ನವದೆಹಲಿ, ಅಕ್ಟೋಬರ್ 27: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2024ರ ವರ್ಷದಲ್ಲಿ ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಅಮೆರಿಕದ ಗ್ಲೋಬಲ್ ಫೈನಾನ್ಸ್ ಮ್ಯಾಗಝಿನ್ ಪರಿಗಣಿಸಿ ಪ್ರಶಸ್ತಿ ನೀಡಿದೆ. ಅಮೆರಿಕದ ವಾಷಿಂಗ್ಟನ್ನಲ್ಲಿ ನಡೆದ ಐಎಂಎಫ್ ಮತ್ತು ವಿಶ್ವಬ್ಯಾಂಕ್ನ ವಾರ್ಷಿಕ ಸಭೆ ನಡುವಲ್ಲಿ ಆಯೋಜಿಸಲಾದ 31ನೇ ವಾರ್ಷಿಕ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಎಸ್ಬಿಐ ಭಾರತದ ಅತ್ಯುತ್ತಮ ಬ್ಯಾಂಕ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಎಸ್ಬಿಐನ ಛೇರ್ಮನ್ ಸಿಎಸ್ ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಿದರು. ಗ್ರಾಹಕರಿಗೆ ಅಸಾಧಾರಣ ಸೇವೆ ಒದಗಿಸಲು ಮತ್ತು ಹಣಕಾಸು ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಎಸ್ಬಿಐ ತೋರುತ್ತಿರುವ ಬದ್ಧತೆಗೆ ಸಿಕ್ಕ ಒಂದು ಗೌರವ ಇದು ಎಂದು ಈ ಸಂದರ್ಭದಲ್ಲಿ ಎಸ್ಬಿಐ ಹೇಳಿಕೆ ನೀಡಿದೆ.
ಅಮೆರಿಕದ ಜೆಪಿ ಮಾರ್ಗನ್ ಚೇಸ್ 2024ರಲ್ಲಿ ವಿಶ್ವದ ಅತ್ಯುತ್ತಮ ಬ್ಯಾಂಕ್ ಎನ್ನುವ ಗೌರವಕ್ಕೆ ಪಾತ್ರವಾಗಿದೆ. ಅಷ್ಟೇ ಅಲ್ಲ, ಅತ್ಯುತ್ತಮ ಇನ್ವೆಸ್ಟ್ಮೆಂಟ್ ಬ್ಯಾಂಕ್ ಮತ್ತು ಅತ್ಯುತ್ತಮ ಖಾಸಗಿ ಬ್ಯಾಂಕ್ ಎನ್ನುವ ಗೌರವವೂ ಅದಕ್ಕೆ ಸಿಕ್ಕಿದೆ. ಅಮೆರಿಕದ ಬ್ಯಾಂಕುಗಳ ಸರಣಿ ಕುಸಿತವನ್ನು ತಡೆಯಲು ಚೇಸ್ ವಹಿಸಿದ ಪಾತ್ರ ಮಹತ್ತರವಾದುದು. ಇದನ್ನು ಪರಿಗಣಿಸಿ ವಿಶ್ವದ ಅತ್ಯುತ್ತಮ ಬ್ಯಾಂಕ್ ಎಂದು ಅದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಉತ್ಕೃಷ್ಟ ಗುಣಮಟ್ಟ, ಸೇವೆಯಲ್ಲಿ ರಾಜಧಾನಿ ಎಕ್ಸ್ಪ್ರೆಸ್ ಅನ್ನೂ ಮೀರಿಸುತ್ತೆ ವಂದೇ ಭಾರತ್ ಸ್ಲೀಪರ್ ಟ್ರೈನು
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ