AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bankrupt: ನಾನ್ಯಾಕೆ ವಾಪಸ್ ಕೊಡ್ಲಿ? ಬ್ಯಾಂಕ್ ದಿವಾಳಿಯಾಗುತ್ತಿದ್ದರೂ ಸಖತ್ ಹಣ ಪಡೆದು ಈಗ ಮರಳಿಸಲು ಒಲ್ಲೆ ಎನ್ನುತ್ತಿರುವ ಮಾಜಿ ಸಿಇಒ ಧೋರಣೆಗೆ ಟೀಕೆ

SVB Ex-CEO Greg Becker: ದಿವಾಳಿ ಎದ್ದ ಎಸ್​ವಿಬಿ ಬ್ಯಾಂಕ್​ನ ಮಾಜಿ ಸಿಇಒ ನೈತಿಕತೆಯ ದೃಷ್ಟಿಯಿಂದ ತಮಗೆ ಸಿಕ್ಕಿದ್ದ ಪರಿಹಾರ ಹಣವನ್ನು ಮರಳಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಆದರೆ, ತಾನ್ಯಾಕೆ ಅದನ್ನು ವಾಪಸ್ ಕೊಡಲಿ. ಬ್ಯಾಂಕ್ ಮುಚ್ಚಿಹೋಗಲು ತಾನು ಹೊಣೆಯಲ್ಲ ಎಂದು ಗ್ರೆಗ್ ಬೆಕರ್ ಹೇಳಿದ್ದಾರೆ.

Bankrupt: ನಾನ್ಯಾಕೆ ವಾಪಸ್ ಕೊಡ್ಲಿ? ಬ್ಯಾಂಕ್ ದಿವಾಳಿಯಾಗುತ್ತಿದ್ದರೂ ಸಖತ್ ಹಣ ಪಡೆದು ಈಗ ಮರಳಿಸಲು ಒಲ್ಲೆ ಎನ್ನುತ್ತಿರುವ ಮಾಜಿ ಸಿಇಒ ಧೋರಣೆಗೆ ಟೀಕೆ
ಸಿಲಿಕಾನ್ ವ್ಯಾಲಿ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 17, 2023 | 12:44 PM

ಕ್ಯಾಲಿಫೋರ್ನಿಯಾ: ಅಮೆರಿಕದ ಬ್ಯಾಂಕಿಂಗ್ ಕ್ಷೇತ್ರ ತರಗೆಲೆಯಂತೆ ಉರುಳಿಬೀಳಲು ಮುನ್ನುಡಿ ಹಾಕಿದ್ದು ಸಿಲಿಕಾನ್ ವ್ಯಾಲಿ ಬ್ಯಾಂಕ್. ಕೆಲ ತಿಂಗಳ ಹಿಂದೆ ದಿವಾಳಿ ಎದ್ದ ಈ ಬ್ಯಾಂಕ್​ನ ಮಾಜಿ ಸಿಇಒ ಮತ್ತೆ ಸುದ್ದಿಯಲ್ಲಿದ್ದಾರೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB- Silicon Valley Bank) ದಿವಾಳಿ ಏಳುತ್ತಿದ್ದರೂ 2022ರ ವರ್ಷಕ್ಕೆ ಭರ್ಜರಿ ಕಾಂಪೆನ್ಸೇಷನ್ ಪ್ಯಾಕೇಜ್ ಪಡೆದಿದ್ದ ಗ್ರೆಗ್ ಬೆಕರ್ (SVB Ex-CEO Greg Becker) ಇದೀಗ ಆ ಹಣವನ್ನು ಮರಳಿಸಲು ನಿರಾಕರಿಸಿದ್ದಾರೆ. ನೈತಿಕತೆಯ ದೃಷ್ಟಿಯಿಂದ ಅವರು ತಮಗೆ ಸಿಕ್ಕಿದ್ದ ಪರಿಹಾರ ಹಣವನ್ನು ಮರಳಿಸಬೇಕೆಂಬ ಒತ್ತಾಯ ಹಲವು ಕಡೆಗಳಿಂದ ಕೇಳಿಬರುತ್ತಿದೆ. ಆದರೆ, ತಾನ್ಯಾಕೆ ಅದನ್ನು ವಾಪಸ್ ಕೊಡಲಿ. ಬ್ಯಾಂಕ್ ಮುಚ್ಚಿಹೋಗಲು ತಾನು ಹೊಣೆಯಲ್ಲ ಎಂದು ಮಾಜಿ ಎಸ್​ವಿಬಿ ಸಿಇಒ ಆದ ಗ್ರೆಗ್ ಬೆಕರ್ ಹೇಳಿದ್ದಾರೆ.

ಗ್ರೆಗ್ ಬೆಕರ್ ಪಡೆದ ಕಾಂಪೆನ್ಸೇಷನ್ ಹಣ ಮತ್ತು ಶೇರು ಮಾರಾಟ ಹಣ ಎಷ್ಟು?

ವಿಪರ್ಯಾಸ ಎಂದರೆ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿ ಘೋಷಿಸುವ ಮುನ್ನ ಸಿಇಒ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿರುವವರು ಮನಸೋಯಿಚ್ಛೆ ಕಾಂಪೆನ್ಸೇಷನ್ ಪಡೆದಿದ್ದಾರೆ. ಆಗ ಸಿಇಒ ಆಗಿದ್ದ ಗ್ರೆಗ್ ಬೆಕರ್ ಅವರಿಗೆ 2022ರ ವಾರ್ಷಿಕ ಕಾಂಪೆನ್ಸೇಷನ್ ಮೊತ್ತ 10 ಮಿಲಿಯನ್ ಡಾಲರ್. ಅಂದರೆ ಸುಮಾರು 82 ಕೋಟಿ ರುಪಾಯಿ.

ಇದನ್ನೂ ಓದಿSEBI: ಬಿಬಿಎಂಪಿಯಂಥ ಸಂಸ್ಥೆಗಳಿಗೂ ಡೆಟ್ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡಲು ಅವಕಾಶ: ಸೆಬಿ ಆಲೋಚನೆ; ಆದರೆ, ನಷ್ಟವಾದರೆ ಹೊಣೆ ಯಾರು?

ಇದೊಂದೇ ಅಲ್ಲ, ಎಸ್​ವಿಬಿ ಪತನಗೊಳ್ಳುವ ಕೆಲ ದಿನಗಳ ಮೊದಲು ಗ್ರೆಗ್ ಬೆಕರ್ ಅವರು ಸಂಸ್ಥೆ ಷೇರುಗಳನ್ನು ಮಾರಿದ್ದರು. ಒಟ್ಟು 3.6 ಮಿಲಿಯನ್ ಡಾಲರ್ ಮೊತ್ತದ ಷೇರುಗಳನ್ನು ಬಿಕರಿ ಮಾಡಿದ್ದರು. ದುರಂತ ಅಂದರೆ ಎಸ್​ವಿಬಿ ದಿವಾಳಿ ಎದ್ದು ಹೇಳಹೆಸರಿಲ್ಲದಂತಾಗುತ್ತದೆ ಎಂಬುದು ಟಾಪ್ ಎಕ್ಸಿಕ್ಯೂಟಿವ್ಸ್​ಗೆ ಚೆನ್ನಾಗಿ ಗೊತ್ತಿತ್ತು. ಅದರಿಂದ ಸಾಧ್ಯವಾದಷ್ಟೂ ಹಣ ಮಾಡಿಕೊಳ್ಳುವುದು ಅವರ ತಂತ್ರವಾಗಿದ್ದಿರಬಹುದು ಎಂಬ ಟೀಕೆ ಕೇಳಿಬರುತ್ತಿದೆ.

ಗ್ರೆಗ್ ಬೆಕರ್ ಪ್ರಕಾರ ಎಸ್​ವಿಬಿ ಪತನಕ್ಕೆ ಯಾರು ಹೊಣೆ?

ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿಯಾಗಿದ್ದು ಮಾರ್ಚ್ ತಿಂಗಳಲ್ಲಿ. ಇದಕ್ಕೆ ಬ್ಯಾಂಕ್​ನ ಅಸಮಪರ್ಕ ನಿರ್ವಹಣೆಯೇ ಕಾರಣ ಎಂಬುದು ಹಲವರ ಅನಿಸಿಕೆ. ಆದರೆ, ಮಾಜಿ ಸಿಇಒ ಗ್ರೆಗ್ ಬೆಕರ್ ಬೇರೆಯೇ ವಿಶ್ಲೇಷಣೆ ಮಾಡುತ್ತಾರೆ. ಅವರ ಪ್ರಕಾರ ಅಸಾಧಾರಣ ಬೆಳವಣಿಗೆಗಳಿಂದಾಗಿ ಎಸ್​ವಿಬಿ ಪತನಗೊಳ್ಳಬೇಕಾಯಿತು. ಬಡ್ಡಿ ದರ ಏರಿಕೆ, ಸೋಷಿಯಲ್ ಮೀಡಿಯಾದಲ್ಲಿ ನೆಗಟಿವ್ ಪ್ರಚಾರ ಇವೆಲ್ಲವೂ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮುಚ್ಚಿಹೋಗಲು ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿAirtel: ನಿರೀಕ್ಷೆಮೀರಿದ ಲಾಭ ಗಳಿಸಿದ ಏರ್​ಟೆಲ್; ಈ ಪ್ಲಾನ್​ಗಳಿಗೆ ಶೇ. 15 ಡಿಸ್ಕೌಂಟ್; ಯಾವ್ಯಾವುದಕ್ಕೆ ಇದೆ ರಿಯಾಯಿತಿ?

ಹಣ ವಾಪಸ್ ಕೊಡೋದಿಲ್ಲ ಎನ್ನುವ ಎಸ್​ವಿಬಿ ಮಾಜಿ ಸಿಇಒ

ಸಿಲಿಕಾನ್ ವ್ಯಾಲಿ ಬ್ಯಾಂಕ್​ನಿಂದ ತಾನು ಪಡೆದ ಗಳಿಕೆಯ ಹಣವನ್ನು ಮರಳಿಸುವ ಪ್ರಶ್ನೆಯೇ ಇಲ್ಲ. ಮರಳಿಸುತ್ತೇನೆ ಎಂದು ಹಿಂದೆ ಯಾವತ್ತೂ ಹೇಳಿಲ್ಲ ಎಂದು ಮಾಜಿ ಸಿಇಒ ಗ್ರೆಗ್ ಬೆಕರ್ ಹೇಳಿದ್ದಾರೆ. ಈ ಬ್ಯಾಂಕ್ ಪತನದ ಬಗ್ಗೆ ಅಲ್ಲಿನ ಪ್ರಾಧಿಕಾರಗಳು ತನಿಖೆ ನಡೆಸುತ್ತಿವೆ. ಈ ತನಿಖೆಗೆ ತಾನು ಸಹಕರಿಸುತ್ತೇನೆ ಹೊರತು ನನಗೆ ಸಿಕ್ಕಿರುವ ಕಾಂಪೆನ್ಸೇಷನ್ ಹಣವನ್ನು ವಾಪಸ್ ಮಾಡುವುದಿಲ್ಲ ಎಂದು ಬೆಕರ್ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ