Airport Privatisation: 13 ವಿಮಾನ ನಿಲ್ದಾಣಗಳ ಖಾಸಗೀಕರಣ ಮಾರ್ಚ್ ವೇಳೆ ಪೂರ್ಣಗೊಳಿಸಲು ಸರ್ಕಾರ ನಿರ್ಧಾರ
ಮಾರ್ಚ್ ತಿಂಗಳ ಕೊನೆ ಹೊತ್ತಿಗೆ 13 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಯೋಜನೆಯನ್ನು ರೂಪಿಸಿದೆ. ಆ ಬಗ್ಗೆ ವಿವರಣೆ ಇಲ್ಲಿದೆ.
ಸದ್ಯಕ್ಕೆ ಸರ್ಕಾರಿ ಸ್ವಾಮ್ಯದ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಅಡಿಯಲ್ಲಿ ಬರುವ 13 ವಿಮಾನ ನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆಯನ್ನು ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಮತ್ತಷ್ಟು ಸಾರ್ವಜನಿಕ ಹೂಡಿಕೆಗಾಗಿ ಹಣವನ್ನು ಸಂಗ್ರಹಿಸಲಾಗಿದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ AAI ಅಧ್ಯಕ್ಷ ಸಂಜೀವ್ ಕುಮಾರ್ ಮಾತನಾಡಿ, “ನಾವು ವಿಮಾನ ಯಾನ ಸಚಿವಾಲಯಕ್ಕೆ 13 ವಿಮಾನ ನಿಲ್ದಾಣಗಳ ಪಟ್ಟಿಯನ್ನು ಕಳುಹಿಸಿದ್ದೇವೆ. ಅವುಗಳು PPP (ಸಾರ್ವಜನಿಕ-ಖಾಸಗಿ ಪಾಲುದಾರಿಕೆ) ಮೇಲೆ ಬಿಡ್ ಮಾಡಲಿವೆ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಈ ವಿಮಾನ ನಿಲ್ದಾಣಗಳ ಬಿಡ್ಡಿಂಗ್ ಅನ್ನು ಪೂರ್ಣಗೊಳಿಸುವ ಯೋಜನೆ ಇದೆ,” ಎಂದು ಅವರು ಹೇಳಿದ್ದಾರೆ.
ಬಿಡ್ಡಿಂಗ್‌ನ ಮಾದರಿಯು ಪ್ರತಿ ಪ್ರಯಾಣಿಕರ ಮೇಲೆ ದೊರೆಯುವ ಆದಾಯದ ಮಾದರಿಯನ್ನು ಆಧರಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ಮಾದರಿಯನ್ನು ಇದಕ್ಕೂ ಮೊದಲು ಬಳಸಲಾಗಿದ್ದು, ಯಶಸ್ವಿಯಾಗಿದೆ ಮತ್ತು “ಜೆವಾರ್ ವಿಮಾನ ನಿಲ್ದಾಣವನ್ನು (ಗ್ರೇಟರ್ ನೋಯ್ಡಾದಲ್ಲಿ) ಅದೇ ಮಾದರಿಯಲ್ಲಿ ಬಿಡ್ ಮಾಡಲಾಗಿದೆ,” ಎಂದಿದ್ದಾರೆ. ಕಳೆದ ತಿಂಗಳು AAI ಮಂಡಳಿಯು ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಹಣ ಗಳಿಕೆಯ ಪೈಪ್‌ಲೈನ್ (NMP) ಭಾಗವಾಗಿ ಮುಂದಿನ ವರ್ಷದ ಆರಂಭದಲ್ಲಿ 13 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಅನುಮೋದನೆ ನೀಡಿತು- ಅದರಲ್ಲಿ ಆರು ಪ್ರಮುಖ ಮತ್ತು ಏಳು ಚಿಕ್ಕ ವಿಮಾನ ನಿಲ್ದಾಣಗಳು ಒಳಗೊಂಡಿದ್ದವು. 2024ರ ವೇಳೆಗೆ ವಿಮಾನ ನಿಲ್ದಾಣಗಳಲ್ಲಿ 3,660 ಕೋಟಿ ರೂಪಾಯಿಗಳ ಖಾಸಗಿ ಹೂಡಿಕೆಯನ್ನು ತರುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
50 ವರ್ಷಗಳ ಅವಧಿಗೆ ನೀಡಲಾಗುತ್ತದೆ ಕೊವಿಡ್ -19 ಬಿಕ್ಕಟ್ಟಿನ ಹೊರತಾಗಿಯೂ ಈ ಪ್ರಾಜೆಕ್ಟ್ಗಳನ್ನು ಪಡೆದುಕೊಳ್ಳಲು ಹೂಡಿಕೆದಾರರಿಂದ ಬಲವಾದ ಆಸಕ್ತಿ ವ್ಯಕ್ತ ಆಗುತ್ತದೆ ಎಂದು ಕುಮಾರ್ ಅವರು ಗಮನ ಸೆಳೆದರು. ಏಕೆಂದರೆ ಕೊರೊನಾವು ವ್ಯವಹಾರಗಳ ಮೇಲೆ ಅಲ್ಪಾವಧಿ ಪರಿಣಾಮಗಳನ್ನು ಉಂಟುಮಾಡುತ್ತದೆ ಮತ್ತು ವಿಮಾನ ನಿಲ್ದಾಣಗಳನ್ನು 50 ವರ್ಷಗಳ ಅವಧಿಗೆ ನೀಡಲಾಗುತ್ತದೆ. AAI ಏಳು ಸಣ್ಣ ವಿಮಾನ ನಿಲ್ದಾಣಗಳನ್ನು ಆರು ದೊಡ್ಡ ವಿಮಾನಗಳೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದೆ- ವಾರಾಣಸಿಯನ್ನು ಖುಷಿನಗರ ಮತ್ತು ಗಯಾದೊಂದಿಗೆ; ಕಾಂಗ್ರಾದೊಂದಿಗೆ ಅಮೃತಸರ; ತಿರುಪತಿಯೊಂದಿಗೆ ಭುವನೇಶ್ವರ; ಔರಂಗಾಬಾದ್ ಜೊತೆ ರಾಯ್ಪುರ್; ಜಬಲ್‌ಪುರದೊಂದಿಗೆ ಇಂದೋರ್; ಮತ್ತು ಹುಬ್ಬಳ್ಳಿಯೊಂದಿಗೆ ತಿರುಚಿಯನ್ನು ಸೇರಿಸಲಾಗಿದೆ.
ಎನ್‌ಎಂಪಿಯ ಭಾಗವಾಗಿ, ಮೇಲಿನ 13 ಸೇರಿದಂತೆ ಮುಂದಿನ ನಾಲ್ಕು ವರ್ಷಗಳಲ್ಲಿ 25 ವಿಮಾನ ನಿಲ್ದಾಣಗಳನ್ನು ನೀಡಲು ಕೇಂದ್ರವು ಯೋಜಿಸುತ್ತಿದೆ. 2019ರಲ್ಲಿ ಸರ್ಕಾರವು ಆರು ವಿಮಾನ ನಿಲ್ದಾಣಗಳಾದ ಅಹಮದಾಬಾದ್, ಜೈಪುರ, ಲಖನೌ, ತಿರುವನಂತಪುರಂ, ಮಂಗಳೂರು ಮತ್ತು ಗುವಾಹತಿಯನ್ನು ಶತಕೋಟ್ಯಧಿಪತಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹಕ್ಕೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ (ಪಿಪಿಪಿ) ನೀಡಿತ್ತು. ವಿಮಾನ ನಿಲ್ದಾಣಗಳ ನಿಯಂತ್ರಣವನ್ನು ಬಿಟ್ಟುಕೊಡುವ ಮತ್ತು ಖಾಸಗೀಕರಣಗೊಳಿಸುವ ಕೇಂದ್ರದ ಕ್ರಮವು ಆ ವಿಮಾನ ನಿಲ್ದಾಣಗಳು ಆರ್ಥಿಕವಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಹೊರತಾಗಿಯೂ AAIಗೆ ಗಮನಾರ್ಹ ಆದಾಯದ ಮೂಲವನ್ನು ಖಾತ್ರಿಪಡಿಸುತ್ತದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ FY21ರಲ್ಲಿ 1,962 ಕೋಟಿ ರೂಪಾಯಿಗಳ ಬೃಹತ್ ನಷ್ಟವನ್ನು ದಾಖಲಿಸಿದ ಕಾರಣ AAI ಆದಾಯವು ಕೊರೊನಾ ಬಿಕ್ಕಟ್ಟಿನಿಂದ ಗಣನೀಯವಾಗಿ ಕುಸಿಯಿತು ಮತ್ತು ಸಂಬಳ ಸೇರಿದಂತೆ ಕಾರ್ಯನಿರತ ಬಂಡವಾಳದ ಅವಶ್ಯಕತೆಗಳನ್ನು ಪೂರೈಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 1,500 ಕೋಟಿ ರೂಪಾಯಿ ಸಾಲ ಪಡೆಯಲಾಗಿತ್ತು. ಆದರೆ ಕೊವಿಡ್ ಸನ್ನಿವೇಶ ಸುಧಾರಿಸುತ್ತಾ ಬಂದಂತೆ ಕೋವಿಡ್ ಪರಿಸ್ಥಿತಿಯಲ್ಲಿ ಸುಧಾರಣೆ ಮತ್ತು ಪ್ರಯಾಣಿಕರ ದಟ್ಟಣೆಯನ್ನು ಹೆಚ್ಚಿಸುವುದರೊಂದಿಗೆ AAI ಈ ವರ್ಷ ವರ್ಕಿಂಗ್ ಕ್ಯಾಪಿಟಲ್ ಅಗತ್ಯಗಳಿಗಾಗಿ ಸಾಲ ಪಡೆಯಬೇಕಾಗಿಲ್ಲ.
“ನಮ್ಮ ಬಂಡವಾಳ ವೆಚ್ಚವು ಯೋಜಿಸಿದಂತೆ ಮುಂದುವರಿಯುತ್ತದೆ. ಈ ಹಣಕಾಸು ವರ್ಷದ ಬಂಡವಾಳ ವೆಚ್ಚದ ಅವಶ್ಯಕತೆಗಳನ್ನು ಪೂರೈಸಲು ನಾವು 1,000 ಕೋಟಿ ರೂಪಾಯಿ ಸಾಲ ಪಡೆದಿದ್ದೇವೆ. ಮುಂದೆ ಭವಿಷ್ಯದ ನಿಧಿಯ ಅಗತ್ಯವನ್ನು ಆಧರಿಸಿ ಹೆಚ್ಚುವರಿ ಸಾಲದ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು,” ಎಂದು ಕುಮಾರ್ ಹೇಳಿರುವುದಾಗಿ ಮಾಧ್ಯಮದಲ್ಲಿ ವರದಿ ಮಾಡಿದೆ.
ಇದನ್ನೂ ಓದಿ: ಅದಾನಿ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ ಗುತ್ತಿಗೆ; ಮಧ್ಯ ಪ್ರವೇಶಿಸಲು ಹೈಕೋರ್ಟ್ ನಕಾರ