ಎಸ್ಬಿಐ Vs ಎಚ್ಡಿಎಫ್ಸಿ ಬ್ಯಾಂಕ್ Vs ಕೆನರಾ ಬ್ಯಾಂಕ್ Vs ಬ್ಯಾಂಕ್ ಆಫ್ ಬರೋಡಾ ಇತ್ತೀಚಿನ ಬಡ್ಡಿ ದರ ಇಲ್ಲಿದೆ
ಭಾರತದ ಪ್ರಮುಖ ಬ್ಯಾಂಕ್ಗಳಾದ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಎಚ್ಡಿಎಫ್ಸಿ ಬ್ಯಾಂಕ್ನ ಪರಿಷ್ಕೃತ ಎಫ್ಡಿ ಬಡ್ಡಿ ದರಗಳ ಹೋಲಿಕೆ ಇಲ್ಲಿದೆ.
ಕೆನರಾ ಬ್ಯಾಂಕ್ನಿಂದ ಈಚೆಗೆ ವಿವಿಧ ಮೆಚ್ಯೂರಿಟಿ ಅವಧಿಯ ಫಿಕ್ಸೆಡ್ ಡೆಪಾಸಿಟ್ಸ್ (Fixed Deposits) ಅವಧಿಯ ಬಡ್ಡಿ ಅವಧಿಯನ್ನು 25 ಬೇಸಿಸ್ ಪಾಯಿಂಟ್ಸ್ ತನಕ ಏರಿಕೆ ಮಾಡಿ, ಪರಿಷ್ಕರಿಸಲಾಗಿದೆ. ಪರಿಷ್ಕೃತ ದರವು ಮಾರ್ಚ್ 1, 2022ರಿಂದ ಜಾರಿಗೆ ಬಂದಿದೆ. ಕಳೆದ ತಿಂಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India), ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾದಿಂದ ಟರ್ಮ್ ಡೆಪಾಸಿಟ್ಸ್ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಲಾಗಿದೆ. ಮೊತ್ತ, ಅವಧಿ ಹಾಗೂ ಠೇವಣಿ ಮಾಡುವವರ ವಿಧದ ಮೇಲೆ ಫಿಕ್ಸೆಡ್ ಡೆಪಾಸಿಟ್ಸ್ ಮೇಲಿನ ಬಡ್ಡಿ ದರವು ಬದಲಾವಣೆ ಆಗುತ್ತದೆ. ಆದ್ದರಿಂದ ಹೂಡಿಕೆ ಮಾಡುವ ಮೊದಲಿಗೆ ವಿವಿಧ ಬ್ಯಾಂಕ್ಗಳ ಎಫ್.ಡಿ.ಗಳ ಬಡ್ಡಿ ದರವನ್ನು ಹೋಲಿಕೆ ಮಾಡುವುದು ಬಹಳ ಮುಖ್ಯ. ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಎಸ್ಬಿಐ ಮತ್ತು ಎಚ್ಡಿಎಫ್ಸಿ ಬ್ಯಾಂಕ್ನ ಎಫ್.ಡಿ. ದರಗಳನ್ನು ಈ ಲೇಖನದಲ್ಲಿ ಹೋಲಿಕೆ ಮಾಡಲಾಗಿದೆ.
ಕೆನರಾ ಬ್ಯಾಂಕ್ ಈಚಿನ ಎಫ್ಡಿ ಬಡ್ಡಿ ದರ ಕೆನರಾ ಬ್ಯಾಂಕ್ನಿಂದ ಈಚಿನ ಪರಿಷ್ಕರಣೆ ನಂತರ 7 ದಿನದಿಂದ 45 ದಿನಗಳ ಅವಧಿಗೆ ಬಡ್ಡಿ ದರ ಶೇ 2.90ರಷ್ಟಿದೆ. 46ರಿಂದ 90 ದಿನಗಳ ತನಕ, 91ರಿಂದ 179 ದಿನಗಳ ತನಕ ಮತ್ತು 180 ದಿನಗಳಿಂದ 1 ವರ್ಷದೊಳಗೆ ಕ್ರಮವಾಗಿ ಶೇ 3.9, 3.95 ಹಾಗೂ 4.40 ದರದಲ್ಲಿ ಬಡ್ಡಿ ದರ ನೀಡುತ್ತದೆ. 1 ವರ್ಷಕ್ಕೆ ಮೆಚ್ಯೂರ್ ಆಗುವ ಎಫ್ಡಿ ಶೇ 5.1ರಷ್ಟು, 1ರಿಂದ ಎರಡು ವರ್ಷಕ್ಕೆ ಶೇ 5.15ರಷ್ಟಿದೆ. 2ರಿಂದ 3 ವರ್ಷಕ್ಕೆ ಬಡ್ಡಿ ಶೇ 5.20, 3ರಿಂದ 5 ವರ್ಷ ಶೇ 5.45, 5ರಿಂದ 10 ವರ್ಷಗಳ ಅವಧಿಗೆ ಶೇ 5.5ರಷ್ಟು ಬಡ್ಡಿ ದರ ಇದೆ.
ಬ್ಯಾಂಕ್ ಆಫ್ ಬರೋಡ ಎಫ್ಡಿ ಮೇಲಿನ ಬಡ್ಡಿ ದರ ಬ್ಯಾಂಕ್ ಆಫ್ ಬರೋಡದಿಂದ ಫೆಬ್ರವರಿ 25ನೇ ತಾರೀಕಿನಿಂದ ಎಫ್ಡಿ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಲಾಗಿದೆ. ಈಚಿನ ಪರಿಷ್ಕರಣೆ ನಂತರ 7 ದಿನದಿಂದ 45 ದಿನಗಳ ಅವಧಿಗೆ ಬಡ್ಡಿ ದರ ಶೇ 2.80ರಷ್ಟಿದೆ. 46ರಿಂದ 180 ದಿನಗಳ ತನಕ ಮತ್ತು 180 ದಿನಗಳಿಂದ 1 ವರ್ಷದೊಳಗೆ ಕ್ರಮವಾಗಿ ಶೇ 3.7 ಹಾಗೂ 5ರ ದರದಲ್ಲಿ ಬಡ್ಡಿ ದರ ನೀಡುತ್ತದೆ. 1 ವರ್ಷಕ್ಕೆ ಮೆಚ್ಯೂರ್ ಆಗುವ ಎಫ್ಡಿ ಶೇ 5ರಷ್ಟು, 1 ವರ್ಷ ಮೇಲ್ಪಟ್ಟು 3 ವರ್ಷದ ತನಕ ಶೇ 5.1ರಷ್ಟಿದೆ. ದೀರ್ಘಾವಧಿಗೆ 3 ವರ್ಷದಿಂದ 10 ವರ್ಷಕ್ಕೆ ಬಡ್ಡಿ ಶೇ 5.25ರಷ್ಟು ಬಡ್ಡಿ ದರ ಇದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿ ದರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು 7 ದಿನದಿಂದ 10 ವರ್ಷಗಳ ತನಕ ಅವಧಿಗೆ ಶೇ 2.9ರಿಂದ ಶೇ 5.5ರ ತನಕ ಬಡ್ಡಿ ದರವನ್ನು ಸಾಮಾನ್ಯ ಗ್ರಾಹಕರಿಗೆ ನೀಡುತ್ತದೆ. ಹಿರಿಯ ನಾಗರಿಕರಿಗೆ 50 ಬೇಸಿಸ್ ಪಾಯಿಂಟ್ಸ್ ಹೆಚ್ಚು ದೊರೆಯಲಿದ್ದು, ಈ ಠೇವಣಿಗಳ ಮೇಲೆ ಶೇ 3.4ರಿಂದ ಶೇ 6.30ರ ತನಕ ಬಡ್ಡಿ ಸಿಗುತ್ತದೆ. ಫೆಬ್ರವರಿ 15, 2022ರಿಂದ ಅನ್ವಯ ಆಗುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್ ಈಚಿನ ಎಫ್ಡಿ ದರ 7 ದಿನದಿಂದ 10 ವರ್ಷಗಳ ಮಧ್ಯೆ ಮೆಚ್ಯೂರ್ ಆಗುವ ವಿವಿಧ ಅವಧಿಯ ಠೇವಣಿಗೆ ಎಚ್ಡಿಎಫ್ಸಿ ಬ್ಯಾಂಕ್ನಿಂದ ಶೇ 2.50ರಿಂದ ಶೇ 5.60 ತನಕ ಬಡ್ಡಿ ನೀಡಲಾಗುತ್ತದೆ. ಇದೇ ಅವಧಿಯಲ್ಲಿ ಹಿರಿಯ ನಾಗರಿಕರಿಗೆ ಶೇ 3ರಿಂದ ಶೇ 6.35ರ ಬಡ್ಡಿ ದರ ಅನ್ವಯ ಆಗುತ್ತದೆ. ಫೆಬ್ರವರಿ 14ನೇ ತಾರೀಕಿನಿಂದ ಈ ದರ ಜಾರಿಗೆ ಬಂದಿದೆ.
ಇದನ್ನೂ ಓದಿ: SBI FD vs Post Office FD: ಎಸ್ಬಿಐ ವರ್ಸಸ್ ಪೋಸ್ಟ್ ಆಫೀಸ್ ಎಫ್ಡಿ ಬಡ್ಡಿ ದರದಲ್ಲಿ ಯಾವುದು ಉತ್ತಮ ಆಯ್ಕೆ