ಈ ಹಿಂದಿನ ಸೆಷನ್ನಲ್ಲಿ ಸ್ವಲ್ಪ ಮಟ್ಟಿಗೆ ತುಸು ನಿರಾಳವಾದಂತೆ ಕಂಡುಬಂದ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 17ನೇ ತಾರೀಕಿನ ಶುಕ್ರವಾರದಂದು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತು. ಮಾರುಕಟ್ಟೆ ಸೂಚ್ಯಂಕಗಳು “ಕರಡಿ ಹಿಡಿತ”ಕ್ಕೆ ಸಿಲುಕಿದ್ದರಿಂದ ನಿಫ್ಟಿಯು 17 ಸಾವಿರ ಪಾಯಿಂಟ್ಸ್ಗಿಂತ ಕೆಳಗೆ ಬಂದಿದೆ. ಮಾಹಿತಿ ತಂತ್ರಜ್ಞಾನ ವಲಯವೊಂದನ್ನು ಹೊರತುಪಡಿಸಿ, ಉಳಿದ ವಲಯಗಳಲ್ಲಿ ಮಾರಾಟದ ಒತ್ತಡ ಕಂಡುಬಂತು. ದಿನಾಂತ್ಯಕ್ಕೆ ಸೆನ್ಸೆಕ್ಸ್ 889.40 ಪಾಯಿಂಟ್ಸ್ ಅಥವಾ ಶೇ 1.54ರಷ್ಟು ಕುಸಿದು, 57,011.74 ಪಾಯಿಂಟ್ಸ್ನೊಂದಿಗೆ ವ್ಯವಹಾರ ಮುಗಿಸಿತು. ಇನ್ನು ನಿಫ್ಟಿ 263.20 ಪಾಯಿಂಟ್ಸ್ ಅಥವಾ ಶೇ 1.53ರಷ್ಟು ನೆಲ ಕಚ್ಚಿ, 16,985.30 ಪಾಯಿಂಟ್ಸ್ನೊಂದಿಗೆ ವಹಿವಾಟು ಚುಕ್ತಾಗೊಳಿಸಿತು. ಇಂದಿನ ವಹಿವಾಟಿನಲ್ಲಿ 913 ಕಂಪೆನಿ ಷೇರುಗಳು ಏರಿಕೆ ದಾಖಲಿಸಿದರೆ, 2221 ಕಂಪೆನಿ ಷೇರುಗಳು ಇಳಿಕೆ ಕಂಡವು. 76 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ವಲಯವಾರು ನೋಡುವುದಾದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಹೊರತುಪಡಿಸಿ, ಉಳಿದೆಲ್ಲವೂ ಇಳಿಕೆ ದಾಖಲಿಸಿದವು. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ತಲಾ ಶೇ 2ರಷ್ಟು ಇಳಿಕೆ ದಾಖಲಿಸಿದವು. ಇಂದಿನ ವಹಿವಾಟಿನಲ್ಲಿ ಏರಿಕೆ, ಇಳಿಕೆ ದಾಖಲಿಸಿದ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಹೀಗಿದೆ:
ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಪ್ರಮುಖ ಕಂಪೆನಿಗಳು
ವಿಪ್ರೋ ಶೇ 4.11
ಇನ್ಫೋಸಿಸ್ ಶೇ 2.78
ಎಚ್ಸಿಎಲ್ ಟೆಕ್ ಶೇ 1.00
ಪವರ್ಗ್ರಿಡ್ ಕಾರ್ಪೊರೇಷನ್ ಶೇ 0.84
ಸನ್ ಫಾರ್ಮಾ ಶೇ 0.59
ನಿಫ್ಟಿಯಲ್ಲಿ ಇಳಿಕೆ ದಾಖಲಿಸಿದ ಪ್ರಮುಖ ಕಂಪೆನಿಗಳು
ಇಂಡಸ್ಇಂಡ್ ಬ್ಯಾಂಕ್ ಶೇ -4.88
ಟಾಟಾ ಮೋಟಾರ್ಸ್ ಶೇ -4.42
ಒಎನ್ಜಿಸಿ ಶೇ -4.09
ಕೊಟಕ್ ಮಹೀಂದ್ರಾ ಶೇ -3.60
ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಶೇ -3.43
ಇದನ್ನೂ ಓದಿ: Rakesh Jhunjhunwala: ಕೇವಲ 10 ನಿಮಿಷದಲ್ಲಿ ಈ ಷೇರಿನಿಂದ 318 ಕೋಟಿ ರೂ. ಕಳೆದುಕೊಂಡ ರಾಕೇಶ್ ಜುಂಜುನ್ವಾಲಾ