Debt Fund SIP: ಸದ್ಯದ ಸನ್ನಿವೇಶಕ್ಕೆ ಡೆಟ್​ ಫಂಡ್ ಎಸ್​ಐಪಿ ಏಕೆ ಅತ್ಯುತ್ತಮ ಆಯ್ಕೆ ಆಗಬಲ್ಲದು ಗೊತ್ತೆ?

ಸಾಲದ ನಿಧಿಯಲ್ಲಿ ಎಸ್​ಐಪಿ ಮಾಡುವುದು ಸದ್ಯದ ಸನ್ನಿವೇಶದಲ್ಲಿ ಅತ್ಯುತ್ತಮ ಆಯ್ಕೆ ಆಗಬಲ್ಲದು ಏಕೆ ಎಂಬುದರ ಬಗ್ಗೆ ವಿವರಣೆ ಇಲ್ಲಿದೆ.

Debt Fund SIP: ಸದ್ಯದ ಸನ್ನಿವೇಶಕ್ಕೆ ಡೆಟ್​ ಫಂಡ್ ಎಸ್​ಐಪಿ ಏಕೆ ಅತ್ಯುತ್ತಮ ಆಯ್ಕೆ ಆಗಬಲ್ಲದು ಗೊತ್ತೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 26, 2021 | 5:51 PM

ನಿಶ್ಚಿತ ಆದಾಯವನ್ನೇ ನೆಚ್ಚಿಕೊಂಡು, ಅದರ ಮೇಲೆ ಹೂಡಿಕೆ ಮಾಡುವಂಥವರು ಒಂದು ಬಗೆಯ ಗೊಂದಲದಲ್ಲಿ ಇದ್ದಾರೆ. ಏರುತ್ತಿರುವ ಹಣದುಬ್ಬರವು ಫಿಕ್ಸೆಡ್ ಆದಾಯದ ಮೇಲೆ ಗಳಿಸಿದ ಬಡ್ಡಿಯನ್ನು ನೆಗೆಟಿವ್ ದರಗಳಲ್ಲಿ ತೋರಿಸುತ್ತಿದೆ. ಮತ್ತೊಂದೆಡೆ, ದೀರ್ಘಾವಧಿಗೆ ಎಫ್​ಡಿ ಮಾಡಿದರೆ ಹೆಚ್ಚಿನ ಬಡ್ಡಿ ಸಿಗುತ್ತದೆ ಅಂತನಿಸಿದರೂ ಹಾಗೆ ಈ ಹಂತದಲ್ಲಿ ದೀರ್ಘಾವಧಿಯ ಬಾಂಡ್‌ಗಳಲ್ಲಿ ದರಗಳನ್ನು ಲಾಕ್ ಆಗುವುದು ಒಳ್ಳೆ ಆಯ್ಕೆ ಏನಲ್ಲ. ಒಂದು ವೇಳೆ ನೀವೇನಾದರೂ ಬಹಳ ಎಚ್ಚರಿಕೆ ವಹಿಸಿ ಹೂಡಿಕೆ ಮಾಡುವವರಾಗಿದ್ದಲ್ಲಿ ಮತ್ತು ಸಾಲ ಪತ್ರ/ಬಾಂಡ್​ನಲ್ಲಿ ಹೂಡಿಕೆ ಮಾಡುವ ಮೂಲಕ ಬಂಡವಾಳವನ್ನು ಉಳಿಸಿಕೊಳ್ಳಲು ಬಯಸಿದರೆ ಈ ಕಷ್ಟಕರ ಪರಿಸ್ಥಿತಿಯಿಂದ ಹೊರಬರಲು ಒಂದು ಮಾರ್ಗವಿದೆ. ಅದೇ ಡೆಟ್ ಫಂಡ್‌ಗಳಲ್ಲಿನ ವ್ಯವಸ್ಥಿತ ಹೂಡಿಕೆ (Systematic Investment). ಈ ಯೋಜನೆಯು ಬಹಳಷ್ಟು ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಂದ ಹಾಗೆ ಇದು ಹೇಗೆ ಸಹಾಯ ಮಾಡುತ್ತದೆ ಎಂಬುದರ ವಿವರಣೆ ಇಲ್ಲಿದೆ.

ನೀವು ಗಳಿಸಿದಂತೆಯೇ ಹೂಡಿಕೆ ಮಾಡಿ ಬ್ಯಾಂಕ್ ಖಾತೆಯಲ್ಲಿ ದುಡ್ಡು ಇದೆ ಅಂತಾದರೆ ಅನೇಕರು ಹಣವನ್ನು ಖರ್ಚು ಮಾಡಿಬಿಡುತ್ತಾರೆ. ಆದರೆ ಡೆಟ್​ ಫಂಡ್ SIPಯು ಹೆಚ್ಚುವರಿ ಶ್ರಮವನ್ನು ತೆಗೆದುಕೊಳ್ಳದೆ ಅಂತಹ ಪರಿಸ್ಥಿತಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ನೀವು ಗಳಿಸಿದಂತೆಯೇ ಹೂಡಿಕೆ ಮಾಡಲು SIP ಅವಕಾಶ ನೀಡುತ್ತದೆ. ನಮ್ಮಲ್ಲಿ ಹೆಚ್ಚಿನವರು ಪ್ರತಿ ತಿಂಗಳು ಸಂಬಳ ಪಡೆಯುತ್ತಾರೆ. ಆದಾಯದ ಕೆಲವು ಭಾಗವನ್ನು ಬದಿಗಿಟ್ಟು, SIP ಮೂಲಕ ಡೆಟ್​ ಫಂಡ್​ನಲ್ಲಿ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಹೆಚ್ಚಿನ ಮೌಲ್ಯವನ್ನು ಪಡೆಯಬಹುದು. ನಿಧಿಯನ್ನು ಸಂಗ್ರಹಿಸಬಹುದು ಮತ್ತು ಅದರೊಂದಿಗೆ ಏನು ಮಾಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಬಹುದು.

ಹೆಚ್ಚಿನ ತೆರಿಗೆ ಅನುಕೂಲ ನಮ್ಮಲ್ಲಿ ಹಲವರು ತುರ್ತು ನಿಧಿಯಲ್ಲಿ (ಎಮರ್ಜೆನ್ಸಿ ಫಂಡ್) ಸ್ವಲ್ಪ ಹಣವನ್ನು ಇಡಲು ಬಯಸುತ್ತೇವೆ. ಅಂತಹ ಹೂಡಿಕೆಗಳಿಗೆ ಬ್ಯಾಂಕ್ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮೊದಲ ಆಯ್ಕೆಯಾಗಿದೆ. ಆದರೆ ನಿರ್ದಿಷ್ಟ ಮಿತಿಯನ್ನು ಮೀರಿ ಅದಕ್ಕೆ ಪಾವತಿಸುವ ಬಡ್ಡಿಯನ್ನು ಒಬ್ಬರ ಆದಾಯಕ್ಕೆ ಸೇರಿಸಲಾಗುತ್ತದೆ ಮತ್ತು ಸ್ಲ್ಯಾಬ್ ದರದ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ. ತುರ್ತು ನಿಧಿಗಳನ್ನು ವಿರಳವಾಗಿ ಬಳಸುವುದರಿಂದ ಗಳಿಸಿದ ಬಡ್ಡಿಯು ತೆರಿಗೆಯನ್ನು ಪಡೆಯುತ್ತಲೇ ಇರುತ್ತದೆ. ಬದಲಾಗಿ ಬಾಂಡ್ ಫಂಡ್‌ನಲ್ಲಿ SIP ಪ್ರಾರಂಭಿಸಿದರೆ ಹಣವು ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಉಳಿಯಬಹುದು ಮತ್ತು ಸಂಯೋಜನೆಯ ಪ್ರಯೋಜನವನ್ನು ಆನಂದಿಸಬಹುದು. ಯೂನಿಟ್‌ಗಳನ್ನು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಉಳಿಸಿಕೊಂಡರೆ ಅದಾದ ಮೇಲೆ ಮಾರಾಟದ ಮೇಲಿನ ಬಂಡವಾಳ ಲಾಭಗಳಿಗೆ ಶೇ 20 ನಂತರದ ಸೂಚ್ಯಂಕದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಇದು ಬಾಂಡ್ ಫಂಡ್‌ಗಳ ಮೇಲಿನ ತೆರಿಗೆಯ ನಂತರದ ಮತ್ತು ಹಣದುಬ್ಬರದ ನಂತರದ ಆದಾಯವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

ಕಡಿಮೆ ಬಡ್ಡಿದರದ ಅಪಾಯ ಬಡ್ಡಿದರಗಳು ಮೇಲ್ಮುಖವಾಗಿ ಚಲಿಸುವ ಬಗ್ಗೆ ನೀವು ಚಿಂತೆ ಮಾಡುತ್ತಿದ್ದೀರಾ? ದೀರ್ಘಾವಧಿಗೆ ಲಾಕ್‌ಇನ್ ಮಾಡಿದರೆ ಹೆಚ್ಚುತ್ತಿರುವ ಬಡ್ಡಿದರಗಳ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಮತ್ತು ಅಲ್ಪಾವಧಿಯ ಬಾಂಡ್‌ಗಳು ಮತ್ತು ಫಿಕ್ಸೆಡ್ ಡೆಪಾಸಿಟ್​ನಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಬಡ್ಡಿ ದರಗಳೊಂದಿಗೆ ಸಮಾಧಾನ ಮಾಡಿಕೊಳ್ಳಬೇಕು. ಆದ್ದರಿಂದ SIP ಪ್ರಾರಂಭಿಸಲು ಇದು ಅರ್ಥಪೂರ್ಣವಾಗಿದೆ. ಮಧ್ಯಮ ಅವಧಿಯ ಬಾಂಡ್ ಫಂಡ್ ಅಥವಾ ಮೂರು ವರ್ಷಗಳ ಅವಧಿಯೊಂದಿಗೆ ಅಲ್ಪಾವಧಿಯ ಬಾಂಡ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೂ ಏರಿಳಿತಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಮಧ್ಯಂತರ ಅವಧಿಯಲ್ಲಿ ಹೆಚ್ಚುತ್ತಿರುವ ಬಡ್ಡಿದರಗಳಿಂದಾಗಿ NAV ಕುಸಿದರೆ, SIPಯ ನಂತರದ ಕಂತುಗಳಲ್ಲಿ ಹೆಚ್ಚಿನ ಯೂನಿಟ್​ಗಳನ್ನು ಪಡೆಯಬಹುದು. ಹೀಗೆ ಏರುತ್ತಿರುವ ಬಡ್ಡಿದರಗಳಿಗೆ ಸಂಬಂಧಿಸಿದ ಅಪಾಯವನ್ನು ದಾಟಲು ರೂಪಾಯಿ ವೆಚ್ಚದ ಸರಾಸರಿ ಸಹಾಯ ಮಾಡುತ್ತದೆ.

ಗುರಿ ಸಾಧಿಸಲು ಸಹಾಯ ಮಾಡುತ್ತದೆ ಡೆಟ್​ ಫಂಡ್​ಗಳಲ್ಲಿ SIP ಪ್ರಾರಂಭಿಸಲು ಉತ್ಸುಕರಾಗಿದ್ದರೆ ಕಡಿಮೆ ಅವಧಿಯ ಫಂಡ್​ಗಳು ಅಥವಾ ಅಲ್ಪಾವಧಿಯ ಫಂಡ್​ಗಳಿಗೆ ಹೋಗುವುದು ಉತ್ತಮ. ಬಡ್ಡಿದರಗಳು ತುಂಬಾ ವೇಗವಾಗಿ ಮತ್ತು ತುಂಬಾ ಹೆಚ್ಚಾದರೆ ಇವುಗಳು ಕಡಿಮೆ ಏರಿಳಿತ ಹೊಂದಿರುತ್ತವೆ. ಅಲ್ಪಾವಧಿಯ ಫಂಡ್​ಗಳು ಹೆಚ್ಚಿನ ಹೂಡಿಕೆದಾರರಿಗೆ ಲಾಭದಾಯಕ ಆಗಬಹುದು ಮತ್ತು ಅಲ್ಪಾವಧಿಯ ಗುರಿಗಳಿಗಾಗಿ ಉಳಿಸಲು ಸಹಾಯ ಮಾಡುತ್ತದೆ ಅಥವಾ ನಿಶ್ಚಿತ ಆದಾಯಕ್ಕೆ ಮೀಸಲಾಗಿರುವ ದೀರ್ಘಾವಧಿಯ ಗುರಿಗಳ ಭಾಗವನ್ನು ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.

ಆದರೆ ಹೂಡಿಕೆ ಮಾಡುವಾಗ ರಿಟರ್ನ್ಸ್​ನ ಬೆನ್ನಟ್ಟಬಾರದು ಮತ್ತು ಅಲ್ಪಾವಧಿಯ ಫಂಡ್‌ಗಳಲ್ಲಿ ಆದಾಯವು ಕಳಪೆಯಾಗಿರುವ ಕಾರಣ ಎಲ್ಲ ಹಣವನ್ನು ಷೇರುಗಳು ಅಥವಾ ಇಕ್ವಿಟಿ ಫಂಡ್‌ಗಳಲ್ಲಿ ಇರಿಸಬಾರದು. ಡೆಟ್​ ಫಂಡ್​ನಲ್ಲಿನ SIP ಆರೋಗ್ಯಕರ ಅಪಾಯ-ಹೊಂದಾಣಿಕೆ ಆದಾಯದ ಜೊತೆಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.

ಇದನ್ನೂ ಓದಿ: ಮ್ಯುಚುವಲ್ ಫಂಡ್​​​​ನ ಮ್ಯಾನೇಜರ್​ಗಳನ್ನು ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಒಬ್ಬ ನುರಿತ ಅಡುಗೆಯವನಿಗೆ ಹೋಲಿಸುತ್ತಾರೆ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ