ಡಿಜಿಟೈಸೇಷನ್ ಮತ್ತು ನೆಟ್ ಬ್ಯಾಂಕಿಂಗ್ನಿಂದ ಜನರು ಅನುಕೂಲಕರವಾಗಿ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಲು ಸಹಾಯ ಮಾಡಿದೆ. ಆದರೂ ಆನ್‌ಲೈನ್ ಬ್ಯಾಂಕಿಂಗ್‌ನ ಹೆಚ್ಚುತ್ತಿರುವ ಬಳಕೆಯು ಆನ್‌ಲೈನ್ ವಂಚನೆ ಮತ್ತು ಸೈಬರ್ ಅಪರಾಧದ ಪ್ರಕರಣಗಳನ್ನು ಉಲ್ಬಣಗೊಳಿಸಿದೆ. ಇತ್ತೀಚೆಗೆ ವಂಚಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank Of India) ಖಾತೆದಾರರನ್ನು ವಂಚಿಸಲು ಹೊಸ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಈ ವಂಚನೆ ಬಗ್ಗೆ ಜಾಗೃತಿ ಮೂಡಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 44 ಕೋಟಿ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಅಂದಹಾಗೆ ಈ ವಂಚನೆಯು ಸಾಮಾನ್ಯವಾಗಿ ಬಳಸುವ ಕ್ಯೂಆರ್ ಕೋಡ್‌ಗೆ ಸಂಬಂಧಿಸಿದೆ. ಯಾವುದೇ ವ್ಯಕ್ತಿಯಿಂದ ಕ್ಯೂಆರ್ ಕೋಡ್ ಪಡೆದರೆ ಅವರು ಅದನ್ನು ತಪ್ಪಾಗಿ ಸ್ಕ್ಯಾನ್ ಮಾಡಬಾರದು ಎಂದು ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಕ್ಯೂಆರ್ ಕೋಡ್ ಕಳುಹಿಸುವವರ ಬಗ್ಗೆ ವಿವರಗಳನ್ನು ತಿಳಿಯದೆ ನೀವು ಸ್ಕ್ಯಾನ್ ಮಾಡಿದರೆ ಖಾತೆಯಿಂದ ಹಣವನ್ನು ಕಳೆದುಕೊಳ್ಳಬಹುದು ಎಂದು ಟ್ವಿಟರ್ ಮೂಲಕ ಗ್ರಾಹಕರನ್ನು ಬ್ಯಾಂಕ್ ಎಚ್ಚರಿಸಿದೆ. ಅದರ ಪ್ರಕಾರವಾಗಿ, ಹಣವನ್ನು ಸ್ವೀಕರಿಸಲು ನೀವು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಅಗತ್ಯವಿಲ್ಲ. ನೀವು ಪ್ರತಿ ಬಾರಿ ಯುಪಿಐ ಪಾವತಿಗಳನ್ನು ಮಾಡುವಾಗ ಸುರಕ್ಷತಾ ಸಲಹೆಗಳನ್ನು ನೆನಪಿನಲ್ಲಿ ಇಡಬೇಕು.
ಕ್ಯೂಆರ್ ಕೋಡ್ ವಂಚನೆ ಹೇಗೆ?:
ಕ್ಯೂಆರ್ ಕೋಡ್ ಅನ್ನು ಯಾವಾಗಲೂ ಪಾವತಿ ಮಾಡಲು ಬಳಸಲಾಗುತ್ತದೆ ವಿನಾ ಪಾವತಿಗಳನ್ನು ತೆಗೆದುಕೊಳ್ಳಲು ಅಲ್ಲ ಎಂದು ಎಸ್‌ಬಿಐ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ ಪಾವತಿಯನ್ನು ಸ್ವೀಕರಿಸುವ ಹೆಸರಿನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ನಿಮಗೆ ಸಂದೇಶ ಅಥವಾ ಮೇಲ್ ಬಂದರೆ ಅಪ್ಪಿತಪ್ಪಿಯೂ ಸ್ಕ್ಯಾನ್ ಮಾಡಬೇಡಿ. ಇದು ನಿಮ್ಮ ಖಾತೆಯನ್ನು ಖಾಲಿ ಮಾಡಬಹುದು. ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ನಿಮಗೆ ಹಣ ಸಿಗುವುದಿಲ್ಲ ಎಂದು ಬ್ಯಾಂಕ್ ಹೇಳಿದೆ. ಆದರೆ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆದಿರುವ ಸಂದೇಶ ಬರುತ್ತದೆ.
ಕ್ಯೂಆರ್ ಕೋಡ್ ವಂಚನೆ ತಪ್ಪಿಸುವುದು ಹೇಗೆ?:
ನೀವು ಅರ್ಥ ಮಾಡಿಕೊಳ್ಳಬೇಕಾದ ಕೆಲವು ಸುರಕ್ಷತಾ ಸಲಹೆಗಳನ್ನು ಬ್ಯಾಂಕ್ ನೀಡಿದೆ. ಒಂದೇ ಒಂದು ತಪ್ಪು ಮಾಡಿದರೆ ಹಣ ಕಳೆದುಕೊಳ್ಳ ಬೇಕಾಗಬಹುದು.
– ಯಾವುದೇ ಪಾವತಿ ಮಾಡುವ ಮೊದಲು ಯಾವಾಗಲೂ ಯುಪಿಐ ಐಡಿಯನ್ನು ಪರಿಶೀಲಿಸಿ.
– ಯುಪಿಐ ಐಡಿಯನ್ನು ಹೊರತುಪಡಿಸಿ ಹಣವನ್ನು ಕಳುಹಿಸುವ ಮೊದಲು ಯಾವಾಗಲೂ ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ಪರಿಶೀಲಿಸಿ.
– ನಿಮ್ಮ ಯುಪಿಐ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
– ಯುಪಿಐ ಪಿನ್ ಅನ್ನು ತಪ್ಪಾಗಿಯೂ ಗೊಂದಲ ಮಾಡಿಕೊಳ್ಳಬೇಡಿ.
– ಹಣ ವರ್ಗಾವಣೆಗಾಗಿ ಸ್ಕ್ಯಾನರ್ ಅನ್ನು ಸರಿಯಾಗಿ ಬಳಸಿ.
– ಯಾವುದೇ ಸಂದರ್ಭದಲ್ಲಿ ಅಧಿಕೃತ ಅಲ್ಲದ ಮೂಲಗಳಿಂದ ಪರಿಹಾರಗಳನ್ನು ಹುಡುಕಬೇಡಿ. ಯಾವುದೇ ಪಾವತಿ ಅಥವಾ ತಾಂತ್ರಿಕ ಸಮಸ್ಯೆಗಳಿಗೆ ಎಸ್‌ಬಿಐ ಅಪ್ಲಿಕೇಷನ್‌ನ ಸಹಾಯ ವಿಭಾಗವನ್ನು ಬಳಸಿ.
– ಯಾವುದೇ ವ್ಯತ್ಯಾಸ ಇದ್ದಲ್ಲಿ ಎಸ್‌ಬಿಐ ಕುಂದುಕೊರತೆ ಪರಿಹಾರ ಪೋರ್ಟಲ್ https://crcf.sbi.co.in/ccf/ ಮೂಲಕ ಪರಿಹಾರವನ್ನು ಪಡೆದುಕೊಳ್ಳಿ.
ಇದನ್ನೂ ಓದಿ: SBI Fixed Deposits: ಎಸ್ಬಿಐನಿಂದ ಫಿಕ್ಸೆಡ್ ಡೆಪಾಸಿಟ್ಗಳ ಬಡ್ಡಿ ದರ ಹೆಚ್ಚಳ; ಇಲ್ಲಿದೆ ಸಂಪೂರ್ಣ ಮಾಹಿತಿ