ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏಪ್ರಿಲ್ 28ನೇ ತಾರೀಕಿನ ಗುರುವಾರದಂದು ಮತ್ತೆ ಗಳಿಕೆಯನ್ನು ಕಂಡಿದೆ. ಈ ಏರಿಕೆಯಲ್ಲಿ ಎಲ್ಲ ವಲಯಗಳೂ ಪಾಲ್ಗೊಂಡವು. ಎಫ್ಐಐ (ವಿದೇಶೀ ಸಾಂಸ್ಥಿಕ ಹೂಡಿಕೆದಾರರು) ನಿರಂತರವಾಗಿ ಮಾರಾಟದಲ್ಲಿ ತೊಡಗಿದ್ದರ ಹೊರತಾಗಿಯೂ ಈ ಬೆಳವಣಿಗೆ ಆಗಿದೆ. ಆದರೆ ಒಟ್ಟಾರೆಯಾಗಿ ಕಳೆದ ಕೆಲ ವಾರಗಳಿಂದಲೇ ಮಾರುಕಟ್ಟೆಯು ಇಂತಿಷ್ಟೇ ಪಾಯಿಂಟ್ಸ್ಗಳ ಮಧ್ಯೆ ಹೊಯ್ದಾಡುತ್ತಿದೆ. ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 702 ಪಾಯಿಂಟ್ಸ್ ಅಥವಾ ಶೇ 1.23ರಷ್ಟು ಹೆಚ್ಚಳವನ್ನು ದಾಖಲಿಸಿದರೆ, ನಿಫ್ಟಿ-50 ಸೂಚ್ಯಂಕವು 207 ಪಾಯಿಂಟ್ಸ್ ಅಥವಾ ಶೇ 1.21ರಷ್ಟು ಮೇಲೇರಿ 17,245 ಪಾಯಿಂಟ್ಸ್ನಲ್ಲಿ ವ್ಯವಹಾರ ಮುಗಿಸಿತು. ಇಂದಿನ ವ್ಯವಹಾರದಲ್ಲಿ ಎಲ್ಲ ವಲಯಗಳು ಏರಿಕೆ ಕಂಡವು.
ನಿಫ್ಟಿ ಎಫ್ಎಂಸಿಜಿ ಸೂಚ್ಯಂಕ ಶೇ 2ಕ್ಕೂ ಹೆಚ್ಚೆ ಏರಿಕೆ ದಾಖಲಿಸಿದ್ದು, ಹಿಂದೂಸ್ತಾನ್ ಯುನಿಲಿವರ್ ಮುಂಚೂಣಿಯಲ್ಲಿತ್ತು. ನಿಫ್ಟಿ ಬ್ಯಾಂಕ್, ಹಣಕಾಸು ಸೇವೆಗಳು, ಮಾಹಿತಿ ತಂತ್ರಜ್ಞಾನ, ತೈಲ ಮತ್ತು ಅನಿಲ ಹಾಗೂ ಫಾರ್ಮಾಸ್ಯುಟಿಕಲ್ಸ್ ಸೂಚ್ಯಂಕಗಳು ಹತ್ತಿರ ಹತ್ತಿರ ಶೇಕಡಾ 1ರಷ್ಟು ಗಳಿಕೆ ಕಂಡವು. ವಾಹನ ಸೂಚ್ಯಂಕ ಶೇ 0.3ರಷ್ಟು ಮೇಲೇರಿತು. ಎನ್ಎಸ್ಇಯಲ್ಲಿ ಇಂದು 922 ಕಂಪೆನಿ ಷೇರುಗಳು ಹೆಚ್ಚಳವನ್ನು ದಾಖಲಿಸಿದರೆ, 1014 ಕಂಪೆನಿ ಷೇರುಗಳು ಕುಸಿತ ಕಂಡವು.
ನಿಫ್ಟಿಯಲ್ಲಿ ಗಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಎಚ್ಯುಎಲ್ ಶೇ 4.51
ಎಚ್ಡಿಎಫ್ಸಿ ಲೈಫ್ ಶೇ 4.34
ಎಸ್ಬಿಐ ಲೈಫ್ ಇನ್ಷೂರೆನ್ಸ್ ಶೇ 3.97
ಯುಪಿಎಲ್ ಶೇ 3.24
ಏಷ್ಯನ್ ಪೇಂಟ್ಸ್ ಶೇ 3.16
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಬಜಾಜ್ ಆಟೋ ಶೇ -1.82
ಹಿಂಡಾಲ್ಕೋ ಶೇ -0.75
ಭಾರ್ತಿ ಏರ್ಟೆಲ್ ಶೇ -0.68
ಮಹೀಂದ್ರಾ ಅಂಡ್ ಮಹೀಂದ್ರಾ ಶೇ -0.43
ಎಚ್ಸಿಎಲ್ ಟೆಕ್ ಶೇ -0.28
ಇದನ್ನೂ ಓದಿ: ಷೇರು ಮಾರುಕಟ್ಟೆ ಬೆಲೆಗಳ ಏರಿಳಿತ ಊಹಿಸುವುದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ
Published On - 6:14 pm, Thu, 28 April 22