Stock Market Opening Bell: ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 250ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ

ಏಪ್ರಿಲ್ 18ನೇ ತಾರೀಕಿನ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭಾರೀ ಇಳಿಕೆ ಕಂಡಿವೆ. ಪ್ರಮುಖವಾಗಿ ಏರಿಕೆ, ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.

Stock Market Opening Bell: ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 250ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ
ಸಾಂದರ್ಭಿಕ ಚಿತ್ರ
Edited By:

Updated on: Apr 18, 2022 | 10:42 AM

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏಪ್ರಿಲ್ 18ನೇ ತಾರೀಕಿನ ಸೋಮವಾರದಂದು ಭಾರೀ ಕುಸಿತ ಕಂಡಿದೆ. ಬಿಎಸ್​ಇ ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್ ನೆಲ ಕಚ್ಚಿದರೆ, ನಿಫ್ಟಿ 50 ಸೂಚ್ಯಂಕವು 279 ಪಾಯಿಂಟ್ಸ್ ಕುಸಿಯಿತು. ಇನ್ನು ನಿಫ್ಟಿ ಬ್ಯಾಂಕ್ 639 ಪಾಯಿಂಟ್ಸ್ ಇಳಿಕೆ ಕಂಡಿತ್ತು. ಇದು ಸೋಮವಾರದ ಆರಂಭಿಕ ವಹಿವಾಟಿನಲ್ಲೇ ಕಂಡುಬಂದ ಬೆಳವಣಿಗೆ ಆಗಿದೆ. ವಲಯವಾರು ಗಮನಿಸುವುದಾದರೆ ಮಾಹಿತಿ ತಂತ್ರಜ್ಞಾನ ಸೂಚ್ಯಂಕವು ಶೇ 4ರಷ್ಟು ಇಳಿದರೆ, ಬ್ಯಾಂಕ್ ಸೂಚ್ಯಂಕ ಶೇ 1ರಷ್ಟು ಕೆಳಗೆ ಇಳಿದಿತ್ತು. ವಾಹನ, ಎಫ್​ಎಂಸಿಜಿ, ಫಾರ್ಮಾ ಮತ್ತು ಲೋಹದ ವಲಯದಲ್ಲಿ ಖರೀದಿ ಕಂಡುಬಂತು. ಹಿಂದಿನ ವಹಿವಾಟಿನ ಅಂತ್ಯವನ್ನು ಸೆನ್ಸೆಕ್ಸ್ 58,338.93 ಪಾಯಿಂಟ್ಸ್​ನೊಂದಿಗೆ ಮುಗಿಸಿತ್ತು. ಇಂದಿನ ವ್ಯವಹಾರವನ್ನು 1000 ಪಾಯಿಂಟ್ಸ್ ಇಳಿಕೆಯೊಂದಿಗೆ, ಅಂದರೆ 57,338.58ರೊಂದಿಗೆ ಶುರು ಮಾಡಿತು. ಇನ್ನು ದಿನದ ಕನಿಷ್ಠ ಮಟ್ಟ 57,152.75 ಪಾಯಿಂಟ್ಸ್ ಮುಟ್ಟಿದರೆ, ಗರಿಷ್ಠ ಮಟ್ಟ 57,420.80 ಪಾಯಿಂಟ್ಸ್​ಗೆ ಏರಿತ್ತು.

ನಿಫ್ಟಿ-50 ಸೂಚ್ಯಂಕವು ಈ ಹಿಂದಿನ ದಿನಾಂತ್ಯಕ್ಕೆ 17,475.65 ಪಾಯಿಂಟ್ಸ್​ನಲ್ಲಿ ವ್ಯವಹಾರ ಮುಗಿಸಿತ್ತು. ಇಂದಿನ ಆರಂಭವನ್ನು 17,183.45ರೊಂದಿಗೆ ಶುರು ಮಾಡಿತು. ಕನಿಷ್ಠ ಮಟ್ಟ 17,160.70 ಮುಟ್ಟಿದರೆ, ಗರಿಷ್ಠ ಮಟ್ಟ 17,237.75 ಪಾಯಿಂಟ್ಸ್​ಗೆ ಏರಿತು. ಈ ವರದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 1026.56 ಪಾಯಿಂಟ್ಸ್ ಕೆಳಗೆ ಇಳಿದು, 57312.37 ಪಾಯಿಂಟ್ಸ್​​ನಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ- 50 ಸೂಚ್ಯಂಕವು 267.25 ಪಾಯಿಂಟ್ಸ್ ಕುಸಿದು 17,208.30 ಪಾಯಿಂಟ್ಸ್​ನಲ್ಲಿ ವ್ಯವಹಾರ ನಡೆಸುತ್ತಿತ್ತು.

ನಿಫ್ಟಿಯಲ್ಲಿ ಗಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಎನ್​ಟಿಪಿಸಿ ಶೇ 4.03
ಟಾಟಾ ಸ್ಟೀಲ್ ಶೇ 2.37
ಎಸ್​ಬಿಐ ಲೈಫ್ ಇನ್ಷೂರೆನ್ಸ್ ಶೇ 1.66
ಒಎನ್​ಜಿಸಿ ಶೇ 1.61
ಕೋಲ್ ಇಂಡಿಯಾ ಶೇ 1.31

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಇನ್ಫೋಸಿಸ್ ಶೇ -7.03
ಟೆಕ್​ ಮಹೀಂದ್ರಾ ಶೇ -5.1
ಎಚ್​ಡಿಎಫ್​ಸಿ ಶೇ -3.64
ಎಚ್​ಡಿಎಫ್​ಸಿ ಬ್ಯಾಂಕ್ ಶೇ -3.36
ಟಿಸಿಎಸ್​ ಶೇ -3.08

ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್

TV9 Web

TV9 Kannada

Read More
Loading...
Unable to load recommendations.
Follow Us