
ನವದೆಹಲಿ, ಜುಲೈ 16: ಜೂನ್ ತಿಂಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಣದುಬ್ಬರ (Inflation) ಶೇ. 2.10 ಇದೆ. ಇದು 2019ರ ಜನವರಿಯಿಂದೀಚೆ ವ್ಯಕ್ತವಾದ ಅತಿ ಕಡಿಮೆ ಹಣದುಬ್ಬರ ದರ ಎನಿಸಿದೆ. ಇದೇ ವೇಳೆ, ರಾಜ್ಯವಾರು ಹಣದುಬ್ಬರ ದರದ ಪಟ್ಟಿ ಬಿಡುಗಡೆ ಆಗಿದೆ. ಈ ಪಟ್ಟಿ ಪ್ರಕಾರ ಉತ್ತರ, ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹಣದುಬ್ಬರ ಸರಾಸರಿಗಿಂತ ಹೆಚ್ಚಿದೆ. ಕೇರಳದಲ್ಲಿ ಅತಿಹೆಚ್ಚು ಹಣದುಬ್ಬರ ದಾಖಲಾದರೆ, ತೆಲಂಗಾಣದಲ್ಲಿ ಮೈನಸ್ ಹಣದುಬ್ಬರ ದಾಖಲಾಗಿದೆ. ಅಂದರೆ, ಅಲ್ಲಿ ಇನ್ಫ್ಲೇಶನ್ ಬದಲು ಡೀಫ್ಲೇಶನ್ ಸ್ಥಿತಿ ಉದ್ಭವಿಸಿದೆ.
ಕರ್ನಾಟಕದಲ್ಲಿ ರಾಷ್ಟ್ರೀಯ ಸರಾಸರಿಗಿಂತ ತುಸು ಹೆಚ್ಚಿನ ಹಣದುಬ್ಬರ ಇದೆ. ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ ದಾಖಲಾದ ಹಣದುಬ್ಬರ ದರ ಶೇ. 2.75 ಎಂಬುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ಇದನ್ನೂ ಓದಿ: ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 2.10; ಆರು ತಿಂಗಳಲ್ಲೇ ಕನಿಷ್ಠ ಬೆಲೆ ಏರಿಕೆ ದರ
ಎರಡು ತೆಲುಗು ರಾಜ್ಯಗಳು ದೇಶದಲ್ಲೇ ಅತ್ಯಂತ ಕಡಿಮೆ ಹಣದುಬ್ಬರ ಪಡೆದಿವೆ. ಆಂಧ್ರದಲ್ಲಿ ಸೊನ್ನೆ ಇದ್ದರೆ ತೆಲಂಗಾಣದಲ್ಲಿ ಮೈನಸ್ ಇದೆ.
ದಕ್ಷಿಣ ಭಾಗದಲ್ಲಿ ಇವೆರಡು ರಾಜ್ಯಗಳನ್ನು ಬಿಟ್ಟರೆ ಉಳಿದ ಕಡೆ ಸರಾಸರಿಗಿಂತ ಹೆಚ್ಚಿನ ಬೆಲೆ ಏರಿಕೆ ಸ್ಥಿತಿ ಇದೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ, ಕೇರಳ, ತಮಿಳುನಾಡು ಮತ್ತು ಪಾಂಡಿಚೆರಿ ರಾಜ್ಯಗಳಲ್ಲಿ ಹೆಚ್ಚಿನ ಹಣದುಬ್ಬರ ಇದೆ.
ಪಂಜಾಬ್ ಮತ್ತು ಜಮ್ಮು ಕಾಶ್ಮೀರದಲ್ಲೂ ಕೇರಳ, ಗೋವಾ ರೀತಿ ಅಧಿಕ ಹಣದುಬ್ಬರವು ಜೂನ್ನಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಹೋಲ್ಸೇಲ್ ಬೆಲೆ ಉಬ್ಬರ ಮತ್ತಷ್ಟು ಇಳಿಕೆ; ಜೂನ್ನಲ್ಲಿ ರೀಟೇಲ್ ಹಣದುಬ್ಬರವೂ ಇಳಿಯುವ ಸಾಧ್ಯತೆ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ