ಬೀಸುವ ಒಂದು ದೊಣ್ಣೆಯಿಂದ ಸ್ಪೈಸ್​ಜೆಟ್ ಪಾರು; ಇನ್​ಸಾಲ್ವನ್ಸಿ ಕೇಸ್ ಹಿಂಪಡೆದ ಏರ್​ಕ್ಯಾಸಲ್

SpiceJet vs Aircastle dispute: ಭಾರತದ ಏರ್​ಲೈನ್ ಸಂಸ್ಥೆಯಾದ ಸ್ಪೈಸ್​ಜೆಟ್ ವಿರುದ್ಧ ಸಲ್ಲಿಸಲಾಗಿದ್ದ ಇನ್ಸಾಲ್ವೆನ್ಸಿ ಅರ್ಜಿಯನ್ನು ಏರ್​ಕ್ಯಾಸಲ್ ಹಿಂಪಡೆದುಕೊಂಡಿದೆ. 23.39 ಮಿಲಿಯನ್ ಡಾಲರ್ ಮೊತ್ತದ ವ್ಯಾಜ್ಯದಲ್ಲಿ ಸದ್ಯಕ್ಕೆ 5 ಮಿಲಿಯನ್ ಡಾಲರ್​ಗೆ ಸೆಟಲ್ಮೆಂಟ್ ಮಾಡಿಕೊಳ್ಳಲಾಗಿದೆ. ಕೋರ್ಟ್ ಮಾರ್ಗದ ಬದಲು ಸಂಧಾನದ ಮೂಲಕ ವ್ಯಾಜ್ಯ ಶಮನ ಮಾಡಿಕೊಳ್ಳುವ ಈ ಎರಡು ಕಂಪನಿಗಳ ಪ್ರಯತ್ನ ಫಲಪ್ರದವಾಗಿದೆ.

ಬೀಸುವ ಒಂದು ದೊಣ್ಣೆಯಿಂದ ಸ್ಪೈಸ್​ಜೆಟ್ ಪಾರು; ಇನ್​ಸಾಲ್ವನ್ಸಿ ಕೇಸ್ ಹಿಂಪಡೆದ ಏರ್​ಕ್ಯಾಸಲ್
ಸ್ಪೈಸ್​ಜೆಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 28, 2024 | 12:48 PM

ನವದೆಹಲಿ, ನವೆಂಬರ್ 28: ಸ್ಪೆಸ್​ಜೆಟ್ ಏರ್​ಲೈನ್ ಸಂಸ್ಥೆ ವಿರುದ್ದ ಸಲ್ಲಿಸಿದ್ದ ಸಾಲವಸೂಲಾತಿ ಪ್ರಕರಣವನ್ನು ಐರ್ಲೆಂಡ್​ನ ಏರ್​ಕ್ಯಾಸಲ್ ಹಿಂಪಡೆದುಕೊಂಡಿದೆ. ಸಾಲ ಮರಳಿಸುವ ಸಂಬಂಧ ಸ್ಪೈಸ್​ಜೆಟ್ ಆಫರ್ ಅನ್ನು ಏರ್​ಕ್ಯಾಸಲ್ ಒಪ್ಪಿಕೊಂಡಿದೆ. ಈ ಕಾರಣಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ (ಎನ್​ಸಿಎಲ್​ಟಿ) ಸಲ್ಲಿಸಿದ್ದ ಇನ್ಸಾಲ್ವೆನ್ಸಿ ಅರ್ಜಿಯನ್ನು ಅದು ವಾಪಸ್ ತೆಗೆದುಕೊಂಡಿದೆ. ನಿನ್ನೆ ನಡೆದ ಈ ಬೆಳವಣಿಗೆ ಬೆನ್ನಲ್ಲೇ ಇಂದು ಸ್ಪೈಸ್ ಜೆಟ್ ಷೇರುಬೆಲೆ ಹೆಚ್ಚತೊಡಗಿದೆ.

ಏರ್​ಕ್ಯಾಸಲ್ ಡೆಸಿಗ್ನೇಟೆಡ್ ಆ್ಯಕ್ಟಿವಿಟಿ ಕಂಪನಿ ಮತ್ತು ವಿಲ್ಮಿಂಗ್​ಟನ್ ಟ್ರಸ್ಟ್ ಎಸ್​ಪಿ ಸರ್ವಿಸಸ್​ ಸಂಸ್ಥೆಯೊಂದಿಗಿನ 23.39 ಮಿಲಿಯನ್ ಡಾಲರ್ ಸಾಲದ ವ್ಯಾಜ್ಯವನ್ನು ಅಂತ್ಯಗೊಳಿಸಿರುವುದಾಗಿ ಕಳೆದ ತಿಂಗಳು ಸ್ಪೈಸ್​ಜೆಟ್ ಘೋಷಿಸಿತ್ತು. 5 ಮಿಲಿಯನ್ ಡಾಲರ್ ಮೊತ್ತಕ್ಕೆ ಸೆಟಲ್ಮೆಂಟ್​ಗೆ ಬರಲಾಗಿದೆ. ಹಾಗೆಯೇ, ನಿರ್ದಿಷ್ಟ ಏರ್​​ಕ್ರಾಫ್ಟ್ ಎಂಜಿನ್​ಗಳ ದುರಸ್ತಿಗೂ ಒಪ್ಪಂದ ಮಾಡಲಾಗಿದೆ.

ವ್ಯಾಜ್ಯ ಶಮನಕ್ಕಾಗಿ ಕೋರ್ಟ್ ದಾರಿಯಲ್ಲಿ ಹೋದರೆ ಸುದೀರ್ಘ ಕಾಲ ಹಿಡಿಯುತ್ತದೆ. ಅದರ ಬದಲು ಸಂಧಾನ ಪ್ರಕ್ರಿಯೆ ಮೂಲದ ವ್ಯಾಜ್ಯಕ್ಕೆ ಪರಿಹಾರ ಹುಡಕಲು ಎರಡೂ ಸಂಸ್ಥೆಗಳು ನಿರ್ಧರಿಸಿದ್ದವು. ಅದರಂತೆ ಸದ್ಯಕ್ಕೆ ಒಂದು ದಾರಿ ಕಂಡುಕೊಂಡಿವೆ. ಇದರೊಂದಿಗೆ, ಏರ್​ಕ್ಯಾಸಲ್ ಸಂಸ್ಥೆ ಸ್ಪೈಸ್​ಜೆಟ್ ವಿರುದ್ಧದ ಎಲ್ಲಾ ಕೋರ್ಟ್ ಮೊಕದ್ದಮೆಗಳನ್ನು ಹಿಂಪಡೆದುಕೊಂಡಿದೆ.

ಇದನ್ನೂ ಓದಿ: 50 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಸ್ವಂತ ಕಂಪನಿ ಕಟ್ಟಿ ಪರಿತಪಿಸುತ್ತಿರುವ ವ್ಯಕ್ತಿ

ಆದರೆ, ಸ್ಪೈಸ್​ಜೆಟ್ ಸಂಸ್ಥೆ ವಿರುದ್ಧ ಇನ್ನೂ ಕೆಲ ದೊಣ್ಣೆಗಳು ಬೀಸುತ್ತಿವೆ. ಇತ್ತೀಚೆಗಷ್ಟೇ ಸಬರ್ಮತಿ ಏವಿಯೇಶನ್ ಮತ್ತು ಜೆಟ್​ಏರ್17 ಎನ್ನುವ ಸಂಸ್ಥೆಗಳು ಎರಡು ಇನ್ಸಾಲ್ವೆನ್ಸಿ ಅರ್ಜಿಗಳನ್ನು ಸ್ಪೈಸ್ ಜೆಟ್ ವಿರುದ್ಧ ಸಲ್ಲಿಸಿವೆ. ಸಬರಮತಿ ಏವಿಯೇಶನ್ ಅರ್ಜಿ ಸಂಬಂಧ ಎನ್​ಸಿಎಲ್​ಟಿಯಿಂದ ಸ್ಪೈಸ್​ಜೆಟ್​ಗೆ ನೋಟೀಸ್ ಹೋಗಿದೆ. ಇನ್ನೊಂದೆಡೆ, ಜೆಟ್​ಏರ್17 ಸಂಸ್ಥೆ ತನಗೆ ಸ್ಪೈಸ್​ಜೆಟ್​ನಿಂದ 27 ಮಿಲಿಯನ್ ಡಾಲರ್ ಹಣ ಬಾಕಿ ಬರಬೇಕೆಂದು ಅರ್ಜಿ ಹಾಕಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ನ್ಯಾಯಮಂಡಳಿಯು ಜೆಟ್​ಏರ್​ಗೆ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ