SBI Customer Alert: ಬ್ಯಾಂಕ್​ ಗ್ರಾಹಕರು ಸೆಪ್ಟೆಂಬರ್ 30ರೊಳಗೆ ಈ ಕೆಲಸ ಮಾಡಿ ಮುಗಿಸಲೇಬೇಕು

ಪ್ಯಾನ್- ಆಧಾರ್ ಜೋಡಣೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಸೆಪ್ಟೆಂಬರ್ 30, 2021ರೊಳಗೆ ಮುಗಿಸಬೇಕು ಎಂದು ತಿಳಿಸಲಾಗಿದೆ.

SBI Customer Alert: ಬ್ಯಾಂಕ್​ ಗ್ರಾಹಕರು ಸೆಪ್ಟೆಂಬರ್ 30ರೊಳಗೆ ಈ ಕೆಲಸ ಮಾಡಿ ಮುಗಿಸಲೇಬೇಕು
ಸಾಂದರ್ಭಿಕ ಚಿತ್ರ
Follow us
TV9 Web
| Updated By: guruganesh bhat

Updated on:Aug 09, 2021 | 7:51 PM

ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಈ ಮಾಹಿತಿಯನ್ನು ಹಂಚಿಕೊಂಡಿದೆ. ಅದೇನು ಅಂದರೆ, ಯಾರು ಸೆಪ್ಟೆಂಬರ್ 30, 2021ರೊಳಗೆ ಯಾರು ಈ ನಿಯಮವನ್ನು ಪೂರ್ಣಗೊಳಿಸುವುದಿಲ್ಲವೋ ಅಂಥವರ ಬ್ಯಾಂಕಿಂಗ್ ಚಟುವಟಿಕೆ ಮೇಲೆ ಪರಿಣಾಮ ಆಗುತ್ತದೆ. ಎಸ್​ಬಿಐ ಖಾತೆದಾರರು ತಮ್ಮ ಪ್ಯಾನ್ (Permanent Account Number) ಅನ್ನು ಆಧಾರ್ ಜತೆಗೆ ಸೆಪ್ಟೆಂಬರ್ 30ನೇ ತಾರೀಕಿನೊಳಗೆ ಜೋಡಣೆ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ತಿಳಿಸಿದೆ. ಆ ಮೂಲಕ ಭವಿಷ್ಯದಲ್ಲಿ ಯಾವುದೇ ಅನನುಕೂಲ ಆಗದಂತೆ ತಡೆಯಬಹುದು ಎಂದು ಎಚ್ಚರಿಸಿದೆ. ಪ್ರತಿಯೊಬ್ಬರು ಪ್ಯಾನ್- ಆಧಾರ್ ಜೋಡಣೆ ಮಾಡಲೇಬೇಕು ಎಂದು ಬ್ಯಾಂಕ್ ತಿಳಿಸಿದೆ.

ಯಾವುದೇ ಸಮಸ್ಯೆ ಆಗಬಾರದು ಹಾಗೂ ಜತೆಗೆ ಆರಾಮದಾಯಕ ಬ್ಯಾಂಕಿಂಗ್ ಸೇವೆಗಳನ್ನು ಪಡೆಯುವುದಕ್ಕಾಗಿ ತಮ್ಮ ಪ್ಯಾನ್ ಜತೆಗೆ ಆಧಾರ್ ಜೋಡಣೆ ಮಾಡುವಂತೆ ನಮ್ಮ ಗ್ರಾಹಕರಿಗೆ ಸಲಹೆ ಮಾಡುತ್ತೇವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ಮಾಡಿದೆ. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆಗೆ ಸೆಪ್ಟೆಂಬರ್ 30, 2021 ಕೊನೆ ದಿನವಾಗಿದೆ. ಒಂದು ವೇಳೆ ಈ ದಿನವನ್ನು ಮೀರಿದರೆ ವಿಳಂಬ ಶುಲ್ಕ ಕೂಡ ಪಾವತಿಸಬೇಕಾಗಬಹುದು. ಈ ಹಿಂದೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಜೋಡಣೆಗೆ ಮಾರ್ಚ್ 31, 2021 ಅಂತಿಮ ಗಡುವಾಗಿತ್ತು. ಆ ನಂತರ ಸಿಬಿಡಿಟಿಯಿಂದ ಗಡುವನ್ನು ಜೂನ್ 30ರ ತನಕ ವಿಸ್ತರಿಸಲಾಯಿತು. ಆ ಮೇಲೆ ಸೆಪ್ಟೆಂಬರ್ 30ಕ್ಕೆ ಹೋಯಿತು.

ಪ್ಯಾನ್ ಕಾರ್ಡ್​ದಾರರು ಸೆಪ್ಟೆಂಬರ್ 30ರೊಳಗೆ ಆಧಾರ್​ಗೆ ಜೋಡಣೆ ಮಾಡದಿದ್ದಲ್ಲಿ ಪ್ಯಾನ್​ ಕಾರ್ಡ್ ಕಾರ್ಯ ನಿರ್ವಹಿಸುವುದಿಲ್ಲ. ಅಷ್ಟೇ ಅಲ್ಲ, 1000 ರೂಪಾಯಿ ದಂಡ ಕೂಡ ಹಾಕಲಾಗುತ್ತದೆ. ಈ ನಿರ್ದಿಷ್ಟ ಮೊತ್ತವನ್ನು ಸರ್ಕಾರ ನಿರ್ಧರಿಸುತ್ತದೆ. ಆದರೆ ಆ ಮೊತ್ತವು ರೂ. 1000 ದಾಟುವಂತಿಲ್ಲ. ಅಂದಹಾಗೆ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಎಂಬುದು 10 ಅಂಕಿಯ ವಿಶಿಷ್ಟ ಅಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ಇದನ್ನು ಆದಾಯ ತೆರಿಗೆ ಇಲಾಖೆಯಿಂದ ವಿತರಿಸಲಾಗುತ್ತದೆ. ಲ್ಯಾಮಿನೇಟ್ ಆಗಿರುವ ಪ್ಲಾಸ್ಟಿಕ್ ಕಾರ್ಡ್ ಜನಪ್ರಿಯವಾಗಿ ಪ್ಯಾನ್ ಕಾರ್ಡ್ ಎಂಬ ಹೆಸರು ಪಡೆದಿದ್ದು, ಇದು ಬಹಳ ಮುಖ್ಯವಾದ ಹಣಕಾಸು ದಾಖಲೆಯಾಗಿದೆ.

ಆದಾಯ ತೆರಿಗೆ ಕಾಯ್ದೆ, 1961 ಸೆಕ್ಷನ್ 139AA ಪ್ರಕಾರವಾಗಿ ಯಾರಿಗೆಲ್ಲ ಪ್ಯಾನ್ ವಿತರಿಸಲಾಗಿದೆಯೋ ಮತ್ತು ಯಾರೆಲ್ಲ ಆಧಾರ್ ಸಂಖ್ಯೆ ಪಡೆದಿದ್ದಾರೋ ಅಂಥವರೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಆಧಾರ್ ಸಂಖ್ಯೆ ಬಗ್ಗೆ ಮಾಹಿತಿ ತಿಳಿಸಬೇಕು. ಒಂದು ವೇಳೆ ವಿಫಲರಾದಲ್ಲಿ ಮುಂದೆ ಆಧಾರ್ ಸಂಖ್ಯೆ ಬಗ್ಗೆ ಮಾಹಿತಿ ನೀಡುವ ತನಕ ಅಥವಾ ಜೋಡಣೆ ಆಗುವವರೆಗೆ ಪ್ಯಾನ್ ಕಾರ್ಯ ನಿರ್ವಹಿಸಲ್ಲ. ಆಧಾರ್ ಹಾಗೂ ಪ್ಯಾನ್ ಜೋಡಣೆ ಮಾಡುವುದಕ್ಕೆ ಕೇಂದ್ರ ಸರ್ಕಾರದಿಂದ ಸೆಪ್ಟೆಂಬರ್ 30ರ ತನಕ ಕಾಲಾವಧಿ ವಿಸ್ತರಿಸಲಾಗಿದೆ.

ಇದನ್ನೂ ಓದಿ: PAN Card- Aadhaar Linking: ಪ್ಯಾನ್ ಕಾರ್ಡ್- ಆಧಾರ್ ಜೋಡಣೆಗೆ ಸೆ. 30ರ ತನಕ ಗಡುವು ವಿಸ್ತರಿಸಿದ ಕೇಂದ್ರ

(SBI Customer Alert PAN And Aadhaar Linking Should Be Complete Before September 30, 2021 )

Published On - 7:42 pm, Mon, 9 August 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ