ಉತ್ತಮ. ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಬಹುದು. ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ. ಭೂ ವ್ಯವಹಾರದಲ್ಲಿ ನಿಶ್ಚಿತ ಲಾಭವು ಪ್ರಾಪ್ತವಾಗಲಿದೆ. ಚರ ಆಸ್ತಿಯನ್ನು ಮಾರಾಟ ಮಾಡಿ ಹಣದ ಗಳಿಸುವಿರಿ.

ಮೀನ ರಾಶಿ :

ನಿಮ್ಮ ಪ್ರಗತಿಯನ್ನು ಬಹಿರಂಗ ಪಡಿಸುವುದು ಬೇಡ. ಇಂದು ನೀವು ಸುತ್ತಾಟಕ್ಕೆಂದು ಮಕ್ಕಳ ಜೊತೆ ಹೋಗುವಿರಿ. ಕಡಿಮೆ ವೆಚ್ಚದಲ್ಲಿ ಹೆಚ್ಚು ಸಂಪಾದಿಸುವ ಯೋಜನೆಯನ್ನು ಹಾಕಿಕೊಳ್ಳುವುದಕ್ಕೆ ಸಮಯ ಬೇಕಾಗುವುದು. ಬೇಡದ ಯೋಚನೆಗಳೇ ನಿಮ್ಮ ತಲೆಯಲ್ಲಿ ಸುತ್ತಬಹುದು. ನಿಮ್ಮದೇ ಮನಸ್ಸಾದರೂ ನಿಮ್ಮ ಮಾತನ್ನು ಕೇಳದೇ ಇದ್ದೀತು. ನಿರ್ಮೋಹದಿಂದ ಸಹಕಾರವನ್ನು ಕೊಡುವುದು ಗೊತ್ತಿರಲಿ. ನೀವು ಅಂದುಕೊಂಡ ವಿಚಾರಗಳು ನಿಮ್ಮಿಂದ ಆಗಿಲ್ಲ ಎಂಬ ಬೇಸರ ಉಂಟಾದೀತು. ‌ಹಣಕಾಸಿನ ವಿಚಾರದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ ಇದ್ದು ಸಂತಸವಿರಲಿದೆ. ಸಂಗಾತಿಯ ಜೊತೆ ಹೆಚ್ಚಿನ ಸಮಯವನ್ನು ಕಳೆಯಬಹುದು. ಅನೇಕ ದಿನಗಳ ಅನಂತರ ಸಂತೋಷದಿಂದ ಇರುವ ದಿನವಾಗಿದೆ. ಪ್ರೀತಿಪಾತ್ರರಿಗೆ ಸಮಯ ವ್ಯರ್ಥ ಮಾಡುವಿರಿ. ನಿಮ್ಮ ಪ್ರೇಮವು ಇಂದು ಯಾರಿಂದಲೋ ಮನೆಯವರಿಗೆ ತಿಳಿಯುವುದು. ಮಹಿಳಾ ಉದ್ಯೋಗಿಗಳು ಹೆಚ್ಚಿನ ಸ್ಥಾನವನ್ನು ಪಡೆಯುವಿರಿ. ಯಾರನ್ನೂ ದೂರುವ ಅವಶ್ಯಕತೆ ಇಲ್ಲ. ನಿಮ್ಮ ಕೆಲಸವನ್ನು ಸರಿ ಮಾಡಿಕೊಂಡು ಹೋಗುವಿರಿ.

ಲೋಹಿತ ಹೆಬ್ಬಾರ್-8762924271 (what’s app only)