Adani Green Energy: ಅದಾನಿ ಗ್ರೂಪ್​ನಿಂದ ಎಸ್​ಬಿ ಎನರ್ಜಿ ಇಂಡಿಯಾದ 26 ಸಾವಿರ ಕೋಟಿ ರೂ. ಮೌಲ್ಯದ ಸ್ವಾಧೀನ ಪೂರ್ಣ

| Updated By: Srinivas Mata

Updated on: Oct 04, 2021 | 2:38 PM

ಎಸ್​ಬಿ ಎನರ್ಜಿ ಇಂಡಿಯಾವನ್ನು ಅದಾನಿ ಗ್ರೀನ್​ನಿಂದ 26,000 ಕೋಟಿ ರೂಪಾಯಿಗೆ ಸ್ವಾಧೀನ ಮಾಡಿಕೊಳ್ಳಲಾಗಿದೆ. ಆ ಪ್ರಕ್ರಿಯೆ ಸಂಪೂರ್ಣಗೊಂಡಿದೆ ಎಂದು ಕಂಪೆನಿ ತಿಳಿಸಿದೆ.

Adani Green Energy: ಅದಾನಿ ಗ್ರೂಪ್​ನಿಂದ ಎಸ್​ಬಿ ಎನರ್ಜಿ ಇಂಡಿಯಾದ 26 ಸಾವಿರ ಕೋಟಿ ರೂ. ಮೌಲ್ಯದ ಸ್ವಾಧೀನ ಪೂರ್ಣ
ಸಾಂದರ್ಭಿಕ ಚಿತ್ರ
Follow us on

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಸೋಮವಾರದಂದು ತಿಳಿಸಿರುವ ಪ್ರಕಾರ, ಎಸ್​ಬಿ ಎನರ್ಜಿ ಇಂಡಿಯಾವನ್ನು 350 ಕೋಟಿ ಅಮೆರಿಕನ್ ಡಾಲರ್​ಗೆ (26,000 ಕೋಟಿ ರೂಪಾಯಿ) ಸ್ವಾಧೀನಪಡಿಸಿಕೊಂಡಿದೆ. ವಿಶ್ವದಲ್ಲೇ ಅತಿದೊಡ್ಡ ಸೌರ ವಿದ್ಯುತ್​ ಡೆವಲಪರ್ AGELನಿಂದ ಎಸ್​ಬಿ ಎನರ್ಜಿ ಹೋಲ್ಡಿಂಗ್ಸ್​ ಲಿಮಿಟೆಡ್ (ಎಸ್​ಬಿ ಎನರ್ಜಿ ಇಂಡಿಯಾ) ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ. ಸಂಪೂರ್ಣ- ನಗದು ವ್ಯವಹಾರದ ನಿರ್ದಿಷ್ಟ ಒಪ್ಪಂದಕ್ಕೆ ಮೇ 18, 2021ಕ್ಕೆ ಸಹಿ ಹಾಕಲಾಗಿತ್ತು, ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ವಹಿವಾಟಿನೊಂದಿಗೆ ಎಸ್​​ಬಿ ಎನರ್ಜಿ ಇಂಡಿಯಾವು ಎಜಿಇಎಲ್​ನ ಶೇ 100ರಷ್ಟು ಅಂಗಸಂಸ್ಥೆಯಾಗಿದೆ. ಇದಕ್ಕೂ ಮುಂಚೆ ಇದು ಜಪಾನ್​- ಮೂಲದ ಸಾಫ್ಟ್​ಬ್ಯಾಂಕ್​ ಗ್ರೂಪ್​ ಕಾರ್ಪ್ ಮತ್ತು ಭಾರ್ತಿ ಗ್ರೂಪ್​ನ 80:20ರ ಜಂಟಿ ಉದ್ಯಮವಾಗಿತ್ತು. ಎಸ್​ಬಿ ಎನರ್ಜಿ ಇಂಡಿಯಾದ ಎಂಟರ್​ಪ್ರೈಸ್ ಈ ವಹಿವಾಟು ಮೌಲ್ಯಮಾಪನವು 350 ಕೋಟಿ ಅಮೆರಿಕನ್ ಡಾಲರ್ (ಅಂದಾಜು 26,000 ಕೋಟಿ ರೂಪಾಯಿ) ಆಗಲಿದ್ದು, ಭಾರತದ ನವೀಕರಣ ಇಂಧನ ಕ್ಷೇತ್ರದಲ್ಲಿ ಅತಿದೊಡ್ಡ ಸ್ವಾಧೀನ ಪ್ರಕ್ರಿಯೆ ಆಗಿದೆ ಎಂದು ಹೇಳಲಾಗಿದೆ.

ಕಳೆದ ವಾರವಷ್ಟೇ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಘೋಷಣೆ ಮಾಡಿದಂತೆ, ಅದಾನಿ ಸಮೂಹದಿಂದ ಮುಂದಿನ 10 ವರ್ಷದಲ್ಲಿ 2000 ಕೋಟಿ ಅಮೆರಿಕನ್ ಡಾಲರ್​ಗಳನ್ನು ನವೀಕೃತ ಎನರ್ಜಿ ಉತ್ಪಾದನೆಗಾಗಿ ಬಳಸಲಾಗುತ್ತದೆ ಎಂದಿದ್ದಾರೆ. ಈ ವಹಿವಾಟಿನೊಂದಿಗೆ ಅದಾನಿ ಗ್ರೀನ್​ ಎನರ್ಜಿಯು ಜಾಗತಿಕ ಮಟ್ಟದ ನಾಯಕತ್ವ ವಹಿಸುವುದಕ್ಕೆ ಸಮೀಪದಲ್ಲಿದೆ ಎಂದು ಕಂಪೆನಿಯು ಎಂ.ಡಿ., ಮತ್ತು ಸಿಇಒ ವಿನೀತ್ ಎಸ್​. ಜೈನ್ ಹೇಳಿದ್ದಾರೆ. “ಈ ಉನ್ನತ ಗುಣಮಟ್ಟದ ದೊಡ್ಡ ಪ್ರಮಾಣದ ಆಸ್ತಿಯನ್ನು ಎಸ್​ಬಿ ಎನರ್ಜಿ ಇಂಡಿಯಾದಿಂದ ಸೇರ್ಪಡೆ ಮಾಡಿಕೊಂಡಿರುವುದರಿಂದ ಕಾರ್ಬನ್ ನ್ಯೂಟ್ರಲ್ ಭವಿಷ್ಯವನ್ನು ಸೃಷ್ಟಿಸುವುದಕ್ಕೆ ಇರುವ ಅದಾನಿ ಗ್ರೀನ್ ಉದ್ದೇಶ ವೇಗ ದೊರಕಿಸುತ್ತದೆ. ನಮ್ಮ ನವೀಕೃತ ಇಂಧನ ಫೌಂಡೇಷನ್​ಗಳು ಹೊಸ ಕೈಗಾರಿಕೆಗಳ ಎಕೋಸಿಸ್ಟಮ್ ಸಕ್ರಿಯಗೊಳಿಸುತ್ತದೆ. ಇದರ ಮೂಲಕ ಹಲವು ವಲಯಗಳಲ್ಲಿ ಉದ್ಯೋಗ ಸೃಷ್ಟಿಸುವ ನಿರೀಕ್ಷಿಸಬಹುದು,” ಎಂದು ಹೇಳಲಾಗಿದೆ.

ಎಸ್​ಬಿ ಎನರ್ಜಿ ಇಂಡಿಯಾವು ಭಾರತದ ನಾಲ್ಕು ರಾಜ್ಯಗಳಲ್ಲಿ ಅದರ ಎಸ್​ಪಿವಿಗಳ ಮೂಲಕ 5GW ನವೀಕೃತ ಆಸ್ತಿಯನ್ನು ಹೊಂದಿದೆ. ಪೋರ್ಟ್​ಫೋಲಿಯೋವು 1,700 MW ಕಾರ್ಯ ನಿರ್ವಹಣೆಯ ನವೀಕೃತ ಆಸ್ತಿ, 2554 MW ನಿರ್ಮಾಣ ಹಂತದಲ್ಲಿ ಇರುವಂಥದ್ದು ಹಾಗೂ 700 MW ಆಸ್ತಿ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದೆ. ಸೌರ ಸಾಮರ್ಥ್ಯವು ಒಟ್ಟಾರೆಯಲ್ಲಿ ಪೋರ್ಟ್​ಫೋಲಿಯೋದ ಶೇ 84ರಷ್ಟು (4180 MW), ಪವನ- ಸೌರ ಹೈಬ್ರಿಡ್ ಸಾಮರ್ಥ್ಯ ಶೇ 9ರಷ್ಟು (450 MW) ಹಾಗೂ ಪವನ ಶಕ್ತಿ ಸಾಮರ್ಥ್ಯವು ಶೇ 7ರಷ್ಟಿದೆ (324 MW).

15 ಯೋಜನೆಗಳಲ್ಲಿ ವಿಭಜನೆ ಆಗಿ, ಇದರೊಂದಿಗೆ ಸರಾಸರಿ ಯೋಜನೆ 330 MW ಆಗಿದೆ. ಭಾರತದ ಅತ್ಯಂತ ಹೆಚ್ಚಿನ ಗುಣಮಟ್ಟದ ನವೀಕೃತ ಪೋರ್ಟ್​ಫೋಲಿಯೋಗಳಲ್ಲಿ ಇದೂ ಒಂದಾಗಿದೆ. ಹಲವು ಆಸ್ತಿಗಳು ಸೋಲಾರ್- ಪಾರ್ಕ್ ಆಧಾರಿತ ಪ್ರಾಜೆಕ್ಟ್​ಗಳು ಮತ್ತು ಅತ್ಯುತ್ತಮ ಆಡಳಿತ ಗುಣಮಟ್ಟ, ಯೋಜನೆ ಅಭಿವೃದ್ಧಿ, ನಿರ್ಮಾಣ ಮತ್ತು ಕಾರ್ಯ ಚಟುವಟಿಕೆ ಹಾಗೂ ನಿರ್ವಹಣೆ ಬಳಸಿ, ನಿರ್ಮಿಸಲಾಗಿದೆ. ಈ ಸ್ವಾಧೀನ ಪ್ರಕ್ರಿಯೆ ಪೂರ್ನಗೊಳ್ಳುವುದರೊಂದಿಗೆ ಎಜಿಇಎಲ್​ನ ಕಾರ್ಯ ನಿರ್ವಹಣೆ ಪೋರ್ಟ್​ಫೋಲಿಯೋ 5.4 GW ಮತ್ತು ಒಟ್ಟಾರೆ ಪೋರ್ಟ್​ಫೋಲಿಯೋ 19.8 GWಗೆ ಹೆಚ್ಚಾಗುತ್ತದೆ. ನಾಲ್ಕು ಪಟ್ಟು ಬೆಳವಣಿಗೆ ಕಂಡಂತಾಗುತ್ತದೆ ಎಂದು ಕಂಪೆನಿ ಹೇಳಿದೆ.

Published On - 2:37 pm, Mon, 4 October 21