Closing Bell: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 678 ಪಾಯಿಂಟ್ಸ್, ನಿಫ್ಟಿ 186 ಪಾಯಿಂಟ್ಸ್ ಕುಸಿತ

ಅಕ್ಟೋಬರ್ 29, 2021ರ ಶುಕ್ರವಾರದಂದು ಸೆನ್ಸೆಕ್ಸ್ 678 ಪಾಯಿಂಟ್ಸ್ ಮತ್ತು ನಿಫ್ಟಿ 186 ಪಾಯಿಂಟ್ಸ್ ಕುಸಿತ ಕಂಡಿದೆ. ಯಾವ ಷೇರುಗಳು ಏರಿಕೆ ಕಂಡಿವೆ ಹಾಗೂ ಯಾವುವು ಇಳಿಕೆ ಕಂಡಿವೆ ಎಂಬುದರ ವಿವರ ಇಲ್ಲಿದೆ.

Closing Bell: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 678 ಪಾಯಿಂಟ್ಸ್, ನಿಫ್ಟಿ 186 ಪಾಯಿಂಟ್ಸ್ ಕುಸಿತ
ಸಾಂದರ್ಭಿಕ ಚಿತ್ರ
Edited By:

Updated on: Oct 29, 2021 | 6:15 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಮೂರನೇ ಟ್ರೇಡಿಂಗ್ ಸೆಷನ್, ಅಂದರೆ ಅಕ್ಟೋಬರ್ 29ನೇ ತಾರೀಕಿನ ಶುಕ್ರವಾರ ಸಹ ಇಳಿಕೆ ಕಂಡಿವೆ. ಲಾಭ ನಗದೀಕರಣದ ಹಿನ್ನೆಲೆಯಲ್ಲಿ ಈ ರೀತಿಯ ಕುಸಿತ ಕಂಡುಬಂದಿದೆ. ಮಾಹಿತಿ ತಂತ್ರಜ್ಞಾನ, ಎನರ್ಜಿ, ಖಾಸಗಿ ಬ್ಯಾಂಕ್​ ಷೇರುಗಳಲ್ಲಿ ಮಾರಾಟದ ಒತ್ತಡ ಕಂಡುಬಂತು. ಅಷ್ಟೇ ಅಲ್ಲ, ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಸಹ ಮಾರಾಟಕ್ಕೆ ಮುಂದಾದರು. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 677.77 ಅಥವಾ ಶೇ 1.13ರಷ್ಟು ಇಳಿಕೆಯಾಗಿ 59,306.93 ಪಾಯಿಂಟ್ಸ್​ನೊಂದಿಗೆ ವ್ಯವಹಾರವನ್ನು ಮುಕ್ತಾಯ ಮಾಡಿದರೆ, ನಿಫ್ಟಿ 185.60 ಪಾಯಿಂಟ್ಸ್ ಅಥವಾ ಶೇ 1.04ರಷ್ಟು ಕುಸಿತ ಕಂಡು, 17,671.60 ಪಾಯಿಂಟ್ಸ್​ನೊಂದಿಗೆ ವಹಿವಾಟು ಚುಕ್ತಾಗೊಳಿಸಿತು.

ಈ ವಾರದಲ್ಲಿ ಬಿಎಸ್​ಇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಈ ಎರಡೂ ಸೂಚ್ಯಂಕಗಳು ತಲಾ ಶೇ 2ರಷ್ಟು ಕುಸಿತ ಕಂಡವು. ಮಾಹಿತಿ ತಂತ್ರಜ್ಞಾನ, ಬ್ಯಾಂಕ್​ ಸೂಚ್ಯಂಕಗಳು ತಲಾ ಶೇ 1ರಷ್ಟು ಕುಸಿತ ಕಂಡರೆ, ಹೆಲ್ತ್​ಕೇರ್ ಮತ್ತು ರಿಯಾಲ್ಟಿ ಸೂಚ್ಯಂಕವು ಏರಿಕೆಯಲ್ಲಿ ವಹಿವಾಟು ಮುಗಿಸಿದವು. ವಯಕ್ತಿಕ ಷೇರುಗಳಲ್ಲಿ ಕೆನರಾ ಬ್ಯಾಂಕ್ ಮತ್ತು ವೊಲ್ಟಾಸ್ ಷೇರುಗಳಲ್ಲಿ ವಾಲ್ಯೂಮ್​ಗಳಲ್ಲಿ ಶೇಕಡಾ 100ಕ್ಕೂ ಹೆಚ್ಚಾಗಿತ್ತು. ಕೆನರಾ ಬ್ಯಾಂಕ್, ಟಿವಿಎಸ್​ ಮೋಟಾರ್ ಕಂಪೆನಿ ಮತ್ತು ಎಸ್ಕಾರ್ಟ್ಸ್ ಸೇರಿ 100ಕ್ಕೂ ಹೆಚ್ಚು ಸ್ಟಾಕ್​ಗಳು ಬಿಎಸ್​ಇಯಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿತು.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಅಲ್ಟ್ರಾಟೆಕ್ ಸಿಮೆಂಟ್ ಶೇ 2.54
ಡಾ ರೆಡ್ಡೀಸ್ ಲ್ಯಾಬ್ಸ್ ಶೇ 1.95
ಶ್ರೀ ಸಿಮೆಂಟ್ಸ್ ಶೇ 1.57
ಮಾರುತಿ ಸುಜುಕಿ ಶೇ 1.53
ಸಿಪ್ಲಾ ಶೇ 1.49

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಟೆಕ್ ಮಹೀಂದ್ರಾ ಶೇ -3.62
ಎನ್​ಟಿಪಿಸಿ ಶೇ -3.42
ಕೊಟಕ್ ಮಹೀಂದ್ರಾ ಶೇ -3.21
ಇಂಡಸ್ಇಂಡ್ ಬ್ಯಾಂಕ್ ಶೇ -3.04
ಲಾರ್ಸನ್ ಶೇ -2.62

ಇದನ್ನೂ ಓದಿ: Muhurat trading 2021: ನವೆಂಬರ್​ 4ಕ್ಕೆ ಷೇರುಪೇಟೆಯಲ್ಲಿ ಮುಹೂರ್ತ ವಹಿವಾಟು; ಅವಧಿ, ಮಹತ್ವ, ವಿಶೇಷ ಮತ್ತಿತರ ವಿವರ