Sony-Zee: ಕೊನೆಗೂ ಉತ್ತರ ಸಿಗದ ಸಿಇಒ ಪ್ರಶ್ನೆ; ಮುರಿದುಬಿತ್ತು ಸೋನಿ-ಝೀ ಡೀಲ್; ಟರ್ಮಿನೇಶನ್ ಲೆಟರ್ ಬರೆದ ಸೋನಿ

Sony Zee Merger Twist: ಸೋನಿ ಗ್ರೂಪ್​ನ ಭಾರತೀಯ ವ್ಯವಹಾರಗಳನ್ನು ಝೀ ಎಂಟರ್ಟೈನ್ಮೆಂಟ್ ಜೊತೆಗೆ ವಿಲೀನಗೊಳಿಸುವ ಒಪ್ಪಂದ ನೆರವೇರುತ್ತಿಲ್ಲ. 10 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದದಿಂದ ಸೋನಿ ಗ್ರೂಪ್ ಹೊರಬಿದ್ದಿದೆ. ಝೀಗೆ ಟರ್ಮಿನೇಶನ್ ನೋಟೀಸ್ ಕೊಟ್ಟಿದೆ. ವಿಲೀನಗೊಂಡ ನಂತರದ ಕಂಪನಿಗೆ ಯಾರು ಸಿಇಒ ಆಗಬೇಕು ಎಂಬುದು ಕೊನೆಯವರೆಗೂ ಪ್ರಶ್ನೆಯಾಗಿ ಉಳಿದುಕೊಂಡಿದೆ.

Sony-Zee: ಕೊನೆಗೂ ಉತ್ತರ ಸಿಗದ ಸಿಇಒ ಪ್ರಶ್ನೆ; ಮುರಿದುಬಿತ್ತು ಸೋನಿ-ಝೀ ಡೀಲ್; ಟರ್ಮಿನೇಶನ್ ಲೆಟರ್ ಬರೆದ ಸೋನಿ
ಸೋನಿ ಇಂಡಿಯಾ ಮತ್ತು ಝೀ
Follow us
|

Updated on: Jan 22, 2024 | 11:27 AM

ನವದೆಹಲಿ, ಜನವರಿ 22: ಜಪಾನ್​ನ ಸೋನಿ ಗ್ರೂಪ್ ಸಂಸ್ಥೆಯ ಭಾರತೀಯ ವ್ಯವಹಾರಗಳನ್ನು ಝೀ ಎಂಟರ್ಟೈನ್ಮೆಂಟ್ ಸಂಸ್ಥೆ (ZEEL- Zee Entertainment Enterprises Ltd) ಜೊತೆ ವಿಲೀನ ಕಾರ್ಯ ನಡೆಯುವುದಿಲ್ಲ. ಸೋನಿ ಗ್ರೂಪ್ ಈ ಡೀಲ್​ನಿಂದ ಹೊರನಡೆದಿದೆ. ವಿಲೀನಗೊಳಿಸುವ ಪ್ಲಾನ್ ಅನ್ನು ಕೈಬಿಡುತ್ತಿರುವುದಾಗಿ ಝೀ ಎಂಟರ್ಟೈನ್ಮೆಂಟ್ ಎಂಟರ್​ಪ್ರೈಸಸ್ ಸಂಸ್ಥೆಗೆ ಸೋನಿ (Sony Group) ಪತ್ರ ಬರೆದಿದೆ ಎಂದು ಬ್ಲೂಮ್​ಬರ್ಗ್ ಸುದ್ದಿಸಂಸ್ಥೆ ಇಂದು ವರದಿ ಮಾಡಿದೆ. ಇಂದು ಸೋಮವಾರ ಬೆಳಗ್ಗೆ ಟರ್ಮಿನೇಶನ್ ಲೆಟರ್ ಅನ್ನು ಝೀಗೆ ಕಳುಹಿಸಿರುವುದು ತಿಳಿದುಬಂದಿದೆ.

ಕೆಲ ದಿನಗಳ ಹಿಂದೆಯೇ ಮಾಧ್ಯಮಗಳಲ್ಲಿ ಈ ಡೀಲ್ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎನ್ನುವ ಸುದ್ದಿ ದಟ್ಟವಾಗಿ ಕೇಳಿಬಂದಿತ್ತು. ಆದರೆ, ಝೀ ಸಂಸ್ಥೆ ಆ ಸುದ್ದಿಯನ್ನು ಅಲ್ಲಗಳೆದಿತ್ತು. ಈಗ ಸೋನಿ ಸಂಸ್ಥೆಯೇ ಅಧಿಕೃತವಾಗಿ ಟರ್ಮಿನೇಶನ್ ಲೆಟರ್ ಕಳುಹಿಸಿದೆ. ವರದಿ ಪ್ರಕಾರ ವಿಲೀನ ಒಪ್ಪಂದದ ಕೆಲ ನಿಬಂಧನಗಳಿಗೆ ಝೀ ಬದ್ಧವಾಗಿಲ್ಲ ಎಂಬುದು ಸೋನಿ ಹೊರನಡೆಯಲು ಕಾರಣ ಎನ್ನಲಾಗಿದೆ.

ಎರಡು ವರ್ಷದ ಹಿಂದೆ ಸೋನಿಯ ಭಾರತೀಯ ವ್ಯವಹಾರಗಳನ್ನು ಝೀ ಸಂಸ್ಥೆ ಜೊತೆ ವಿಲೀನಗೊಳಿಸುವ ಒಪ್ಪಂದವಾಗಿತ್ತು. ಹಲವು ನಿಯಮ ಮತ್ತು ನಿಬಂಧನೆಗಳಿಗೆ ಈ ಒಪ್ಪಂದ ಒಳಪಟ್ಟಿತ್ತು. ಡಿಸೆಂಬರ್ ಕೊನೆಯ ವಾರದೊಳಗೆ ಒಪ್ಪಂದಕ್ಕೆ ಅಂಕಿತ ಬೀಳಬೇಕಿತ್ತು. ಆದರೆ, ಒಪ್ಪಂದದ ಕೆಲ ಅಂಶಗಳ ಮೇಲೆ ಎರಡೂ ಸಂಸ್ಥೆಗಳು ಒಮ್ಮತಕ್ಕೆ ಬರಲಾಗಿಲ್ಲ. ಅದಾಗಿ 30 ದಿನಗಳ ಗ್ರೇಸ್ ಪೀರಿಯಡ್ ಅಥವಾ ಹೆಚ್ಚುವರಿ ಕಾಲಾವಕಾಶ (grace period) ಕೂಡ ಮುಗಿದು ಹೋಗಿದೆ. ಹೀಗಾಗಿ, ಸೋನಿ ಕಾರ್ಪೊರೇಶನ್ ಅಧಿಕೃತವಾಗಿ ಟರ್ಮಿನೇಶನ್ ನೋಟೀಸ್ ಅನ್ನು ಝೀಗೆ ಕಳುಹಿಸಿದೆ. ಇವತ್ತೇ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸುವ ಫೈಲಿಂಗ್​ನಲ್ಲಿ ಸೋನಿ ಈ ವಿಚಾರವನ್ನು ತಿಳಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Banks & Dravid: ಬ್ಯಾಂಕುಗಳು ರಾಹುಲ್ ದ್ರಾವಿಡ್​ರಂತೆ ಆಡಬೇಕು: ಆರ್​ಬಿಐ ಗವರ್ನರ್ ಕರೆ; ಕ್ರಿಕೆಟಿಗನಿಗೂ ಬ್ಯಾಂಕಿಗೂ ಏನು ಸಂಬಂಧ?

ಯಾವ ವಿಷಯಕ್ಕೆ ಭಿನ್ನಾಭಿಪ್ರಾಯ?

ಸೋನಿ ಇಂಡಿಯಾ ಮತ್ತು ಝೀ ವಿಲೀನವು 10 ಬಿಲಿಯನ್ ಡಾಲರ್ ಮೌಲ್ಯದ್ದಾಗಿತ್ತು. ವಿಲೀನದ ನಂತರದ ಕಂಪನಿಗೆ ಯಾರು ಸಿಇಒ ಆಗಬೇಕು ಎಂಬುದು ಕೊನೆಯವರೆಗೂ ಪ್ರಶ್ನೆಯಾಗಿಯೇ ಉಳಿದಿದೆ. ಝೀ ಎಂಟರ್ಟೈನ್ಮೆಂಟ್ ಲಿಮಿಟೆಡ್​ನ ಸಿಇಒ ಪುನೀತ್ ಗೋಯಂಕಾ ಅವರೇ ಹೊಸ ಸಂಸ್ಥೆಗೆ ಸಿಇಒ ಆಗಬೇಕು ಎಂಬುದು ಝೀ ಕಡೆಯಿಂದ ಇದ್ದ ಅಭಿಪ್ರಾಯ. ಆದರೆ, ಕೋರ್ಟ್ ಕೇಸ್ ಎದುರಿಸುತ್ತಿರುವ ಪುನೀತ್ ಗೋಯಂಕಾ ಸಿಇಒ ಆಗಬಾರದು ಎಂಬುದು ಸೋನಿ ಪಟ್ಟು. ಈ ವಿಷಯದಲ್ಲಿ ಒಮ್ಮತ ಮೂಡಿಲ್ಲ ಎನ್ನಲಾಗಿದೆ.

ಸೋನಿ ಈ ಡೀಲ್ ಅನ್ನು ಟರ್ಮಿನೇಟ್ ಮಾಡಿರುವ ಸುದ್ದಿಯ ಬಗ್ಗೆ ಝೀ ವತಿಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ