Closing Bell: ಗೆಲುವಿನ ಓಟ ನಿಲ್ಲಿಸಿದ ಸೆನ್ಸೆಕ್ಸ್, ನಿಫ್ಟಿ; ಹೀರೋ ಮೋಟೋಕಾರ್ಪ್ ಷೇರು ತಲಾ 79 ರೂ. ಇಳಿಕೆ

ಫೆಬ್ರವರಿ 3, 2022ರಂದು ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಇಳಿಕೆ ಕಂಡಿದೆ. ಯಾವ ಕಂಪೆನಿಗಳು ಏರಿಕೆ ದಾಖಲಿಸಿವೆ ಮತ್ತು ಯಾವುದು ಇಳಿಕೆ ಎಂಬ ವಿವರ ಇಲ್ಲಿದೆ.

Closing Bell: ಗೆಲುವಿನ ಓಟ ನಿಲ್ಲಿಸಿದ ಸೆನ್ಸೆಕ್ಸ್, ನಿಫ್ಟಿ; ಹೀರೋ ಮೋಟೋಕಾರ್ಪ್ ಷೇರು ತಲಾ 79 ರೂ. ಇಳಿಕೆ
ಸಾಂದರ್ಭಿಕ ಚಿತ್ರ
Edited By:

Updated on: Feb 03, 2022 | 5:00 PM

ಭಾರತದ ಷೇರು ಮಾರುಕಟ್ಟೆ (Stock Market)  ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 3ರ ಗುರುವಾರದಂದು ಸತತ ಮೂರು ದಿನಗಳಿಂದ ಕಾಣುತ್ತಿದ್ದ ಗೆಲುವಿನ ಓಟವನ್ನು ನಿಲ್ಲಿಸಿತು. ನಿಫ್ಟಿ ಕ್ಯಾಪಿಟಲ್ ಗೂಡ್ಸ್, ರಿಯಾಲ್ಟಿ, ಐಟಿ ಮತ್ತು ತೈಲ ಮತ್ತು ಅನಿಲ ಷೇರುಗಳ ಇಳಿಕೆಯಿಂದ ಕೆಳಕ್ಕೆ ಇಳಿದ ನಿಫ್ಟಿಯು 17600 ಪಾಯಿಂಟ್ಸ್​ಗಿಂತ ಕಡಿಮೆಯಾಗಿದೆ. ದಿನದ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 770.31 ಪಾಯಿಂಟ್ಸ್​ ಅಥವಾ ಶೇ 1.29ರಷ್ಟು ಕುಸಿದು, 58,788.02ಕ್ಕೆ ಇಳಿಕೆ ಕಂಡಿದೆ. ನಿಫ್ಟಿ ಸೂಚ್ಯಂಕವು 219.80 ಪಾಯಿಂಟ್ ಅಥವಾ ಶೇ 1.24ರಷ್ಟು ಕೆಳಕ್ಕೆ ಇಳಿದು, 17,560.20 ಪಾಯಿಂಟ್ಸ್​ಗೆ ತಲುಪಿದೆ. ಸುಮಾರು 1663 ಕಂಪೆನಿಯ ಷೇರುಗಳು ಮುನ್ನಡೆ ಸಾಧಿಸಿದರೆ, 1602 ಕಂಪೆನಿ ಷೇರುಗಳು ಇಳಿಕೆ ದಾಖಲಿಸಿದರೆ, 81 ಕಂಪೆನಿಗಳ ಷೇರಿನ ಬೆಲೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ನಿಫ್ಟಿ ಸೂಚ್ಯಂಕವನ್ನು ಹೊರತುಪಡಿಸಿ ತೈಲ ಮತ್ತು ಅನಿಲ, ಐಟಿ, ರಿಯಾಲ್ಟಿ, ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕಗಳು ಶೇಕಡಾ 1ರಿಂದ 2ರಷ್ಟು ಇಳಿಕೆಯೊಂದಿಗೆ ಇತರ ಎಲ್ಲ ಸೂಚ್ಯಂಕಗಳು ಇಳಿಕೆಯಲ್ಲಿ ಕೊನೆಗೊಂಡವು. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 0.9ರಷ್ಟು ಕುಸಿದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 0.4ರಷ್ಟು ಕುಸಿದಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ

ಹೀರೋ ಮೋಟೊಕಾರ್ಪ್ ಶೇ 2.93

ಬಜಾಜ್ ಆಟೋ ಶೇ 2.44

ಡಿವೀಸ್ ಲ್ಯಾಬ್ಸ್ ಶೇ 1.01

ಐಟಿಸಿ ಶೇ 0.99

ಮಾರುತಿ ಸುಜುಕಿ ಶೇ 0.92

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ

ಎಚ್‌ಡಿಎಫ್‌ಸಿ ಶೇ -3.26

ಎನ್‌ಟಿಪಿಸಿ ಶೇ -3.19

ಎಸ್‌ಬಿಐ ಲೈಫ್ ಇನ್ಷೂರೆನ್ಸ್ ಶೇ -2.86

ಗ್ರಾಸಿಮ್ ಇಂಡಸ್ಟ್ರೀಸ್ ಶೇ -2.72

ಇನ್ಫೋಸಿಸ್ ಶೇ -2.55

ಇದನ್ನೂ ಓದಿ: Multibagger stocks: ಈ ಷೇರುಗಳಲ್ಲಿನ ರೂ. 1 ಲಕ್ಷದ ಹೂಡಿಕೆ 15 ತಿಂಗಳಲ್ಲಿ 44.50 ಲಕ್ಷ ರೂಪಾಯಿ