Opening Bell: ಸೆನ್ಸೆಕ್ಸ್ 56000 ಪಾಯಿಂಟ್ಸ್ ದಾಟಿ ಹೊಸ ದಾಖಲೆ, ಸಾಥ್ ನೀಡಿದ ನಿಫ್ಟಿ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಮತ್ತೊಮ್ಮೆ ಸಾರ್ವಕಾಲಿಕ ಗರಿಷ್ಠ ಎತ್ತರವನ್ನು ತಲುಪಿವೆ. ಸೆನ್ಸೆಕ್ಸ್, ನಿಫ್ಟಿ ಎರಡೂ ಹೊಸ ಮೈಲುಗಲ್ಲನ್ನು ದಾಟಿವೆ.
ಭಾರತದ ಷೇರು ಮಾರುಕಟ್ಟೆಯ ಅದ್ಭುತ ಓಟ ಮುಂದುವರಿದಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಆಗಸ್ಟ್ 18, 2021ರ ಬುಧವಾರ ಮತ್ತೊಂದು ಐತಿಹಾಸಿಕ ಮೈಲುಗಲ್ಲನ್ನು ದಾಟಿವೆ. ಅದರಲ್ಲೂ ಸೆನ್ಸೆಕ್ಸ್ ಇಂದಿನ ಆರಂಭದ ವಹಿವಾಟಿನಲ್ಲೇ 56 ಸಾವಿರ ಪಾಯಿಂಟ್ಸ್ಗಳ ಗಡಿ ದಾಟಿ ವ್ಯವಹಾರ ನಡೆಸುತ್ತಿದೆ. 55,792.27 ಪಾಯಿಂಟ್ಸ್ನೊಂದಿಗೆ ಮಂಗಳವಾರ ದಿನಾಂತ್ಯ ಕಂಡಿದ್ದ ಸೆನ್ಸೆಕ್ಸ್, ಬುಧವಾರ ಬೆಳಗ್ಗೆ ಆರಂಭ ಮಾಡದ್ದೇ 56,073.31 ಪಾಯಿಂಟ್ಸ್ನೊಂದಿಗೆ. ಇನ್ನು ಈ ವರದಿ ಆಗುವ ಹೊತ್ತಿಗೆ 306.62 ಪಾಯಿಂಟ್ಸ್ಗಳಷ್ಟು ಮೇಲೇರಿ, 56,098.33 ಪಾಯಿಂಟ್ಸ್ನಲ್ಲಿ ವಹಿವಾಟು ನಡೆಸುತ್ತಿತ್ತು. ಈ ಮಧ್ಯೆ ಸಾರ್ವಕಾಲಿಕ ದಾಖಲೆ ಮಟ್ಟವಾದ 56,104.71 ಪಾಯಿಂಟ್ಸ್ ತಲುಪಿತು. ಅದೇ ರೀತಿ ನಿಫ್ಟಿ ಸೂಚ್ಯಂಕ ಸಹ ಭರ್ಜರಿ ಗಳಿಕೆ ಕಂಡಿತು. ಮಂಗಳವಾರ ದಿನಾಂತ್ಯಕ್ಕೆ 16,614.60 ಪಾಯಿಂಟ್ಸ್ನಲ್ಲಿ ವ್ಯವಹಾರ ಮುಗಿಸಿದ್ದ ಸೂಚ್ಯಂಕವು ಬುಧವಾರ ಬೆಳಗ್ಗೆ 16,691.95 ಪಾಯಿಂಟ್ಸ್ನೊಂದಿಗೆ ಶುರುವಾಯಿತು. ದಿನದ ಹಾಗೂ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 16701.85 ಪಾಯಿಂಟ್ಸ್ಗಳನ್ನು ಮುಟ್ಟಿತು. ಇನ್ನು ಈ ವರದಿ ಆಗುವ ಹೊತ್ತಿಗೆ 82.15 ಪಾಯಿಂಟ್ಸ್ಗಳು ಮೇಲೇರಿ 16,696.75 ಪಾಯಿಂಟ್ಸ್ನಲ್ಲಿ ವ್ಯವಹಾರ ನಡೆಸುತ್ತಿತ್ತು.
ಇನ್ನು ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಬುಧವಾರ 74.31ಕ್ಕೆ ತಲುಪಿತು. ಮಂಗಳವಾರದ ದಿನಾಂತ್ಯಕ್ಕೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 74.34 ಇತ್ತು. ಚಿನ್ನದ ದರದ ವಿಚಾರಕ್ಕೆ ಬಂದಲ್ಲಿ ಬೆಲೆ ಸ್ಥಿರವಾಗಿತ್ತು. ಕೊರೊನಾ ವೈರಾಣುವಿನ ಡೆಲ್ಟಾ ರೂಪಾಂತರಿ ಹರಡುವ ಆತಂಕದಲ್ಲಿ ಆರ್ಥಿಕ ಕುಸಿತದ ಭೀತಿ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯು ಸ್ಥಿರವಾಗಿತ್ತು. ಅಂದಹಾಗೆ ನಿಫ್ಟಿ ಐಟಿ ವಲಯದ ಅತ್ಯುತ್ತಮ ಪ್ರದರ್ಶನ ಮುಂದುವರಿದಿದೆ.
ನಿಫ್ಟಿಯಲ್ಲಿ ಗಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಬಜಾಜ್ ಫೈನಾನ್ಸ್ ಶೇ 3.30 ಐಷರ್ ಮೋಟಾರ್ಸ್ ಶೇ 2.73 ಬಜಾಜ್ ಫಿನ್ಸರ್ವ್ ಶೇ 2.38 ಅಲ್ಟ್ರಾಟೆಕ್ ಸಿಮೆಂಟ್ ಶೇ 1.97 ಎಚ್ಡಿಎಫ್ಸಿ ಬ್ಯಾಂಕ್ ಶೇ 1.56
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಹಿಂಡಾಲ್ಕೋ ಶೇ -1.05 ಬಿಪಿಸಿಎಲ್ ಶೇ -0.71 ಟೈಟನ್ ಕಂಪೆನಿ ಶೇ -0.66 ವಿಪ್ರೋ ಶೇ -0.54 ಹೀರೋ ಮೋಟೋಕಾರ್ಪ್ ಶೇ -0.53
ಇದನ್ನೂ ಓದಿ: 1 ಲಕ್ಷ ಹೂಡಿಕೆ ಮಾಡಿದ ಈ ಷೇರುದಾರನಿಗೆ ಸಿಕ್ತು 40 ಲಕ್ಷ; ಅಬ್ಬಾ ಯಾವುದೀ ಷೇರು
(Sensex Hits 56000 Points Mark In The Opening Bell And Nifty Also At Record High On August 18 2021)