ಭಾರತದ ಷೇರುಪೇಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏಪ್ರಿಲ್ 1ನೇ ತಾರೀಕಿನ ಶುಕ್ರವಾರದಂದು ಭರ್ಜರಿ ಏರಿಕೆಯನ್ನು ದಾಖಲಿಸಿವೆ. ಹೊಸ ಹಣಕಾಸು ವರ್ಷದ ಮೊದಲ ದಿನ ಸೆನ್ಸೆಕ್ಸ್ 708.18 ಪಾಯಿಂಟ್ಸ್ ಅಥವಾ ಶೇ 1.21ರಷ್ಟು ಹೆಚ್ಚಳ ಕಂಡು, 59,276.69 ಪಾಯಿಂಟ್ಸ್ನೊಂದಿಗೆ ವಹಿವಾಟು ಮುಕ್ತಾಯಗೊಳಿಸಿತು. ಇತ್ತು ನಿಫ್ಟಿ ಸೂಚ್ಯಂಕವು 205.70 ಪಾಯಿಂಟ್ಸ್ ಅಥವಾ ಶೇ 1.18ರಷ್ಟು ಮೇಲೇರಿ 17,670.50 ಪಾಯಿಂಟ್ಸ್ನೊಂದಿಗೆ ಈ ದಿನದ- ವಾರದ ವ್ಯವಹಾರವನ್ನು ಮುಗಿಸಿದೆ. ಇಂದಿನ ವಹಿವಾಟಿನಲ್ಲಿ 2564 ಕಂಪೆನಿಯ ಷೇರುಗಳು ಏರಿಕೆಯನ್ನು ಕಂಡರೆ, 645 ಕಂಪೆನಿಯ ಷೇರುಗಳು ಕುಸಿತ ಕಂಡಿವೆ. 84 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ಎಲ್ಲ ವಲಯದ ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯ ಕಂಡಿವೆ. ವಾಹನ, ಬ್ಯಾಂಕ್, ತೈಲ ಮತ್ತು ಅನಿಲ, ರಿಯಾಲ್ಟಿ, ವಿದ್ಯುತ್ ಹಾಗೂ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳ ಸೂಚ್ಯಂಕಗಳು ಶೇ 1ರಿಂದ 4ರಷ್ಟು ಮೇಲೇರಿವೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ತಲಾ ಶೇ 1ರಷ್ಟು ಹೆಚ್ಚಳ ಕಂಡಿವೆ.
ಎನ್ಎಸ್ಇಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಎನ್ಟಿಪಿಸಿ ಶೇ 5.89
ಬಿಪಿಸಿಎಲ್ ಶೇ 4.19
ಪವರ್ಗ್ರಿಡ್ ಕಾರ್ಪೊರೇಷನ್ ಶೇ 3.81
ಇಂಡಸ್ಇಂಡ್ ಬ್ಯಾಂಕ್ ಶೇ 3.55
ಎಸ್ಬಿಐ ಶೇ 2.97
ಎನ್ಎಸ್ಇಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಹೀರೋ ಮೋಟೋಕಾರ್ಪ್ ಶೇ -2.35
ಟೆಕ್ ಮಹೀಂದ್ರಾ ಶೇ -0.82
ಎಸ್ಬಿಐ ಲೈಫ್ ಇನ್ಷೂರೆನ್ಸ್ ಶೇ -0.72
ಸನ್ ಫಾರ್ಮಾ ಶೇ -0.66
ಟೈಟನ್ ಕಂಪೆನಿ ಶೇ -0.60
ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್