AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Savings Plan: ಮೊದಮೊದಲ ಸಂಬಳ ಮಜಾ ಮಾಡಿದ ನಂತರ ಈ 4 ಸಂಗತಿಗಳ ಕಡೆಗೆ ಗಮನ ನೀಡದಿದ್ದರೆ ಹೇಗೆ?

Savings plan for young earners: ಮೊದಲ ಸಂಬಳ ಬಂದ ಮೇಲೆ ತಮ್ಮ ಸಂಬಳದಲ್ಲಿ ಅದಕ್ಕೆ- ಇದಕ್ಕೆ ಖರ್ಚು ಮಾಡಬೇಕು ಎಂದು ಯುವಜನರು ಅಂದುಕೊಳ್ಳುತ್ತಾರೆ. ಆ ನಂತರದ ಆರು ತಿಂಗಳ ಒಳಗಾಗಿ ಭವಿಷ್ಯದ ಹಣಕಾಸು ಯೋಜನೆಗಳಿಗೆ ಆಲೋಚನೆ ಮಾಡಲೇಬೇಕು. ಅದು ಹೇಗೆ ಮತ್ತು ಯಾವುದಕ್ಕೆ ಎಂಬ ವಿವರ ಹೀಗಿದೆ.

Savings Plan: ಮೊದಮೊದಲ ಸಂಬಳ ಮಜಾ ಮಾಡಿದ ನಂತರ ಈ 4 ಸಂಗತಿಗಳ ಕಡೆಗೆ ಗಮನ ನೀಡದಿದ್ದರೆ ಹೇಗೆ?
ಪ್ರಾತಿನಿಧಿಕ ಚಿತ್ರ
Srinivas Mata
|

Updated on:Apr 13, 2021 | 6:51 PM

Share

ಮೊದಲ ಸಂಬಳ ಪಡೆದ ಕ್ಷಣ ಅನ್ನೋದು ಮರೆಯೋದಿಕ್ಕೆ ಸಾಧ್ಯವಿಲ್ಲದ್ದು. ಅದಕ್ಕೂ ಮುನ್ನ ಹಾಗೂ ನಂತರ ಅದೆಷ್ಟೇ ಹಣ ನೋಡಿದರೂ ಮೊದಲ ಸಂಬಳದ ಮುಂದೆ ಅವೆಲ್ಲ ಸಮವಿಲ್ಲ ಬಿಡಿ. ಆ ದುಡಿಮೆಯ ಗಳಿಕೆಯಲ್ಲಿ ಕುಟುಂಬ ಸದಸ್ಯರಿಗೆ ಗಿಫ್ಟು, ದೇವರ ಹುಂಡಿಗೆ ಕಾಣಿಕೆ, ಗೆಳೆಯ/ಗೆಳತಿಯರಿಗೆ ಪಾರ್ಟಿ, ಇಷ್ಟಪಟ್ಟ ಬಟ್ಟೆ, ಬೈಕ್, ಫೋನ್… ಹೀಗೆ ಏನೆಲ್ಲವನ್ನು ಆಲೋಚನೆ ಮಾಡಿಟ್ಟುಕೊಂಡಿರುತ್ತೀರಿ. ಇವೆಲ್ಲ ಕೆಲಸಕ್ಕೆ ಸೇರಿದ ಮೂರು ತಿಂಗಳು, ಗರಿಷ್ಠ ಅಂದರೆ ಆರು ತಿಂಗಳಳೊಳಗೆ ಮಾಡಿ ಮುಗಿಸಿಕೊಂಡು ಬಿಡಬೇಕು. ಆ ನಂತರ ಭವಿಷ್ಯದ ಬಗ್ಗೆ ಯೋಜನೆ ಆರಂಭಿಸಬೇಕು. ಮದುವೆ, ಮನೆ ಖರೀದಿ, ಕಾರು ಮುಂತಾದವುಗಳ ಬಗ್ಗೆ ಪ್ಲ್ಯಾನಿಂಗ್ ಇಲ್ಲದಿದ್ದಲ್ಲಿ ಹೇಗೆ?

ಯುವ ಮಿತ್ರರು ತಮ್ಮ ಗಳಿಕೆ ಹಣದಲ್ಲಿ ಮಾಡಬೇಕಾದ ನಾಲ್ಕು ಕೆಲಸಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗುತ್ತಿದೆ. ಏನು ಆ ನಾಲ್ಕು ಕೆಲಸ ಎಂದು ತಿಳಿಯುವುದಕ್ಕೆ ಮುಂದೆ ಓದಿ.

1) ಶಿಕ್ಷಣ ಸಾಲವನ್ನು ಮೊದಲಿಗೆ ತೀರಿಸಿ ಶೈಕ್ಷಣಿಕ ಸಾಲಕ್ಕೆ ಕಟ್ಟುವ ಬಡ್ಡಿಗೆ ಸೆಕ್ಷನ್ 80E ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ. ಆದ್ದರಿಂದ ಒಟ್ಟಾರೆ ಬಡ್ಡಿ ದರದಲ್ಲಿ ಇಳಿಕೆ ಆಗುತ್ತದೆ. ಆದ್ದರಿಂದ ಶೈಕ್ಷಣಿಕ ಸಾಲದ ಅಸಲು ಮೊತ್ತವನ್ನು ವಾಪಸ್ ಕಟ್ಟುವುದಕ್ಕೆ ಯುವಜನರು ತಡ ಮಾಡುತ್ತಾರೆ. ಆದರೆ ತಜ್ಞರು ಹೇಳುವ ಪ್ರಕಾರ, ಯಾವುದೇ ಸಾಲ ಇದ್ದಲ್ಲಿ ಮೊದಲಿಗೆ ಅದನ್ನು ತೀರಿಸಿ. ದೀರ್ಘಾವಧಿಗೆ ಎಜುಕೇಷನ್ ಲೋನ್ ಕಟ್ಟುತ್ತಾ ಸಾಗಿದರೆ ಬಡ್ಡಿಯನ್ನು ಹೆಚ್ಚಿಗೆ ಕಟ್ಟಬೇಕಾಗುತ್ತದೆ. ಶೈಕ್ಷಣಿಕ ಸಾಲವನ್ನು ತೀರಿಸಿಕೊಂಡರೆ ಇತರ ಹಣಕಾಸಿನ ಗುರಿಯೆಡೆಗೆ ಗಮನ ಹರಿಸಬಹುದು. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಏನೆಂದರೆ, ಆ ಸಾಲದ ವೆಚ್ಚವನ್ನು ಆದಾಯ ತೆರಿಗೆ ಅನುಕೂಲಗಳ ಜತೆಗೆ ಹೋಲಿಸಿ, ಆ ನಂತರ ನಿರ್ಧಾರ ತೆಗೆದುಕೊಳ್ಳಬೇಕು.

2) ತುರ್ತು ನಿಧಿ (ಎಮರ್ಜೆನ್ಸಿ ಫಂಡ್) ಮಾಡಿಟ್ಟುಕೊಳ್ಳಿ ತುರ್ತು ನಿಧಿಯನ್ನು ಇರಿಸಿಕೊಳ್ಳಬೇಕು ಎಂಬ ಬಗ್ಗೆ ಕೊರೊನಾ ಬಿಕ್ಕಟ್ಟು ನಮ್ಮೆಲ್ಲರಿಗೂ ಪಾಠವನ್ನು ಕಲಿಸಿದೆ. ಉದ್ಯೋಗ ನಷ್ಟ, ಆಸ್ಪತ್ರೆಗೆ ಸೇರಿಕೊಳ್ಳಬೇಕಾದ ಅನಿರೀಕ್ಷಿತ ಸ್ಥಿತಿ ಇಂಥದ್ದಕ್ಕೆ ಸಿದ್ಧವಾಗಿರಬೇಕು. ಆರ್ಥಿಕ ಸಲಹೆಗಾರರು ಹೇಳುವ ಪ್ರಕಾರ, ಒಬ್ಬ ವ್ಯಕ್ತಿಯ ಖರ್ಚಿನ ಆರು ಪಟ್ಟು ಮೊತ್ತವನ್ನು ಎಮರ್ಜೆನ್ಸಿ ಫಂಡ್ ಅಂತ ಇಟ್ಟುಕೊಂಡಿರಬೇಕು. ಒಂದು ವೇಳೆ ಉದ್ಯೋಗ ಕಳೆದುಕೊಂಡರೂ ಶೈಕ್ಷಣಿಕ ಸಾಲ ಹಿಂತಿರುಗಿಸುವುದಕ್ಕೆ ಸಹಾಯ ಆಗುತ್ತದೆ. ಆ ಮೂಲಕ ಸುಸ್ತಿದಾರ ಆಗುವುದರಿಂದ ತಪ್ಪಿಸುತ್ತದೆ. ಒಂದು ವೇಳೆ ಸಾಲ ಸರಿಯಾದ ಸಮಯಕ್ಕೆ ವಾಪಸ್ ಮಾಡದಿದ್ದಲ್ಲಿ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಭವಿಷ್ಯದಲ್ಲಿ ಹೋಮ್ ಲೋನ್ ಅಥವಾ ಪರ್ಸನಲ್ ಲೋನ್ ಪಡೆಯುವುದಕ್ಕೆ ಸಮಸ್ಯೆ ಆಗುತ್ತದೆ.

3) ನಿವೃತ್ತಿ ಯೋಜನೆಯನ್ನು ಮಾಡಿಟ್ಟುಕೊಳ್ಳಿ ನಿವೃತ್ತಿ ಎಂಬುದು ಯುವ ಮನಸ್ಸುಗಳಿಗೆ ಹೊಳೆಯುವ ಕೊನೆ ಆಲೋಚನೆ. ಆದರೆ ನಿವೃತ್ತಿ ಬದುಕಿಗೆ ತುಂಬ ಬೇಗ ಪ್ಲ್ಯಾನ್ ಮಾಡಿದರೆ, ದೊಡ್ಡ ಮೊತ್ತವನ್ನು ಒಗ್ಗೂಡಿಸಬಹುದು. ತಿಂಗಳಿಗೆ ಸಣ್ಣ ಮೊತ್ತದಿಂದಲೇ ಶುರು ಮಾಡಬಹುದು. ಆದರೆ ಆ ಸಣ್ಣ ಮೊತ್ತವೇ ಸೇರಿಕೊಳ್ಳುತ್ತಾ ದೀರ್ಘಾವಧಿಯಲ್ಲಿ ದೊಡ್ಡ ಗಂಟಾಗುತ್ತದೆ. ಹೊಸದಾಗಿ ಉದ್ಯೋಗಕ್ಕೆ ಸೇರಿದವರು ನಿವೃತ್ತಿ ಯೋಜನೆಗೂ ದೀರ್ಘಾವಧಿಯಲ್ಲಿ ಸ್ವಲ್ಪ ಮಟ್ಟಿಗೆ ಹಣ ಉಳಿತಾಯ ಮಾಡುವ ಕುರಿತು ಆಲೋಚಿಸಬೇಕು ಎನ್ನುತ್ತಾರೆ ತಜ್ಞರು. ಆದ್ದರಿಂದ ಮೊತ್ತ ಎಷ್ಟೇ ಕಡಿಮೆ ಇದ್ದರೂ ಪರವಾಗಿಲ್ಲ, ಪಿಪಿಎಫ್, ಎನ್​​ಪಿಎಸ್​ನಂಥದ್ದರ ಮೇಲೆ ಬಹಳ ಬೇಗ ಹೂಡಿಕೆ ಆರಂಭಿಸುವುದು ಅತ್ಯುತ್ತಮ ಎನ್ನುತ್ತಾರೆ.

4) ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿ ಯುವ ಜನರಿಗೆ ಅತಿ ದೊಡ್ಡ ಅನುಕೂಲ ಏನೆಂದರೆ, ಅವರ ವಯಸ್ಸು. ನಿವೃತ್ತಿಗೆ ಅಂತ ಪ್ಲ್ಯಾನ್ ಮಾಡಿಕೊಂಡು, ಈಕ್ವಿಟಿಯಲ್ಲಿ ದೀರ್ಘಾವಧಿಯಲ್ಲಿ ಹೂಡಿಕೆ ಮಾಡುತ್ತಾ ಸಾಗಿದರೆ ಸಣ್ಣ ಮೊತ್ತದ ಉಳಿತಾಯವೂ ಒಳ್ಳೆ ರಿಟರ್ನ್ಸ್ ನೀಡುತ್ತದೆ. ಉದಾಹರಣೆಗೆ, 23 ವರ್ಷದ ವ್ಯಕ್ತಿಯೊಬ್ಬರು ಎಸ್​ಐಪಿಯಲ್ಲಿ ಪ್ರತಿ ತಿಂಗಳು 1000 ರೂಪಾಯಿ ಹೂಡಿಕೆ ಮಾಡುತ್ತಾ ಹೋದರೆ, ವರ್ಷಕ್ಕೆ ಶೇಕಡಾ 10ರಂತೆ ಎಸ್​ಐಪಿ ಮೊತ್ತ ಹೆಚ್ಚಿಸುತ್ತಾ ಸಾಗಿದರೆ ಶೇ 12ರಷ್ಟು ರಿಟರ್ನ್ಸ್ ಎಂದು ಅಂದುಕೊಂಡರೆ 60ನೇ ವರ್ಷದಲ್ಲಿ ಒಟ್ಟು ಮೊತ್ತ ರೂ. 2.10 ಕೋಟಿ ಆಗುತ್ತದೆ. ಈ ಮೇಲಿನ ಉದಾಹರಣೆಯಲ್ಲಿ ಈ ವ್ಯಕ್ತಿ ತನ್ನ 37 ವರ್ಷದ ದುಡಿಮೆ ಜೀವನದಲ್ಲಿ ರೂ. 4.04 ಲಕ್ಷ ಹೂಡಿಕೆ ಮಾಡಿರುತ್ತಾರೆ. ಬಾಕಿ ಮೊತ್ತ ರಿಟರ್ನ್ಸ್​​ನಿಂದ ಬರುತ್ತದೆ. ಈಕ್ವಿಟಿ ಅಲೋಕೇಷನ್​ಗೆ ಸಂಬಂಧಿಸಿದಂತೆ ತಜ್ಞರು ಸಲಹೆ ನೀಡುವ ಸೂತ್ರ ಏನೆಂದರೆ, 100- ವಯಸ್ಸು. ಇದರ ಹಿಂದಿನ ತರ್ಕ ಏನೆಂದರೆ, ಯುವ ಜನರಿಗೆ ಬಹಳ ಸಮಯ ಇರುತ್ತದೆ. ಅವರು ಮಾರುಕಟ್ಟೆ ಏರುಪೇರನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಈ ಮೇಲ್ಕಂಡ ಸೂತ್ರದ ಪ್ರಕಾರ, 23 ವರ್ಷದ ಉದ್ಯೋಗಿ ಶೇ 77ರಷ್ಟನ್ನು ಈಕ್ವಿಟಿಯಲ್ಲಿ ತೊಡಗಿಸಬಹುದು.

ಇದನ್ನೂ ಓದಿ: ಷೇರು ಮಾರ್ಕೆಟ್​ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್

(Young earners must keep in mind these 4 things about financial planning.)

Published On - 6:42 pm, Tue, 13 April 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ