ಶೇ. 97ರಷ್ಟು ವಿದ್ಯುದೀಕರಣಗೊಂಡ ಬ್ರಾಡ್​ಗೇಜ್ ರೈಲ್ವೆ ನೆಟ್ವರ್ಕ್; ನೂರಕ್ಕೆ ನೂರು ಎಲೆಕ್ಟ್ರಿಫಿಕೇಶನ್ ಗುರಿ

Indian railways electrification works: ಭಾರತದ ಬ್ರಾಡ್​ಗೇಜ್ ರೈಲು ನೆಟ್ವರ್ಕ್ ಶೇ. 97ರಷ್ಟು ವಿದ್ಯುದೀಕರಣಗೊಂಡಿದೆ ಎನ್ನುವ ಮಾಹಿತಿಯನ್ನು ಕೇಂದ್ರ ರೈಲ್ವೆ ಸಚಿವ ಡಾ. ಅಶ್ವನಿ ವೈಷ್ಣವ್ ತಿಳಿಸಿದ್ದಾರೆ. ಶೀಘ್ರದಲ್ಲೇ ನೂರಕ್ಕೆ ನೂರು ಎಲೆಕ್ಟ್ರಿಫಿಕೇಶನ್ ಮಾಡುವ ಗುರಿ ಈಡೇರಿಸಲಾಗುವುದು ಎಂದಿದ್ದಾರೆ. ಭಾರತದಲ್ಲಿ ಬಹುಭಾಗದ ರೈಲು ನೆಟ್ವರ್ಕ್ ಬ್ರಾಡ್​ಗೇಜ್​ನದ್ದಾಗಿದೆ. ಹೈಸ್ಪೀಡ್ ಟ್ರೈನುಗಳಿಗೆ ಈಗ ಸ್ಟ್ಯಾಂಡರ್ಡ್ ಗೇಜ್ ರೈಲು ಹಳಿಗಳನ್ನು ನಿರ್ಮಿಸಲಾಗುತ್ತಿದೆ.

ಶೇ. 97ರಷ್ಟು ವಿದ್ಯುದೀಕರಣಗೊಂಡ ಬ್ರಾಡ್​ಗೇಜ್ ರೈಲ್ವೆ ನೆಟ್ವರ್ಕ್; ನೂರಕ್ಕೆ ನೂರು ಎಲೆಕ್ಟ್ರಿಫಿಕೇಶನ್ ಗುರಿ
ಭಾರತೀಯ ರೈಲ್ವೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 28, 2024 | 11:26 AM

ನವದೆಹಲಿ, ನವೆಂಬರ್ 28: ಭಾರತದ ಇಡೀ ಬ್ರಾಡ್ ಗೇಜ್ ರೈಲ್ವೆ ಮಾರ್ಗಗಳನ್ನು ವಿದ್ಯುದೀಕರಣಗೊಳಿಸುವ ಸರ್ಕಾರದ ಗುರಿ ತೀರಾ ಸನಿಹದಲ್ಲಿದೆ. ಇಲ್ಲಿಯವರೆಗೆ ಶೇ. 97ರಷ್ಟು ಬ್ರಾಡ್​ಗೇಜ್ ರೈಲು ಮಾರ್ಗಗಳ ಎಲೆಕ್ಟ್ರಿಫಿಕೇಶನ್ ಆಗಿರುವುದು ತಿಳಿದು ಬಂದಿದೆ. ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಅವರು ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ. ಎಲ್ಲಾ ಬ್ರಾಡ್​ಗೇಜ್ ರೈಲ್ವೆ ಲೈನ್​ಗಳ ಸಂಪೂರ್ಣ ವಿದ್ಯುದೀಕರಣ ಕಾರ್ಯವನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. 2024ರ ವರ್ಷಾಂತ್ಯದಲ್ಲಿ ಶೇ. 100ರಷ್ಟು ಎಲೆಕ್ಟ್ರಿಫಿಕೇಶನ್ ಕಾರ್ಯ ಮಾಡುವ ಗುರಿ ಸರ್ಕಾರದ ಮುಂದಿದೆ.

ಡಾ. ಎ ವೈಷ್ಣವ್ ನೀಡಿರುವ ಮಾಹಿತಿ ಪ್ರಕಾರ 2014-15ರಿಂದೀಚೆ 45,200 ಕಿಮೀಯಷ್ಟು ಬ್ರಾಡ್​ಗೇಜ್ ನೆಟ್ವರ್ಕ್ ಅನ್ನು ಎಲೆಕ್ಟ್ರಿಫೈ ಮಾಡಲಾಗಿದೆ. ವಿದ್ಯುದೀಕರಣದ ವೇಗ ಕಳೆದ 10 ವರ್ಷದಲ್ಲಿ ಹೇಗೆ ಹೆಚ್ಚಾಗಿದೆ ಎನ್ನುವ ಸಂಗತಿಯನ್ನು ಸಚಿವರು ವಿವರಿಸಿದ್ದಾರೆ. ಹತ್ತು ವರ್ಷಕ್ಕೆ ಮುಂಚೆ ಇದ್ದ ವಿದ್ಯುದೀಕರಣ ವೇಗ, ಮತ್ತು ಈಗ ಇರುವ ವೇಗವನ್ನು ತುಲನೆ ಮಾಡಿದ್ದಾರೆ. 2004ರಿಂದ 2014ರವರೆಗೆ ಬ್ರಾಡ್​ಗೇಜ್ ನೆಟ್ವರ್ಕ್​ನ ಎಲೆಕ್ಟ್ರಿಫಿಕೇಶನ್ ಕಾರ್ಯದ ವೇಗ ದಿನಕ್ಕೆ 1.42 ಕಿಮೀಯಷ್ಟಿತ್ತಂತೆ. 2023-24ರಲ್ಲಿ ದಿನಕ್ಕೆ ಸರಾಸರಿಯಾಗಿ 19.7 ಕಿಮೀಯಷ್ಟು ಎಲೆಕ್ಟ್ರಿಫಿಕೇಶನ್ ಆಗುತ್ತಿದೆ.

ಇದನ್ನೂ ಓದಿ: ಪ್ಯಾನ್ ಅಪ್​ಡೇಟ್ ಮಾಡಲು ಎಸ್​ಬಿಐ ಹೆಸರಲ್ಲಿ ನಕಲಿ ಮೆಸೇಜ್; ಕ್ಲಿಕ್ ಮಾಡಿ ಮೋಸ ಹೋಗದಿರಿ ಹುಷಾರ್…

ಡೀಸೆಲ್ ಚಾಲಿತ ರೈಲಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಟ್ರೈನುಗಳು ಪರಿಸರ ಸ್ನೇಹಿಯಾಗಿರುತ್ತವೆ. ವೆಚ್ಚವೂ ಕೂಡ ಶೇ. 70ರಷ್ಟು ಕಡಿಮೆ ಇರುತ್ತದೆ. ಎಲೆಕ್ಟ್ರಿಕ್ ಟ್ರೈನುಗಳಿಗೆ ನಿರಂತರ ವಿದ್ಯುತ್ ಸರಬರಾಜು ಅಗತ್ಯ ಇದ್ದು, ಅದನ್ನು ಒದಗಿಸಲು ರೈಲ್ವೆ ಇಲಾಖೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಸಂಪೂರ್ಣ ಹಸಿರು ರೈಲ್ವೆ ನೆಟ್ವರ್ಕ್ (ವಿದ್ಯುದೀಕೃತ ಟ್ರ್ಯಾಕ್) ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇಂಗಾಲ ಹೊರಸೂಸುವಿಕೆಯ ಪ್ರಮಾಣವನ್ನು ಶೂನ್ಯಕ್ಕೆ ತರುವ ಗುರಿ ಇದೆ.

ಬ್ರಾಡ್​ಗೇಜ್ ಎಂದರೇನು?

ರೈಲು ಮಾರ್ಗದಲ್ಲಿ ಹಾಕಲಾಗುವ ಹಳಿಗಳ ಅಗಲ ಎಷ್ಟಿದೆ ಎಂಬುದನ್ನು ಗೇಜ್ ಮೂಲಕ ತಿಳಿಯಬಹುದು. ನಾಲ್ಕು ರೀತಿಯ ಗೇಜ್​ಗಳಿವೆ. ಬ್ರಾಡ್​ಗೇಜ್, ಸ್ಟ್ಯಾಂಡರ್ಡ್ ಗೇಜ್, ಮೀಟರ್ ಗೇಜ್ ಮತ್ತು ನ್ಯಾರೋ ಗೇಜ್.

ಇದರಲ್ಲಿ ಬ್ರಾಡ್​ಗೇಜ್​ನಲ್ಲಿ ಎರಡು ಟ್ರ್ಯಾಕ್​ಗಳ ನಡುವಿನ ಅಂತರ ಸುಮಾರು 5 ಅಡಿ 6 ಅಂಗುಲ, ಅಥವಾ 1,676 ಮಿಮೀಯಷ್ಟಿರುತ್ತದೆ.

ಸ್ಟ್ಯಾಂಡರ್ಡ್ ಗೇಜ್​ನಲ್ಲಿ ಎರಡು ಟ್ರ್ಯಾಕ್​ಗಳ ನಡುವಿನ ಅಂತರ 4 ಅಡಿ 8.5 ಅಂಗುಲ ಅಥವಾ 1,435 ಮಿಮೀಯಷ್ಟು ಇರುತ್ತದೆ. ಮೀಟರ್ ಗೇಜ್​ನಲ್ಲಿ 1,000 ಎಂಎಂ ಮತ್ತು ನ್ಯಾರೋ ಗೇಜ್​ನಲ್ಲಿ 762 ಎಂಎಂನಷ್ಟು ಅಂತರ ಇರುತ್ತದೆ.

ಇದನ್ನೂ ಓದಿ: ಭಾರತದ ವೇದಾಂತ ಸಂಸ್ಥೆಗೆ ಸೌದಿಯಲ್ಲಿ ಕಾಪರ್ ಫ್ಯಾಕ್ಟರಿ ಸ್ಥಾಪಿಸುವ ಯೋಜನೆ; 16,000 ಕೋಟಿ ರೂ ಹೂಡಿಕೆ ಸಾಧ್ಯತೆ

ಜಾಗತಿಕವಾಗಿ ಅರ್ಧಕ್ಕಿಂತ ಹೆಚ್ಚು ರೈಲು ನೆಟ್ವರ್ಕ್​ಗಳು ಸ್ಟ್ಯಾಂಡರ್ಡ್ ಗೇಜ್ ಬಳಸುತ್ತವೆ. ಭಾರತದಲ್ಲಿ ಹಿಂದೆಲ್ಲಾ ಮೀಟರ್ ಗೇಜ್ ಮತ್ತು ನ್ಯಾರೋ ಗೇಜ್​ಗಳಿದ್ದವು. ಈಗ ಬಹುತೇಕ ಎಲ್ಲವನ್ನೂ ಬ್ರಾಡ್​ಗೇಜ್ ಆಗಿ ಪರಿವರ್ತಿಸಲಾಗಿದೆ.

ಸ್ಟ್ಯಾಂಡರ್ಡ್ ಗೇಜ್​ನಲ್ಲಿ ಟ್ರೈನುಗಳು ಹೈಸ್ಪೀಡ್​ನಲ್ಲಿ ಓಡಲು ಸಾಧ್ಯವಾಗುತ್ತದೆ. ಭಾರತದಲ್ಲಿ ಹೈಸ್ಪೀಡ್ ರೈಲು ನೆಟ್ವರ್ಕ್​ಗಳನ್ನು ಸ್ಟ್ಯಾಂಡರ್ಜ್ ಗೇಜ್​ನಲ್ಲಿ ನಿರ್ಮಿಸಲಾಗುತ್ತಿದೆ. ಬುಲೆಟ್ ರೈಲುಗಳೆಲ್ಲಾ ಇಂತಹ ಹಳಿಗಳ ಮೇಲೆ ಓಡುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ