- Kannada News Photo gallery Vande Bharat sleeper train, speed, service, quality and other important details, read in Kannada
ಉತ್ಕೃಷ್ಟ ಗುಣಮಟ್ಟ, ಸೇವೆಯಲ್ಲಿ ರಾಜಧಾನಿ ಎಕ್ಸ್ಪ್ರೆಸ್ ಅನ್ನೂ ಮೀರಿಸುತ್ತೆ ವಂದೇ ಭಾರತ್ ಸ್ಲೀಪರ್ ಟ್ರೈನು
ನವದೆಹಲಿ, ಅಕ್ಟೋಬರ್ 27: ಭಾರತೀಯ ರೈಲ್ವೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ನಾವೀನ್ಯತೆ ತೋರುತ್ತಿದೆ. ರೈಲಿನ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿ, ಹೊಸ ಆಧುನಿಕ ಟ್ರೈನುಗಳು, ಸೇವೆಗಳನ್ನು ತರುತ್ತಿದೆ. ವಂದೇ ಭಾರತ್ ರೈಲುಗಳು ಗಮನ ಸೆಳೆಯುತ್ತಿವೆ. ಇದೀಗ ವಂದೇ ಭಾರ್ ಸ್ಲೀಪರ್ ಟ್ರೈನು ಬಿಡುಗಡೆಗೆ ಸಿದ್ಧವಾಗಿದೆ. ವೇಗದಲ್ಲಿ, ಗುಣಮಟ್ಟದ ಸೇವೆಯಲ್ಲಿ ರಾಜಧಾನಿ ಎಕ್ಸ್ಪ್ರೆಸ್ ಅನ್ನೂ ವಂದೇ ಭಾರತ್ ಸ್ಲೀಪರ್ ಟ್ರೈನು ಮೀರಿಸುತ್ತದೆ. ಈ ಬಗ್ಗೆ ಒಂದು ವರದಿ.
Updated on: Oct 27, 2024 | 5:21 PM

ವಂದೇ ಭಾರತ್ ಸ್ಲೀಪರ್ ಟ್ರೈನು 160 ಕಿಮೀವರೆಗೂ ವೇಗದಲ್ಲಿ ಓಡಬಲ್ಲುದು. ವೇಗ ಹೆಚ್ಚಿಸುವ ಸಮಯ, ಮತ್ತು ವೇಗ ಕಡಿಮೆ ಮಾಡುವ ಸಮಯ ಎರಡೂ ಕೂಡ ಕಡಿಮೆ. ಇದರಿಂದ ವಂದೇ ಭಾರತ್ ಸ್ಲೀಪರ್ ರೈಲುಗಳು ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣವನ್ನು ಬೇಗ ತಲುಪುತ್ತದೆ.

ವಂದೇ ಭಾರತ್ ಸ್ಲೀಪರ್ ಟ್ರೈನ್ನಲ್ಲಿ ಕುಳಿತುಕೊಳ್ಳಲು, ಅಥವಾ ಮಲಗಲು ಸೀಟಿನ ಕುಶನಿಂಗ್ ಉತ್ತಮವಾಗಿದೆ. ಪ್ರಯಾಣಿಕರಿಗೆ ಕೂರಲು ಮತ್ತು ಮಲಗಲು ಹೆಚ್ಚು ಆರಾಮದಾಯಕವಾಗುವಂತಿದೆ. ಮೇಲಿನ ಬರ್ತ್ಗೆ ಏರಲು ಏಣಿ ವ್ಯವಸ್ಥೆ ಉತ್ತಮವಾಗಿದೆ.

ವಂದೇ ಭಾರತ್ ಸ್ಲೀಪರ್ ಟ್ರೈನ್ನ ಎರಡೂ ತುದಿಗಳಲ್ಲಿ ಡ್ರೈವರ್ ಕ್ಯಾಬಿನ್ ಇದೆ. ಅಂದರೆ ಎರಡೂ ಕಡೆಯಲ್ಲಿ ಡ್ರೈವಿಂಗ್ ವ್ಯವಸ್ಥೆ ಇದೆ. ಇದರಿಂದ ಈ ತುದಿಯಿಂದ ಇನ್ನೊಂದು ತುದಿಗೆ ಡ್ರೈವರ್ ಕ್ಯಾಬಿನ್ ಕೋಚ್ ಅನ್ನು ಎಳೆದು ತಂದು ಜೋಡಿಸುವ ಕೆಲಸ ತಪ್ಪುತ್ತದೆ.

ಟ್ರೈನ್ನಲ್ಲಿ ಆಟೊಮ್ಯಾಟಿಕ್ ಎಂಟ್ರಿ ಮತ್ತು ಎಕ್ಸಿಟ್ ಡೋರ್ಗಳಿರುತ್ತವೆ. ಚಾಲಕರೇ ಇದನ್ನು ನಿಯಂತ್ರಿಸಬಹುದು. ಬೋಗಿಯಿಂದ ಇನ್ನೊಂದು ಬೋಗಿಗೆ ಕನೆಕ್ಟಿಂಗ್ ಡೋರ್ಗಳಿರುತ್ತವೆ. ಬಯೋ ವ್ಯಾಕ್ಯೂಮ್ ಟಾಯ್ಲೆಟ್ ಸಿಸ್ಟಮ್ ಇರುತ್ತದೆ. ಹಲವು ಸುರಕ್ಷಿತ ವ್ಯವಸ್ಥೆ ವಂದೇ ಭಾರತ್ ಸ್ಲೀಪರ್ ಟ್ರೈನ್ನಲ್ಲಿ ಇದೆ.

ವಂದೇ ಭಾರತ್ ಸ್ಲೀಪರ್ ಟ್ರೈನ್ನಲ್ಲಿ 16 ಬೋಗಿಗಳಿವೆ. ಎಲ್ಲವೂ ಎಸಿ ಕೋಚ್ಗಳೇ. ಒಂದು ಫಸ್ಟ್ ಕ್ಲಾಸ್ ಕೋಚ್, ನಾಲ್ಕು 2-ಟಯರ್ ಕೋಚ್, ಹನ್ನೊಂದು 3-ಟಯರ್ ಕೋಚ್ಗಳಿದ್ದು, ಒಟ್ಟು 823 ಪ್ರಯಾಣಿಕರಿಗೆ ಕೂರಲು ಮತ್ತು ಮಲಗಲು ಅವಕಾಶ ಇದೆ.



















