SBI Home Loan: ಎಸ್​ಬಿಐ ಗೃಹ ಸಾಲಕ್ಕೆ ಆಗಸ್ಟ್​ 31ರ ತನಕ ಪ್ರೊಸೆಸಿಂಗ್ ಶುಲ್ಕ ಮನ್ನಾ ವಿಸ್ತರಣೆ

| Updated By: Srinivas Mata

Updated on: Jul 31, 2021 | 7:50 PM

ಭಾರತದ ಪ್ರಮುಖ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗೃಹ ಸಾಲದ ಮೇಲೆ ಪ್ರೊಸೆಸಿಂಗ್ ಶುಲ್ಕ ಮನ್ನಾವನ್ನು ಆಗಸ್ಟ್ 31, 2021ರ ತನಕ ವಿಸ್ತರಿಸಲಾಗಿದೆ.

SBI Home Loan: ಎಸ್​ಬಿಐ ಗೃಹ ಸಾಲಕ್ಕೆ ಆಗಸ್ಟ್​ 31ರ ತನಕ ಪ್ರೊಸೆಸಿಂಗ್ ಶುಲ್ಕ ಮನ್ನಾ ವಿಸ್ತರಣೆ
ಪ್ರಾತಿನಿಧಿಕ ಚಿತ್ರ
Follow us on

ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಶನಿವಾರ ಘೋಷಣೆ ಮಾಡಿರುವ ಪ್ರಕಾರ, ಗೃಹ ಸಾಲದ ಮೇಲಿನ ಪ್ರೊಸೆಸಿಂಗ್ ಫೀ ಅನ್ನು ಆಗಸ್ಟ್ ತಿಂಗಳ ಕೊನೆಯ ತನಕ ಮನ್ನಾ ಮಾಡಲಾಗಿದೆ. ಸದ್ಯಕ್ಕೆ ಗೃಹ ಸಾಲದ ಮೇಲಿನ ಪ್ರೊಸೆಸಿಂಗ್ ಶುಲ್ಕವು ಶೇ 0.40 ಇದೆ. ಎಸ್​ಬಿಐನಿಂದ ತಿಳಿಸಿರುವಂತೆ, ಬ್ಯಾಂಕ್​ನ ಈ ಸೀಮಿತ ಅವಧಿಯ “ಮಾನ್ಸೂನ್ ಧಮಾಕಾ ಆಫರ್”ನಿಂದ ಗ್ರಾಹಕರಿಗೆ ಅಲ್ಪ ಪ್ರಮಾಣದಲ್ಲಿ ಗಳಿಕೆ ಆಗಲಿದೆ. “ಮನೆ ಖರೀದಿ ಮಾಡಬೇಕು ಅಂದುಕೊಳ್ಳುತ್ತಿರುವವರಿಗೆ ಇದು ಉತ್ತಮವಾದ ಸಮಯ. ಅದರಲ್ಲೂ ಎಸ್​ಬಿಐ ಬಡ್ಡಿ ದರವು ಕೇವಲ ಶೇ 6.70ಯಿಂದ ಶುರುವಾಗುತ್ತದೆ,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾನ್ಸೂನ್ ಧಮಾಕಾ ಆಫರ್ ಸೀಮಿತ ಅವಧಿಗೆ ಇದ್ದು, ಆಗಸ್ಟ್ 31, 2021ಕ್ಕೆ ಕೊನೆಯಾಗುತ್ತದೆ ಎಂದು ಎಸ್​ಬಿಐ ತಿಳಿಸಿದೆ. “ಈಗಿನ ಪ್ರೊಸೆಸಿಂಗ್ ಶುಲ್ಕ ಮನ್ನಾ ನಿರ್ಧಾರವು ಮನೆ ಖರೀದಿದಾರರಿಗೆ ಸುಲಭವಾಗಿ ನಿರ್ಧಾರ ಕೈಗೊಳ್ಳುವುದಕ್ಕೆ ಉತ್ತೇಜನ ನೀಡುವುದರ ಜತೆಗೆ ಅನುಕೂಲ ಮಾಡುತ್ತದೆ. ಸದ್ಯಕ್ಕೆ ಬಡ್ಡಿ ದರವೂ ಐತಿಹಾಸಿಕ ಕನಿಷ್ಠ ಮಟ್ಟದಲ್ಲಿದೆ. ಪ್ರತಿ ಭಾರತೀಯರಿಗೂ ಬ್ಯಾಂಕ್​ ಸೌಲಭ್ಯ ಒದಗಿಸುವ ಸಲುವಾಗಿ ನಾವು ಶ್ರಮಿಸುತ್ತಿದ್ದೇವೆ. ದೇಶದ ನಿರ್ಮಾಣದಲ್ಲಿ ಭಾಗಿ ಆಗಲಿದ್ದೇವೆ,” ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರೀಟೇಲ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಎಂ.ಡಿ. ಆದ ಸಿ.ಎಸ್​.ಶೆಟ್ಟಿ ಹೇಳಿದ್ದಾರೆ.

ಇನ್ನು ಎಸ್​ಬಿಐನ YONO ಆ್ಯಪ್ ಮೂಲಕವಾಗಿ ಗೃಹ ಸಾಲಕ್ಕೆ ಅರ್ಜಿ ಹಾಕಿಕೊಳ್ಳುವವರಿಗಾಗಿ 5 ಬಿಪಿಎಸ್ ವಿನಾಯಿತಿ ಸಿಗಲಿದೆ. ಇನ್ನು ಮಹಿಳೆಯರಾಗಿದ್ದಲ್ಲಿ 5 ಬೇಸಿಸ್ ಪಾಯಿಂಟ್ ವಿನಾಯಿತಿಗೆ ಅರ್ಹರಾಗುತ್ತಾರೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರೆಪೋ ದರವನ್ನು ಶೇಕಡಾ 4ರ ದರದಲ್ಲೇ ಇರಿಸಲಾಗಿದೆ. ಹೀಗೆ ಮಾಡುವುದರಿಂದ ಬ್ಯಾಂಕ್​ಗಳು ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವೂ ಕಡಿಮೆ ಇರುತ್ತದೆ. ಸದ್ಯಕ್ಕೆ ಗೃಹ ಸಾಲದ ಮೇಲಿನ ಬಡ್ಡಿ ದರವೂ ದಶಕಗಳ ಕನಿಷ್ಠ ಮಟ್ಟಕ್ಕೆ ಇದೆ.

ಇದನ್ನೂ ಓದಿ: SBI Customer Alert: ಎಸ್​ಬಿಐನಿಂದ ಹೊಸ ನಿಯಮ; ಹೀಗೆ ಮಾಡದಿದ್ದಲ್ಲಿ YONO ಲಾಗ್ ಇನ್ ಅಸಾಧ್ಯ

(SBI Home Loan Processing Fee Waiver Extended Till August 31st 2021)