SBI FD vs Post Office FD: ಎಸ್​ಬಿಐ ವರ್ಸಸ್ ಪೋಸ್ಟ್​ ಆಫೀಸ್​ ಎಫ್​ಡಿ ಬಡ್ಡಿ ದರದಲ್ಲಿ ಯಾವುದು ಉತ್ತಮ ಆಯ್ಕೆ

ಫಿಕ್ಸೆಡ್​ ಡೆಪಾಸಿಟ್ಸ್​ ಹೂಡಿಕೆಗೆ ಅತ್ಯುತ್ತಮ ಇನ್​ಸ್ಟ್ರುಮೆಂಟ್​. ಭಾರತದ ಮಧ್ಯಮ ವರ್ಗದ ಹೆಚ್ಚಿನ ಜನರು ಇದರಲ್ಲಿ ಹೂಡಿಕೆ ಮಾಡುವುದಕ್ಕೆ ಬಯಸುತ್ತಾರೆ. ಎಸ್​ಬಿಐ ವರ್ಸಸ್ ಪೋಸ್ಟ್​ ಆಫೀಸ್ ಇವೆರಡರ ಪೈಕಿ ಎಫ್​ಡಿ ಹೂಡಿಕೆಗೆ ಯಾವುದು ಉತ್ತಮ ಎಂಬ ಮಾಹಿತಿ ಇಲ್ಲಿದೆ.

SBI FD vs Post Office FD: ಎಸ್​ಬಿಐ ವರ್ಸಸ್ ಪೋಸ್ಟ್​ ಆಫೀಸ್​ ಎಫ್​ಡಿ ಬಡ್ಡಿ ದರದಲ್ಲಿ ಯಾವುದು ಉತ್ತಮ ಆಯ್ಕೆ
ಸಾಂದರ್ಭಿಕ ಚಿತ್ರ
Edited By:

Updated on: Feb 28, 2022 | 11:26 AM

ಭಾರತದ ಮಧ್ಯಮ ವರ್ಗದವರ ಪಾಲಿಗೆ ಬಹಳ ಹಿಂದಿನಿಂದಲೂ ಫಿಕ್ಸೆಡ್ ಡೆಪಾಸಿಟ್ಸ್ (Fixed Deposits) ಮೊದಲ ಆಯ್ಕೆಯ ಹೂಡಿಕೆ ಆಗಿದೆ. ಏನೇ ಕಡಿಮೆ ರಿಟರ್ನ್ ಅಂತಾದರೂ ಇತರ ಹೂಡಿಕೆ ಆಯ್ಕೆಗಳಿಗೆ ಹೋಲಿಸಿದಲ್ಲಿ ಅಪಾಯ ಇಲ್ಲ ಎಂಬ ಕಾರಣದಿಂದಲೇ ಎಫ್​.ಡಿ. ಆದ್ಯತೆ ಆಗಿದೆ. ಗ್ರಾಹಕರಿಗೆ ಅಗತ್ಯಕ್ಕೆ ತಕ್ಕಂತೆ ಅಲ್ಪಾವಧಿಗೋ ಅಥವಾ ದೀರ್ಘಾವಧಿಗೋ ಫಿಕ್ಸೆಡ್ ಡೆಪಾಸಿಟ್ಸ್ ಮಾಡಬಹುದು. ಬ್ಯಾಂಕ್​ಗಳನ್ನು ಹೊರತುಪಡಿಸಿ, ಪೋಸ್ಟ್​ ಆಫೀಸ್​ನಿಂದಲೂ (Post Office) ಎಫ್​ಡಿ ಯೋಜನೆಗಳನ್ನು ಒದಗಿಸಲಾಗುತ್ತದೆ. ಎಷ್ಟೋ ಪ್ರಮುಖ ಬ್ಯಾಂಕ್​ಗಳಿಗಿಂತ ಪೋಸ್ಟ್​​ ಆಫೀಸ್​ನ ಬಡ್ಡಿ ದರ ಉತ್ತಮವಾಗಿದೆ. ದರಗಳನ್ನು ತ್ರೈಮಾಸಿಕವಾಗಿ ಪರಿಷ್ಕರಣೆ ಮಾಡಲಾಗುತ್ತದೆ. ಮಾರುಕಟ್ಟೆ ಪರಿಸ್ಥಿತಿ ಹಾಗೂ ಸರ್ಕಾರದ ನೀತಿಗೆ ಅನುಗುಣವಾಗಿ ಇದು ಬದಲಾವಣೆ ಆಗುತ್ತದೆ.

ಅಪಾಯ ತೆಗೆದುಕೊಳ್ಳುವುದಕ್ಕೆ ಸಿದ್ಧರಿಲ್ಲ ಎನ್ನುವವರಿಗೆ ಎಫ್​ಡಿಯನ್ನು ಹೊರತುಪಡಿಸಿ ಇರುವ ಮತ್ತೊಂದು ಆಯ್ಕೆಯೆಂದರೆ, ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್​ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ ಟರ್ಮ್ ಯೋಜನೆಗಳು. ಎಸ್​ಬಿಐನಿಂದ ಕನಿಷ್ಠ ಅವಧಿ 7 ದಿನದಿಂದ ಗರಿಷ್ಠ 10 ವರ್ಷದ ತನಕ ಎಫ್​ಡಿ ಯೋಜನೆ ಒದಗಿಸಲಾಗುತ್ತದೆ. ಅದು ಹೂಡಿಕೆ ಅಗತ್ಯದ ಮೇಲೆ ಆಧಾರವಾಗಿರುತ್ತದೆ. ಮೊದಲೇ ದೇಶದ ಅತಿ ದೊಡ್ಡ ಬ್ಯಾಂಕ್ ಎಂಬ ಅಗ್ಗಳಿಕೆ ಇರುವುದರಿಂದ ಗ್ರಾಹಕರಲ್ಲಿ ಈ ಬ್ಯಾಂಕ್​ ಬಗ್ಗೆ ಅಪರಿಮಿತವಾದ ವಿಶ್ವಾಸ ಇದೆ ಹಾಗೂ ಹಲವರಿಗೆ ಎಫ್​ಡಿ ಮಾಡುವುದಕ್ಕೆ ಎಸ್​ಬಿಐ ಮೊದಲ ಆಯ್ಕೆ ಆಗಿದೆ. ಪೋಸ್ಟ್ ಆಫೀಸ್ ಹಾಗೂ ಎಸ್​ಬಿಐ ಎರಡೂ ಎಫ್​ಡಿ ಮಾಡುವುದಕ್ಕೆ ಉತ್ತಮ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಡ್ಡಿ ದರವನ್ನು ಹೋಲಿಸಿ ನೋಡಿದಲ್ಲಿ ಯಾವುದು ಉತ್ತಮ ರಿಟರ್ನ್ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ.

ಪೋಸ್ಟ್​ ಆಫೀಸ್ ಬಡ್ಡಿ ದರ:
ಫೋಸ್ಟ್​ ಆಫೀಸ್ ಬಡ್ಡಿ ದರವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಏಪ್ರಿಲ್ 1, 2020ರಿಂದ ಅದು ಬದಲಾವಣೆ ಆಗದೆ ಹಾಗೇ ಉಳಿದುಕೊಂಡಿದ್ದು, ಒಂದು ವರ್ಷದ ಎಫ್​ಡಿ ದರ ಶೇ 5.5ರಿಂದ ಶುರುವಾಗುತ್ತದೆ. ಪೋಸ್ಟ್ ಆಫೀಸ್​ ಎಫ್​ಡಿ ಬಡ್ಡಿ ದರ ಶೇ 6.7ರ ತನಕ ದೊರೆಯುತ್ತದೆ.

– ಇಂಡಿಯಾ ಪೋಸ್ಟ್ ಎಫ್​ಡಿ ದರ 1 ವರ್ಷಕ್ಕೆ: ಶೇ 5.5

– ಇಂಡಿಯಾ ಪೋಸ್ಟ್ ಎಫ್​ಡಿ ದರ 2 ವರ್ಷಕ್ಕೆ: ಶೇ 5.5

– ಇಂಡಿಯಾ ಪೋಸ್ಟ್ ಎಫ್​ಡಿ ದರ 3 ವರ್ಷಕ್ಕೆ: ಶೇ 5.5

– ಇಂಡಿಯಾ ಪೋಸ್ಟ್ ಎಫ್​ಡಿ ದರ 5 ವರ್ಷಕ್ಕೆ: ಶೇ 6.7

ಎಸ್​ಬಿಐ ಎಫ್​ಡಿ ದರ:
ಪೋಸ್ಟ್​ ಆಫೀಸ್​ಗೆ ಹೋಲಿಸಿದಲ್ಲಿ ಎಸ್​ಬಿಐ ಎಫ್​ಡಿ ದರ ಆರಾಮದಾಯಕ ಅವಧಿಯನ್ನು ಹೊಂದಿದೆ. ಇಂಡಿಯಾ ಪೋಸ್ಟ್​ನಲ್ಲಿ ಕನಿಷ್ಠ ಅವಧಿಯೇ 1 ವರ್ಷ. ಅದೇ ಎಸ್​ಬಿಐನಲ್ಲಿ ಕನಿಷ್ಠ ಅವಧಿ 7 ದಿನ. ಬ್ಯಾಂಕ್​ನಿಂದ ಒದಗಿಸುವ ಬಡ್ಡಿ ದರವು 7 ದಿನದಿಂದ 10 ವರ್ಷ ಅವಧಿಯ ಮೇಲೆ ಬದಲಾವಣೆ ಆಗುತ್ತದೆ.

ಎಸ್​ಬಿಐ ಬಡ್ಡಿ ದರ 2 ಕೋಟಿಗಿಂತ ಕಡಿಮೆ ಮೊತ್ತಕ್ಕೆ ಹೀಗಿದೆ:

7 ದಿನದಿಂದ 45 ದಿನಕ್ಕೆ: ಶೇ 2.9

46 ದಿನದಿಂದ 179 ದಿನಕ್ಕೆ: ಶೇ 3.9

180 ದಿನದಿಂದ 210 ದಿನಕ್ಕೆ: ಶೇ 4.4

211 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿಗೆ: ಶೇ 4.4

ಎಫ್​ಡಿ ಹೂಡಿಕೆ 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ 5

ಎರಡು ವರ್ಷಕ್ಕಿಂತ ಮೇಲಿನ ಅವಧಿಗೆ 3 ವರ್ಷಕ್ಕಿಂತ ಕಡಿಮೆ ಅವಧಿಗೆ 5.1

ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ 5.3

5 ವರ್ಷದಿಂದ 10 ವರ್ಷದ ಅವಧಿಗೆ ಶೇ 5.4

ಇದನ್ನೂ ಓದಿ: ಆರ್​ಬಿಐ ವಿತ್ತೀಯ ನೀತಿ ಪ್ರಕಟ; ನಿಮ್ಮ ಹೋಂ ಲೋನ್, ಕಾರ್ ಲೋನ್, ಬ್ಯಾಂಕ್ ಎಫ್​ಡಿಗಳ ಇಎಂಐ ಮೇಲಾಗುವ ಪರಿಣಾಮಗಳೇನು?