AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯೂಚುವಲ್ ಫಂಡ್​ನಲ್ಲಿ ಎಷ್ಟು ವಿಧ, ಹೇಗೆ ಹೂಡಿಕೆ? ಇಲ್ಲಿದೆ ಮಾಹಿತಿ

Mutual Funds details: ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈಕ್ವಿಟಿ, ಡೆಟ್, ಹೈಬ್ರಿಡ್, ಥಿಮ್ಯಾಟಿಕ್ ಇತ್ಯಾದಿ ರೀತಿಯ ಮ್ಯುಚುವಲ್ ಫಂಡ್​ಗಳಿವೆ. ಫಂಡ್​ಗಳಲ್ಲಿನ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕೆಂದು ನಿರ್ಧರಿಸಲು ಒಂದು ರಿಸರ್ಚ್ ಟೀಮ್ ಇರುತ್ತದೆ. ಇದರ ವೆಚ್ಚವನ್ನು ಗ್ರಾಹಕರೇ ಭರಿಸಬೇಕು. ಇನ್ನು, ಬ್ರೋಕರ್ ಸಂಸ್ಥೆಗಳ ಮೂಲಕ ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಬಹುದು. ಅಥವಾ ನೇರವಾಗಿ ಫಂಡ್​ನ ವೆಬ್​ಸೈಟ್​ಗೆ ಹೋಗಿ ಹೂಡಿಕೆ ಮಾಡಬಹುದು.

ಮ್ಯೂಚುವಲ್ ಫಂಡ್​ನಲ್ಲಿ ಎಷ್ಟು ವಿಧ, ಹೇಗೆ ಹೂಡಿಕೆ? ಇಲ್ಲಿದೆ ಮಾಹಿತಿ
ಮ್ಯುಚುವಲ್ ಫಂಡ್​
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 28, 2024 | 4:57 PM

Share

ಮ್ಯುಚುವಲ್ ಫಂಡ್ ಜನಪ್ರಿಯವಾಗುತ್ತಿರುವ ಹೂಡಿಕೆ ಮಾರ್ಗ. ಮ್ಯೂಚುವಲ್ ಫಂಡ್​ಗಳು ಹಣಕಾಸು ಮಾರುಕಟ್ಟೆಗಳಲ್ಲಿ ನಿಮ್ಮ ಪರವಾಗಿ ಹಣ ಹೂಡಿಕೆ ಮಾಡುತ್ತವೆ. ಅದರಲ್ಲಿ ಬಂದ ಲಾಭ ಅಥವಾ ನಷ್ಟದಲ್ಲಿ ನಿಮಗೂ ಪಾಲು ಸಿಗುತ್ತದೆ. ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದು ರಿಸ್ಕ್ ಎನಿಸುವವರಿಗೆ ಮ್ಯುಚುವಲ್ ಫಂಡ್, ಇಟಿಎಫ್ ಉತ್ತಮ ದಾರಿಗಳಾಗಿವೆ. ಸದ್ಯ ಮಾರುಕಟ್ಟೆಯಲ್ಲಿ ನೂರಾರು ಮ್ಯೂಚುವಲ್ ಫಂಡ್​ಗಳಿವೆ. ಇದರಲ್ಲೂ ನಾನಾ ವಿಧಗಳಿವೆ. ಈಕ್ವಿಟಿ ಮ್ಯೂಚುವಲ್ ಫಂಡ್, ಡೆಟ್ ಮ್ಯುಚುವಲ್ ಫಂಡ್, ಹೈಬ್ರಿಡ್ ಫಂಡ್, ಇಂಡೆಕ್ಸ್ ಫಂಡ್, ಸೆಕ್ಟೋರಲ್ ಫಂಡ್, ಥಿಮ್ಯಾಟಿಕ್ ಫಂಡ್​ಗಳಿರುತ್ತವೆ.

ಈಕ್ವಿಟಿ ಮ್ಯೂಚುವಲ್ ಫಂಡ್​ಗಳು ಹೆಚ್ಚಿನ ಹೂಡಿಕೆಯನ್ನು ಷೇರುಗಳಿಗೆ ಹಾಕುತ್ತವೆ. ಡೆಟ್ ಫಂಡ್​ಗಳು ಬಾಂಡ್ ಇತ್ಯಾದಿ ನಿಶ್ಚಿತ ಆದಾಯದ ಸಾಧನಗಳಿಲ್ಲಿ ಹೂಡಿಕೆ ಮಾಡುತ್ತವೆ. ಹೈಬ್ರಿಡ್ ಫಂಡ್​ಗಳು ಈಕ್ವಿಟಿ ಮತ್ತು ಡೆಟ್ ಎರಡರಲ್ಲೂ ಹೂಡಿಕೆ ಮಾಡಿ ಸಮತೋಲನ ತರಲು ಯತ್ನಿಸುತ್ತವೆ.

ಇದನ್ನೂ ಓದಿ: ಬ್ಯಾಂಕ್​ನಿಂದ ಕ್ಯಾಷ್ ಪಡೆದರೆ ತೆರಿಗೆ ಕಡಿತ ಆಗುತ್ತೆ… ನೀವು ತಿಳಿದಿರಲೇಬೇಕಾದ ನಿಯಮಗಳಿವು…

ಇನ್ನೊಂದೆಡೆ ಇಂಡೆಕ್ಸ್ ಫಂಡ್​ಗಳು ನಿರ್ದಿಷ್ಟ ಷೇರು ಸೂಚ್ಯಂಕಗಳನ್ನು ಅನುಸರಿಸುತ್ತವೆ. ಉದಾಹರಣೆಗೆ, ನಿಫ್ಟಿ 50, ಸೆನ್ಸೆಕ್ಸ್ 30, ನಿಫ್ಟಿ 100 ಇತ್ಯಾದಿ ಇಂಡೆಕ್ಸ್​ಗಳಲ್ಲಿನ ಷೇರುಗಳಲ್ಲಿ ಇವು ಹೂಡಿಕೆ ಮಾಡುತ್ತವೆ. ಇನ್ನು ಥೀಮ್ಯಾಟಿಕ್ ಫಂಡ್​ಗಳು ನಿರ್ದಿಷ್ಟ ಸೆಕ್ಟರ್​ನ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಉದಾಹರಣೆಗೆ, ಟೆಕ್ನಾಲಜಿ, ಬ್ಯಾಂಕ್, ಹೆಲ್ತ್​ಕೇರ್ ಇತ್ಯಾದಿ. ಹಾಗೆಯೇ, ಚಿನ್ನ, ಬೆಳ್ಳಿ ಇತ್ಯಾದಿ ಸರಕುಗಳ ಮೇಲೂ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್​ಗಳಿವೆ.

ಮ್ಯೂಚುವಲ್ ಫಂಡ್ ಎಕ್ಸ್​ಪೆನ್ಸ್ ರೇಶಿಯೋ

ಮ್ಯುಚುವಲ್ ಫಂಡ್​ಗಳನ್ನು ನಿರ್ವಹಿಸಲು ಮ್ಯಾನೇಜರುಗಳಿರುತ್ತಾರೆ. ಅವರ ಜೊತೆ ಒಂದು ರೀಸರ್ಚ್ ತಂಡವೇ ಇರುತ್ತದೆ. ಯಾವ ಷೇರುಗಳಿಗೆ ಯಾವಾಗ ಹೂಡಿಕೆ ಮಾಡಬೇಕು, ಯಾವಾಗ ಹಿಂಪಡೆಯಬೇಕು ಎಂಬುದನ್ನು ಈ ತಂಡ ನಿರ್ಧರಿಸುತ್ತದೆ. ಈ ನಿರ್ವಹಣಾ ವೆಚ್ಚವನ್ನು ಗ್ರಾಹಕರು ಭರಿಸಬೇಕು. ಅದುವೇ ಮ್ಯುಚುವಲ್ ಫಂಡ್​ನ ಎಕ್ಸ್​ಪೆನ್ಸ್ ರೇಶಿಯೋ. ಒಂದೊಂದು ಫಂಡ್​ಗಳ ಎಕ್ಸ್​ಪೆನ್ಸ್ ರೇಶಿಯೋ ವ್ಯತ್ಯಾಸವಿರಬಹುದು. ಇಂಡೆಕ್ಸ್ ಫಂಡ್​ಗಳ ನಿರ್ವಹಣೆಗೆ ಮ್ಯಾನೇಜರ್ ಅವಶ್ಯಕತೆ ಇರುವುದಿಲ್ಲವಾದ್ದರಿಂದ ಅವುಗಳ ಎಕ್ಸ್​ಪೆನ್ಸ್ ರೇಶಿಯೋ ಬಹಳ ಕಡಿಮೆ ಇರುತ್ತದೆ.

ಇದನ್ನೂ ಓದಿ: ಬ್ಯಾಂಕ್ ಅಕೌಂಟ್, ಫಿಕ್ಸೆಡ್ ಡೆಪಾಸಿಟ್ ನಾಮಿನಿ ನಿಯಮದಲ್ಲಿ ಬದಲಾವಣೆ; ಮಸೂದೆ ಮಂಡನೆಗೆ ಕೇಂದ್ರ ಸಜ್ಜು

ಮ್ಯೂಚುವಲ್ ಫಂಡ್​​ಗಳಲ್ಲಿ ಹೇಗೆ ಹೂಡಿಕೆ ಮಾಡುವುದು?

ಝಿರೋಧಾ, ಗ್ರೋ, ಪೇಟಿಎಂ, ಏಂಜೆಲ್ ಒನ್ ಇತ್ಯಾದಿ ಬ್ರೋಕರ್ ಸಂಸ್ಥೆಗಳ ಆನ್ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ನೀವು ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಬಹುದು.

ಅಥವಾ ನೇರವಾಗಿ ಮ್ಯೂಚುವಲ್ ಫಂಡ್ ಸಂಸ್ಥೆಯ ವೆಬ್​ಸೈಟ್ ಅಥವಾ ಆ್ಯಪ್​ಗೆ ಹೋಗಿ ಅಲ್ಲಿಯೇ ನೇರವಾಗಿ ಹೂಡಿಕೆ ಮಾಡಬಹುದು. ಫಂಡ್​ನಲ್ಲಿ ಹೂಡಿಕೆ ಮಾಡಲು ನೀವು ಕೆವೈಸಿ ಪೂರ್ಣಗೊಳಿಸಬೇಕು. ಆಧಾರ್ ಮತ್ತು ಪ್ಯಾನ್ ವಿವರಗಳನ್ನು ಒದಗಿಸಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ