ಈಗಿನ ಸನ್ನಿವೇಶದಲ್ಲಿ ಮಾರುಕಟ್ಟೆಯಲ್ಲಿ ಹಲವಾರು ಹಣಕಾಸು ಯೋಜನೆಗಳು ಲಭ್ಯ ಇದ್ದು, ವಿವಿಧ ಬಡ್ಡಿದರಗಳನ್ನು ನೀಡುವುದರಿಂದ ಆಯ್ಕೆಯು ಖಂಡಿತವಾಗಿ ಬಹಳ ಕಠಿಣ ಇರುತ್ತದೆ. ಆದರೆ ದೀರ್ಘಾವಧಿ ಹೂಡಿಕೆ ಕುರಿತು ಯೋಚಿಸುವಾಗ ಎಂದಿಗೂ ಮೊದಲನೇ ಆಯ್ಕೆಯಾಗಿ ಮನಸ್ಸಿಗೆ ಬರುವ ಒಂದು ಯೋಜನೆ ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ (Fixed Deposits). ಈಗಂತೂ ಕೊವಿಡ್ -19 ಸಾಂಕ್ರಾಮಿಕದ ಕಾರಣಕ್ಕೆ ಬಹುಪಾಲು ಜನರು ತಮ್ಮ ಉಳಿತಾಯ, ಹೂಡಿಕೆಗಳನ್ನು ನಗದು ಮಾಡಿಸಿಕೊಳ್ಳುವಂತಾಗಿದೆ. ಈ ಹಿನ್ನೆಲೆಯಲ್ಲಿ, ಹಲವಾರು ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಯೋಜನೆಗಳನ್ನು ಪರಿಚಯಿಸಿದವು. ಇವು ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಿಗಿಂತ ಉತ್ತಮ ಬಡ್ಡಿದರಗಳನ್ನು ನೀಡುತ್ತವೆ. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ತಮ್ಮ ವಿಶೇಷ ಎಫ್‌ಡಿಗಳನ್ನು ಹಿರಿಯ ನಾಗರಿಕರಿಗೆ ಟರ್ಮ್ ಡೆಪಾಸಿಟ್‌ಗಳ ಮೇಲಿನ ಹೆಚ್ಚಿನ ಬಡ್ಡಿ ದರಗಳೊಂದಿಗೆ ಪರಿಚಯಿಸಿವೆ. ಆ ಹಣಕಾಸು ಸಂಸ್ಥೆಗಳು ನೀಡುತ್ತಿರುವ ಬಡ್ಡಿ ದರಗಳ ವಿವರ ಇಲ್ಲಿದೆ:
ಹಿರಿಯ ನಾಗರಿಕರಿಗಾಗಿ ಎಸ್‌ಬಿಐನ ‘ವಿ ಕೇರ್’ ಯೋಜನೆ
ಭಾರತದ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಈ ವಿಶೇಷ ಯೋಜನೆಯನ್ನು 2020ರ ಮೇ ತಿಂಗಳಲ್ಲಿ ಪ್ರಾರಂಭಿಸಿತು. ಈ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಇರುವುದು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ. 5 ವರ್ಷಗಳ ಅವಧಿಗೆ ಠೇವಣಿಗಳ ಮೇಲೆ ಹೆಚ್ಚುವರಿ 30 ಬೇಸಿಸ್ ಪಾಯಿಂಟ್‌ಗಳನ್ನು (ಶೇಕಡಾ 1=100 ಬೇಸಿಸ್ ಪಾಯಿಂಟ್ಗಳು) ಬಡ್ಡಿ ದರವನ್ನು ನೀಡುತ್ತಿದೆ. ಈ ಯೋಜನೆಯಡಿ ಹಿರಿಯ ನಾಗರಿಕರು ವಾರ್ಷಿಕವಾಗಿ ಶೇಕಡಾ 6.20 ಬಡ್ಡಿ ದರವನ್ನು ಪಡೆಯುತ್ತಾರೆ. ಈ ಯೋಜನೆಯು ಮಾರ್ಚ್ 31, 2022ರ ವರೆಗೆ ಇರುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಿರಿಯ ನಾಗರಿಕರ ಕೇರ್ ಎಫ್‌ಡಿ
2020ರ ಮೇ ತಿಂಗಳಲ್ಲಿ ಆರಂಭ ಆಗಿರುವ ಈ ಯೋಜನೆಯಡಿ ಠೇವಣಿ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ 75 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯಲ್ಲಿ 5 ವರ್ಷಗಳ ಅವಧಿಗೆ ಠೇವಣಿಗಳ ಮೇಲೆ ಶೇ 6.35ರಷ್ಟು ಬಡ್ಡಿ ದರ ನೀಡಲಾಗುತ್ತದೆ. ಈ ಯೋಜನೆಯು ಮಾರ್ಚ್ 31, 2022ರವರೆಗೆ ಇರುತ್ತದೆ.
ಹಿರಿಯ ನಾಗರಿಕರಿಗಾಗಿ ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಯೋಜನೆ
2020ರ ಮೇ ತಿಂಗಳಿನಿಂದ ಪ್ರಾರಂಭವಾದ ಈ ಯೋಜನೆಯು ಸದ್ಯದ ಬಡ್ಡಿದರಗಳಿಗಿಂತ 80 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚು ನೀಡುತ್ತದೆ. ಈ ಯೋಜನೆಯಡಿ ಹಿರಿಯ ನಾಗರಿಕರು ಶೇಕಡಾ 6.35ರ ಬಡ್ಡಿದರವನ್ನು ಪಡೆಯುತ್ತಾರೆ. ಐಸಿಐಸಿಐ ಬ್ಯಾಂಕ್‌ನ ಕೊಡುಗೆಯು ಏಪ್ರಿಲ್ 8, 2022ರ ವರೆಗೆ ಮಾನ್ಯವಾಗಿರುತ್ತದೆ. ಈ ವಿಶೇಷ ಎಫ್‌ಡಿ ಯೋಜನೆಗಳನ್ನು ಬ್ಯಾಂಕ್‌ಗಳು ಸಾಂಕ್ರಾಮಿಕ ರೋಗದ ನಂತರ ಹಿರಿಯ ನಾಗರಿಕರಿಗೆ ಸುರಕ್ಷಿತ ಮತ್ತು ಯೋಗ್ಯವಾದ ಲಾಭವನ್ನು ನೀಡುವ ಮೂಲಕ ಪರಿಚಯಿಸಿದರೆ, ಇತರ ಹಣಕಾಸು ಇನ್ಸ್ಟ್ರುಮೆಂಟ್ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿವೆ.
ಅಂತಹ ಒಂದು ಇನ್ಸ್ಟ್ರುಮೆಂಟ್ ಅಂದರೆ ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS). ಅಲ್ಲದೆ, ಎಫ್‌ಡಿಗಳಿಗೆ ಇತರ ಪರ್ಯಾಯಗಳನ್ನು ಹುಡುಕುವ ಹಿರಿಯ ನಾಗರಿಕರು ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್‌ಗಳು ಅಥವಾ ಗಿಲ್ಟ್ ಫಂಡ್‌ಗಳನ್ನು ಸಹ ಪರಿಶೀಲಿಸಬಹುದು.