ಪ್ರಮುಖ ಕಾಗದ- ಪತ್ರಗಳು, ಆಭರಣಗಳನ್ನು ಜೋಪಾನವಾಗಿ ಇಡುವುದಕ್ಕೆ ಬ್ಯಾಂಕ್ ಲಾಕರ್‌ಗಳು ಜನಪ್ರಿಯ ಸಾಧನವಾಗಿದೆ. ಈ ಸೇವೆಗೆ ಬ್ಯಾಂಕ್‌ಗಳು ಶುಲ್ಕ ವಿಧಿಸುತ್ತವೆ. ಇದು ಲಾಕರ್‌ನ ಗಾತ್ರವನ್ನು ಆಧರಿಸಿದೆ. ಬ್ಯಾಂಕ್ ಲಾಕರ್ ಶುಲ್ಕಗಳು (Bank Safe Deposit Locker Fee) ಲಾಕರ್‌ನ ಗಾತ್ರ ಮತ್ತು ಪ್ರದೇಶವನ್ನು ಅವಲಂಬಿಸಿರುತ್ತದೆ- ನಗರ, ಗ್ರಾಮೀಣ ಅಥವಾ ಮೆಟ್ರೋ ಹೀಗೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (ಆರ್‌ಬಿಐ) ಬ್ಯಾಂಕ್‌ಗಳು ಒದಗಿಸುವ ಸೇಫ್ ಡೆಪಾಸಿಟ್ ಲಾಕರ್ ಮತ್ತು ಸೇಫ್ ಕಸ್ಟಡಿ ಆರ್ಟಿಕಲ್ ಸೌಲಭ್ಯಗಳ ಕುರಿತು ಸೆಪ್ಟೆಂಬರ್‌ನಲ್ಲಿ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿತು. ಹೊಸ ಲಾಕರ್ ನಿಯಮಗಳು ಜನವರಿ 1, 2022ರಿಂದ ಜಾರಿಗೆ ಬಂದಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಐಸಿಐಸಿಐ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಬ್ಯಾಂಕ್ ಲಾಕರ್‌ಗಳ ಶುಲ್ಕಗಳ ನೋಟ ಇಲ್ಲಿದೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಕರ್ ಶುಲ್ಕಗಳು:
1) ಎಸ್‌ಬಿಐ ಸಣ್ಣ ಲಾಕರ್ ಬಾಡಿಗೆ ಶುಲ್ಕಗಳು
ನಗರ ಮತ್ತು ಮೆಟ್ರೋ : ರೂ. 2000 + ಜಿಎಸ್‌ಟಿ
ಗ್ರಾಮೀಣ ಮತ್ತು ಅರೆ ನಗರ: ರೂ. 1500 + ಜಿಎಸ್‌ಟಿ
2) ಎಸ್‌ಬಿಐ ಮಧ್ಯಮ ಗಾತ್ರದ ಲಾಕರ್ ಬಾಡಿಗೆ ಶುಲ್ಕಗಳು
ನಗರ ಮತ್ತು ಮೆಟ್ರೋ : ರೂ. 4000 + ಜಿಎಸ್‌ಟಿ
ಗ್ರಾಮೀಣ ಮತ್ತು ಅರೆ ನಗರ: ರೂ. 3000 + ಜಿಎಸ್‌ಟಿ
3) ಎಸ್‌ಬಿಐ ದೊಡ್ಡ ಲಾಕರ್ ಬಾಡಿಗೆ ಶುಲ್ಕಗಳು
ನಗರ ಮತ್ತು ಮೆಟ್ರೋ : ರೂ. 8000 + ಜಿಎಸ್‌ಟಿ
ಗ್ರಾಮೀಣ ಮತ್ತು ಅರೆ ನಗರ: ರೂ. 6000 + ಜಿಎಸ್‌ಟಿ
4) ಎಸ್‌ಬಿಐ ಅತಿ ದೊಡ್ಡ ಲಾಕರ್ ಬಾಡಿಗೆ ಶುಲ್ಕಗಳು
ನಗರ ಮತ್ತು ಮೆಟ್ರೋ : ರೂ. 12000 + ಜಿಎಸ್‌ಟಿ
ಗ್ರಾಮೀಣ ಮತ್ತು ಅರೆ ನಗರ: ರೂ. 9000 + ಜಿಎಸ್‌ಟಿ
ಎಸ್‌ಬಿಐ ಸಣ್ಣ ಮತ್ತು ಮಧ್ಯಮ ಗಾತ್ರದ ಲಾಕರ್‌ಗಳಿಗೆ ರೂ. 500 ಮತ್ತು ಜಿಎಸ್‌ಟಿಯ ಒಂದು-ಬಾರಿ ಲಾಕರ್ ನೋಂದಣಿ ಶುಲ್ಕವನ್ನು ವಿಧಿಸುತ್ತದೆ ಆದರೆ ದೊಡ್ಡ ಮತ್ತು ಹೆಚ್ಚುವರಿ-ದೊಡ್ಡ ಲಾಕರ್‌ಗಳಿಗೆ ರೂ. 1,000 ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.
ಐಸಿಐಸಿಐ ಬ್ಯಾಂಕ್ ಲಾಕರ್ ಶುಲ್ಕಗಳು:
ಐಸಿಐಸಿಐ ಬ್ಯಾಂಕ್ ಸಣ್ಣ ಗಾತ್ರದ ಲಾಕರ್‌ಗೆ ರೂ. 1,200ರಿಂದ ರೂ. 5,000 ವರೆಗೆ ಶುಲ್ಕ ವಿಧಿಸುತ್ತದೆ ಮತ್ತು ಹೆಚ್ಚು ದೊಡ್ಡದಾದರೆ ಬಾಡಿಗೆ ರೂ. 10,000ದಿಂದ ರೂ. 22,000ವರೆಗೆ ಇರುತ್ತದೆ. ಈ ಶುಲ್ಕಗಳು ಜಿಎಸ್‌ಟಿ ಹೊರತುಪಡಿಸಿ ಇದೆ. ಐಸಿಐಸಿಐ ಬ್ಯಾಂಕ್ ವಾರ್ಷಿಕ ಬಾಡಿಗೆ ಮೊತ್ತವನ್ನು ಮುಂಗಡವಾಗಿ ಸಂಗ್ರಹಿಸುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಲಾಕರ್ ಶುಲ್ಕಗಳು:
ಪಂಜಾಬ್ ನ್ಯಾಷನಲ್ ಬ್ಯಾಂಕ್ ಜನವರಿ 15ರಿಂದ ಜಾರಿಗೆ ಬರುವಂತೆ ಲಾಕರ್ ಶುಲ್ಕವನ್ನು ಹೆಚ್ಚಿಸಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಲಾಕರ್ ವಾರ್ಷಿಕ ಬಾಡಿಗೆ ರೂ. 1,250ರಿಂದ ರೂ. 10,000 ವರೆಗೆ ಬದಲಾಗುತ್ತದೆ. ನಗರ ಮತ್ತು ಮೆಟ್ರೋಗೆ, ಬ್ಯಾಂಕ್ ಶುಲ್ಕವು ರೂ. 2,000ದಿಂದ ರೂ. 10,000 ವರೆಗೆ ಬದಲಾಗುತ್ತದೆ.
ಇದನ್ನೂ ಓದಿ: Bank locker: ಜನವರಿ 1ರಿಂದ ಬ್ಯಾಂಕ್ ಲಾಕರ್ ನಿಯಮಾವಳಿಗಳಲ್ಲಿ ಬದಲಾವಣೆ; ಈ ಅಂಶಗಳು ತಿಳಿದಿರಲಿ
Published On - 12:22 pm, Tue, 18 January 22