AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Muhurat trading 2021: ನವೆಂಬರ್​ 4ಕ್ಕೆ ಷೇರುಪೇಟೆಯಲ್ಲಿ ಮುಹೂರ್ತ ವಹಿವಾಟು; ಅವಧಿ, ಮಹತ್ವ, ವಿಶೇಷ ಮತ್ತಿತರ ವಿವರ

2021ರ ದೀಪಾವಳಿ ದಿನದಂದು ಷೇರು ಮಾರುಕಟ್ಟೆಯ ಮುಹೂರ್ತ ವಹಿವಾಟಿನ ಸಮಯ, ವಿಶೇಷ, ಪ್ರಾಮುಖ್ಯ ಮುಂತಾದ ವಿವರಗಳು ಇಲ್ಲಿವೆ.

Muhurat trading 2021: ನವೆಂಬರ್​ 4ಕ್ಕೆ ಷೇರುಪೇಟೆಯಲ್ಲಿ ಮುಹೂರ್ತ ವಹಿವಾಟು; ಅವಧಿ, ಮಹತ್ವ, ವಿಶೇಷ ಮತ್ತಿತರ ವಿವರ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Oct 26, 2021 | 11:17 PM

Share

ನವೆಂಬರ್ 4, 2021ರಂದು ‘ಮುಹೂರ್ತ’ ಟ್ರೇಡಿಂಗ್ ಸೆಷನ್‌ಗಾಗಿ ಈ ದೀಪಾವಳಿಯಲ್ಲಿ ಸ್ಟಾಕ್ ಎಕ್ಸ್‌ಚೇಂಜ್‌ಗಳು ಒಂದು ಗಂಟೆ ತೆರೆದಿರುತ್ತವೆ. BSE ಮತ್ತು NSE ಹೂಡಿಕೆದಾರರಿಗೆ ಸಂಜೆ 6:15ರಿಂದ ರಾತ್ರಿ 7:15 ರವರೆಗೆ ದೀಪಾವಳಿಯಂದು ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅವಕಾಶ ನೀಡುತ್ತವೆ. ಮುಹೂರ್ತದ ವಹಿವಾಟು ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಒಂದು ಗಂಟೆ ನಡೆಯುತ್ತದೆ. ಬ್ರೋಕಿಂಗ್ ಸಮುದಾಯವು ಈ ಅವಧಿಯಲ್ಲಿ ಲಕ್ಷ್ಮಿ ಪೂಜೆ ಮತ್ತು ವ್ಯಾಪಾರವನ್ನು ನಡೆಸುತ್ತದೆ. ಮುಹೂರ್ತದ ವ್ಯಾಪಾರದ ಅವಧಿಯು ಸಾಮಾನ್ಯ ವ್ಯಾಪಾರಕ್ಕೆ ಮುಂಚಿತವಾಗಿ ಒಂದು ಬ್ಲಾಕ್ ಡೀಲ್ ಸೆಷನ್ ಅನ್ನು ಹೊಂದಿದೆ ಮತ್ತು ಮುಕ್ತಾಯದ ಅವಧಿಯನ್ನು ಅನುಸರಿಸುತ್ತದೆ. ಕಳೆದ ವರ್ಷ ಬಿಎಸ್‌ಇ ಸೆನ್ಸೆಕ್ಸ್ 145 ಪಾಯಿಂಟ್‌ಗಳನ್ನು ಗಳಿಸಿ, ಆ ಸಮಯದಲ್ಲಿ ಅದರ ಗರಿಷ್ಠ ಮುಕ್ತಾಯದ ಮೊತ್ತಕ್ಕೆ ಕೊನೆಗೊಂಡಿತು ಮತ್ತು ಎನ್‌ಎಸ್‌ಇ ನಿಫ್ಟಿ- 50 ಸೂಚ್ಯಂಕವು 12,800ಕ್ಕಿಂತ ಕಡಿಮೆಗೆ ವ್ಯವಹಾರ ಚುಕ್ತಾ ಮಾಡಿತ್ತು.

ಮುಹೂರ್ತ ವಹಿವಾಟು ಯಾವಾಗ? NSE ಅಧಿಸೂಚನೆಯ ಪ್ರಕಾರ, ಬ್ಲಾಕ್ ಡೀಲ್ ಸೆಷನ್ ನವೆಂಬರ್ 4ರಂದು ಸಂಜೆ 5:45ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಇದರ ನಂತರ ಸಂಜೆ 6 ಮತ್ತು 6:08ರ ನಡುವೆ ಪ್ರೀ- ಓಪನ್ ಸೆಷನ್ ನಡೆಯಲಿದೆ. ಸಾಮಾನ್ಯ ಮಾರ್ಕೆಟ್ ಸಂಜೆ 6:15ರಿಂದ ರಾತ್ರಿ 7:15ರ ವರೆಗೆ ಇರುತ್ತದೆ. ಆ ನಂತರ ಕಾಲ್ ಆಕ್ಷನ್ ಇಲಿಕ್ವಿಡ್ ಸೆಷನ್ ಮತ್ತು ಮುಕ್ತಾಯದ ಅವಧಿ ಇರುತ್ತದೆ. ಈ ದೀಪಾವಳಿ ಮುಹೂರ್ತದ ಟ್ರೇಡಿಂಗ್ ಸೆಷನ್‌ನಲ್ಲಿ ಕಾರ್ಯಗತಗೊಳಿಸಲಾದ ಎಲ್ಲ ವಹಿವಾಟುಗಳು ತೀರುವಳಿ (ಸೆಟ್ಲ್​ಮೆಂಟ್) ಬಾಧ್ಯತೆಗಳಿಗೆ ಬದ್ಧವಾಗುತ್ತವೆ.

ಮುಹೂರ್ತ ವಹಿವಾಟು ಏಕೆ ಮಾಡಲಾಗುತ್ತದೆ? ಮುಹೂರ್ತದ ವಹಿವಾಟು ಹೊಸ ವರ್ಷ ಅಥವಾ ‘ಸಂವತ್’ ಆರಂಭವನ್ನು ಗುರುತಿಸುವುದರಿಂದ ವಿಶೇಷ ಪ್ರಾಮುಖ್ಯವನ್ನು ಹೊಂದಿದೆ. ಹೂಡಿಕೆದಾರರು ಮುಹೂರ್ತದ ವಹಿವಾಟು ಮುಂಬರುವ ವರ್ಷದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬುತ್ತಾರೆ. ಈ ಅಭ್ಯಾಸವನ್ನು 1957ರಲ್ಲಿ BSE ಮತ್ತು 1992ರಲ್ಲಿ NSEನಲ್ಲಿ ಪ್ರಾರಂಭಿಸಲಾಯಿತು. ಮುಹೂರ್ತದ ವಹಿವಾಟಿನ ಇತ್ತೀಚಿನ ಮಾರುಕಟ್ಟೆಯ ಚಲನೆಯನ್ನು ಗಮನಿಸಿದರೆ, ಈ ವಿಶೇಷ ವಹಿವಾಟಿನ ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾಮಾನ್ಯವಾಗಿ ಏರಿಕೆಯಲ್ಲೇ ಕೊನೆಗೊಳ್ಳುತ್ತವೆ. ಈ ಮುಹೂರ್ತ ವಹಿವಾಟು ಸಂವತ್ 2078ರ ಆರಂಭವನ್ನು ಸೂಚಿಸುತ್ತದೆ.

ಇದನ್ನೂ ಓದಿ: 20 ವರ್ಷದ ಹಿಂದೆ ರಾಯಲ್ ಎನ್​ಫೀಲ್ಡ್​ ಬೈಕ್ ಬದಲಿಗೆ ಈ ಕಂಪೆನಿ ಷೇರು ಖರೀದಿಸಿದ್ದರೆ ಇವತ್ತಿಗೆ ಎಷ್ಟು ಕೋಟಿ ಗೊತ್ತೆ?

Published On - 11:16 pm, Tue, 26 October 21

ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ