Dollar Vs Rupee: ಆರಂಭದ ವಹಿವಾಟಿನಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 14 ಪೈಸೆ ಕುಸಿತ

ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಡಿಸೆಂಬರ್ 17ನೇ ತಾರೀಕಿನಂದು 14 ಪೈಸೆ ಇಳಿಕೆ ಆಗಿದೆ. ಪ್ರಮುಖವಾಗಿ ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ.

Dollar Vs Rupee: ಆರಂಭದ ವಹಿವಾಟಿನಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 14 ಪೈಸೆ ಕುಸಿತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 17, 2021 | 12:53 PM

ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಡಿಸೆಂಬರ್ 17ರ ಶುಕ್ರವಾರದಂದು ಆರಂಭದ ವಹಿವಾಟಿನಲ್ಲಿ 14 ಪೈಸೆ ಕುಸಿತ ಕಂಡು, 76.23 ಮುಟ್ಟಿತು. ದೇಶೀಯ ಈಕ್ವಿಟಿಗಳು ಮತ್ತು ವಿದೇಶೀ ಹಣದ ಹೊರಹರಿವು ಸ್ಥಳೀಯ ಕರೆನ್ಸಿ ಮೇಲೆ ಪರಿಣಾಮ ಬೀರಿತು. ವಿದೇಶೀ ಕರೆನ್ಸಿಗಳಲ್ಲಿ ವ್ಯವಹರಿಸುವ ಟ್ರೇಡರ್ಸ್​ಗಳು ಹೇಳುವಂತೆ, ಕೊರೊನಾ ವೈರಸ್​ ರೂಪಾಂತರವಾದ ಒಮಿಕ್ರಾನ್ ಬಗ್ಗೆ ಹೆಚ್ಚುತ್ತಿರುವ ಆತಂಕ ಮತ್ತು ಅದು ಆರ್ಥಿಕ ಚೇತರಿಕೆ ಹಾಗೂ ಸ್ಥಿರವಾದ ಕಚ್ಚಾ ತೈಲದ ಮೇಲೆ ಬೀರುತ್ತಿರುವ ಪರಿಣಾಮವು ಸ್ಥಳೀಯ ಕರೆನ್ಸಿ ಮೇಲೆ ಆಗುತ್ತಿದೆ. ಬುಧವಾರದಂದು ಗ್ರೀನ್​ಬ್ಯಾಕ್ ವಿರುದ್ಧ ರೂಪಾಯಿ 76.09ಗೆ ನೆಲೆಯಾಗಿತ್ತು.

ಇನ್ನು ದೇಶೀಯ ಈಕ್ವಿಟಿ ಮಾರುಕಟ್ಟೆ ಬಿಎಸ್ಇ- ಸೆನ್ಸೆಕ್ಸ್ ಬೆಳಗಿನ ವಹಿವಾಟು 434.23 ಪಾಯಿಂಟ್ಸ್ ಅಥವಾ ಶೇ 0.75ರಷ್ಟು ಇಳಿಕೆಯಾಗಿ 57,466.91 ಪಾಯಿಂಟ್ಸ್ ತಲುಪಿತ್ತು. ಎನ್​ಎಸ್​ಇ ನಿಫ್ಟಿ 148.85 ಪಾಯಿಂಟ್ಸ್ ಅಥವಾ ಶೇ 0.86 ಇಳಿಕೆಯಾಗಿ, 17,099.55 ಪಾಯಿಂಟ್ಸ್ ಮುಟ್ಟಿದೆ. ಡಾಲರ್ ಸೂಚ್ಯಂಕವನ್ನು ಆರು ಕರೆನ್ಸಿಗಳ ಬ್ಯಾಸ್ಕೆಟ್​ನ ಗ್ರೀನ್​ಬ್ಯಾಕ್​ ಬಲದ ಮೂಲಕ ಅಂದಾಜು ಮಾಡಲಾಗುತ್ತದೆ. ಅದು ಶೇ 0.07ರಷ್ಟು ಇಳಿಕೆ ಕಂಡು, 95.97 ತಲುಪಿದೆ.

ಜಾಗತಿಕ ತೈಲ ಬೆಂಚ್​ಮಾರ್ಕ್ ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಶೇ 0.96ರಷ್ಟು ಇಳಿದು, ಬ್ಯಾರೆಲ್​ಗೆ 74.30 ಡಾಲರ್ ಮುಟ್ಟಿದೆ. ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಗುರುವಾರದಂದು ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದರು. ವಿನಿಮಯ ಕೇಂದ್ರದ ಡೇಟಾ ಪ್ರಕಾರ, 1,468.71 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಇದನ್ನೂ ಓದಿ: Trade Deficit: ದೇಶದ ವ್ಯಾಪಾರ ಕೊರತೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ; ಕಾರಣ ಏನೆಂಬ ವಿವರಣೆ ಇಲ್ಲಿದೆ

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ