
ಬೆಂಗಳೂರು, ಆಗಸ್ಟ್ 14: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಐಎಂಪಿಎಸ್ ಮೂಲಕ ಮಾಡಲಾಗುವ ಫಂಡ್ ಟ್ರಾನ್ಸ್ಫರ್ಗಳಿಗೆ (Online Transfer) ಆಗಸ್ಟ್ 15ರಿಂದ ಶುಲ್ಕ ವಿಧಿಸಲಿದೆ. ಇದು ಆನ್ಲೈನ್ನಲ್ಲಿ ಐಎಂಪಿಎಸ್ ಮೂಲಕ ಮಾಡಲಾಗುವ ಪೇಮೆಂಟ್ಗಳಿಗೆ ಅನ್ವಯ ಆಗುತ್ತದೆ. ಬ್ಯಾಂಕ್ಗೆ ಹೋಗಿ ಅಲ್ಲಿಂದ ಐಎಂಪಿಎಸ್ ಮೂಲಕ ಮಾಡುವ ಹಣ ವರ್ಗಾವಣೆಗೆ ಈ ಹೊಸ ಶುಲ್ಕ ಅನ್ವಯ ಆಗುವುದಿಲ್ಲ. ಆನ್ಲೈನ್ ಮೂಲಕ 25,000 ರೂವರೆಗಿನ ಫಂಡ್ ಟ್ರಾನ್ಸ್ಫರ್ಗೆ ಯಾವ ಶುಲ್ಕ ಇರುವುದಿಲ್ಲ.
ಆನ್ಲೈನ್ ಚಾಲನ್ಸ್ ಮೂಲಕ ಐಎಂಪಿಎಸ್ ಬಳಸಿ 25,000 ರೂಗಿಂತ ಹೆಚ್ಚಿನ ಫಂಡ್ ಟ್ರಾನ್ಸ್ಫರ್ ಮಾಡಿದರೆ 2ರಿಂದ 10 ರೂ ಶುಲ್ಕ, ಜೊತೆಗೆ ಜಿಎಸ್ಟಿಯನ್ನೂ ಹಾಕಲಾಗುತ್ತದೆ.
ಇದನ್ನೂ ಓದಿ: ಆರ್ಬಿಐ ಹೊಸ ವ್ಯವಸ್ಥೆ: ಚೆಕ್ ಡೆಪಾಸಿಟ್ ಆಗಲು 2 ದಿನ ಕಾಯಬೇಕಿಲ್ಲ; ಕೆಲವೇ ಗಂಟೆಯಲ್ಲಿ ಹಣ ಬರುತ್ತೆ
ಈ ಸರ್ವಿಸ್ ಚಾರ್ಜ್ನ ಹಣದ ಮೇಲೆ ಜಿಎಸ್ಟಿಯನ್ನೂ ಸೇರಿಸಲಾಗುತ್ತದೆ. ಎಸ್ಬಿಐನ ಕಾರ್ಪೊರೇಟ್ ಗ್ರಾಹಕರಿಗೆ ಈ ಪರಿಷ್ಕೃತ ಸರ್ವಿಸ್ ಚಾರ್ಜ್ಗಳು ಸೆಪ್ಟೆಂಬರ್ 8ರಿಂದ ಜಾರಿಗೆ ಬರುತ್ತವೆ. ಇತರರಿಗೆ ಆಗಸ್ಟ್ 15ರಿಂದಲೇ ಜಾರಿಗೆ ಬರುತ್ತವೆ.
ಎಸ್ಬಿಐನಲ್ಲಿ ಸ್ಯಾಲರಿ ಅಕೌಂಟ್ ಹೊಂದಿರುವವರಿಗೆ ಈ ಶುಲ್ಕ ಇರುವುದಿಲ್ಲ. ಗೋಲ್ಡ್, ಡೈಮಂಡ್, ಪ್ಲಾಟಿನಂ, ರೋಡಿಯಂ, ಸರ್ಕಾರಿ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಕರೆಂಟ್ ಅಕೌಂಟ್ಗಳಿಗೂ ಐಎಂಪಿಎಸ್ ಟ್ರಾನ್ಸಾಕ್ಷನ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್ನಲ್ಲಿ ಮಿನಿಮಮ್ ಅಕೌಂಟ್ ಬ್ಯಾಲನ್ಸ್ 50,000 ರೂ ಅಲ್ಲ, 15,000 ರೂ
ಇನ್ನು, ಯುಪಿಐ ಕೂಡ ಐಎಂಪಿಎಸ್ ನೆಟ್ವರ್ಕ್ ಮೇಲೆಯೇ ರೂಪಿತವಾಗಿದೆಯಾದರೂ, ಯುಪಿಐ ಪೇಮೆಂಟ್ಗಳಿಗೆ ಈ ಸರ್ವಿಸ್ ಚಾರ್ಜ್ ಅನ್ವಯ ಆಗುವುದಿಲ್ಲ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:19 pm, Thu, 14 August 25